ಹಾಡಹಗಲೇ ಕೆನರಾ ಬ್ಯಾಂಕ್‌ ಗೆ ನುಗ್ಗಿ ನೋಟಿನ ಕಂತೆಗಳನ್ನು ಕದ್ದೊಯ್ದ ಭೂಪ: ಸಿಬ್ಬಂದಿ ತಬ್ಬಿಬ್ಬು

ಚಾಮರಾಜನಗರದಲ್ಲಿ ಹಾಡುಹಗಲೇ ಬ್ಯಾಂಕ್‌‌‌ ಕ್ಯಾಶ್‌ ಕೌಂಟರ್‌ಗೆ ನುಸುಳಿದ ಕಳ್ಳ 5 ಲಕ್ಷ ರೂ. ನೋಟಿನ ಕಂತೆಯನ್ನು ಎಗರಸಿಕೊಂಡು ಹೋಗಿದ್ದಾನೆ.

Chamarajanagar thief entered the Canara Bank cash counter and stole the Rs 5 Lakh sat

ಚಾಮರಾಜನಗರ (ಅ.18): ರಾಜ್ಯದ ಗಡಿಜಿಲ್ಲೆ ಚಾಮರಾಜನಗರದಲ್ಲಿ ಹಾಡುಹಗಲೇ ಬ್ಯಾಂಕ್‌‌‌ ಕ್ಯಾಶ್‌ ಕೌಂಟರ್‌ಗೆ ನುಸುಳಿ 5 ಲಕ್ಷ ರೂ. ನೋಟಿನ ಕಂತೆಯನ್ನು ಎಗರಸಿಕೊಂಡು ಹೋದ ಖತರ್ನಾಕ್‌ ಕಳ್ಳನ ಕೈಚಳಕದ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಚಾಮರಾಜನಗರದ ಕೆನರಾ ಬ್ಯಾಂಕ್‌ ನಲ್ಲಿ 5 ಲಕ್ಷ ರೂಪಾಯಿ ಕಳ್ಳತನ ನಡೆದಿದೆ. ನಗರದ ಜೋಡಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ಗೆ ಹೋದ ಕಳ್ಳ, ಅಧಿಕಾರಿಯಂತೆ ಸ್ಟೈಲಿಷ್ ಆಗಿ ಬ್ಯಾಂಕ್ ಕ್ಯಾಶ್‌ ಕೌಂಟರ್‌ ಒಳಗೆ ಹೋಗಿದ್ದಾನೆ. ಬ್ಯಾಂಕ್‌ ಸಿಬ್ಬಂದಿ ಮಾತ್ರ ಓಡಾಡುವ ಬಾಗಿಲಿನಿಂದ ಒಳಬಂದ ವ್ಯಕ್ತಿ ಕ್ಯಾಶ್‌ ಕೌಂಟರ್‌ ಇರುವ ಬ್ಯಾರೇಜ್‌ ಒಳಗೆ ಹೋಗಿ ಅಲ್ಲಿದ್ದ 1 ಲಕ್ಷ ರೂ. ಮೌಲ್ಯದ ಐದು ನೋಟಿನ ಕಂತೆಗಳನ್ನು ಕದ್ದುಕೊಂಡು ತಾನು ತಂದಿದ್ದ ಬ್ಯಾಗ್‌ನೊಳಗೆ ಸುತ್ತಿಕೊಂಡು ಬ್ಯಾಂಕ್‌ನಿಂದ ಹೊರಗೆ ಹೋಗಿದ್ದಾನೆ.

