Asianet Suvarna News Asianet Suvarna News

ಕೋರಮಂಗಲ ಮಡ್‌ಪೈಪ್‌ ಕೆಫೆಯಲ್ಲಿ ಭಾರಿ ಬೆಂಕಿ ಅವಘಡ: ಕಟ್ಟಡದಿಂದ ಹಾರುತ್ತಿರುವ ಜನರು

ಕೋರಮಂಗಲದ ಮಡ್‌ಪೈಪ್‌ ಕೆಫೆಯಲ್ಲಿ ಬೆಂಕಿ ಅವಘದ ಸಂಭವಿಸಿದ್ದು, ಇದೀ ಕಟ್ಟಡವೇ ಹೊತ್ತಿ ಉರಿಯುತ್ತಿದೆ. ಜನರು ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿಯುತ್ತಿದ್ದಾರೆ.

Bengaluru Massive fire at Koramangala Mudpipe cafe and Pub People flying from building sat
Author
First Published Oct 18, 2023, 1:08 PM IST

ಬೆಂಗಳೂರು (ಅ.18): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋರಮಂಗಲದ ಮಡ್‌ಪೈಪ್‌ ಕೆಫೆಯಲ್ಲಿ ಬೆಂಕಿ ಅವಘದ ಸಂಭವಿಸಿದ್ದು, ಇದೀ ಕಟ್ಟಡವೇ ಹೊತ್ತಿ ಉರಿಯುತ್ತಿದೆ. ಕಟ್ಟಡದಲ್ಲಿರುವ ಜನರು ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿಯುತ್ತಿದ್ದಾರೆ. ಇನ್ನು ನಾಲ್ಕನೇ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ ನಂತರ ಇಡೀ ಕಟ್ಟಡವನ್ನು ಆವರಿಸಿಕೊಂಡಿದೆ.

ಕೋರಮಂಗಲ ಬಳಿಯ ಸದ್ದಗುಂಟೆಪಾಳ್ಯದ ಕಿರಾ ಲೇಔಟ್‌ನಲ್ಲಿರುವ ಕೆಡಿಪಿ ಕಟ್ಟಡದಲ್ಲಿರುವ 4ನೇ ಮಹಡಿಯಲ್ಲಿರುವ ಮಡ್‌ಪೈಪ್‌ ಕೆಫೆಯಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿವೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕೆಲವರು ಕಟ್ಟಡದಿಂದ ಓಡಿ ಬಂದರೆ ಇನ್ನು ಕೆಲವರು ಕಟ್ಟಡದಲ್ಲಿಯೇ ಸಿಲುಕಿಕೊಂಡಿದ್ದಾರೆ. ಈಗಾಗಲೇ 7 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುತ್ತಿವೆ. ಇದರಲ್ಲಿ ಒಬ್ಬ ವ್ಯಕ್ತಿ ಜೀವ ಉಳಿಸಿಕೊಳ್ಳಲು ಬೆಂಕಿಯಲ್ಲಿಯೇ ಹೊರಬಂದು ಮೊದಲ ಮಹಡಿಯಿಂದ ಜಿಗಿದಿದ್ದಾನೆ. ಆತನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. 

Chikkamgaluru: ಮೈಸೂರಿನ ಬಳಿಕ ಕಾಫಿನಾಡಿನಲ್ಲಿ ವಿವಾದಿತ ಮಹಿಷ ದಸರಾ ಕಿಚ್ಚು!


ಬೆಂಗಳೂರು ಕೋರಮಂಗಲದಲ್ಲಿ ಅಗ್ನಿ ಅವಘಡವು ಮೊದಲು 4ನೇ ಮಹಡಿಯಲ್ಲಿರುವ ಪಬ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಸಿಲಿಟಂಡರ್‌ ಸ್ಪೋಟಗೊಂಡಿದೆ. ಇದರಿಂದ ಬೆಂಕಿ ಅವಘಡ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಆರಂಭದಲ್ಲಿ ನಾಲ್ಕು ಅಗ್ನಿ ಶಾಮಕ ವಾಹನ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಮುಂದಾಗಿವೆ. ಆದರೂ ಬೆಂಕಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮತ್ತೆ ಹೆಚ್ಚುವರು 3 ಅಗ್ನಿಶಾಮಕ ವಾಹನಗಳು ಬಂದು ಬೆಂಕಿ ಆರಿಸಲು ಮುಂದಾಗಿವೆ. ನಂತರ, ಪಕ್ಕದ ಕಟ್ಟಡಗಳಿಗೆ ಬೆಂಕಿ ಆವರಿಸುವುದನ್ನು ತಡೆಯಲಾಗಿದೆ. 

