ಇಳಿಕೆ ಕಂಡ ಮೆಣಸಿನಕಾಯಿ ಸರಬರಾಜು  ಕಳೆದ ಹಲವು ದಿನಗಳಿಂದ ಆವಕದಲ್ಲಿ ಏರಿಕೆ ಕಂಡಿದ್ದ ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆ

 ಬ್ಯಾಡಗಿ(ಜ.04): ಕೃಷಿ ಉತ್ಪನ್ನ ಮಾರುಕಟ್ಟೆಗೆ (Market) ಸೋಮವಾರ 1.36 ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಚೀಲಗಳು (Chilli) ಬಂದಿದ್ದು, ಆವಕದಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಕಳೆದ ಹಲವು ವಾರಗಳಲ್ಲಿ ಆವಕದಲ್ಲಿ ಏರಿಕೆ ಕಂಡು ಬಂದಿದ್ದ ಮಾರುಕಟ್ಟೆಯಲ್ಲಿ ಸೋಮವಾರ ಏಕಾಏಕಿ ಇಳಿಕೆ ಕಂಡು ಬಂದಿದೆ. ಕಳೆದ ಸೋಮವಾರ ಡಿ. 27 ರಂದು 1.44 ಲಕ್ಷ ಹಾಗೂ ಡಿ. 30 ರಂದು ಗುರುವಾರ 1.50 ಲಕ್ಷ ಮೆಣಸಿನಕಾಯಿ ಚೀಲಗಳ ಆವಕಾಗಿಗುವ ಮೂಲಕ ಮಾರುಕಟ್ಟೆ ಗತ ವೈಭವ ಮತ್ತೆ ಮರುಕಳಿಸಿತ್ತು. ಕಳೆದ ಗುರುವಾರದ 1.50 ಲಕ್ಷ ಮೆಣಸಿನ ಕಾಯಿ ಆವಕವಾಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಸೋಮವಾರ ಗುರುವಾರಕ್ಕಿಂತ 15 ಸಾವಿರ ಮೆಣಸಿನಕಾಯಿ ಚೀಲಗಳು ಕಡಿಮೆ ಆವಕಾಗಿದ್ದು ಎಲ್ಲರ ಲೆಕ್ಕಾಚಾರ ಉಲ್ಟಾ ಹೊಡೆದಿದೆ.

ದರದಲ್ಲಿ ಸ್ಥಿರತೆ: ಒಂದು ಲಕ್ಷ ಮೆಣಸಿನಕಾಯಿ ಆವಕವಾದರೂ ಸಹ ಸೋಮವಾರದ ಮಾರುಕಟ್ಟೆಯಲ್ಲಿ ಕಡ್ಡಿ, ಡಬ್ಬಿ, ಹಾಗೂ ಗುಂಟೂರ ತಳಿಯ ಮೆಣಸಿಕಾಯಿಗೆ ವ್ಯಾಪಾರಸ್ಥರು ಉತ್ತಮ ದರವನ್ನ (Price) ನೀಡಿದ ಕಾರಣ ದರದಲ್ಲಿ ಯಾವುದೇ ವ್ಯತ್ಯಾಸವಾಗದೇ ಸ್ಥಿರತೆ ಕಾಯ್ದುಕೊಂಡಿದೆ.

ಸೋಮವಾರದ ದರ: ಸೋಮವಾರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡ್ಡಿ ಮೆಣಸಿನಕಾಯಿ ತಳಿ ಗರಿಷ್ಠ ರು.37869, ಕನಿಷ್ಠ ರು.1689, ಮಾದರಿ ರು.14869, ಡಬ್ಬಿ ತಳಿ ಗರಿಷ್ಠ ರು.45119, ಕನಿಷ್ಠ ರು.2599, ಮಾದರಿ ರು.18709, ಗುಂಟೂರು ಗರಿಷ್ಠ ರು.13009, ಕನಿಷ್ಠ ರು.869, ಮಾದರಿ ರು.6599 ಮಾರಾಟವಾಗಿವೆ.

