ಕಾಡಿನಿಂದ ನಾಡಿಗೆ ಸ್ಥಳಾಂತರ ಮಾಡುವಂತೆ ಮೆಂದಾರೆ ಗ್ರಾಮಸ್ಥರ ಅಳಲು: ಸರ್ವೇ ನಡೆಸಿದ ಅಧಿಕಾರಿಗಳು ಮಾಡಿದ್ದೇನು?
ಕಾಡಿನೊಳಗೆ ಇರಲಾಗದೆ ನಾಡಿಗೆ ಬಂದು ಬದುಕಬೇಕೆಂದು ಬಯಸಿರುವ ಕಾಡು ಜನರ ಕುರಿತು ಕಡತವನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲೂ ಈಗಾಗ್ಲೇ ಸಿದ್ದತೆ ನಡೆದಿದೆ. ಈಗಾಗ್ಲೇ ಸರ್ವೇ ಕಾರ್ಯ ಮುಗಿದ್ದಿದ್ದು, ಸ್ಥಳಾಂತರದ ಜಾಗ ಗುರುತಿಸುವ ಕೂಡ ಪೈನಲ್ ಆಗ್ತಿದೆ.
ಚಾಮರಾಜನಗರ (ಜು.01): ಕಾಡಿನೊಳಗೆ ಇರಲಾಗದೆ ನಾಡಿಗೆ ಬಂದು ಬದುಕಬೇಕೆಂದು ಬಯಸಿರುವ ಕಾಡು ಜನರ ಕುರಿತು ಕಡತವನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲೂ ಈಗಾಗ್ಲೇ ಸಿದ್ದತೆ ನಡೆದಿದೆ. ಈಗಾಗ್ಲೇ ಸರ್ವೇ ಕಾರ್ಯ ಮುಗಿದ್ದಿದ್ದು, ಸ್ಥಳಾಂತರದ ಜಾಗ ಗುರುತಿಸುವ ಕೂಡ ಪೈನಲ್ ಆಗ್ತಿದೆ. ಇಂಡಿಗನತ್ತ ಮತಯಂತ್ರ ಧ್ವಂಸ ಪ್ರಕರಣದಿಂದ ನೊಂದಿದ್ದೇವೆ. ಆದಷ್ಟು ಬೇಗ ಸ್ಥಳಾಂತರ ಮಾಡುವಂತೆ ಒಕ್ಕೊರಳ ಮನವಿ ಮಾಡಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ. ಲೋಕಸಭಾ ಚುನಾವಣೆ ವೇಳೆ ಮಲೆ ಮಹದೇಶ್ವರ ಬೆಟ್ಟದ ಕಾಡಂಚಿನ ಗ್ರಾಮ ಇಂಡಿಗನತ್ತ ಗ್ರಾಮದಲ್ಲಿ ರೊಚ್ಚಿಗೆದ್ದಿದ್ದ ಗ್ರಾಮಸ್ಥರು ಮತಯಂತ್ರವನ್ನು ಧ್ವಂಸಗೊಳಿಸಿದ್ದರು.
ನಂತರ ಇಂಡಿಗನತ್ತ ಹಾಗೂ ಮೆಂದಾರೆ ಗ್ರಾಮಸ್ಥರ ನಡುವೆ ವೈ ಮನಸ್ಸು ಬೆಳೆದಿತ್ತು. ನಂತರ ಮೆಂದಾರೆ ಗ್ರಾಮಸ್ಥರು ಮೂಲಭೂತ ಸೌಕರ್ಯದಿಂದ ನಾವು ವಂಚಿತವಾಗಿದ್ದೇವೆ. ಕಂದಾಯ ಗ್ರಾಮವಾಗಿದ್ದರೂ ಸಹ ಬಹು ಮುಖ್ಯವಾದ ತಿರುಗಾಡುವ ರಸ್ತೆ ಸೌಲಭ್ಯವನ್ನೆ ಕಲ್ಪಿಸಲು ಸಾಧ್ಯವಾಗಿಲ್ಲ. ನಾವು ಕಾಡನ್ನೆ ನಂಬಿ ಜೀವನ ನಡೆಸುತ್ತಿದ್ದವರು ಇಲ್ಲಿ ರಸ್ತೆ, ವಿಧ್ಯುತ್, ಕುಡಿಯುವ ನೀರು, ಗುಣಮಟ್ಟದ ಶಿಕ್ಷಣ ನಮಗೆ ಕನಸು ಜೊತೆಗೆ ಅರಣ್ಯ ಇಲಾಖೆಯಿಂದ ನಾಗಮಲೆಗೆ ಪ್ರವಾಸಿಗರಿಗೆ ನಿರ್ಭಂದ ವಿಧಿಸಿರುವ ಹಿನ್ನಲೆ ಜೀವನ ನಿರ್ವಹಣೆಗೆ ಇಲ್ಲಿಂದ ಹತ್ತಾರು ಕೀಲೋಮೀಟರ್ ನಡೆದೆ ಹೋಗಿ ಆನಂತರ ದೂರದ ಊರಿಗೆ ಕೂಲಿಗೆ ಹೋಗಬೇಕು.