ಬ್ಯಾಂಕ್‌ ಸಿಬ್ಬಂದಿ ಊಟಕ್ಕೆಂದು ಹೋದಾಗ ಬ್ಯಾಂಕ್‌ ಸಿಬ್ಬಂದಿ ಕೂರುವ ಸ್ಥಳಕ್ಕೆ ಹೋಗಿದ್ದ ಕಳ್ಳ, ಕ್ಯಾಷ್ ಕೌಂಟರ್ ನಲ್ಲಿಟ್ಟಿದ್ದ 5 ಲಕ್ಷ ರೂಪಾಯಿಗಳನ್ಮು ಮೆಲ್ಲಗೆ ಎಗರಿಸಿಕೊಂಡು ಹೊರ ಬಂದಿದ್ದಾನೆ. ಈತ ಬ್ಯಾಂಕ್ ಸಿಬ್ಬಂದಿ ರೀತಿಯಲ್ಲೇ ವರ್ತಿಸಿದ್ದರಿಂದ ಇತರರಿಗೆ ಅನುಮಾನ ಬಾರದಂತೆ ನಡೆದುಕೊಂಡಿದ್ದಾನೆ. ಈತ ಬ್ಯಾಂಕ್‌ನಲ್ಲಿ ಹಣ ಕದಿಯಲು ಇಬ್ಬರು ಕಳ್ಳರು ಕೂಡ ಸಾಥ್‌ ನೀಡಿದ್ದಾರೆ. ಈತನಿಗೆ ಬ್ಯಾಂಕ್‌ನೊಳಗೆ ಹಾಗೂ ಹೊರಗೆ ನಿಂತು ಸನ್ನೆ ನೀಡುತ್ತಾ ಹಣ ಕದ್ದುಕೊಂಡು ಬರಲು ಸಾಥ್‌ ನೀಡಿದ್ದಾರೆ.

ಸಿದ್ದರಾಮಯ್ಯ ಸರ್ಕಾರದಿಂದ ತಮಿಳುನಾಡಿಗೆ ನೀರಿನ ಭಾಗ್ಯ, ಪಂಚ ರಾಜ್ಯಗಳಿಗೆ ಹಣದ ಭಾಗ್ಯ: ಕಟೀಲ್‌ ವಾಗ್ದಾಳಿ

ಇನ್ನು ಕ್ಯಾಶ್‌ ಕೌಂಟರ್‌ ಬಳಿ ಬಂದ ಸಿಬ್ಬಂದಿ ಅನುಮಾನ ಬಂದು ಹಣವನ್ನು ಎಣಿಕೆ ಮಾಡಿದಾಗ ಅಲ್ಲಿ 5 ಲಕ್ಷ ರೂ. ಹಣ ಇಲ್ಲದಿರುವುದು ಗಮನಕ್ಕೆ ಬಂದಿದೆ. ಆಗ, ಸಿಸಿಟಿವಿ ಫೂಟೇಜ್‌ ತೆರೆದು ನೋಡಿದಾಗ ಚಾಲಾಕಿ ಕಳ್ಳರ ಕರಾಮತ್ತು ಬಯಲಾಗಿದೆ. ಸ್ಥಳಕ್ಕೆ ನಗರ ಪೊಲೀಸರ ಭೇಟಿ ಸಿಸಿಟಿವಿ ಕ್ಯಾಮರಾ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಕಳ್ಳನ ಕರಾಮತ್ತು ಪರಿಶೀಲನೆಯಿಂದ ಬ್ಯಾಂಕ್ ಅಧಿಕಾರಿಗಳು ಕೂಡ ಬೆಚ್ಚಿಬಿದ್ದಿದ್ದಾರೆ. ಜೊತೆಗೆ, ಈತ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ಇರುವ ಜಾಗದಲ್ಲಿ ಬಂದು ಹಣ ಕಳ್ಳತನ ಮಾಡಿದ್ದು, ಕಳ್ಳನನ್ನು ಬಂಧಿಸಿ ಹಣ ವಸೂಲಿ ಮಾಡಿಕೊಡುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.

