ಜಮೀನಿಗೆ ದಾರಿ ಬಿಡಿ ಅಂದ್ರೆ, ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದೇಬಿಟ್ರು
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಲಕ್ಕಿ ದೇವರಹಳ್ಳಿ ಗ್ರಾಮದಲ್ಲಿ ಜಮೀನಿನ ದಾರಿ ವಿಚಾರಕ್ಕೆ ಆರಂಭವಾದ ಗಲಾಟೆ ಒಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜೂ.29): ಅಕ್ಕ ಪಕ್ಕದ ಜಮೀನು ಅಂದ್ಮೇಲೆ ಸಣ್ಣ ಪುಟ್ಟ ಗಲಾಟೆಗಳು ಆಗುವುದು ಸರ್ವೇ ಸಾಮಾನ್ಯ. ಆದ್ರೆ ಇಲ್ಲೊಂದು ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ಜಮೀನಿನಲ್ಲಿ ದಾರಿ ಬಿಡುವ ವಿಚಾರಕ್ಕೆ ಶುರುವಾದ ಗಲಾಟೆ, ಓರ್ವ ಮಹಿಳೆಯ ಕೊಲೆಯಲ್ಲಿ ಅಂತ್ಯವಾಗಿದೆ. ಅಷ್ಟಕ್ಕೂ ಈ ದುರಂತ ನಡೆದಿರೋದಾದ್ರು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ..
ರಸ್ತೆ ಮೇಲೆ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿರೋ ಮೃತ ಮಹಿಳೆ ಹೆಸರು ಪಾಲಾಕ್ಷಮ್ಮ ಅಂತ. ಮತ್ತೊಂದೆಡೆ ತೀವ್ರ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೃತ ಮಹಿಳೆ ಪತಿ ಪ್ರಸನ್ನ. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಲಕ್ಕಿ ದೇವರಹಳ್ಳಿ ಗ್ರಾಮದ ಬಳಿ. ಎರಡ್ಮೂರು ತಲೆಮಾರಿನಿಂದಲೂ ಈ ಜಮೀನಿನ ವಾಜ್ಯ ನಡೆದುಕೊಂಡೆ ಬರ್ತಿದೆ. ಆದ್ರೆ ನಿನ್ನೆ ನನ್ನ ಮಗ ಹಾಗೂ ಸೊಸೆ ಜಮೀನಿಗೆ ತೆರಳುವ ವೇಳೆ ಪಕ್ಕ ಜಮೀನಿನ ರಾಜಪ್ಪ ಹಾಗೂ ಅವರ ಸಹೋದರರಾದ ಬಸವರಾಜ್, ಚಂದ್ರಶೇಖರ್, ನಾಗರಾಜ್ ಸೇರಿ ಪ್ರಸನ್ನ ದಂಪತಿ ಮೇಲೆ ಜಗಳ ಶುರು ಮಾಡಿದ್ದಾರೆ.
ಅನ್ನಭಾಗ್ಯ ಪಿತಾಮಹ ಸಿಎಂ ಸಿದ್ದರಾಮಯ್ಯ ಅಲ್ಲ, ಮಾಜಿ ಪ್ರಧಾನಿ ವಾಜಿಪೇಯಿ!
ನ್ಯಾಯ ನಮ್ಮ ಪರವಾಗಿದ್ದರಿಂದ ಈ ಹಲ್ಲೆ: ಇಷ್ಟಕ್ಕೆ ಸುಮ್ಮನಾಗದ ಅವರು, ಪಾಲಾಕ್ಷಮ್ಮ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಮಚ್ಚಿನಿಂದ ಆಕೆಯ ತಲೆ ಭಾಗವನ್ನು ಕೊಚ್ಚಿ ಹಾಕಿದ್ದಾರೆ. ಇದರ ಪರಿಣಾಮ ಆಕೆಯು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಪ್ರಸನ್ನ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾವು ಮೊದಲಿನಿಂದಲೂ ನ್ಯಾಯದ ಪರವಾಗಿ ಇದ್ದಿದ್ರಿಂದ ಅವರನ್ನು ಏನೂ ಮಾಡೋಕ್ ಆಗಿಲ್ಲ. ಅವರು ಅನ್ಯಾಯದ ರೂಪದಲ್ಲಿ ಏನೇ ಮಾಡಿದ್ರು ಹೊರ ಬರ್ತೀವಿ ಎಂದು ಈ ರೀತಿ ಮಾಡಿದ್ದಾರೆ, ಅವರಿಗೆ ಉಗ್ರ ಶಿಕ್ಷೆ ಆಗಲಿ ಅಂತಾರೆ ಗಾಯಾಳು ಪ್ರಸನ್ನ ತಂದೆ ಹೇಳಿದ್ದಾರೆ.