ಹಸಿ ಮೆಣಸಿನಕಾಯಿಯೆ ಹೆಚ್ಚು: ರೈತರು ಹಸಿ ಮೆಣಸಿನಕಾಯಿ (Green Chilli) ಹೆಚ್ಚಾಗಿ ತರುತ್ತಿರುವ ಕಾರಣ ಸೋಮವಾರವೂ ಸಹ ಮಾರುಕಟ್ಟೆಯಲ್ಲಿ ಸುಮಾರು 1720ಕ್ಕೂ ಲಾಟ್‌ಗಳಿಗೆ ಸ್ಥಳೀಯ ವ್ಯಾಪಾರಸ್ಥರು ಬಿಡ್‌ ಮಾಡಲಿಲ್ಲ.

6 ವರ್ಷಗಳ ಬಳಿಕ ಏರಿದ ಕರಿಮೆಣಸು ದರ : ಕಪ್ಪು ಬಂಗಾರ (Black gold), ಆಪದ್ಭಾಂದವ ಬೆಳೆ ಎಂದೇ ಕರೆಸಿಕೊಳ್ಳುವ ಕಾಳು ಮೆಣಸಿನ (Pepper) ದರ (Price) ಮತ್ತೆ ಏರಲಾರಂಭಿಸಿದೆ. ಆರು ವರ್ಷಗಳ ಹಿಂದೆ ದಾಖಲೆಯ (record) ಬೆಲೆ ಕಂಡು ಬಳಿಕ ಕುಸಿತದ ಹಾದಿಯಲ್ಲಿದ್ದ ಕಾಳು ಮೆಣಸಿನ ದರ ಇದೀಗ ಏರಿಕೆಯ ಹಾದಿ ಹಿಡಿದಿದ್ದು, ಕ್ವಿಂಟಲ್‌ (quintal) ಕಾಳುಮೆಣಸಿನ ದರ ಅರ್ಧ ಲಕ್ಷ ದಾಟಿದೆ. ಜನವರಿಯಲ್ಲಿ (January) ಈ ದರ ಮತ್ತೆ ಏರಿಕೆಯಾಗುವ ನಿರೀಕ್ಷೆ ಇದೆ.

ಆರು ವರ್ಷದ ಹಿಂದೆ ಪ್ರತಿ ಕ್ವಿಂಟಲ್‌ ಕಾಳುಮೆಣಸಿಗೆ ದಾಖಲೆಯ 70 ಸಾವಿರ ದರ ಸಿಕ್ಕಿತ್ತು. ಇದರಿಂದಾಗಿ ವಿಯೆಟ್ನಾಂ, ಶ್ರೀಲಂಕಾದಿಂದ (Shrilanka) ಒಂದಿಷ್ಟು ಸಕ್ರಮವಾಗಿ, ಅಗಾಧ ಪ್ರಮಾಣದಲ್ಲಿ ಅಕ್ರಮವಾಗಿ ಕಾಳುಮೆಣಸು ಭಾರತ (India) ಪ್ರವೇಶಿಸಿದ ಹಿನ್ನೆಲೆಯಲ್ಲಿ ನಂತರ ಬೆಲೆ ಭಾರೀ ಇಳಿಕೆ ಕಂಡಿತ್ತು. ಕಳಪೆ ಗುಣಮಟ್ಟದ ವಿಯೆಟ್ನಾಂ ಕಾಳು ಮೆಣಸನ್ನು ಕೆಲವರು ‘ಭಾರತದ ಕಾಳು ಮೆಣಸು’ ಎಂದು ಯುರೋಪ್‌ (Urop) ದೇಶಗಳಿಗೆ ಕಳುಹಿಸಿ ಮಾರುಕಟ್ಟೆ ಕಳೆದುಕೊಂಡಿದ್ದೂ ಆಗಿತ್ತು. ಆ ಬಳಿಕ ಕೇಳುವವರೇ ಇಲ್ಲದಂತಾದ ನಮ್ಮ ಕಾಳು ಮೆಣಸಿನ ದರ ಪ್ರತಿ ಕ್ವಿಂಟಲ್‌ಗೆ 30-35 ಸಾವಿರ ತಲುಪಿತ್ತು 40 ಸಾವಿರ ತಲುಪಿದರೆ ಅದೇ ಜಾಸ್ತಿ ಎನ್ನುವಂತಿತ್ತು.

