ಧಾರವಾಡ(ಜ.08): ಜೆಎನ್‌ಯು ಕಮ್ಯುನಿಸ್ಟ್‌ರ ಅಡ್ಡೆ ಆಗಿದೆ, ನಾಸ್ತಿಕರು, ದೇಶದ್ರೋಹಿಗಳು ಈ ದೇಶದಲ್ಲಿ ಹಿಂದೂ ವಿಚಾರಧಾರೆಗೆ ವಿರೋಧ ಮಾಡುವ ಅಡ್ಡೆಯಾಗಿದೆ. ಬಿಜೆಪಿ ಹಿರಿಯ ಮುಖಂಡ ಸುಬ್ರಮಣ್ಯ ಸ್ವಾಮಿ ಅವರು ಜೆಎನ್‌ಯು ನಿಲ್ಲಿಸಿ ಎಂದಿದ್ದಾರೆ. ಅದನ್ನ ನಾನು ಸ್ವಾಗತಿಸುತ್ತೇನೆ, ಎರಡೂ ಬಂದ್ ಮಾಡಿದ್ರೆ ಎಲ್ಲವೂ  ತೊಳೆದು‌ ಹೋಗುತ್ತದೆ ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. 

ಜೆಎನ್‌ಯು ಗಲಾಟೆ ವಿಚಾರದ ಬಗ್ಗೆ ಬುಧವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊಸ ಯುವಕರು, ವಿದ್ಯಾರ್ಥಿಗಳು ಬರಬೇಕು. ರಾಜಕೀಯ ಪ್ರವೇಶ ಮಾಡಿ, ಪರಸ್ಪರ ದ್ವೇಷ ಅಸೂಯೆಗಳಿಂದ ಜೆಎನ್‌ಯು ಕೂಡಿದೆ, ವಿದ್ಯಾರ್ಥಿಗಳಲ್ಲಿ ಗೊಂದಲ, ರಾಜಕೀಯ ಬೆರೆಸಲಾಗುತ್ತಿದೆ ಎಂದು ಹೇಳಿದ್ದಾರೆ. 

‘ಮುಸ್ಲಿಮರು 10 ಮಕ್ಕಳನ್ನ ಹೆತ್ತರೆ, ಹಿಂದೂಗಳು 50 ಮಕ್ಕಳಿಗೆ ಜನ್ಮ ನೀಡುತ್ತೇವೆ’

ದೇಶವನ್ನು ತುಕಡೆ ತುಕಡೆ ಕರೆಂಗೆ ಅಂದವರಿಂದ ಆರಂಭವಾಗಿದೆ, ವಿದ್ಯಾರ್ಥಿಗಳು ಮೇಲೆ ಹಲ್ಲೆ ಮಾಡಿದ್ದು ತಪ್ಪು, ಇದರ ಬಗ್ಗೆ ಸೂಕ್ತ ತನಿಖೆ ಆಗಲಿ, ಯಾರು ಮಾಡಿದ್ದಾರೆ ಅನ್ನೋದು ಹೊರಬರಬೇಕು ಅಷ್ಟೇ, ಒಬ್ಬರ ಮೇಲೆ‌ ಒಬ್ಬರು ಆರೋಪ ಮಾಡುತ್ತಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಗೂಂಡಾಗಿರಿ ಮಾಡೋದು ಸರಿಯಲ್ಲ ಎಂದು ಹೇಳಿದ್ದಾರೆ. 

ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿಕೆಯನ್ನು ಸಮರ್ಥಿಸಿಕೊಂಡ ಮುತಾಲಿಕ್, ದೇಶ ವಿರೋಧಿಗಳಿಗೆ ಸಂಬಂಧಿಸಿದಂತೆ ಸೋಮಶೇಖರ್ ಹೇಳಿಕೆ‌ ನೀಡಿದ್ದಾರೆ. ದೇಶದಲ್ಲಿ ಏನೇನೋ ಮಾಡಿದ್ರೆ ನೆಡೆಯುತ್ತೆ ಅಂದ್ರೆ ಅರ್ಥ ಅಲ್ಲ, ಹಿಂದೂಗಳು ಮುಸ್ಲಿಮರ ನಡುವೆ ಸಂಘರ್ಷ ಆಗಬಾರದು. ದೇಶದ್ರೋಹಿ, ಭಯೋತ್ಪಾದನೆ ಚಟುವಟಿಕೆಗಳನ್ನು ನಡೆಸುವವರ‌‌ ಬಗ್ಗೆ ಸೋಮಶೇಖರ್ ಹೇಳಿಕೆ ನೀಡಿದ್ದಾರೆ, ಎಲ್ಲ ಮುಸ್ಲಿಮರ ಬಗ್ಗೆ ಅಲ್ಲ ಎಂದು ಹೇಳಿದ್ದಾರೆ.