ಚಿಕ್ಕಮಗಳೂರಿನಲ್ಲಿ ಎರಡು ದಶಕಗಳ ನಕ್ಸಲ್ ಚಟುವಟಿಕೆಗಳು ಕೊನೆಗೊಂಡಿವೆ. ಸರ್ಕಾರ ನಕ್ಸಲ್ ನಿಗ್ರಹ ಪಡೆಯನ್ನು ವಿಸರ್ಜಿಸಲು ಮುಂದಾಗಿದೆ. ನಕ್ಸಲರು ಇಲ್ಲದಿದ್ದರೂ, ಕುಗ್ರಾಮಗಳ ಸಮಸ್ಯೆಗಳು ಹಾಗೆಯೇ ಇವೆ. ಜನವಿರೋಧಿ ನೀತಿಗಳಿಂದ ನಕ್ಸಲರಾಗಿದ್ದವರು, ಈಗ ಹಳ್ಳಿಗಳತ್ತ ಗಮನಹರಿಸಲು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಭಿವೃದ್ಧಿಗೆ ಮೀಸಲಿಟ್ಟ ಹಣ ಸಾಲದಾಗಿದೆ, ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿದ್ದಾರೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್, ಸುವರ್ಣ ನ್ಯೂಸ್

ಚಿಕ್ಕಮಗಳೂರು (ಮಾ.10): ಕಾಫಿನಾಡ ಎರಡು ದಶಕದ ನಕ್ಸಲರ ಹೆಜ್ಜೆ ಗುರುತುಗಳಿಗೆ ಶಾಶ್ವತವಾಗಿ ಫುಲ್ ಸ್ಟಾಪ್ ಬಿದ್ದಿದೆ. ಹಾಗಾಗಿ, ನಕ್ಸಲರ ಹುಟ್ಟಡಗಿಸಲು ಸರ್ಕಾರವೇ ರಚಿಸಿದ್ದ ನಕ್ಸಲ್ ನಿಗ್ರಹ ಪಡೆ ವಿಸರ್ಜನೆಗೂ ಸರ್ಕಾರ ಮುಂದಾಗಿದೆ. ಹಾಗಾದ್ರೆ, ಕರುನಾಡ ಕಾಡಲ್ಲಿ ನಕ್ಸಲರು ಇಲ್ಲ. ಕಾಡಂಚಿನ ಕುಗ್ರಾಮಗಳ ಸಮಸ್ಯೆಗಳಿಗೆ ಮುಕ್ತಿ ಸಿಕ್ತ ಎಂಬ ಪ್ರಶ್ನೆ ಕೂಡ ಮೂಡಲಿದೆ. ಕರುನಾಡ ಕಾಡಲ್ಲಿ ನಕ್ಸಲರಿಲ್ಲ ಅಷ್ಟೆ. ಸಮಸ್ಯೆಗಳು ಹಾಗೇ ಇವೆ. 

ಕರುನಾಡಲ್ಲಿ ನಕ್ಸಲರ ಹೆಜ್ಜೆ ಗುರುತುಗಳಿಗೆ ಕರಾಳ ಇತಿಹಾಸವಿದೆ. ಸರ್ಕಾರ-ನಕ್ಸಲರ ನಡುವಿನ ನ್ಯಾಯದ ತಿಕ್ಕಾಟದಲ್ಲಿ ಜನಸಾಮಾನ್ಯರು, ಪೊಲೀಸರು, ನಕ್ಸಲರು ಎಲ್ಲರೂ ಪ್ರಾಣ ತೆತ್ತಿದ್ದಾರೆ. ಮಲೆನಾಡಿಗರ 20 ವರ್ಷದ ನಕ್ಸಲ್ ಭಯದ ವನವಾಸಕ್ಕೆ ಮುಕ್ತಿ ಸಿಕ್ಕಿದೆ. ಆದ್ರೆ, ಸರ್ಕಾರಕ್ಕೆ ಅಸಲಿ ಆಟ ಶುರುವಾಗಿರೋದೆ ಈಗ. ಸರ್ಕಾರವೇನೋ 2 ತಿಂಗಳಲ್ಲಿ ನಕ್ಸಲರೆಂದು ಕಾಡಲ್ಲಿ ಕೊನೆ ಏಳೆಂಟು ಮೊಳೆಗಳಿಗೆ ಮಂಗಳಹಾಡಿದೆ. ಆದ್ರೆ, ವಾಟ್ ನೆಕ್ಸ್ಟ್ ಅನ್ನೋದು ಯಕ್ಷಪ್ರಶ್ನೆಯಾಗಿದೆ. ಸರ್ಕಾರ ಪ್ಯಾಕೇಜ್ ನಡಿ ನಕ್ಸಲರನ್ನ ಸಮಾಜದ ಮುಖ್ಯವಾಹಿನಿಗೆ ತಂದಿದೆ. ಆದ್ರೆ, ಮಲೆನಾಡ ಕುಗ್ರಾಮಗಳ ಕಥೆ.

