Asianet Suvarna News Asianet Suvarna News

ಮಲೆನಾಡಿನಲ್ಲಿ ಮಳೆ ಬಿರುಸು: ರೀಲ್ಸ್ ಮಾಡಿದ ಹುಚ್ಚಿಗೆ ರಸ್ತೆ ಸಂಪೂರ್ಣ ಹಾಳು, ಐವರು ಪೊಲೀಸ್ ವಶಕ್ಕೆ!

ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂಗಾರು ಅಬ್ಬರಿಸಲಾರಂಭಿಸಿದೆ. ಕಳೆದೊಂದು ವಾರದಿಂದ ಜಿಟಿ ಜಿಟಿ ಸುರಿಯುತ್ತಿದ್ದ ಮಳೆ ಎರಡು ದಿನಗಳಿಂದ ಬಿರುಸುಪಡೆದುಕೊಂಡಿದೆ. 

Rain in Chikkamagaluru road was completely destroyed by madman who made reels five people were arrested by police gvd
Author
First Published Jul 15, 2024, 10:11 PM IST | Last Updated Jul 16, 2024, 9:41 AM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜು.15): ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂಗಾರು ಅಬ್ಬರಿಸಲಾರಂಭಿಸಿದೆ. ಕಳೆದೊಂದು ವಾರದಿಂದ ಜಿಟಿ ಜಿಟಿ ಸುರಿಯುತ್ತಿದ್ದ ಮಳೆ ಎರಡು ದಿನಗಳಿಂದ ಬಿರುಸುಪಡೆದುಕೊಂಡಿದೆ. ಬಿರುಗಾಳಿ, ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಮೂಡಿಗೆರೆ ತಾಲ್ಲೂಕು ಕೋಗಿಲೆ ಗ್ರಾಮದ ಬಳಿ ಭಾರೀ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ.ವಾಹನ ಸವಾರರು, ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಸಾರ್ವಜನಿಕರು ಇದರಿಂದ ಪರಡಾಡಿದರು. ಗಂಟೆಗಳ ವರೆಗೆ ರಸ್ತೆ ಬಂದಾಗಿತ್ತು.ಸ್ಥಳೀಯರ ನೆರವಿನಿಂದ ಸತತವಾಗಿ ಮೂರುಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮರವನ್ನು ತೆರವುಗೊಳಿಸಲಾಗಿದೆ. 

ಅಪಾಯದ ಮಟ್ಟದಲ್ಲಿ ನದಿಗಳು: ಗಾಳಿ-ಮಳೆಗೆ ಮಲೆನಾಡಿನ ಕುಗ್ರಾಮಗಳು ಕತ್ತಲಲ್ಲಿ ಮುಳುಗಿವೆ ವಿದ್ಯುತ್ ಲೈನ್ಗಳ ಮರಗಳು ಬಿದ್ದು ತುಂಡಾಗಿವೆ. ಕೆಲವಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿ ವಿದ್ಯುತ್ ಕಡಿತಗೊಂಡಿದೆ. ತುಂಗ-ಭದ್ರಾ ಹಾಗೂ ಹೇಮಾವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಕಳಸಾ ತಾಲ್ಲೂಕು ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆಮಟ್ಟದಲ್ಲಿ ಭದ್ರಾ ನದಿ ಹರಿಯುತ್ತಿದ್ದು, ಯಾವುದೇ ಕ್ಷಣದಲ್ಲಿ ಸೇತುವೆ ಮುಳುಗಡೆಗೊಳ್ಳಲಿದೆ.ಮುಂಜಾಗ್ರತಾ ಕ್ರಮವಾಗಿ ಸೇತುವೆಮೇಲೆ ಸಂಚರಿಸದಂತೆ ವಾಹನಗಳು ಹಾಗೂ ಸಾರ್ವಜನಿಕರಿಗೆ ಪೊಲೀಸರು ಹಾಗೂ ಸ್ಥಳಿಯಾಡಳಿತ ಸೂಚಿಸಿವೆ. 

ನ್ಯಾಯಾಧೀಶರ ಬುದ್ಧಿಮಾತಿಗೆ ತಲೆತೂಗಿದ ದಂಪತಿಗಳು: ಡಿವೋರ್ಸ್‌ನಿಂದ ದೂರ ಸರಿದ 18 ಜೋಡಿಗಳು!

