ಸಿದ್ದರಾಮಯ್ಯ ಸರ್ಕಾರದಿಂದ ತಮಿಳುನಾಡಿಗೆ ನೀರಿನ ಭಾಗ್ಯ, ಪಂಚ ರಾಜ್ಯಗಳಿಗೆ ಹಣದ ಭಾಗ್ಯ: ಕಟೀಲ್ ವಾಗ್ದಾಳಿ
ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ತಮಿಳುನಾಡಿಗೆ ನೀರಿನ ಭಾಗ್ಯ, ಪಂಚ ರಾಜ್ಯಗಳಿಗೆ ಹಣದ ಭಾಗ್ಯವನ್ನೂ ನೀಡಲಾಗುತ್ತಿದೆ.

ಬೆಂಗಳೂರು (ಅ.18): ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ತಮಿಳುನಾಡಿಗೆ ನೀರಿನ ಭಾಗ್ಯ, ಪಂಚ ರಾಜ್ಯಗಳಿಗೆ ಹಣದ ಭಾಗ್ಯವನ್ನೂ ನೀಡಲಾಗುತ್ತಿದೆ. ಆದರೆ, ಕರ್ನಾಟಕಕ್ಕೆ ಕತ್ತಲೆ ಭಾಗ್ಯ ದೊರೆತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದ ಬಳಿಕ, ತಮಿಳುನಾಡಿಗೆ ನೀರಿನ ಭಾಗ್ಯ, ಪಂಚ ರಾಜ್ಯಗಳಿಗೆ ಹಣದ ಭಾಗ್ಯ. ಕರ್ನಾಟಕಕ್ಕೆ ಕತ್ತಲೆ ಭಾಗ್ಯ ದೊರೆತಿದೆ. ಸಿದ್ದರಾಮಯ್ಯರನ್ನ ಮನೆಗೆ ಕಳಿಸಬೇಕು ಅಂತ ಡಿ.ಕೆ. ಶಿವಕುಮಾರ್ ಕಾಯುತ್ತಿದ್ದಾರೆ. ಆದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಜೈಲಿಗೆ ಕಳಿಸಬೇಕು ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಚು ಮಾಡ್ತಿದ್ದಾರೆ ಎಂದು ಆರೋಪ ಮಾಡಿದರು.
ಕೋರಮಂಗಲ ಮಡ್‌ಪೈಪ್ ಕೆಫೆಯಲ್ಲಿ ಭಾರಿ ಬೆಂಕಿ ಅವಘಡ: ಕಟ್ಟಡದಿಂದ ಹಾರುತ್ತಿರುವ ಜನರು
ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆಯಲ್ಲಿ ರೇಟ್ ಫಿಕ್ಸ್ ಮಾಡುವ ಕೆಲಸ ಆಗ್ತಿದೆ. ಸಿಎಂ ಕಚೇರಿಯಲ್ಲಿ ರೇಟ್ ಪಿಕ್ಸ್ ಆಗಿದೆ ಯಾವ ಅಧಿಕಾರಿಗೆ ಎಷ್ಟು ಅಂತ. ಬಿಬಿಎಂಪಿಯಲ್ಲಿರೋ ಗುತ್ತಿಗೆದಾರರಿಂದಲೂ ಕಮೀಷನ್ ಪಡೀತಿದ್ದಾರೆ. ಆ ಹಣವೇ 100 ಕೋಟಿ ರೂ. ಆಗಿದೆ. ಇದು ಕಮೀಷನ್ ಹಣ ಅಂತ ಪ್ರತಿಯೊಬ್ಬರಿಗೂ ಗೊತ್ತಾಗಿದೆ. ಕಲಾವಿದರ ಬಳಿಯೂ ಕಮೀಷನ್ ಕೇಳಿರೋ ಸರ್ಕಾರ ಇದು. ಪಂಚ ರಾಜ್ಯಗಳಿಗೆ ಹಣದ ಹೊಳೆ ಹರಿಸಲು ಇಲ್ಲಿ ಕಲೆಕ್ಷನ್ ಮಾಡ್ತಿದ್ದಾರೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಅಂತ ಬಿಜೆಪಿ ಆಗ್ರಹಿಸುತ್ತದೆ ಎಂದರು.