Bengaluru Massive fire at Koramangala Mudpipe cafe and Pub People flying from building sat

3ನೇ ಮಹಡಿಯಿಂದ ಹಾರಿದ ವ್ಯಕ್ತಿ ಸ್ಥಿತಿ ಗಂಭೀರ: ಇನ್ನು ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ 3ನೇ ಮಹಡಿಯಿಂದ ಒಬ್ಬ ವ್ಯಕ್ತಿ ಜೀವ ಉಳಿಸಿಕೊಳ್ಳಲು ಹಾರಿದ್ದಾನೆ. ಆದರೆ, ಕೆಳಗೆ ಯಾವುದೇ ಸುರಕ್ಷತಾ ಸಧನಗಳು ಇಲ್ಲದ ಹಿನ್ನೆಲೆಯಲ್ಲಿ ವ್ಯಕ್ತಿಯ ಸ್ಥಿತಿ ಭಾರಿ ಗಂಭೀರವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಆತನಿಗೆ ಕಟ್ಟಡದಿಂದ ಹಾರದಂತೆ ಹೇಳುತ್ತಿದ್ದರೂ ಆತ ಬೆಂಕಿ ಜ್ವಾಲೆಯ ಉರಿಯನ್ನು ತಾಳಲಾರದೇ ಜಂಪ್‌ ಮಾಡಿದ್ದಾನೆ. ಸೀದಾ ಕೆಳಗೆ ಬಿದ್ದ ವ್ಯಕ್ತಿಯ ದೇಹದ ವಿವಿಧ ಅಂಗಗಳಿಗೆ ಭಾರಿ ಪೆಟ್ಟು ಬಿದ್ದಿದೆ. ಇದರಿಂದ ಆತನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 

ಇನ್ನೂ ಹೆಣ ಬೀಳೋದಿದೆ, ಎಲ್ಲ ಒಟ್ಟಿಗೆ ಹೂಳ್ತೀವಿ.. ಇಸ್ರೇಲ್‌ ಮಹಿಳಾ ಯೋಧೆಯ ಕಿಡಿನುಡಿ

ಕಾರು ಶೋ ರೂಮ್‌, ಪ್ರತಿಲಿಪಿ ಕಚೇರಿಗೂ ಅವಘಡ: ಇನ್ನು ಇತ್ತೀಚೆಗೆ ಹೊಸದಾಗಿ ಆರಂಭಿಸಿದ್ದ ಕೆಫೆಯಲ್ಲಿ ಬೆಂಕಿ ಅನಾಹುತ ಕಾಣಿಸಿಕೊಂಡಿದ್ದು, ನಂತರ ನಿಯಂತ್ರಣಕ್ಕೆ ಬಾರದೇ ಎಲ್ಲ ಮಹಡಿಗಳಿಗೂ ಆವರಿಸಿದೆ. ಸುಮಾರು 3 ಗಂಟೆಯ ಬೆಂಕಿ ಉರಿದ ಪ್ರಕರಣದಲ್ಲಿ ಪ್ರಾಣ ಹಾನಿ ಆಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪಕ್ಕದ ಕಟ್ಟಡದಲ್ಲಿಯು ಸಹ ಆವರಿಸಿಕೊಂಡು ದಟ್ಟ ಹೊಗೆ ಆವರಿಸಿತ್ತು. ಈ ಕಟ್ಟಡದ ಪಕ್ಕದಲ್ಲಿ ಕಾರು ಶೋ ರೂಮ್‌ ಮತ್ತು ಪ್ರತಿಲಿಪಿ ಕಚೇರಿಯೂ ಇದ್ದು, ಕೂಡಲೇ ಸಿಬ್ಬಂದಿಯನ್ನು ಹೊರಗೆ ತಂದು ನೀರು ಸಿಂಪಡಣೆ ಮಾಡಲಾಗಿದೆ. 

Follow Us:
Download App:
  • android
  • ios