ಜನರು ನಕ್ಸಲರಾಗಿದ್ದೇ ಸರ್ಕಾರದ ಜನವಿರೋಧಿ ನೀತಿಯಿಂದ. ಇದೀಗ, ಮತ್ತೆ ಹಳ್ಳಿಗಳತ್ತ ಅಧಿಕಾರಿಗಳು ಮುಖ ಮಾಡ್ದಿದ್ರೆ ಜನರ ಕಥೆ ಕೇಳೋರ್ಯಾರು. ಹಾಗಾಗಿ, ಮಾಜಿನಕ್ಸಲರು ಸರ್ಕಾರಕ್ಕೆ ಜನರ ಸಮಸ್ಯೆಯತ್ತ ಮುಖ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆದಿವಾಸಿಗಳು, ಕುಗ್ರಾಮದಲ್ಲಿ ಇಂದಿಗೂ ನೀರು, ಕರೆಂಟ್, ರಸ್ತೆ, ಹಕ್ಕುಪತ್ರ ಯಾವ್ದು ಇಲ್ಲ. ಸರ್ಕಾರ ಅತ್ತ ಗಂಭೀರವಾಗಿ ಗಮನ ಹರಿಸಬೇಕಿದೆ. ಅರಣ್ಯ ಕಾಯ್ದೆಯಿಂದ ಮಲೆಮಾಡಿಗಾಗ್ತಿರೋ ಸಮಸ್ಯೆಗಳ ಬಗ್ಗೆ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು. ಏಕೆಂದರೆ, ಅರಣ್ಯ ಕಾಯ್ದೆ ಕಾನೂನುಗಳು ಜನರ ಬದುಕುವ ಹಕ್ಕನ್ನೇ ಕಿತ್ತುಕೊಳ್ಳುತ್ತಿವೆ. ಹಾಗಾಗಿ, ಸರ್ಕಾರ ನಕ್ಸಲ್ ಕೊನೆಗೊಂಡ ಬಳಿಕವಾದ್ರು ಜನರತ್ತ ಮುಖ ಮಾಡುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಮಂಡ್ಯ ವಿವಿ ಕುಲಪತಿಗೆ 2 ವರ್ಷದಿಂದ ಸಂಬಳ ಕೊಟ್ಟಿಲ್ಲ; ಮೈಸೂರು ವಿವಿಯೊಂದಿಗೆ ವಿಲೀನಮಾಡಿ-ಮರಿತಿಬ್ಬೇಗೌಡ!

ಸರ್ಕಾರ ಮತ್ತಷ್ಟು ಹಣವನ್ನ ಮೀಸಲಿಡಬೇಕು : ಬಜೆಟ್ ನಲ್ಲಿ ಸರ್ಕಾರ ಮಲೆನಾಡ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ 10 ಕೋಟಿ ಹಣವಿಟ್ಟಿದೆ. ಸದ್ಯಕ್ಕೆ ಅದು ಸ್ವಾಗತ. ನಕ್ಸಲ್ ಪೀಡಿತ ಪ್ರದೇಶಗಳ ಆದರೆ, ಆ ಹಣ ಯಾವುದಕ್ಕೂ ಸಾಲಲ್ಲ. ಹಾಗಾಗಿ, ಸರ್ಕಾರ ಮತ್ತಷ್ಟು ಹಣವನ್ನ ಮೀಸಲಿಡಬೇಕು. ಅಭಿವೃದ್ಧಿಯತ್ತ ಗಮನ ಹರಿಸಬೇಕು. ಆ ಅಭಿವೃದ್ಧಿ ಪರಿಸರ ಪೂರಕವಾಗಿರಬೇಕು. ವೈಜ್ಞಾನಿಕವಾಗಿರಬೇಕು. ರೈತರು, ಕಾರ್ಮಿಕರು, ಆದಿವಾಸಿಗಳನ್ನೂ ಒಳಗೊಂಡಂತೆ ಅಭಿವೃದ್ಧಿಯಾಗಬೇಕು ಎಂದು ಆಗ್ರಹಿಸಿದ್ದಾರೆ. ಪರಿಸರಕ್ಕೆ ಯಾವುದೇ ಮಾರಕವಾಗದಂತೆ ಇಲ್ಲಿನ ಸರ್ವತೋಮುಖ ಅಭಿವೃದ್ಧಿ ಆಗಬೇಕೆಂದು ಮಾಜಿ ನಕ್ಸಲರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಒಟ್ಟಾರೆ ಮಲೆನಾಡಲ್ಲಿ ಕೆಂಪು ಉಗ್ರರ ಹೆಜ್ಜೆಯಂತೂ ಇನ್ಮುಂದೆ ಇತಿಹಾಸದ ಪುಟ ಸೇರಿದೆ.ರಾಜ್ಯವೇ ನಕ್ಸಲ್ ಮುಕ್ತ.ಅದ್ರೆ ಸಮಸ್ಯೆಯನ್ನೇ ಮುಂದಿಟ್ಟು ಇಲ್ಲಿನ ಜನ್ರ ಬೆಂಬಲ ಪಡೆದು ಹುಟ್ಟಿದ ನಕ್ಸಲ್ ಮುಕ್ತವಾಯಿತು.ಅದ್ರೆ ಸಮಸ್ಯೆ ಗೆ ನೀಡಿದ ಅನುದಾನ ನೋಡಿದ್ರೆ ಏನೂ ಮಾಡೋಕು ಸಾಧ್ಯವಿಲ್ಲ ಅನ್ನೋ ಬೇಸರ ಸ್ಥಳೀಯರಲ್ಲಿದೆ.

ಇದನ್ನೂ ಓದಿ: ಮುಸ್ಲಿಮರನ್ನು ಬೈಯದ್ದಿದ್ದರೆ ಬಿಜೆಪಿ ನಾಯಕರ ಹೃದಯಬಡಿತ ನಿಲ್ಲುತ್ತದೆ; ಎಂ. ಲಕ್ಷ್ಮಣ್