ಹುಲಿ ದಾಳಿ ಆತಂಕದಲ್ಲಿ ಗ್ರಾಮಸ್ಥರು: ಹಸು ಮೇಲೆ ದಾಳಿ, ವ್ಯಕ್ತಿ ಕಿರುಚಿಕೊಂಡ ಬೆನ್ನಲ್ಲೇ ಓಡಿ ಹೋದ ವ್ಯಾಘ್ರ
ಹುಲಿಗಳ ನಾಡು ಚಾಮರಾಜನಗರದಲ್ಲಿ ಹುಲಿ ಕಾಟ ಹೆಚ್ಚಾಗಿದೆ. ಹುಲಿ ದಾಳಿಯಿಂದ ಎಡಬೆಟ್ಟದ ಹತ್ತಿರ ಸುಳಿಯಲು ಕೂಡ ಜನರು ಭಯ ಪಡ್ತಿದ್ದಾರೆ. ಅಲ್ಲದೇ ಎಡಬೆಟ್ಟದ ಪಕ್ಕದಲ್ಲಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಇದೆ.
ವರದಿ: ಪುಟ್ಟರಾಜು. ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಜು.15): ಹುಲಿಗಳ ನಾಡು ಚಾಮರಾಜನಗರದಲ್ಲಿ ಹುಲಿ ಕಾಟ ಹೆಚ್ಚಾಗಿದೆ. ಹುಲಿ ದಾಳಿಯಿಂದ ಎಡಬೆಟ್ಟದ ಹತ್ತಿರ ಸುಳಿಯಲು ಕೂಡ ಜನರು ಭಯ ಪಡ್ತಿದ್ದಾರೆ. ಅಲ್ಲದೇ ಎಡಬೆಟ್ಟದ ಪಕ್ಕದಲ್ಲಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಇದೆ. ಹುಲಿಯಿಂದ ಅನಾಹುತ ಸಂಭವಿಸುವ ಮುನ್ನವೇ ಹುಲಿ ಸೆರೆಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ. ಗಡಿ ಜಿಲ್ಲೆ ಚಾಮರಾಜನಗರ ಹುಲಿಗಳ ನಾಡು ಎಂದೇ ಪ್ರಸಿದ್ದಿ ಪಡೆದಿದೆ. ರಾಜ್ಯದಲ್ಲಿ ಅತಿ ಹೆಚ್ಚು ಹುಲಿ ಹೊಂದಿರುವ ಜಿಲ್ಲೆ ಚಾಮರಾಜನಗರ ಕೂಡ.
ಹೌದು. ನಿತ್ಯ ಒಂದಿಲ್ಲೊಂದು ಭಾಗದಲ್ಲಿ ಹುಲಿ ದಾಳಿಯಿಂದ ಹಸು, ಮೇಕೆ ಸಾವು ಅಂತಹ ಪ್ರಕರಣ ದಾಖಲಾಗುತ್ತಲೇ ಇದೆ. ಇದೀಗಾ ಚಾಮರಾಜನಗರ ಹೊರವಲಯದ ಬಿಆರ್ ಟಿ ವ್ಯಾಪ್ತಿಯ ಎಡಬೆಟ್ಟದಲ್ಲಿ ಹುಲಿಯ ಸಂಚಾರ ಹೆಚ್ಚಾಗಿದೆ. ಹುಲಿ ದಾಳಿ ನಡೆಸಿ ಮೇಯುತ್ತಿದ್ದ ಹಸುವಿನ ಮೇಲೆ ದಾಳಿ ನಡೆಸಿ ಕೊಂದಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ನಾವು ಪ್ರತಿನಿತ್ಯ ಕೂಡ ಎಡಬೆಟ್ಟದಲ್ಲಿ ಹಸು ಹಾಗು ಕುರಿ,ಮೇಕೆಗಳನ್ನು ಮೇಯಿಸುತ್ತಿದ್ವಿ, ಆದ್ರೆ ಏಕಾಏಕಿ ಹುಲಿ ದಾಳಿ ನಡೆಸಿ ಹಸುವನ್ನು ಕೊಂದು ಹಾಕಿದೆ. ನಾವು ಕಿರುಚಿಕೊಂಡ ಬಳಿಕ ಹುಲಿ ಹಸುವನ್ನು ಬಿಟ್ಟು ಬೆಟ್ಟ ಹತ್ತಿ ಓಡಿ ಹೋಯಿತು.
