ಉದ್ಯಮ ನಷ್ಟದಿಂದ ಹೆಗಲೇರಿದ ಸಾಲ: ಪತ್ನಿ, ಮಗನನ್ನು ನದಿಗೆ ದೂಡಿ ಆತ್ಮಹತ್ಯೆಗೆ ಶರಣಾದ ಉದ್ಯಮಿ
ಕಾರವಾರ ಮೂಲದ ಉದ್ಯಮಿ ಸಾಲ ಬಾಧೆಯನ್ನು ತಾಳಲಾರದೇ, ಪತ್ನಿ ಮತ್ತು ಮಗನನ್ನು ನದಿಗೆ ದೂಡಿ, ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ವರದಿ- ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್
ಉತ್ತರ ಕನ್ನಡ (ಜೂ.29): ಆತನದ್ದು ಸುಂದರ ಕುಟುಂಬ. ಹೆಂಡತಿ ಹಾಗೂ ಮಗನ ಜೊತೆ ಜೀವನದಲ್ಲಿ ಆರಾಮವಾಗಿದ್ದ. ಆತನಿಗೆ ಕೆಲವು ವರ್ಷಗಳಿಂದ ವ್ಯವಹಾರದಲ್ಲಿ ಆದ ನಷ್ಟ, ಭರ್ಜರಿ ಸಾಲ ಮಾಡುವಂತೆ ಮಾಡಿತ್ತು. ಸಾಲದ ಹಣ ದಿನೇ ದಿನೇ ಹೆಚ್ಚಾದ ಹಿನ್ನೆಲೆಯಲ್ಲಿ ಇಡೀ ಕುಟುಂಬದ ಜತೆ ಸಾವಿಗೆ ಶರಣಾಗಲು ನಿರ್ಧರಿಸಿದ್ದ. ಅದರಂತೆ ಹೆಂಡತಿ ಮಗನನ್ನು ನದಿಗೆ ದಬ್ಬಿ ತಾನು ನೇಣು ಬಿಗಿದುಕೊಂಡಿದ್ದಾನೆ.
ಕಾರವಾರ ಮೂಲದ ಉದ್ಯಮಿ ಕುಟುಂಬದ ಮೂವರು ಸದಸ್ಯರು ಒಂದೇ ದಿನ ಸಾವನ್ನಪ್ಪಿದ್ದಾರೆ. ಮೃತ ದುರ್ದೈವಿಗಳನ್ನು ಉದ್ಯಮಿ ಶ್ಯಾಮ ಪಾಟೀಲ್ (40), ಅವರ ಪತ್ನಿ ಜ್ಯೋತಿ ಪಾಟೀಲ್ (37) ಹಾಗೂ ದಂಪತಿಯ ಪುತ್ರ ಧಕ್ಷ್ ಪಾಟೀಲ್(12) ಎಂದು ಗುರುತಿಸಲಾಗಿದೆ. ಸಾಲದ ಸುಳಿಗೆ ಸಿಲುಕಿದ್ದ ಗೋವಾ ಮೂಲದ ಕುಟುಂಬ ಸಾವಿಗೆ ಶರಣಾದ ಕರುಣಾಜನಕ ವರದಿ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ಕಾರವಾರ ತಾಲೂಕಿನ ಗೋಪಶಿಟ್ಟಾ ಮೂಲದ ಶ್ಯಾಮ್ ಪಾಟೀಲ್ ಎಂಬವರು ಕಳೆದ 25 ವರ್ಷದ ಹಿಂದೆ ವ್ಯವಹಾರ ಮಾಡಲು ಗೋವಾಕ್ಕೆ ತೆರಳಿದ್ದರು. ಕಂಪೆನಿಗಳಲ್ಲಿ ಗುತ್ತಿಗೆ ಮಾಡುವ ಮೂಲಕ ಉದ್ಯಮ ಕ್ಷೇತ್ರದಲ್ಲಿ ಬೆಳೆದು ಶ್ಯಾಮ ಇಂಡಸ್ಟ್ರೀ ಅನ್ನೋ ಕಂಪನಿಯನ್ನು ಕೂಡಾ ಪ್ರಾರಂಭಿಸಿದ್ದರು. ಆದರೆ, ಕಳೆದ ಎರಡು ಮೂರು ವರ್ಷದಿಂದ ವ್ಯವಹಾರದಲ್ಲಿ ನಷ್ಟದ ಜೊತೆಗೆ ಹೊಸ ವ್ಯವಹಾರವೊಂದಕ್ಕೆ ಕೈ ಹಾಕಿದ ಪರಿಣಾಮ ಸಾಲ ಮಾಡಲು ಪ್ರಾರಂಭಿಸಿದ್ದರು.
ಸಂಬಂಧಿಯ ಅಂತ್ಯಕ್ರಿಯೆಗೆ ಭಾಗಿಯಾಗಲಿಲ್ಲ ಎನ್ನುವ ಕಾರಣಕ್ಕೆ ಮಹಿಳೆಯ ಹತ್ಯೆ!
