ಪಂಚ ಗ್ಯಾರಂಟಿ ಯೋಜನೆ ಪರಿಷ್ಕರಣೆ ಮಾಡಿದ್ರೆ ತಪ್ಪಿಲ್ಲ: ಸಚಿವ ಎಂ.ಬಿ. ಪಾಟೀಲ್
ಬಡವರಿಗೆ ಗ್ಯಾರಂಟಿ ಯೋಜನೆಗಳ ಲಾಭ ಸಿಗಬೇಕು. ಗ್ಯಾರಂಟಿ ಯೋಜನೆ ನಿಲ್ಲಲ್ಲ, ಇದು ನಮ್ಮ ಗ್ಯಾರಂಟಿಯಾಗಿದೆ. ಯತ್ನಾಳ್, ವಿಜಯೇಂದ್ರ, ಯಡಿಯೂರಪ್ಪ, ಆರ್. ಅಶೋಕಗೆ ಯಾಕೆ ಯೋಜನೆ ಬೇಕು?. ಶ್ರೀಮಂತರಿಗೆ ಗ್ಯಾರಂಟಿ ಯೋಜನೆ ಅವಶ್ಯಕತೆ ಇಲ್ಲ ಎಂದ ಎಂ.ಬಿ. ಪಾಟೀಲ್
ವಿಜಯಪುರ(ಆ.15): ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸಲ್ಲ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸೋ ಮಾತೇ ಇಲ್ಲ. ಶ್ರೀಮಂತರು ಯೋಜನೆಗಳನ್ನ ಪಡೆಯುತ್ತಿದ್ದರೆ ಪರಿಷ್ಕರಣೆ ಮಾಡಿದ್ರೆ ತಪ್ಪಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಇಂದು(ಗುರುವಾರ) ನಗರದಲ್ಲಿ ಸ್ವಾತಂತ್ರ್ಯ ದಿನಾಚಾರಣೆಯ ಧ್ವಜಾರೋಹಣ ಮಾಡಿದ ಬಳಿಕ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್ ಅವರು, ಬಡವರ ಗ್ಯಾರಂಟಿ ಯೋಜನೆಗಳು ನಿಲ್ಲೋದಿಲ್ಲ. ಶ್ರೀಮಂತರಿಗೆ ಬದಲಾವಣೆ ಮಾಡಿದ್ರೆ ತಪ್ಪಲ್ಲ, ಇದು ನನ್ನ ವಯಕ್ತಿಕ ಅಭಿಪ್ರಾಯವಾಗಿದೆ. ಶ್ರೀಮಂತರಿಗೆ, ಎಂ.ಬಿ. ಪಾಟೀಲರಿಗೆ ಗ್ಯಾರಂಟಿಗಳು ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ಹೊಸ ವರಸೆ.. ಗ್ಯಾರಂಟಿ ಸ್ಕೀಮ್ ಭವಿಷ್ಯ ಏನು..?
ಬಡವರಿಗೆ ಗ್ಯಾರಂಟಿ ಯೋಜನೆಗಳ ಲಾಭ ಸಿಗಬೇಕು. ಗ್ಯಾರಂಟಿ ಯೋಜನೆ ನಿಲ್ಲಲ್ಲ, ಇದು ನಮ್ಮ ಗ್ಯಾರಂಟಿಯಾಗಿದೆ. ಯತ್ನಾಳ್, ವಿಜಯೇಂದ್ರ, ಯಡಿಯೂರಪ್ಪ, ಆರ್. ಅಶೋಕಗೆ ಯಾಕೆ ಯೋಜನೆ ಬೇಕು?. ಶ್ರೀಮಂತರಿಗೆ ಗ್ಯಾರಂಟಿ ಯೋಜನೆ ಅವಶ್ಯಕತೆ ಇಲ್ಲ. ಎಂ.ಬಿ. ಪಾಟೀಲ್‌ಗೆ ಗೃಹ ಜ್ಯೋತಿ ಯಾಕೆ ಬೇಕು?. ಎಂ.ಬಿ. ಪಾಟೀಲ್ ಮನೆಯಲ್ಲೂ ಬಿಪಿಎಲ್ ಕಾರ್ಡ್ ಇರಬಹುದು, ಮನೆಗೆ ಹೋಗಿ ಕೇಳ್ತೇನೆ ಎಂದ ತಿಳಿಸಿದ್ದಾರೆ.
ಸಂಪುಟ ಪುನಾರಚನೆ ವಿಚಾರದ ಬಗ್ಗೆ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್ ಅವರು, ಸಂಪುಟ ರಚನೆ, ಪುನಾರಚನೆ ಸಿಎಂ ಅವರ ಪರಮಾಧಿಕಾರವಾಗಿದೆ. ಸಿಎಂ ಹಾಗೂ ಹೈಕಮಾಂಡ್ ಯಾವಾಗ ಮಾಡ್ತಿವಿ ಅಂತಾರೆ ಅವಾಗ ಆಗತ್ತೆ. ಸಂಪುಟ ಪುನಾರಚನೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ. 21ಕ್ಕೆ ಆಲಮಟ್ಟಿಗೆ ಬರಲಿದ್ದಾರೆ. ಡ್ಯಾಂಗೆ ಬಾಗಿನ ಅರ್ಪಿಸಲಿದ್ದಾರೆ.ಈ ಬಗ್ಗೆ ತಯಾರಿ ಮಾಡ್ತಿದ್ದೇವೆ, ಬಹುತೇಕ ಬರಬಹುದು ಎಂದು ಹೇಳಿದ್ದಾರೆ.
ಗ್ಯಾರಂಟಿ ಯೋಜನೆ ಸ್ಥಗಿತಗೊಳಿಸಲು ಸತೀಶ ಜಾರಕಿಹೊಳಿ ಹೇಳಿದ್ರಾ?: ಸಚಿವರು ಹೇಳಿದ್ದಿಷ್ಟು
ಬಿಜೆಪಿಯಿಂದ ಎರಡನೇ ಪಾದಯಾತ್ರೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಎಂ. ಬಿ. ಪಾಟೀಲ್ ಅವರು, ಕೊರೋನಾ ಲೂಟಿ, 10 ಸಾವಿರ ಕೋಟಿ ಹಗರಣದ ಬಗ್ಗೆ ಯತ್ನಾಳ್ ಪಾದಯಾತ್ರೆ ಮಾಡ್ತಿದ್ದಾರೆ. ಯತ್ನಾಳರ ಪಾದಯಾತ್ರೆಗೆ ನನ್ನ ಸ್ವಾಗತ ಎಂದು ಹೇಳುವ ಮೂಲಕ ಟಾಂಗ್ ಕೊಟ್ಟಿದ್ದಾರೆ.
ಬಿಜೆಪಿ ಹಗರಣ ವಿರುದ್ಧ ಯತ್ನಾಳ್ ಪಾದಯಾತ್ರೆ ಮಾಡಲಿ. ಹೃದಯಪೂರ್ವಕವಾಗಿ ಯತ್ನಾಳ್‌ರ ಪಾದಯಾತ್ರೆಗೆ ನನ್ನ ಸ್ವಾಗತ ಇದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.