ಸೇತುವೆ ಮುಳುಗಿದರೆ ಹಲವು ಗ್ರಾಮಗಳು ಸಂಪರ್ಕ ಕಡಿದುಕೊಳ್ಳಲಿದೆ. ಮೂಡಿಗೆರೆ, ಬಣಕಲ್, ಕೊಟ್ಟಿಗೆಹಾರ, ಜಾವಳಿ, ಕಳಸ, ಕುದುರೇಮುಖ, ಕೊಪ್ಪ, ಶೃಂಗೇರಿ, ಜಯಪುರ, ಎನ್ಆರ್ಪುರ ಇತರೆ ಕಡೆಗಳಲ್ಲಿ ಎಡಬಿಡದೆ ಮಳೆ ಸುರಿಯುತ್ತಿರುವುದರಿಂದ ಜನರು ಮನೆಯಿಂದ ಹೊರಬಾರಲಾದ ಸ್ಥಿತಿ ನಿರ್ಮಾಣಗೊಂಡಿದೆ.ಶೃಂಗೇರಿ ತಾಲ್ಲೂಕಿನ ಕೆರೆಕಟ್ಟೆ, ಕಿಗ್ಗಾ ಇನ್ನಿತರೆ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ತುಂಗಾ ನದಿ ಉಕ್ಕಿ ಹರಿಯುತ್ತಿದೆ. ಇದರ ಪರಿಣಾಮ ಶ್ರೀ ಮಠದ ಸಮೀಪದ ಗಾಂಧೀ ಮೈದಾನಕ್ಕೆ ನೀರು ನುಗ್ಗಿದೆ. ಪರ್ಯಾಯವಾಗಿ ನಿರ್ಮಿಸಲಾಗಿರುವ ಸಮನಾಂತರ ರಸ್ತೆಗೂ ನೀರು ನುಗ್ಗಿ ಸಾರ್ವಜನಿಕರು ಪರದಾಡುವಂತಾಗಿದೆ.

ನಗರದಲ್ಲೂ ಮಳೆ: ಚಿಕ್ಕಮಗಳೂರು ನಗರದಲ್ಲೂ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಜನ ಜೀವನದ ಮೇಲೆ ಪರಿಣಾಮ ಉಂಟಾಗಿದೆ. ನಿನ್ನೆ ರಾತ್ರಿಯಿಂದ ತೀವ್ರಗೊಂಡಿರುವ ಮಳೆ ಬಿರುಸಾಗಿ ಸುರಿಯಲಾರಂಭಿಸಿದೆ.ಶಾಲಾ-ಕಾಲೇಜು ಮಕ್ಕಳು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಎಲ್ಲ ರೀತಿಯ ವಹಿವಾಟಿಗೆ ನಿರಂತರ ಮಳೆಯಿಂದ ತೊಡಕಾಯಿತು.