ಆದರೆ ಅಕ್ಟೋಬರ್‌ ತಿಂಗಳಿಂದ ಕಾಳು ಮೆಣಸಿನ ಮಾರುಕಟ್ಟೆನಿಧಾನವಾಗಿ ಚೇತರಿಕೆ ಕಂಡುಕೊಳ್ಳುತ್ತಿದ್ದು, ನಗರದ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ ಕಾಳುಮೆಣಸು ಸರಾಸರಿ 46 ಸಾವಿರದಿಂದ 48 ಸಾವಿರಕ್ಕೆ ಖರೀದಿಯಾಗುತ್ತಿದೆ. ಗರಿಷ್ಠ ಬೆಲೆ ಪ್ರತಿ ಕ್ವಿಂಟಲ್‌ಗೆ 50 ಸಾವಿರ ದಾಟಿದೆ. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಹೋಲಿಸಿದರೆ ಪ್ರತಿ ಕ್ವಿಂಟಲ್‌ಗೆ 10 ಸಾವಿರಕ್ಕೂ ಹೆಚ್ಚು ದರ ಈ ಬಾರಿ ಲಭಿಸುತ್ತಿದೆ.

ದಿನಾಂಕ;ಗರಿಷ್ಠ ದರ (ಪ್ರತಿ ಕ್ವಿಂಟಲ್‌ಗೆ)

ಅ. 25; . 50170

ಅ. 27; . 51869

ಅ. 28; . 51399

ಅ. 29; . 51499

ಅ. 30; . 51099

ನ. 2; . 50475

ನ. 8; .49689

ನ. 10; . 50699

ನ. 13: . 50399

ಕಾಳು ಮೆಣಸಿನಿಂದ ಲಾಭ ಜಾಸ್ತಿ :  ಸಾಂಬಾರು ಬೆಳೆಗಳಲ್ಲಿ ಪ್ರಮುಖ ಬೆಳೆಯಾಗಿರುವ ಕಾಳು ಮೆಣಸು (Peppar) ಉತ್ತಮ ಲಾಭದಾಯಕ ಬೆಳೆಯಾಗಿದೆ. ಕಾಳು ಮೆಣಸು ಬೆಳೆಗೆ ನೂರಾರು ವರ್ಷಗಳ ಹಿನ್ನೆಲೆಯಿದೆ. ಇದು ಯೂರೋಪಿಯನ್ನರ ಕಾಲದಿಂದಲೂ ಪ್ರಚಲಿತವಾಗಿದೆ. 15ನೇ ಶತಮಾನದಲ್ಲಿ ಭಾರತ ಸಾಂಬಾರು ಪದಾರ್ಥಗಳನ್ನು ವಿದೇಶಕ್ಕೆ ಯೂರೋಪಿಯನ್ನರು ಕೊಂಡೊಯ್ಯುತ್ತಿದ್ದರು. ಅವುಗಳಲ್ಲಿ ಕಾಳು ಮೆಣಸು ಇತ್ತು.

ಟೊಮೆಟೋಗೆ ಈಗ ಭಾರೀ ಬಂಪರ್ : ರೈತನಿಗೆ ಫುಲ್ ಖುಷ್ ...