ರಾಜ, ರಾಜ್ಯ ಮತ್ತು ಕೇಂದ್ರವಾಗಲಿ ತೆರಿಗೆ ವಸೂಲಿ ಮಾಡಿಯೇ ಆಡಳಿತ ನಡೆಸೋದು: ಸಿಎಂ ಸಿದ್ದರಾಮಯ್ಯ
ಹಾಗಾಗಿ ಇಡೀ ಗ್ರಾಮವನ್ನು ಕಾಡಿನಿಂದ ನಾಡಿಗೆ ಸ್ಥಳಾಂತರ ಮಾಡುವಂತೆ ಜಿಲ್ಲಾಡಳಿತ, ಸರ್ಕಾರವನ್ನು ಒತ್ತಾಯಿಸಿದರು. ಇನ್ನೂ ಗಲಭೆ ಸಂಬಂಧ ಗ್ರಾಮಸ್ಥರೊಟ್ಟಿಗೆ ಸಭೆ ನಡೆಸಿದ್ದ ಅಧಿಕಾರಿಗಳು ಮೂಲಭೂತ ಸೌಕರ್ಯ ಪೂರೈಕೆ ಮಾಡುವ ಕುರಿತು ಚರ್ಚೆ ಮಾಡಿದ್ದರು. ಈ ವೇಳೆ ಪಡಿತರ ತರಲು, ಮಕ್ಕಳು ಶಾಲೆಗೆ ಹೋಗಿ ಬರಲೂ ಕಾಡು ಪ್ರಾಣಿಗಳ ಭಯದಿಂದ ಓಡಾಡ್ತಾ ಇದ್ದೇವೆ. ನಾವೂ ಹುಟ್ಟು ಬೆಳೆದಿದ್ದೆಲ್ಲ ಕಾಡಿನಲ್ಲಿ ಯಾವುದೇ ಸೌಕರ್ಯ ಸಿಗ್ತಿಲ್ಲ ದಯಾಮಾಡಿ ಸ್ಥಳಾಂತರ ಮಾಡುವಂತೆ ಮನವಿ ಮಾಡಿದ್ದಾರೆ.
ಇನ್ನೂ ಮೆಂದಾರೆ ಗ್ರಾಮಸ್ಥರ ಕಷ್ಟ ಆಲಿಸಿದ ಜಿಲ್ಲಾಡಳಿತ ಹಾಗೂ ಸಚಿವರು ಮೆಂದಾರೆ ಗ್ರಾಮಸ್ಥರ ಕಷ್ಟಕ್ಕೆ ಸ್ಪಂದಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಮೆಂದಾರೆ ಗ್ರಾಮದಲ್ಲಿರುವ ಸೋಲಿಗರ ಸರ್ವೇ ಕಾರ್ಯ ಮಾಡಿದ್ದಾರೆ. ಅದರಂತೆ ಆಧಾರ್ ಕಾರ್ಡ್, ಪಡಿತರ, ಉದ್ಯೋಗ ಚೀಟಿ, ಜಾತಿ ಆದಾಯ ಪ್ರಮಾಣ ಪತ್ರ, ಪರಿಶಿಷ್ಟ ವರ್ಗದ ಇಲಾಖೆ ಸೇರಿದಂತೆ 20 ಅಂಶಗಳ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹ ಮಾಡಿದ್ದಾರೆ. ಸರ್ಕಾರದ ಜೊತೆಗೆ ಮಾತನಾಡಿ ಸ್ಥಳಾಂತರ ಮಾಡುವ ಕುರಿತು ಸಿಎಂ ಹಾಗೂ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡುವ ಕುರಿತು ಉಸ್ತುವಾರಿ ಸಚಿವರು ಭರವಸೆ ಕೊಟ್ಟಿದ್ದಾರೆ.
ಕರುನಾಡು ಮೆಚ್ಚಿ ಕೊಂಡಾಡುತ್ತಿದೆ ಸಿಎಂ ಸಿದ್ದರಾಮಯ್ಯನವರ ಕ್ರಿಕೆಟ್ ಪ್ರೇಮ: ವಿಡಿಯೋ ಫುಲ್ ವೈರಲ್
ಒಟ್ನಲ್ಲಿ ಇಂಡಿಗನತ್ತ ಮತಗಟ್ಟೆ ಧ್ವಂಸ ಪ್ರಕರಣ ಬಳಿಕ ಭಯದಲ್ಲಿರುವ ಮೆಂದಾರೆ ಗ್ರಾಮಸ್ಥರು ಸಾಧ್ಯವಾದಷ್ಟು ಬೇಗ ಸ್ಥಳಾಂತರ ಮಾಡುವಂತೆ ಅಳಲು ತೋಡಿಕೊಂಡಿದ್ದಾರೆ. ಸೋಲಿಗರ ಕಷ್ಟಕ್ಕೆ ಸ್ಪಂದಿಸಿರುವ ಜಿಲ್ಲಾಡಳಿತ ಸಮೀಕ್ಷೆ ನಡೆಸಿ ಸ್ಥಳಾಂತರ ಜಾಗ ಗುರುತು ಹಾಗೂ ಸ್ಥಳಾಂತರಕ್ಕೆ ಬೇಕಾದ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸುವ ತಯಾರಿ ನಡೆಸುತ್ತಿದ್ದಾರೆ.