Asianet Suvarna News Asianet Suvarna News

Chikkamagaluru : ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೊಲೀಸಪ್ಪ

ಪೊಲೀಸ್ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿರುವ ಘಟನೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ದಲ್ಲಿ ನಡೆದಿದೆ. 10 ಸಾವಿರ ಲಂಚ ಪಡೆಯುವಾಗ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನಲ್ಲಿ ನಡೆದಿದೆ.

Chikkamagaluru police caught red-handed while accepting bribes gow
Author
First Published Nov 8, 2022, 7:16 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ನ.8): ಪೊಲೀಸ್ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿರುವ ಘಟನೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ದಲ್ಲಿ ನಡೆದಿದೆ. 10 ಸಾವಿರ ಲಂಚ ಪಡೆಯುವಾಗ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನಲ್ಲಿ ನಡೆದಿದೆ. ಎನ್.ಆರ್.ಪುರ ತಾಲೂಕಿನ ಸರ್ಕಲ್ ಇನ್ಸ್‍ಪೆಕ್ಟರ್ ವಸಂತ ಶಂಕರ್ ಭಾಗವತ್ ಲೋಕಾಯುಕ್ತ ಬಲೆಗೆ ಬಿದ್ದ ಇನ್ಸ್‍ಪೆಕ್ಟರ್. ಎನ್.ಆರ್.ಪುರ ಪಟ್ಟಣದ ಬಸ್ತಿಮಠ ರೋಡ್ ನಿವಾಸಿ ಮಸ್ತಾನ್ ಎಂಬುವರಿಗೆ ಸೇರಿದ ಸಿಮೆಂಟ್ ಲಾರಿ 15 ಟನ್ ತೂಕಕ್ಕಿಂತ ಹೆಚ್ಚುವರಿಯಾಗಿ ಸಾಗಾಟ ಮಾಡಲು 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಸ್ತಾನ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇಂದು ಎನ್.ಆರ್.ಪುರ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಲಂಚ ಪಡೆಯುವಾಗ ಚಿಕ್ಕಮಗಳೂರು ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಹಣದ ಸಮೇತ ಇನ್ಸ್‍ಪೆಕ್ಟರ್ ಅವರನ್ನ ಬಂಧಿಸಿ ಕೆಲ ಕಾಲ ವಿಚಾರಣೆ ನಡೆಸಿದರು. ವಿಚಾರಣೆಯ ಬಳಕ ಇಂದು ರಾತ್ರಿ 10 ಗಂಟೆಗೆ ನ್ಯಾಯಾಧೀಶರ ಮುಂದೆ ಆರೋಪಿಯನ್ನು ಹಾಜರುಪಡೆಸುವ ಸಾಧ್ಯತೆಗಳಿವೆ.

ಶೇ.10 ಕಮಿಷನ್‌: ಎಸ್‌ಡಿಸಿ ಲೋಕಾ ಬಲೆಗೆ:
ಬೆಂಗಳೂರು: ತಮ್ಮ ಇಲಾಖೆಯ ಕಚೇರಿಗಳಿಗೆ ಹವಾ ನಿಯಂತ್ರಕಗಳನ್ನು ಪೂರೈಸಿದ್ದ ಗುತ್ತಿಗೆದಾರರಿಗೆ ಹಣ ಬಿಡುಗಡೆಗೆ ಶೇಕಡ 10 ರಷ್ಟುಕಮಿಷನ್‌ ರೂಪದಲ್ಲಿ ಲಂಚ ಪಡೆಯುತ್ತಿದ್ದ ಆಹಾರ ಸುರಕ್ಷತೆ ಮತ್ತು ಪ್ರಾಧಿಕಾರದ ದ್ವಿತೀಯ ದರ್ಜೆ ಸಹಾಯಕನೊಬ್ಬ (ಎಸ್‌ಡಿಸಿ) ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಉಪ ಆಯುಕ್ತ (ಆಡಳಿತ) ವಿಭಾಗದ ಎಸ್‌ಡಿಸಿ ಶಶಿಕುಮಾರ್‌ ಬಂಧಿತನಾಗಿದ್ದು, ತನ್ನ ಕಚೇರಿಯಲ್ಲೇ ಗುತ್ತಿಗೆದಾರರಿಂದ 50 ಸಾವಿರ ಲಂಚ ಪಡೆಯುವಾಗ ಆತ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಕಳೆದಿದ್ದ ಮೊಬೈಲ್ ಹುಡುಕಿಕೊಡೋಕೆ 5000 ರೂ. ಲಂಚ ; ಲೋಕಾಯುಕ್ತ ಬಲೆಗೆ ಬಿದ್ದ ಕಾನ್‌ಸ್ಟೇಬಲ್

ನಗರದ ಕೆ.ಆರ್‌.ಸರ್ಕಲ್‌ ಸಮೀಪ ಎಸ್‌ಜೆಬಿ ಪಾಲಿಟೆಕ್ನಿಕ್‌ ಕಾಲೇಜಿನ ಮುಂಭಾಗದ ರಾಜ್ಯ ಕೃಷಿ ಇಲಾಖೆಯ ಆಯುಕ್ತರ ಕಾರ್ಯಾಲಯದ ಕಟ್ಟಡದಲ್ಲಿ ಪ್ರಾಧಿಕಾರ ಕಚೇರಿಗೆ ಹವಾ ನಿಯಂತ್ರಕಗಳ ಪೂರೈಕೆಗೆ ದೂರುದಾರರು ಗುತ್ತಿಗೆ ಪಡೆದಿದ್ದರು. ಅಂತೆಯೇ ಕಚೇರಿಗೆ ಹವಾ ನಿಯಂತ್ರಕಗಳ ಅಳವಡಿಕೆ ಬಳಿಕ ಹಣ ಬಿಡುಗಡೆಗೆ ಪ್ರಾಧಿಕಾರದ ಆಡಳಿತ ವಿಭಾಗದ ಉಪ ಆಯುಕ್ತರ ಕಚೇರಿಗೆ ಗುತ್ತಿಗೆದಾರರು ಮನವಿ ಮಾಡಿದ್ದರು. ಆಗ ಹಣ ಬಿಡುಗಡೆಗೆ ಒಟ್ಟು ವೆಚ್ಚದ ಶೇ.10 ರಷ್ಟುಕಮಿಷನ್‌ ರೂಪದಲ್ಲಿ 50 ಸಾವಿರ ಲಂಚ ನೀಡುವಂತೆ ಎಸ್‌ಡಿಸಿ ಶಶಿಕುಮಾರ್‌ ಬೇಡಿಕೆ ಇಟ್ಟಿದ್ದ.

ಬೆಂಗಳೂರು: KAS ಅಧಿಕಾರಿ ಎಲ್‌ ಸಿ ನಾಗರಾಜ್‌ ವಿರುದ್ಧ ಲಂಚ ಕೇಸ್‌ ರದ್ದು

ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ಗುತ್ತಿಗೆದಾರರು ದೂರು ಸಲ್ಲಿಸಿದ್ದರು. ಅಂತೆಯೇ ಕಾರ್ಯಾಚರಣೆ ನಡೆಸಿದ ಪೊಲೀಸರು, ಮಧ್ಯಾಹ್ನ 3.30 ಗಂಟೆ ಸುಮಾರಿಗೆ ಗುತ್ತಿಗೆದಾರರಿಂದ ಹಣ ಸ್ವೀಕರಿಸುವಾಗ ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow Us:
Download App:
  • android
  • ios