ಲಕ್ಷ ಸಂಬಳದ ಕೆಲಸ ತೊರೆದು ಕನ್ನಡದಲ್ಲೇ ಪರೀಕ್ಷೆ ಬರೆದು IAS ಪಾಸ್ ಮಾಡಿದ..!

ಕನ್ನಡ ಮೀಡಿಯಂ ಓದಿದ್ದಾ..? ಎಂದು ಮೂಗು ಮುರಿಯುವವರಿಗೆ ಉತ್ತರವಾಗಿ ನಿಂತಿದ್ದಾನೆ ಹಾಸನದ ಯುವಕ. ಕನ್ನಡ ಮೀಡಿಯಂನಲ್ಲೇ ಕಲಿತು ಅಮೆರಿಕದಲ್ಲಿ ಲಕ್ಷ ಸಂಬಳದ ಕೆಲಸ ಪಡೆದಿದ್ದೇ ದೊಡ್ಡ ವಿಷಯ. ಆ ಕೆಲಸ ಬಿಟ್ಟು ಮರಳಿ ಊರಿಗೆ ಬಂದ ನಂತರ ಈತ ಮಾಡಿದ್ದೆಲ್ಲ ಅಧ್ಬುತ..! ಕನ್ನಡ ಮೀಡಿಯಂ ಯುವಕನ ಇನ್ಪಿರೇಷನ್ ಸ್ಟೋರಿ ಇಲ್ಲಿದೆ.

Youth from hassan writes exam in kannada passes ias

ಹಾಸನ(ಜ.16): ಕನ್ನಡ ಮೀಡಿಯಂ ಓದಿದ್ದಾ..? ಎಂದು ಮೂಗು ಮುರಿಯುವವರಿಗೆ ಉತ್ತರವಾಗಿ ನಿಂತಿದ್ದಾನೆ ಹಾಸನದ ಯುವಕ. ಕನ್ನಡ ಮೀಡಿಯಂನಲ್ಲೇ ಕಲಿತು ಅಮೆರಿಕದಲ್ಲಿ ಲಕ್ಷ ಸಂಬಳದ ಕೆಲಸ ಪಡೆದಿದ್ದೇ ದೊಡ್ಡ ವಿಷಯ. ಆ ಕೆಲಸ ಬಿಟ್ಟು ಮರಳಿ ಊರಿಗೆ ಬಂದ ನಂತರ ಈತ ಮಾಡಿದ್ದೆಲ್ಲ ಅಧ್ಬುತ..!

ಐಎಎಸ್ ಮುಖ್ಯ ಪರೀಕ್ಷೆ  ಪಾಸ್ ಮಾಡಿದ ಹಾಸನ ಜಿಲ್ಲೆಯ ಗ್ರಾಮೀಣ ಪ್ರತಿಭೆ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದ್ದಾನೆ. ಈತ ಓದಿದ್ದು ಕನ್ನಡ ಮೀಡಿಯಂನಲ್ಲಿ. ಕಠಿಣ ಪರಿಶ್ರಮ ಈತನನ್ನ ಯಶಸ್ಸಿಗೆ ತಂದು ನಿಲ್ಲಿಸಿದೆ.

ಕಿರಿಯ ವಯಸ್ಸಿನ ಹೆಮ್ಮೆಯ ಡ್ರಮ್ಮರ್ ಪ್ರಿಯಾ

ಹಾಸನ ಜಿಲ್ಲೆಯ ಗ್ರಾಮೀಣ ಭಾಗದ ಯುವಕ ಕನ್ನಡದಲ್ಲಿ ಐಎಎಸ್ ಮುಖ್ಯ ಪರೀಕ್ಷೆ ಪಾಸ್ ಮಾಡಿದ್ದಾರೆ. ಪ್ರಾಥಮಿಕ ಶಾಲೆಯವರೆಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಅರಸೀಕೆರೆ ತಾಲೂಕಿನ ಹರಳಕಟ್ಟೆಯ ದರ್ಶನ್ ಜಿಲ್ಲೆಗೆ ಕೀರ್ತಿ ತಂದ ಯುವಕ. ದರ್ಶನ್, ಐಎಎಸ್ ಮುಖ್ಯ ಪರೀಕ್ಷೆಯಲ್ಲಿ ಪಾಸ್ ಆಗಿದ್ದು ಇಂಟರ್ವ್ಯೂಗೆ ಸೆಲೆಕ್ಟ್ ಆಗಿದ್ದಾರೆ.

ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿ ಅಮೇರಿಕಾದಲ್ಲಿ ಸುಮಾರು ಮೂರು ವರ್ಷ ಕೆಲಸ ಮಾಡಿದ್ದ ದರ್ಶನ್, ಐಎಎಸ್ ಮಾಡಬೇಕೆಂಬ ಕನಸಿನೊಂದಿಗೆ ಎರಡೂವರೆ ಲಕ್ಷದ ಸಂಬಳದ ಕೆಲಸಕ್ಕೆ ಗುಡ್ ಬೈ ಹೇಳಿ ಊರಿಗೆ ವಾಪಾಸಾಗಿದ್ದರು. ನಂತರ ದೆಹಲಿ, ಬೆಂಗಳೂರಿನಲ್ಲಿ ಕೋಚಿಂಗ್ ಕೂಡ ಪಡೆದು ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ.

ಎಟಿಎಂ ಸೆಕ್ಯುರಿಟಿ ಗಾರ್ಡ್‌ಗೆ ಚಿನ್ನದ ಪದಕ : ಏನೀ ಸಾಧನೆ..?

ಕನ್ನಡದಲ್ಲೇ ಐಎಎಸ್ ಪರೀಕ್ಷೆ  ಬರೆದಿರುವ ದರ್ಶನ್ ನಾಲ್ಕು ಬಾರಿ ಪ್ರಿಲಿಮ್ಸ್ ಕೂಡ ಪಾಸ್ ಮಾಡಿದ್ದರು. ಇದೀಗ ನಾಲ್ಕನೇ  ಪ್ರಯತ್ನದಲ್ಲಿ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಸಂದರ್ಶನ ನಡೆಯಲಿದೆ. ಐಎಎಸ್ ಫಲಿತಾಂಶ ಬಂದ ನಂತರ ದರ್ಶನ್ ಸ್ವಗ್ರಾಮಕ್ಕೆ ಆಗಮಿಸಿದ್ದಾರೆ. ಗ್ರಾಮಕ್ಕೆ ಆಗಮಿಸಿದ ದರ್ಶನ್ ಅವರಿಗೆ ಸಂಬಂಧಿಕರು ಮತ್ತು ಹಿತೈಷಿಗಳು ಹಾರ ಹಾಕಿ, ಸಿಹಿ ತಿನಿಸಿ ಸಂಭ್ರಮದಿಂದ ಸ್ವಾಗತಿಸಿದ್ದಾರೆ‌. ಕನ್ನಡದಲ್ಲಿ ಐಎಎಸ್ ಪಾಸ್ ಮಾಡಿ ದರ್ಶನ್ ಹಾಸನ ಜಿಲ್ಲೆಗೂ ಕೀರ್ತಿ ತಂದಿದ್ದಾರೆ.

Latest Videos
Follow Us:
Download App:
  • android
  • ios