ವಿಜಯಪುರ: ತುಂಬಿದ ಆಲಮಟ್ಟಿ ಜಲಾಶಯಕ್ಕೆ ನಾಳೆ ಸಿಎಂ ಬಾಗಿನ

ಆಲಮಟ್ಟಿ ಜಲಾಶಯ ಭರ್ತಿ ಹಿನ್ನೆಲೆಯಲ್ಲಿ ಆ.21 ರಂದು ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ ಅಣೆಕಟ್ಟು ಬಳಿ ಕೃಷ್ಣೆಯ ಜಲಧಿಗೆ ಬಾಗಿನ ಸಲ್ಲಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 
 

cm Siddaramaiah perform bagina to almatti dam in vijayapura grg

ಆಲಮಟ್ಟಿ(ಆ.20):  ಆಲಮಟ್ಟಿ ಜಲಾಶಯ ಭರ್ತಿ ಹಿನ್ನೆಲೆಯಲ್ಲಿ ಆ.21 ರಂದು ಇಲ್ಲಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ ಅಣೆಕಟ್ಟು ಬಳಿ ಕೃಷ್ಣೆಯ ಜಲಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಸಲ್ಲಿಸಲಿದ್ದಾರೆ. 

ಅಂದು ಬೆಳಗ್ಗೆ 10ಕ್ಕೆ ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಹೊರಡುವ ಅವರು ಕೊಪ್ಪಳ ಜಿಲ್ಲೆಯ ಗಿಣಿಗೇರಾ ಏರಸ್ಟ್ರಿಪ್‌ಗೆ ಬಂದಿಳಿಯುವರು. ಅಲ್ಲಿಂದ ರಸ್ತೆಯ ಮೂಲಕ ಆಲಮಟ್ಟಿಗೆ 12.30ಕ್ಕೆ ಆಗಮಿಸುವ ಅವರು ನೇರವಾಗಿ ಜಲಾಶಯಕ್ಕೆ ತೆರಳಿ ಗಂಗಾಪೂಜೆ ಸಲ್ಲಿಸಿ ಕೃಷ್ಣೆಗೆ ಬಾಗಿನ ಸಲ್ಲಿಸಲಿದ್ದಾರೆ. 

ಪಂಚ ಗ್ಯಾರಂಟಿ ಯೋಜನೆ ಪರಿಷ್ಕರಣೆ ಮಾಡಿದ್ರೆ ತಪ್ಪಿಲ್ಲ: ಸಚಿವ ಎಂ.ಬಿ. ಪಾಟೀಲ್

ಮಧ್ಯಾಹ್ನ 3ಕ್ಕೆ ಆಲಮಟ್ಟಿಯಿಂದ ಹೊರಡುವ ಅವರು ಗಿಣಿಗೇರಾ ಏರಸ್ಟ್ರಿಪ್‌ಗೆ ತಲುಪಿ ಅಲ್ಲಿಂದ ಸಂಜೆ 4.40 ಕ್ಕೆ ಹೊರಟು 5.30ಕ್ಕೆ ಬೆಂಗಳೂರು ತಲುಪುವರು. ಜಲಸಂಪನ್ಮೂಲ ಸಚಿವ, ಡಿಸಿಎಂ ಡಿ.ಕೆ.ಶಿವಕುಮಾರ ಇರಲಿದ್ದಾರೆ.
ಸಚಿವ ಶಿವಾನಂದ ಪಾಟೀಲ ಅಧ್ಯಕ್ಷತೆ ವಹಿಸುವರು. ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಆರ್.ಬಿ.ತಿಮ್ಮಾಪುರ, ಸಂಸದರಾದ ರಮೇಶ ಜಿಗಜಿಣಗಿ, ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯರಾದ ಸುಧಾಮೂರ್ತಿ, ನಾರಾಯಣಸಾ ಭಾಂಡಗೆ ಸೇರಿದಂತೆ ಅವಳಿ ಜಿಲ್ಲೆಯ ವಿಧಾನಸಭಾ, ವಿಧಾನ ಪರಿಷತ್ ಶಾಸಕರು, ನಿಗಮ, ಮಂಡಳಿ ಅಕಾಡೆಮಿಗಳ ಅಧ್ಯಕ್ಷರು, ಆಲಮಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಜಲಸಂಪನ್ಮೂಲ ಇಲಾಖೆ, ಕೆಬಿಜೆಎನ್ಎಲ್ ಅಧಿಕಾರಿಗಳು ಇರಲಿದ್ದಾರೆ. ಸಿಎಂ ಆಗಮಿಸುವ ಹಿನ್ನೆಲೆಯಲ್ಲಿ ಆಲಮಟ್ಟಿಯಲ್ಲಿ ಕೆಬಿಜೆಎನ್ಎಲ್ ಅಧಿಕಾರಿಗಳು ಅಗತ್ಯ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios