Asianet Suvarna News Asianet Suvarna News

‘ಮುಸ್ಲಿಮರು 10 ಮಕ್ಕಳನ್ನ ಹೆತ್ತರೆ, ಹಿಂದೂಗಳು 50 ಮಕ್ಕಳಿಗೆ ಜನ್ಮ ನೀಡುತ್ತೇವೆ’

ಕಾಂಗ್ರೆಸ್ ಪುಡಾರಿಗಳೇ ನಿಮಗೆ ಆಸೆ ಇದ್ರೆ ನೀವು ಬೇರೆ ದೇಶಕ್ಕೆ ಹೋಗಿ| ಹಿಂದೂಗಳು ಖಡ್ಗ ಹಿಡ್ಕೊಂಡು ದುರ್ಗಮ್ಮನ ದರ್ಶನ ಪಡಕೊಂಡು ಬಂದರೆ ಬಹಳ ಕಷ್ಟ|ಮೋದಿ ಎರಡು ಬಾರಿ ಪ್ರಧಾನಿ ಆದರು ಅಂತ ಹೊಟ್ಟೆಕಿಚ್ಚಾ ನಿಮಗೆ, ನಾವು ಎಲ್ಲಿದ್ರೂ ಭಾರತ ಮಾತೆಯ ಪುತ್ರರು, ಭಕ್ತರು|ನಾವು ಮುಸ್ಲಿಂ ಬಂಧುಗಳು, ಅಣ್ಣ ತಮ್ಮಂದಿರ ಥರ ಇರುತ್ತೇವೆ|

MLA Somashekhar Reddy Reacts Over CAA in Ballari
Author
Bengaluru, First Published Jan 3, 2020, 12:59 PM IST
  • Facebook
  • Twitter
  • Whatsapp

ಬಳ್ಳಾರಿ[ಜ.03]: ಪೌರತ್ವ ಕಾಯ್ದೆಯ ವಿರುದ್ಧ ಹೋರಾಟ ಮಾಡುವ ಕಾಂಗ್ರೆಸ್ ಕಾರ್ಯಕರ್ತರಿಗೆ ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ನಗರದಲ್ಲಿ ನಡೆದ ಪೌರತ್ವ ತಿದ್ದುಪಡಿ ಮಸೂದೆ ಸ್ವಾಗತಿಸಿ ಸಮಾವೇಶದಲ್ಲಿ ಭಾಷಣ ಮಾಡಿದ ಅವರು,  ಕಾಂಗ್ರೆಸ್ ಬೇಕೂಫ್ ಗಳೇ  ಏನಾದರೂ ನಕರ ಮಾಡಿದ್ರೆ, ನಿಮ್ಮ ಸ್ಥಿತಿ ಸರಿ ಇರಲ್ಲ, ಯಾರೋ ಹೇಳೋದನ್ಮು ಕೇಳಿ ಬೀದಿಗೆ ಬರ್ತಿರಾ, ಮೈ ಮೇಲೆ ಎಚ್ಚರ ಇಟ್ಟುಕೊಂಡು ಇರಬೇಕು ಎಂದು ಆಕ್ರೋಷ ಭರಿತರಾಗಿ ಮಾತನಾಡಿದ್ದಾರೆ. 

ಒಂದು ಬಾರಿ, ಎರಡು ಬಾರಿಯಾದರೆ ಓಕೆ,  ಪದೆ ಪದೇ ಇದನ್ನೆ ಮಾಡಿದ್ರೆ ನಾವು ತಾಳ್ಮೆಯಿಂದ ಇರಲ್ಲ. ನಾವು ಎಚ್ಚೆತ್ರೆ ನೀವು ಇಲ್ಲಿ ಇರುವುದಿಲ್ಲ. ಕಾಂಗ್ರೆಸ್ ಪುಡಾರಿಗಳೇ ನಿಮಗೆ ಆಸೆ ಇದ್ರೆ ನೀವು ಬೇರೆ ದೇಶಕ್ಕೆ ಹೋಗಿ,  ಹಿಂದೂಗಳು ಖಡ್ಗ ಹಿಡ್ಕೊಂಡು ದುರ್ಗಮ್ಮನ ದರ್ಶನ ಪಡಕೊಂಡು ಬಂದರೆ ಬಹಳ ಕಷ್ಟ ಎಂದು ಎಚ್ಚರಿಕೆ ನೀಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಾನು ಒಂದು ವೇಳೆ ಸತ್ತರೂ ಶವಕ್ಕೆ ಬೆಂಕಿ ಬಿದ್ದರೂ ಭಾರತ್ ಮಾತಾಕಿ ಜೈ ಅಂತ ಹೇಳುತ್ತೇವೆ . ಇನ್ನೊಂದು ಬಾರಿ ನಮ್ಮ ಆಸ್ತಿ ನಷ್ಟ ಮಾಡಿದರೆ ಹುಷಾರ್ ಆಗಿರಿ, ನಾವು 80 ರಷ್ಟು ಇದ್ದೇವೆ, ನಾವು ಕರೆ ಕೊಟ್ರೆ ಉಷ್ ಅಂತ ಊದಿದ್ರೆ ಹಾರಿ ಹೋಗ್ತಿರಾ, ನಿಮಗೇನು ಬೇಕು ? ಪಾಕಿಸ್ತಾನ, ಬಾಂಗ್ಲಾದೇಶದ ಹುಳಾ ಕಡಿತೈತಾ ಸುಮ್ಮ ಸುಮ್ಮನೆ ಬೀದಿಗಿಳಿತಿರಾ ಕಾಂಗ್ರೆಸ್ ನವರಿಗೆ ಎಚ್ಚರಿಕೆ ನೀಡಿದ್ದಾರೆ. 

ನೀವು ಪದೆ ಪದೇ ಹೀಗೆ ಬೀದಿಗಿಳಿದ್ರೆ ಹಿಂದೂಗಳು ನಾವು ಸುಮ್ಮನಿರಲ್ಲ. ನಮ್ಮ ಹೃದಯ ತೆಗೆದು ನೋಡಿದ್ರೇ, ಅಮಿತ್ ಶಾ, ಮೋದಿ ಕಾಣುತ್ತಾರೆ. ಮೋದಿ ಎರಡು ಬಾರಿ ಪ್ರಧಾನಿ ಆದರು ಅಂತ ಹೊಟ್ಟೆಕಿಚ್ಚಾ ನಿಮಗೆ, ನಾವು ಎಲ್ಲಿದ್ರೂ ಭಾರತ ಮಾತೆಯ ಪುತ್ರರು, ಭಕ್ತರು ನಾವಾಗಿದ್ದೇವೆ. ನೀವು ನಮ್ಮ ದೇಶದಲ್ಲಿ ಇರಬೇಕು ಅಂದ್ರೆ ನಾವು ಹೇಳಿದಂಗೆ ಕೇಳಬೇಕು ಹುಷಾರ್ ಎಂದು ಹೇಳಿದ್ದಾರೆ. 

ಕಾಂಗ್ರೆಸ್ ನಾಯಕ ಸೂರ್ಯನಾರಾಯಣ ರೆಡ್ಡಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ. ನಾವು ಮುಸ್ಲಿಂ ಬಂಧುಗಳು, ಅಣ್ಣ ತಮ್ಮಂದಿರ ಥರ ಇರುತ್ತೇವೆ. ಉತ್ತರ ಪ್ರದೇಶದ ಸಿಎಂಯೋಗಿ ಬಗ್ಗೆ ಮಾತನಾಡುತ್ತೀರಾ ಯೋಗಿ ಧಮ್ ಇರೋ ಮುಖ್ಯಮಂತ್ರಿಯಾಗಿದ್ದಾರೆ. ಆಸ್ತಿ ಹಾನಿ ಮಾಡಿದವರಿಗೆ ಯುಪಿಯಲ್ಲಿ ಆಸ್ತಿಯನ್ನ ಜಪ್ತಿ ಮಾಡಿದ್ದಾರೆ. ನೀವು ಮುಸ್ಲಿಂರು 10 ಮಕ್ಕಳನ್ನ ಹೆತ್ತರೆ, ನಾವು ಹಿಂದೂಗಳು 50 ಮಕ್ಕಳಿಗೆ ಜನ್ಮ ನೀಡುತ್ತೇವೆ ಎಂದು ಹೇಳಿದ್ದಾರೆ. 

Follow Us:
Download App:
  • android
  • ios