ನವರಾತ್ರಿ ಹಬ್ಬಕ್ಕೆ ಗುಡ್ ನ್ಯೂಸ್, ಸರ್ಕಾರಿ ನೌಕರರಿಗೆ ಶೇ.4 ರಷ್ಟು DA ಹೆಚ್ಚಳ
ನವದೆಹಲಿ(ಅ.18): 
ದಸರಾ ಹಬ್ಬಕ್ಕೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಛಳ ನಿರ್ಧಾರಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಶೇಕಡಾ 4 ರಷ್ಟು ತುಟ್ಟಿ ಭತ್ಯೆ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇಕಡಾ 42ರಿಂದ ಶೇಕಡಾ 46ಕ್ಕೆ ಏರಿಕೆಯಾಗಿದೆ. ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಈ ನಿರ್ಧಾರ ನೆರವಾಗಲಿದೆ. ಸರ್ಕಾರಿ ನೌಕರರ ಸುದೀರ್ಘ ದಿನಗಳಿಂದ ತುಟ್ಟಿಭತ್ಯೆ ಹೆಚ್ಚಳ ಬೇಡಿಕೆ ಕೊನೆಗೂ ಈಡೇರಿದೆ. ವಿಶೇಷವಾಗಿ ನವರಾತ್ರಿ ಹಬ್ಬದ ಆವೃತ್ತಿಯಲ್ಲೇ ಕೇಂದ್ರ ಸರ್ಕಾರ ಉದ್ಯೋಗಿಗಳಿಗೆ ಶುಭ ಸುದ್ದಿ ನೀಡಿದೆ. ಕೇಂದ್ರ ಸರ್ಕಾರದ ಅನುಮೋದನೆಯಿಂದ 47 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 68 ಲಕ್ಷ ಪಿಂಚಣಿದಾರರಿಗೆ ನೆರವಾಗಲಿದೆ. 

ಕೋರಮಂಗಲ ಮಡ್‌ಪೈಪ್‌ ಕೆಫೆಯಲ್ಲಿ ಭಾರಿ ಬೆಂಕಿ ಅವಘಡ: ಕಟ್ಟಡದಿಂದ ಹಾರುತ್ತಿರುವ ಜನರು

ಶೇಕಡಾ 4 ರಷ್ಟು ತುಟ್ಟಿ ಭತ್ಯೆ ಹೆಚ್ಚಳದಿಂದ ನೌಕರರು ನವೆಂಬರ್ ತಿಂಗಳಿನಿಂದ ಸ್ಯಾಲರಿ ಹೆಚ್ಚಾಗಲಿದೆ. ಉದಾಹರಣೆಗೆ ಕನಿಷ್ಠ ಮೂಲ ವೇತನ 18,000 ರೂಪಾಯಿ ನಿಗದಿಪಡಿಸಿದ್ದರೆ, ಸದ್ಯ ಇರುವ ಶೇಕಡಾ 42 ರಷ್ಟು ತುಟ್ಟಿಭತ್ಯೆ ಅಡಿಯಲ್ಲಿ ತಿಂಗಳಿೆ 7,500 ರೂಪಾಯಿ ಪಡೆಯುತ್ತಾರೆ. ಇದೀಗ ಶೇಕಡಾ 4 ರಷ್ಟು ಹೆಚ್ಚಳದಿಂದ ತುಟ್ಟಿಭತ್ಯೆ ಶೇಕಡಾ 46ಕ್ಕೆ ಏರಿಕೆಯಾಗಿದೆ. ಇದರಿಂದ ಮಾಸಿಕ ವೇತನವೂ 8,280 ರೂಪಾಯಿಗೆ ಏರಿಕೆಯಾಗಲಿದೆ.  ಇನ್ನು 56,900 ರೂಪಾಯಿ ಗರಿಷ್ಠ ಮೂಲವೇತನ ಹೊಂದಿರುವ ವ್ಯಕ್ತಿಗಳು ಸದ್ಯದ ಶೇಕಡಾ 42ರಷ್ಟು ಡಿಎ ದಿಂದ ಮಾಸಿಕ 23,898 ರೂಪಾಯಿ ಪಡೆಯುತ್ತಿದ್ದಾರೆ. ಇದೀಗ ಡಿಎ ಹೆಚ್ಚಳದಿಂದ ಮಾಸಿಕವಾಗಿ 26,174 ರೂಪಾಯಿ ಪಡೆಯಲಿದ್ದಾರೆ. 

Latest Videos
Follow Us:
Download App:
  • android
  • ios