Asianet Suvarna News Asianet Suvarna News

ಕಳೆದಿದ್ದ ಮೊಬೈಲ್ ಹುಡುಕಿಕೊಡೋಕೆ 5000 ರೂ. ಲಂಚ ; ಲೋಕಾಯುಕ್ತ ಬಲೆಗೆ ಬಿದ್ದ ಕಾನ್‌ಸ್ಟೇಬಲ್

  • ಲೋಕಾಯುಕ್ತ ಬಲೆಗೆ ಕಾನ್‌ಸ್ಟೇಬಲ್‌
  • ಕಳೆದ ಮೊಬೈಲ್‌ ಹುಡುಕಿಕೊಡಲು ಐದು ಸಾವಿರ ರು. ಲಂಚದ ಬೇಡಿಕೆ
5000Rs demand Constable Lokayukta trap davanagere rav
Author
First Published Oct 30, 2022, 8:34 AM IST

ಹಿರಿಯೂರು (ಅ.30) : ಕಳೆದ ಮೊಬೈಲ್‌ ಹುಡುಕಿಕೊಡುವ ಸಂಬಂಧ ವ್ಯಕ್ತಿಯೋರ್ವರಿಂದ ಲಂಚ ಸ್ವೀಕರಿಸುತ್ತಿದ್ದ ಪೊಲೀಸ್‌ ಕಾನ್‌ಸ್ಟೇಬಲ್‌ ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಸಿಲುಕಿದ್ದಾರೆ. ತಾಲೂಕಿನ ಜವನಗೊಂಡನಹಳ್ಳಿ ಠಾಣೆ ಪಿಸಿ ಹರೀಶ್‌ ಲೋಕಾಯುಕ್ತ ಬಲೆಗೆ ಸಿಲುಕಿದ್ದಾರೆ. ಕಾಟನಾಯಕನಹಳ್ಳಿಯ ಚಾಮರಾಜ್‌ ಎಂಬುವರ ಬಳಿ ಮೊಬೈಲ್‌ ಹುಡುಕಿಕೊಡಲು ಐದು ಸಾವಿರ ರು. ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಮೂರು ಸಾವಿರ ರುಪಾಯಿ ಮುಂಗಡ ಪಡೆದಿದ್ದು ಶನಿವಾರ ಜವನಗೊಂಡನಹಳ್ಳಿಯಲ್ಲಿ ಬಾಕಿ 2 ಸಾವಿರ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಜಿ.ಮಂಜುನಾಥ… ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

ಜೀನ್ಸ್‌ ಪ್ಯಾಂಟಿನ ಹಿಂಭಾಗ ಸ್ಟಿಕ್ಕರಲ್ಲಿ ಡ್ರಗ್ಸ್ ಇಬ್ಬರ ಬಂಧನ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗೆ ಜೀನ್ಸ್‌ ಪ್ಯಾಂಟ್‌ನ ಹಿಂಭಾಗದ ಸ್ಟಿಕರ್‌ನಲ್ಲಿ ಡ್ರಗ್‌್ಸ ಅಡಗಿಸಿ ಸಾಗಿಸಲು ಯತ್ನಿಸಿದ ಚಾಲಾಕಿ ಮಹಿಳೆ ಸೇರಿ ಇಬ್ಬರು ಕಾರಾಗೃಹದ ಭದ್ರತಾ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾರೆ. ಮಂಜುನಾಥ ನಗರದ ವಿಜಯ್‌ ಹಾಗೂ ಸುಜಾತಾ ಬಂಧಿತರಾಗಿದ್ದು, ಆರೋಪಿಗಳಿಂದ ಐದು ಗ್ರಾಂ ಎಂಡಿಎಂಎ ಜಪ್ತಿ ಮಾಡಲಾಗಿದೆ. ಮೂರು ದಿನಗಳ ಹಿಂದೆ ಕಾರಾಗೃಹದಲ್ಲಿರುವ ಕೈದಿ ನವೀನ್‌ ಕುಮಾರ್‌ ಭೇಟಿಗೆ ಬಂದಿದ್ದಾಗ ಈ ಕೃತ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪರಾಧ ಪ್ರಕರಣದಲ್ಲಿ ಬಂಧಿತನಾಗಿ ನವೀನ್‌ ಕುಮಾರ್‌, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದಾನೆ. ಈತನ ಭೇಟಿಗೆ ಅ.25ರಂದು ವಿಜಯ್‌ ಮತ್ತು ಸುಜಾತಾ ಬಂದಿದ್ದರು. ಬಳಿಕ ಕಾರಾಗೃಹ ಅಧಿಕಾರಿಗಳಿಂದ ಸಂದರ್ಶನ ಚೀಟಿ ಪಡೆದ ಅವರು, ಕೈದಿಗೆ ಪ್ಯಾಂಟ್‌ ಕೊಡುವುದಾಗಿ ಹೇಳಿದ್ದರು. ಭದ್ರತಾ ಸಿಬ್ಬಂದಿ, ಕೂಡಲೇ ಪ್ಯಾಂಟನ್ನು ಪಡೆದು ಪರಿಶೀಲಿಸಿದಾಗ ಡ್ರಗ್‌್ಸ ಪತ್ತೆಯಾಗಿದೆ. ಪ್ಯಾಂಟ್‌ ಹಿಂಭಾಗದ ಬ್ರಾಂಡ್‌ ಸ್ಟಿಕರ್‌ನಲ್ಲಿ ಡ್ರಗ್ಸನ್ನು ಆರೋಪಿಗಳು ಅಡಗಿಸಿಟ್ಟಿದ್ದರು.