ಇದೇ ರೀತಿಯ ಹಸುಗಳನ್ನು ಬಲಿ ಪಡೆದ್ರೆ ನಮ್ಮ ಕಥೆಯೇನು ಅಂತಾ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಉತ್ತುವಳ್ಳಿ ಗ್ರಾಮದ ರೈತ ಹಸುಗಳನ್ನು ಮೇಯಿಸುವ ಸಲುವಾಗಿ ಎಡಬೆಟ್ಟದ ಸನಿಹ ಹೋಗಿದ್ದರು. ಆ ವೇಳೆ ಹುಲಿ ದಾಳಿ ನಡೆಸಿದ್ದರಿಂದ ಹಸು ಸಾವನ್ನಪ್ಪಿದೆ. ಹಸು ಬಿಟ್ಟು ನಮ್ಮ ಮೇಲೆ ದಾಳಿ ನಡೆಸಿದ್ರೆ ಹೊಣೆ ಯಾರು ಅಂತಾ ಪ್ರಶ್ನಿಸಿದ್ದಾರೆ. ಇಷ್ಟು ದಿನ ಚಿರತೆ ಮಾತ್ರ ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಇದೀಗಾ ಕಳೆದ ಒಂದು ವಾರದಿಂದ ಹುಲಿಯ ಸಂಚಾರ ಹೆಚ್ಚಾಗಿದೆ. ನಮ್ಮ ಹಸು ಎರಡನೇ ಬಲಿಯಾಗಿದೆ.
ಮಲೆನಾಡಿನಲ್ಲಿ ಮಳೆ ಬಿರುಸು: ರೀಲ್ಸ್ ಮಾಡಿದ ಹುಚ್ಚಿಗೆ ರಸ್ತೆ ಸಂಪೂರ್ಣ ಹಾಳು, ಐವರು ಪೊಲೀಸ್ ವಶಕ್ಕೆ!
ಅರಣ್ಯಾಧಿಕಾರಿಗಳು ಕೇಳಿದ್ರೆ ಇದು ಅರಣ್ಯ ಭಾಗ ನೀವೂ ಏಕೆ ಮೇಯಿಸಲು ಬಿಡ್ತೀರಾ ಅಂತಾರೆ. ಆದ್ರೆ ಇದು ರೈತರ ಜಮೀನು ಕಾಡಂಚಿನ ಪ್ರದೇಶವಾಗಿದೆ. ನಾವು ಹಸುಗಳನ್ನು ಬೇರೆ ಕಡೆ ಎಲ್ಲಿ ಮೇಯಿಸಲು ಹೋಗುವುದು ಕೂಡಲೇ ಹುಲಿ ಸೆರೆಹಿಡಿಯಲು ಒತ್ತಾಯಿಸಿದ್ದಾರೆ. ಒಟ್ನಲ್ಲಿ ರೈತನೆದರೇ ಹಸುವಿನ ಮೇಲೆ ಎರಗಿದ ವ್ಯಾಘ್ರ ಹಸುವನ್ನು ಬಲಿ ಪಡೆದಿದೆ. ಇಂತಹ ಘಟನೆ ಪುನಾರವರ್ತನೆಯಾಗದಂತೆ ಅರಣ್ಯ ಇಲಾಖೆ ಎಚ್ಚರ ವಹಿಸಬೇಕಿದೆ.ಒಂದು ವೇಳೆ ಹುಲಿಯನ್ನು ಸೆರೆಹಿಡಿಯದಿದ್ರೆ ಅರಣ್ಯಾಧಿಕಾರಿಗಳ ವಿರುದ್ಧ ಹೋರಾಟದ ಎಚ್ಚರಿಕೆ ಕೊಟ್ಟಿದ್ದಾರೆ.