ಅನಾಥವಾದ ಇಬ್ಬರು ಮಕ್ಕಳು: ಪಾಲಾಕ್ಷಮ್ಮ ಕೊಲೆಗೆ ಸಂಬಂಧಿಸಿದಂತೆ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಮಾಡಿದ ಆರೋಪಿಗಳು ತಲೆಮರೆಸಿಕೊಂಡಿದ್ದ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಶುರು ಮಾಡಿದ್ದಾರೆ. ನಾವು ಚಿಕ್ಕಂದಿನಿಂದಲೂ ಜಮೀನಿನ ವಿಚಾರಕ್ಕೆ ಸಣ್ಣ ಪುಟ್ಟ ಜಗಳಗಳು ಆಗ್ತಿದ್ದವು. ನಮ್ಮದು ಪುಟ್ಟ ಕುಟುಂಬ ಅವರು ಗುಂಪು ಗುಂಪಾಗಿ ಸೇರಿಕೊಂಡು ಜಗಳ ಮಾಡೋದು. ಪ್ರತೀ ವರ್ಷದಂತೆ ಜಗಳ ನಡೆದಿರುತ್ತೆ ಬಿಡು ಎಂದು ಸಂಬಂಧಿಕರು ಸುಮ್ಮನಾಗಿದ್ದರು.
ಉದ್ಯಮ ನಷ್ಟದಿಂದ ಹೆಗಲೇರಿದ ಸಾಲ: ಪತ್ನಿ, ಮಗನನ್ನು ನದಿಗೆ ದೂಡಿ ಆತ್ಮಹತ್ಯೆಗೆ ಶರಣಾದ
ಮಾರಕಾಸ್ತ್ರಗಳಿಂದ ಮನ ಬಂದಂತೆ ಹಲ್ಲೆ: ಆದ್ರೆ ಕಿರಾತಕರು ನಮ್ಮ ಅಣ್ಣ ಮತ್ತು ಅತ್ತಿಗೆ ಮೇಲೆ ಸಿಕ್ಕ ಸಿಕ್ಕ ಮಾರಕಾಸ್ತ್ರಗಳಿಂದ ಮನ ಬಂದಂತೆ ಹಲ್ಲೆ ನಡೆಸಿ ಈ ಕೊಲೆಗೆ ನೇರ ಕಾರಣವಾಗಿದ್ದಾರೆ. ಈಗ ಇಬ್ಬರು ಮಕ್ಕಳು ಅನಾಥವಾಗಿದ್ದು ಅವರಿಗೆ ಯಾರೂ ಇಲ್ಲದಂತಾಗಿದೆ. ಇಂತವರಿಗೆ ಕಠಿಣ ಶಿಕ್ಷೆ ಆಗಬೇಕು ಮುಂದೆ ನಮ್ಮ ಮಕ್ಕಳಿಗೆ ಯಾವುದೇ ತೊಂದರೆ ಆಗಬಾರದು ಎಂದು ಮೃತ ಮಹಿಳೆ ಸಂಬಂಧಿಕರು ಆಗ್ರಹಿಸಿದರು. ಒಟ್ಟಾರೆಯಾಗಿ ಕೊಲೆ ಆಗಿರೋ ಮಹಿಳೆಗೆ ನ್ಯಾಯ ಸಿಗಬೇಕು ಅಂದ್ರೆ ಆರೋಪಿಗಳು ಕೂಡಲೇ ಅರೆಸ್ಟ್ ಆಗಿ ಅವರಿಗೆ ಸೂಕ್ತ ಶಿಕ್ಷೆ ಆಗಲಿ ಎಂಬುದು ಎಲ್ಲರ ಆಶಯವಾಗಿದೆ.