Asianet Suvarna News Asianet Suvarna News

ಕರುನಾಡು ಮೆಚ್ಚಿ ಕೊಂಡಾಡುತ್ತಿದೆ ಸಿಎಂ ಸಿದ್ದರಾಮಯ್ಯನವರ ಕ್ರಿಕೆಟ್‌ ಪ್ರೇಮ: ವಿಡಿಯೋ ಫುಲ್ ವೈರಲ್

ಕಳೆದ ಶನಿವಾರ ಟಿ20 ವಿಶ್ವಕಪ್‌ನ ಫೈನಲ್‌ ನಡೆದು, ಭಾರತ ತಂಡ ರೋಚಕ ಜಯದೊಂದಿಗೆ ವಿಶ್ವಕಪ್‌ಗೆ ಮುತ್ತಿಕ್ಕಿದೆ. ಪ್ರತಿ ಎಸೆತವೂ ಪಂದ್ಯದ ಗತಿ ಬದಲಿಸುವಂತಿದ್ದುದ್ದರಿಂದ ಇಡೀ ದೇಶವೇ ಫೈನಲ್‌ ಪಂದ್ಯವನ್ನು ನಿಬ್ಬೆರಗಾಗಿ ವೀಕ್ಷಿಸಿದೆ. 

A video of CM Siddaramaiah watching cricket at the Delhi airport is going viral on social media gvd
Author
First Published Jul 1, 2024, 5:16 PM IST

ಕಳೆದ ಶನಿವಾರ ಟಿ20 ವಿಶ್ವಕಪ್‌ನ ಫೈನಲ್‌ ನಡೆದು, ಭಾರತ ತಂಡ ರೋಚಕ ಜಯದೊಂದಿಗೆ ವಿಶ್ವಕಪ್‌ಗೆ ಮುತ್ತಿಕ್ಕಿದೆ. ಪ್ರತಿ ಎಸೆತವೂ ಪಂದ್ಯದ ಗತಿ ಬದಲಿಸುವಂತಿದ್ದುದ್ದರಿಂದ ಇಡೀ ದೇಶವೇ ಫೈನಲ್‌ ಪಂದ್ಯವನ್ನು ನಿಬ್ಬೆರಗಾಗಿ ವೀಕ್ಷಿಸಿದೆ. ಮೂರು ದಿನಗಳ ಕಾಲ ದೆಹಲಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ 9.30ರ ವಿಮಾನ ಹತ್ತಿ ಬೆಂಗಳೂರಿಗೆ ವಾಪಾಸಾಗಬೇಕಿತ್ತು. 

ಇದೆಲ್ಲದರ ನಡುವೆ ಅವರಿಗೆ ಸಿಕ್ಕಿದ್ದು ಕೆಲವೇ ಕೆಲವು ನಿಮಿಷಗಳು ಮಾತ್ರ, ಅದೇ ಅಲ್ಪ ಬಿಡುವಿನ ಸಮಯದಲ್ಲಿ ವಿಮಾನದ ಬಾಗಿಲಲ್ಲಿ ನಿಂತು ವಿಶ್ವಕಪ್‌ ಟಿ20 ಫೈನಲ್‌ ಪಂದ್ಯ ವೀಕ್ಷಿಸಿ ಅದನ್ನು ತಮ್ಮ ಸಾಮಾಜಿಕ ಜಾಲತಾಣವಾದ ಫೇಸ್‌ ಬುಕ್‌ ನಲ್ಲಿ ಹಂಚಿಕೊಂಡಿದ್ದರು. ಅದರ ಜೊತೆಗೆ ಭಾರತವು ಸಂಘಟಿತ ಪ್ರದರ್ಶನದ ಮೂಲಕ ವಿಶ್ವಕಪ್‌ ಗೆದ್ದು ಬರಲಿ ಎಂದು ಮನದುಂಬಿ ಹಾರೈಸಿದ್ದರು. 
 


ಈ ರೀತಿ ಸಿದ್ದರಾಮಯ್ಯನವರು ಶೇರ್‌ ಮಾಡಿದ್ದ ವೀಡಿಯೋ ಇದೀಗ ಜಾಲತಾಣದಲ್ಲಿ ಭಾರೀ ಹವಾ ಸೃಷ್ಟಿಸಿದೆ. ಈ ವರೆಗೆ ವೀಡಿಯೋವನ್ನು 70 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ, 1,30,000 ಮಂದಿ ಸಿದ್ದರಾಮಯ್ಯನವರ ಕ್ರಿಕೆಟ್‌ ಪ್ರೇಮಕ್ಕೆ ಲೈಕ್‌ ಒತ್ತಿ ಮೆಚ್ಚಿದ್ದಾರೆ. ಸಾವಿರಾರು ಮಂದಿ ಕಮೆಂಟ್‌ ಗಳ ಸುರಿಮಳೆಗೈದು ನಿಮ್ಮ ಕ್ರೀಡಾ ಪ್ರೀತಿಗೆ ನಾವು ಅಭಿಮಾನಿಯಾಗಿದ್ದೇವೆಂದು ಕೊಂಡಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ರಾಜಕಾರಣಿಯೊಬ್ಬರ ಸಾಮಾಜಿಕ ಜಾಲತಾಣದಲ್ಲಿ ಹಾಕಲ್ಪಟ್ಟ ಯಾವೊಂದು ವೀಡಿಯೋ ಕೂಡ ಇಷ್ಟು ವೈರಲ್‌ ಆಗಿಲ್ಲ ಎಂಬುದು ಗಮನಾರ್ಹ. 

ಡಾ.ರಾಜ್‌ಕುಮಾರ್‌ ಕನಸಿನಂತೆ ಮೈಸೂರು ಫಿಲ್ಮ್‌ ಸಿಟಿಗೆ ಶೀಘ್ರವೇ ಶಂಕು: ಸಿಎಂ ಸಿದ್ದರಾಮಯ್ಯ ಭರವಸೆ

ಆಗಾಗ್ಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳಿಗೆ ಹೋಗಿ ಪಂದ್ಯ ವೀಕ್ಷಿಸಿ ಆಟಗಾರರಿಗೆ ಚಪ್ಪಾಳೆಯ ಮೂಲಕ ಹುರಿದುಂಬಿಸುತ್ತಿದ್ದ ಸಿದ್ದರಾಮಯ್ಯನವರು ಬಿಡುವಿರದ ದಿನಚರಿಯ ಕಾರಣಕ್ಕೆ ವಿಮಾನದ ಬಾಗಿಲಲ್ಲಿ ನಿಂತು ಕ್ರಿಕೆಟ್‌ ವೀಕ್ಷಿಸಿದ್ದಕ್ಕೆ ಕರುನಾಡು ಕೊಂಡಾಡುತ್ತಿದೆ.  ಒಂದೆಡೆ ಭಾರತ ವಿಶ್ವಕಪ್‌ ಗೆದ್ದಿದೆ, ಇನ್ನೊಂದೆಡೆ ಸಿದ್ದರಾಮಯ್ಯನವರು ನಾಡಿನ ಕ್ರಿಕೆಟ್‌ ಪ್ರಿಯರ ಮನ ಗೆದ್ದಿದ್ದಾರೆ.

Latest Videos
Follow Us:
Download App:
  • android
  • ios