ಡೆಲಿವರಿ ಬಾಯ್‌ಗೆ ಇರಿದು ಮೊಬೈಲ್‌ ಸುಲಿಗೆ

ಇತ್ತೀಚೆಗೆ ಸ್ವಿಗ್ಗಿ ಡೆಲಿವರಿ ಬಾಯ್‌ನನ್ನು ಅಡ್ಡಗಟ್ಟಿಚಾಕುವಿನಿಂದ ಚುಚ್ಚಿ ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದ ಇಬ್ಬರನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಾದ ಟಿಪ್ಪು ನಗರದ ಸಜ್ಜಾದ್‌ ಖಾನ್‌(27) ಮತ್ತು ಲಾಲ್‌ಬಾಗ್‌ ರಸ್ತೆಯ ಸೈಫ್‌ ಮೌಲಾನಾ(27) ಅವರಿಂದ ಮೊಬೈಲ್‌ ಫೋನ್‌, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಹಾಗೂ ಬಟನ್‌ ಚಾಕುವನ್ನು ಜಪ್ತಿ ಮಾಡಲಾಗಿದೆ.

ಆರೋಪಿಗಳು ಅ.10ರಂದು ಮುಂಜಾನೆ 1.30ರ ಸುಮಾರಿಗೆ ಸ್ವಿಗ್ಗಿ ಡೆಲಿವರಿ ಬಾಯ್‌ ಹರಿದಾಸ ಪೆಗು(25) ಎಂಬಾತನನ್ನು ಶಾಂತಿನಗರದ ಎಟಿ ಹಳ್ಳಿ ಗಣೇಶ ದೇವಸ್ಥಾನದ ಹಿಂಭಾಗ ಅಡ್ಡಗಟ್ಟಿಚಾಕುವಿನಿಂದ ತೊಡೆಗೆ ಇರಿದು ಮೊಬೈಲ್‌ ಕಸಿದು ಪರಾರಿಯಾಗಿದ್ದರು. ಆರೋಪಿಗಳು ಅಪರಾಧ ಹಿನ್ನೆಲೆವುಳ್ಳವರಾಗಿದ್ದು, ಈ ಹಿಂದೆ ಚಾಮರಾಜಪೇಟೆ, ಕಲಾಸಿಪಾಳ್ಯ, ವಿಲ್ಸನ್‌ಗಾರ್ಡನ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮೊಬೈಲ್‌ ಸುಲಿಗೆ ಮಾಡಿದ್ದಾರೆ.

Follow Us:
Download App:
  • android
  • ios