ಕಾಳುಮೆಣಸು ಬೆಳೆಗೆ ಕೇವಲ ಭಾರತದ ಮಾರುಕಟ್ಟೆಯಲ್ಲ, ವಿದೇಶಿ ಮಾರುಕಟ್ಟೆಗಳಲ್ಲಿ ಕೂಡ ಉತ್ತಮ ಬೇಡಿಕೆ ಇದೆ. ಇದು ಬಹುಪಯೋಗಿ ವಸ್ತುವಾಗಿದ್ದು, ಕೇವಲ ಸಾಂಬಾರು ಅಲ್ಲದೇ ಔಷಧಿ ಗುಣವುಳ್ಳ ಪದಾರ್ಥವಾಗಿದೆ. ಕಡಿಮೆ ಬಂಡವಾಳ, ವೆಚ್ಚದಲ್ಲಿ ಹೆಚ್ಚಿನ ಲಾಭ, ಆದಾಯವನ್ನು ತಂದುಕೊಂಡುತ್ತದೆ. ಆರ್ಥಿಕವಾಗಿ ರೈತರಿಗೆ ಲಾಭ ನೀಡುವ ಬೆಳೆಯಾಗಿದೆ. ಮಲೆನಾಡು ಪ್ರದೇಶದ ವಾತಾವರಣಕ್ಕೆ ಕಾಳುಮೆಣಸು ಸೂಕ್ತ ಬೆಳೆಯಾಗಿದೆ. ಹವಾಮಾನಕ್ಕೆ ತಕ್ಕಂತೆ ಕಾಳುಮೆಣಸು ಬಳ್ಳಿಯ ನಾಟಿ, ಅಭಿವೃದ್ಧಿ, ಕಟಾವು ಮಾಡಬೇಕು. ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಕೀಟಬಾಧೆ, ರೋಗದಿಂದ ತಡೆಗಟ್ಟಲು ಔಷಧಿ ಸಿಂಪಡಣೆ ಮಾಡಬೇಕು. ಕೀಟ ಹಾಗೂ ರೋಗಗಳ ಕುರಿತು ಅಗತ್ಯ ಮಾಹಿತಿಯೊಂದಿಗೆ ಕಾಲಕಾಲಕ್ಕೆ ನಿರ್ವಹಣೆ ಮಾಡಬೇಕು.

ಜಿಲ್ಲಾ ಸಹಕಾರಿ ಬ್ಯಾಂಕ್‌ ಉಪಾಧ್ಯಕ್ಷ ಎಚ್‌.ಕೆ. ದಿನೇಶ್‌ ಹೆಗ್ಡೆ ಮಾತನಾಡಿ, ರೈತರು ಕಾಳುಮೆಣಸು ಬೆಳೆಯತ್ತ ಹೆಚ್ಚಿನ ಆಸಕ್ತಿ ವಹಿಸಬೇಕು. ಈ ಭಾಗದಲ್ಲಿ ಅಡಕೆ ಹಳದಿ ಎಲೆರೋಗ ವ್ಯಾಪಿಸಿದೆ. ಇದರಿಂದ ಅಡಕೆ ಫಸಲು ನಾಶವಾಗುತ್ತಿದೆ. ರೈತರು ಪರ್ಯಾಯ ಬೆಳೆಯಾಗಿ ಕಾಳುಮೆಣಸು ಕೃಷಿಗೆ ಆದ್ಯತೆ ನೀಡಬೇಕು. ಕಾಳುಮೆಣಸು ಕೃಷಿಯಿಂದ ಹೆಚ್ಚಿನ ಲಾಭಗಳಿಸಬಹುದಾಗಿದೆ. ಹಾಗೇಯೇ ಉತ್ತಮ ಕೃಷಿ, ನಿರ್ವಹಣೆ ಮಾಡಬೇಕು. ಒಳನಾಡು ಪ್ರದೇಶವಾದ ನಾಯಿನಾಡು ಸೇರಿದಂತೆ ಹಲವು ಗ್ರಾಮಗಳ ಕೃಷಿಕರಿಗೆ ಸೂಕ್ತ ತರಬೇತಿ ನೀಡಬೇಕು .