ಎರಡು ಪ್ರತ್ಯೇಕ ಪ್ರಕರಣ, 11 ಜನರ ವಿರುದ್ದ ಪ್ರಕರಣ ದಾಖಲು: ಪ್ರವಾಸಿ ತಾಣಗಳಲ್ಲಿ ದುಡುಕು ಮತ್ತು ನಿರ್ಲಕ್ಷ್ಯತನದಿಂದ ವರ್ತಿಸಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು 11 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು 6 ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ.ಮೂಡಿಗೆರೆ ತಾಲ್ಲೂಕು ಬಾಳೂರಿನ ಪ್ರವಾಸಿ ತಾಣವಾದ ರಾಣಿ ಝರಿಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಕೆಲವು ಬೈಕ್ ಸವಾರರು ದುಡುಕು ಮತ್ತು ನಿರ್ಲಕ್ಷತನವಾಗಿ ಸಾರ್ವಜನಿಕ ರಸ್ತೆಯಲ್ಲಿ ವೀಲಿಂಗ್ ಮಾಡಿ ಸಾರ್ವಜನಿಕ ಉಪದ್ರವ ಉಂಟುಮಾಡಿದ ಆರೋಪದ ಮೇಲೆ ಬೆಳ್ತಂಗಡಿ ಉಜಿರೆ ವಾಸಿಗಳಾದ ಗಿರೀಶ್, ಗಣೇಶ್, ಅಣ್ಣಿ ಕುಮಾರ್, ಗಣೇಶ್, ಪ್ರವೀಣ, ರೋಹಿತ್ ಎಂಬುವವರ ವಿರುದ್ಧ ಬಾಳೂರು ಪೊಲೀಸರು ಪ್ರಕರಣ ದಾಖಲಿಸಿ ಅವರಿಂದ 5 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಆರೋಪಿಗಳು ಬೈಕ್ಗಳಿಗೆ ಮಾರ್ಪಡಿಸಿದ ಸೈಲೆನ್ಸರ್ಗಳನ್ನು ಅಳವಿಡಿಸಿಕೊಂಡು ಸುಮಾರು 5 ಕಿ.ಮೀ.ರಸ್ತೆಯಲ್ಲಿ ಎಕ್ಸಲೇಟರ್ ಹೆಚ್ಚಿಸಿ ಕರ್ಕಶ ಸಬ್ಧ ಮಾಡುತ್ತಾ ಅತ್ತಿಂದಿತ್ತ ಪದೇ ಪದೇ ಬೈಕ್ಗಳನ್ನು ಓಡಿಸಿ, ವೀಲಿಂಗ್ ಮಾಡಿ ರಸ್ತೆಯನ್ನು ಸಂಪೂರ್ಣ ಹಾಳುಗೆಡವಿದ್ದಲ್ಲದೆ, ಸ್ಥಳೀಯರಿಗೆ ಕಿರಿ ಕಿರಿ ಉಂಟುಮಾಡಿದ್ದರು.ಈ ಹುಚ್ಚಾಟವನ್ನು ಕಂಡು ಸಾರ್ವಜನಿಕರು ರೋಸಿ ಹೋಗಿದ್ದರು. ಯಾರ ಮಾತನ್ನೂ ಕೇಳದೆ ಮೊಂಡುತನ ತೋರಿದವರು ಈಗ ಪೊಲೀಸರ ಅತಿಥಿಗಳಾಗಿದ್ದಾರೆ.ಬೇಕಾ ಬಿಟ್ಟಿ ಬೈಕ್ ಓಡಿಸಿ ರೀಲ್ಸ್ ಮಾಡಿದ ಹುಚ್ಚಿಗೆ ರಸ್ತೆ ಸಂಪೂರ್ಣ ಕೆಸರುಗದ್ದೆಯಂತಾಗಿದೆ. ರೀಲ್ಸ್ಗೆ ಫೋಟೋ, ವಿಡಿಯೋ ಸರಿಯಾಗಿ ಬರುವವರೆಗೆ ಬೈಕ್ ರೈಡಿಂಗ್ ಮತ್ತು ವೀಲಿಂಗ್ ನಡೆಸಿದ್ದಾಗಿ ಸ್ಥಳೀಯರು ದೂರಿದ್ದರು.

ಮಳೆಗೆ ಪ್ರಾರ್ಥಿಸಿ ಗೋರಿಯ ಶವದ ಬಾಯಿಗೆ ನೀರು ಬಿಡ್ತಾರೆ: ವಿಜಯಪುರದಲ್ಲಿ ಮಳೆಗಾಗಿ ಭಯಾನಕ ಆಚರಣೆ!

ಜಲಪಾತದ ಬಳಿ ಸ್ನಾನ ಕೇಸ್: ಮತ್ತೊಂದು ಪ್ರಕರಣದಲ್ಲಿ ಜಲಪಾತದ ಬಳಿ ಅಪಾಯಕಾರಿ ಸ್ಥಳದಲ್ಲಿ ಸ್ನಾನ ಮಾಡುತ್ತಿದ್ದ 6 ಜನರ ಮೇಲೆ ಮೂಡಿಗೆರೆ ತಾಲ್ಲೂಕು ಬಾಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೈದಾಡಿ ಜಲಪಾತದ ಬಳಿ ಮಂಗಳೂರಿನ 6 ಮಂದಿ ಯುವ ಕರು ಸ್ನಾನ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳುತ್ತಿದ್ದಂತೆ ಯುವಕರು ಅಲ್ಲಿಂದ ಜಾಗ ಖಾಲಿಮಾಡಿ ಕಾರು ಹತ್ತಲು ಯತ್ನಿಸಿದರು.ಅವರನ್ನು ತಡೆದ ಪೊಲೀಸರು ಅಷ್ಟೂ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಿರಂತರ ಮಳೆ ಹಿನ್ನೆಲೆಯಲ್ಲಿ ಬಂಡೆಗಳು ಜಾರುವ ಹಿನ್ನೆಲೆಯಲ್ಲಿ ಜಲಪಾತಗಳ ಬಳಿ ಹೋಗದಂತೆ ಪೊಲೀಸರು ಮೊದಲಿನಿಂದಲೂ ಸೂಚಿಸುತ್ತಿದ್ದಾರೆ. ಆದರೂ ಪ್ರವಾಸಿಗರು ಮಾತು ಕೇಳದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ಬಿಸಿ ಮುಟ್ಟಿಸಿದ್ದಾರೆ.

Latest Videos
Follow Us:
Download App:
  • android
  • ios