Asianet Suvarna News Asianet Suvarna News

ಕಸ ಎಸಿಬೇಡಿ ಎಂದ್ರು ತಂದು ಹಾಕ್ತಿದ್ದ ಅಂಗಡಿಯವರಿಗೆ ತಕ್ಕ ಪಾಠ

ಕಸ ಎಸೆಯಬೇಡಿ ಎಂದು ಹೇಳಿದ್ರು ಮಾತು ಕೇಳದ ಅಂಗಡಿ ಮಾಲಿಕರಿಗೆ ನಗರಸಭೆಗೆ ತಕ್ಕ ಪಾಠ ಕಲಿಸಿದೆ. 

City Municipality Throws Garbage in front Of Complex In Hassan
Author
Bengaluru, First Published Jan 19, 2020, 8:58 AM IST

ಹಾಸನ [ಜ.19]:  ತಮ್ಮ ಅಂಗಡಿಗಳ ಬಳಿ ಬರುವ ನಗರಸಭೆಯ ಆಪೆ ಆಟೋಗಳಿಗೆ ಕಸ ಹಾಕಿ ಸ್ವಚ್ಛತೆ ಕಾಪಾಡಿ ಎಂದು ಹೇಳಿದರೂ ಕೇಳದ ನಗರದ ಕಾಂಪ್ಲೆಕ್ಸ್‌ನ ಅಂಗಡಿಗಳ ಮಾಲೀಕರಿಗೆ ತಕ್ಕ ಪಾಠ ಕಲಿಸಬೇಕು ಎಂಬ ಉದ್ದೇಶದಿಂದ ಅಂಗಡಿಯವರು ಬೀದಿಗೆ ಎಸೆದಿದ್ದ ಕಸವನ್ನು ಮತ್ತೆ ಕಾಂಪ್ಲೆಕ್ಸ್‌ ಒಳಕ್ಕೆ ನಗರಸಭೆ ಅಧಿಕಾರಿ ಮತ್ತು ಸಿಬ್ಬಂದಿ ಎಸೆಯುವ ಮೂಲಕ ತಿರುಗೇಟು ನೀಡಿದ ಘಟನೆ ಶನಿವಾರ ನಡೆಯಿತು.

ಸ್ವಚ್ಛತೆ ಬಗ್ಗೆ ಬಿಡಿಗಾಸು ಬೆಲೆ ಕೊಡದೆ ಎಲ್ಲೆಂದರಲ್ಲಿ ತ್ಯಾಜ್ಯವನ್ನು ನಗರದ ಸನ್ಮಾನ್‌ ಹೊಟೇಲ್‌ ಪಕ್ಕದಲ್ಲಿ ಇರುವ ರಜತಾ ಕಾಂಪ್ಲೆಕ್ಸ್‌ನಲ್ಲಿ ಇರುವ ಅಂಗಡಿಗಳಿಂದ ಬೀದಿಗೆ ಎಸೆಯಲಾಗಿತ್ತು. ಮತ್ತೆ ಮತ್ತೆ ಹೀಗೆ ಕಸವನ್ನು ಎಸೆಯುವುದನ್ನು ಕಂಡ ನಗರಸಭೆ ಆರೋಗ್ಯಾಧಿಕಾರಿ ತಮ್ಮ ಸಿಬ್ಬಂದಿಯೊಂದಿಗೆ ಬಂದು ಬೀದಿಗೆ ಎಲ್ಲೆಂದರಲ್ಲಿ ಎಸೆದಿದ್ದ ಕಸವನ್ನು ಮತ್ತೆ ಕಾಂಪ್ಲೆಕ್ಸ್‌ ಒಳಕೆ ಎಸೆದರು. ನಂತರ ಅಂಗಡಿಯವರೇ ಕಸವನ್ನು ಒಂದಡೆ ಸೇರಿಸಿ ಆಪೆ ಆಟೋಗೆ ಹಾಕಿದರು.

ಲಕ್ಷ ಸಂಬಳದ ಕೆಲಸ ತೊರೆದು ಕನ್ನಡದಲ್ಲೇ ಪರೀಕ್ಷೆ ಬರೆದು IAS ಪಾಸ್ ಮಾಡಿದ..!...

ಈ ವೇಳೆ ಆರೋಗ್ಯಾಧಿಕಾರಿ ಆದೀಶ್‌ ಕುಮಾರ್‌ ಮಾತನಾಡಿ, ಮನೆಮನೆಗೆ ಕಸ ವಿಲೇವಾರಿ ಮಾಡುವ ಅಫೆ ಆಟೋ ವಾಹನಗಳು ಕಾಂಪ್ಲೇಕ್ಸ್‌ ಮತ್ತು ಅಂಗಡಿ ಮುಗ್ಗಟ್ಟಿನ ಬಳಿ ಬರುತ್ತಿದ್ದರೂ ಕೂಡ ರಜತಾ ಕಾಂಪ್ಲೆಕ್ಸ್‌ ಮಾಲೀಕರು ಮತ್ತು ಉದ್ದಿಮೆದಾರರು ರಸ್ತೆಗೆ ಕಸವನ್ನು ಎಸೆಯುತ್ತಿದ್ದರು. ಎಲ್ಲ ಕಸ ನನ್ನ ಹೊಣೆ ಎಂಬ ಉದ್ದೇಶವನ್ನು ಮರೆತಿದ್ದರಿಂದ ಆ ಕಸವನ್ನು ಮತ್ತೆ ವಾಪಸ್‌ ನೀಡಲಾಗಿದೆ ಎಂದರು.

ಮನೆಯೊಳಕ್ಕೆ:  ಸಾರ್ವಜನಿಕರು ತಮ್ಮಲ್ಲಿ ಉತ್ಪತ್ತಿಯಾಗುವ ಯಾವ ರೀತಿಯ ತ್ಯಾಜ್ಯವನ್ನು ಹಸಿ ಕಸ ಮತ್ತು ಒಣ ಕಸವೆಂದು ವಿಂಗಡಿಸಿ ನಗರಸಭೆ ಸ್ವಚ್ಛತೆಗೆ ಸಹಕರಿಸಬೇಕೆಂದು ಮನವಿಯನ್ನು ನಿರಂತರವಾಗಿ ಮಾಡಲಾಗುತ್ತಿದೆ. ಆದರೂ, ಯಾರಾದರೂ ಇದೇ ರೀತಿ ಕಸವನ್ನು ರಸ್ತೆಗೆ ಎಸೆಯುವುದಾದರೇ ದಂಡ ವಿಧಿಸುವುದರ ಜೊತೆಗೆ ಅವರ ಮನೆಗೆ ಕಸವನ್ನು ಸುರಿಯುವ ಕೆಲಸ ಮಾಡುವುದಾಗಿ ಸ್ವಚ್ಛತೆಗೆ ಮಾನ್ಯತೆ ನೀಡದವರಿಗೆ ಎಚ್ಚರಿಕೆ ನೀಡಲಾಗಿದೆ ಎಂದರು.

Follow Us:
Download App:
  • android
  • ios