ಶ್ಯಾಮ ಇಂಡಸ್ಟ್ರೀ ಕಂಪನಿ ಮೇಲೆ 3 ಕೋಟಿ ರೂ. ಸಾಲ: ಸಾಲ ಸುಮಾರು 2 ರಿಂದ 3 ಕೋಟಿ ರೂ. ತನಕ ಆಗಿದ್ದರಿಂದ ವಿಚಲಿತನಾದ ಶ್ಯಾಮ ಪಾಟೀಲ್, ತನ್ನ ಪತ್ನಿ ಹಾಗೂ ಪುಟ್ಟ ಮಗನ ಜತೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಇದರಂತೆ ಗುರವಾರ ಬೆಳಿಗ್ಗೆ 1.30ರ ವೇಳೆಗೆ ಕಾರವಾರಕ್ಕೆ ಆಗಮಿಸಿದ್ದ ಶ್ಯಾಮ್ ಕಾರವಾರ ನಗರದ ಕಾಳಿ ಸೇತುವೆ ಬಳಿ ತೆರಳಿ ಹೆಂಡತಿ ಜ್ಯೋತಿ ಪಾಟೀಲ್ ಹಾಗೂ ಮಗ ಧಕ್ಷನನ್ನು ನದಿಗೆ ದಬ್ಬಿದ್ದಾರೆ. ಇದಾದ ನಂತರ ತಾನು ಕೂಡಾ ಗೋವಾಕ್ಕೆ ತೆರಳಿ ಕುಕ್ಕಳ್ಳಿ ಎನ್ನುವ ಪ್ರದೇಶದ ಅರಣ್ಯ ಭಾಗದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಣ ಕೊಡಬೇಕಾದ ಸಂಬಂಧಿಕರೇ ಹಣ ಕೊಡಿಲಿಲ್ಲ: ಇನ್ನು ಶ್ಯಾಮ್ ಪಾಟೀಲ್ ಪತ್ನಿ ಹಾಗೂ ಮಗನನ್ನು ನದಿಗೆ ದಬ್ಬಿದ ನಂತರ ತನ್ನ ಸ್ನೇಹಿತರು ಹಾಗೂ ಕುಟುಂಬದ ಕೆಲವರಿಗೆ ಮೆಸೇಜ್ ಮಾಡುವ ಮೂಲಕ ವಿಷಯವನ್ನು ಸಹ ತಿಳಿಸಿದ್ದರಂತೆ. ಇದಾದ ನಂತರ ತಾನು ಗೋವಾದ ಕುಕ್ಕಳ್ಳಿ ಬಳಿಯ ಅರಣ್ಯ ಪ್ರದೇಶಕ್ಕೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಡೆತ್ ನೋಟ್ ಸಹ ಅವರು ಬರೆದಿದ್ದಾರೆ ಎನ್ನಲಾಗಿದೆ. ಡೆತ್ ನೋಟ್ ನಲ್ಲಿ ತನ್ನ ಮಾವನ ಮಗನೇ ತನಗೆ ಹಣವನ್ನು ಕೊಡಬೇಕಾಗಿತ್ತು. ಆದರೆ, ಕೊಡದ ಕಾರಣ ಸಾಲ ಹೆಚ್ಚಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಗುರುವಾರ ಬೆಳಿಗ್ಗೆ ಕಾರವಾರ ತಾಲೂಕಿನ ದೇವಭಾಗ್ ಕಡಲ ತೀರದಲ್ಲಿ ಶ್ಯಾಮ ಪಾಟೀಲ್ ಮಗನ ಮೃತದೇಹ ಸಿಕ್ಕಿದ್ದು, ಸ್ವಲ್ಪ ಸಮಯದ ನಂತರ ಅದೇ ಸ್ಥಳದಲ್ಲಿ ಪತ್ನಿಯ ಮೃತದೇಹ ಸಹ ಸಿಕ್ಕಿತ್ತು. ಸದ್ಯ ಚಿತ್ತಾಕುಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಗಾಂಜಾ ಗುಂಗಿನಲ್ಲಿ ಸ್ನೇಹಿತರು ಪತ್ನಿಯ ಸೆರಗು ಎಳೆದ್ರೂ ಗಂಡ ಸೈಲೆಂಟ್, ಪ್ರೀತಿಸಿ ಮದುವೆಯಾಗಿದ್ದಕ್ಕೆ ಬಾಳು ನರಕ!
ಕುಟುಂಬದ ಸದಸ್ಯರ ಮೋಸ : ಶ್ಯಾಮ್ ಪಾಟೀಲ್ ಗೋವಾದಲ್ಲಿ ಉದ್ಯಮದಲ್ಲಿ ಬೆಳೆದರೂ ವರ್ಷದಲ್ಲಿ ಹಲವು ಬಾರಿ ತನ್ನ ಕುಟುಂಬದ ಜೊತೆ ಸ್ವಂತ ಊರು ಕಾರವಾರ ತಾಲೂಕಿನ ಗೋಪಶಿಟ್ಟಾ ಗ್ರಾಮಕ್ಕೆ ಬರುತ್ತಿದ್ದರಂತೆ. ಅಲ್ಲದೇ, ಗೋವಾದಲ್ಲಿ ಐಷಾರಾಮಿ ಬಂಗಲೆ ಕಟ್ಟಿಕೊಂಡು ಉತ್ತಮ ಜೀವನ ಕೂಡಾ ಸಾಗಿಸುತ್ತಿದ್ದರಂತೆ. ವ್ಯವಹಾರದಲ್ಲಿ ಹೆಚ್ಚಿನ ಲಾಭ ಗಳಿಸಬೇಕೆನ್ನುವ ಆಸೆ ಹಾಗೂ ಕುಟುಂಬದ ಸದಸ್ಯರ ಮೋಸ ಅವರಿಗೆ ಸಾಲ ಮಾಡುವಂತೆ ಮಾಡಿದೆ. ಸಾಲದ ಬಾಧೆಯಿಂದ ಕೊನೆಗೆ ಇಡೀ ಕುಟುಂಬವೇ ಬಾರದ ಲೋಕಕ್ಕೆ ಹೋಗಿದ್ದಂತೂ ನಿಜಕ್ಕೂ ದುರಂತವಾಗಿದೆ.