ರಾಜ್ಯದ 251 ರೈತರು ಆತ್ಮಹತ್ಯೆ: ಈವರೆಗೆ ರಾಜ್ಯದಲ್ಲಿ 251 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ಕಡೆ ಕರೆಂಟ್ ಇಲ್ಲ. 195 ತಾಲ್ಲೂಕು ಬರ ಅಂತ ಘೋಷಣೆ ಆಗಿದೆ. ವಿದ್ಯುತ್ ಇಲ್ಲ, ಸಾಲ ಸಿಗುತ್ತಿಲ್ಲ. ನಮ್ಮ ಸರ್ಕಾರ ಮಾಡಿದ ಯೋಜನೆ ನಿಲ್ಲಿಸಿದ್ದಾರೆ. ರೈತ ಬರ ಹಾಗೂ ವಿದ್ಯುತ್ ಕೊರತೆಯಿಂದ ಸಂಕಷ್ಟದಲ್ಲಿದ್ದಾನೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲು 5 ಯೋಜನೆ ಘೊಷಣೆ ಮಾಡಿತ್ತು. ಹೇಳಿದ ರೀತಿ ಯಾವುದನ್ನೂ ಪರಿಪೂರ್ಣವಾಗಿ ಜಾರಿಗೆ ತಂದಿಲ್ಲ. ಇದರಿಂದ ಜನ ರೋಸಿ ಹೋಗಿದ್ದು, ಹಿಡಿಶಾಪ ಹಾಕ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಒಳ ಜಗಳ ಶುರು ಮಾಡಿದ್ದಾರೆ. ಬಣ ರಾಜಕೀಯ ಶುರುವಾಗಿದೆ. ಡಿಕೆಶಿ ಬೆಳಗಾವಿಗೆ ಹೋಗಿದ್ದಾರೆ. ಯಾಕಂದ್ರೆ ಅಲ್ಲಿ ಬಸ್‌ನಿಂದ ಇಳಿಸಲು. ಅದು ಬಿಟ್ಟು ಬೇರೆ ಕಡೆ ಇನ್ನೊಂದು ಬಸ್ ಹೊರಡಲು ರೆಡಿಯಾಗಿದೆ. ಈ ಸರ್ಕಾರ ಕಿತ್ತೊಗೆಯಬೇಕು ಅಂತ ಜನ ಕಾಯ್ತಿದ್ದಾರೆ ಎಂದು ಹೇಳಿದರು.
ಮಹಾರಾಷ್ಟ್ರದ ಶಿವಸೇನೆ ಮಾದರಿಯಲ್ಲಿ ಇಬ್ಭಾಗವಾಗುತ್ತಾ ಜೆಡಿಎಸ್? ಸಡ್ಡು ಹೊಡೆದ ಅಧ್ಯಕ್ಷನಿಗೆ ಗೌಡ್ರು ಏನ್ಮಾಡ್ತಾರೆ?
ಸಚಿವ ಶಿವಾನಂದ ಪಾಟೀಲ್ ರಾಜನಾಮೆ ಕೊಡಬೇಕು: ಇದು ಲಜ್ಜೆಗೆಟ್ಟ ಸರ್ಕಾರ. ಮೊನ್ನೆ ಸಿಕ್ಕ ಹಣ ಕಮೀಷನ್ ಹಣವಾಗಿದೆ. ಇನ್ನು ರಾಜ್ಯದಲ್ಲಿ ಐಟಿ ದಾಳಿಯಲ್ಲಿ ಹಣ ಸಿಕ್ಕ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕು. ಎಲ್ಲಾದರಲ್ಲೂ ಕಮಿಷನ್ ಪಡೆಯುತ್ತಿದೆ. ಮೈಸೂರು ದಸರಾದಲ್ಲೂ ಕಮಿಷನ್ ಪಡೆದ ಸರ್ಕಾರವಿದು. ಮತ್ತೊಂದೆಡೆ ರಾಜ್ಯದಲ್ಲಿ ಬರ ಇದೆ. ಆದರೆ ಸಚಿವರು ಆಂದ್ರಕ್ಕೆ ಹೋಗಿ ದುಡ್ಡಿನ ಜೊತೆ ಮೋಜು ಮಾಡ್ತಾ ಇದ್ದಾರೆ. ಕಮೀಷನ್ ಹಣದಲ್ಲಿ ಇವರು ಅಲ್ಲಿ ಮೋಜು ಮಾಡಿದ್ದಾರೆ. ಇದಕ್ಕೆ ಹೊಣೆಗಾರಿಕೆ ಹೊತ್ತು ಸಚಿವ ಶಿವಾನಂದ ಪಾಟೀಲ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.