ಸಚಿವ ಶ್ರೀನಿವಾಸ ಪೂಜಾರಿಗೆ ಬಂದರು, ಮೀನುಗಾರಿಕೆಯಲ್ಲಿವೆ ಸವಾಲು..!
ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮುಜರಾಯಿ, ಬಂದರು ಮತ್ತು ಮೀನುಗಾರಿಕೆ ಹಾಗೂ ಒಳನಾಡು ಸಾರಿಗೆ ಖಾತೆಗಳು ಹೆಗಲೇರಿವೆ. ಜೊತೆಗೆ ಸಾಕಷ್ಟುಸವಾಲುಗಳು ಕೂಡ ಪರಿಹಾರಕ್ಕೆ ಕಾದು ಕುಳಿತಿವೆ. ಕೋಟ ಶ್ರೀನಿವಾಸ ಪೂಜಾರಿ ಅವರು ಉಡುಪಿ ಭಾಗದಲ್ಲಿ ಮೀನುಗಾರರ ಸಮಸ್ಯೆಗಳೂ, ನಿರೀಕ್ಷೆಗಳನ್ನು ಅರ್ಥೈಸಿಕೊಂಡು, ನಿಭಾಯಿಸಲಿದ್ದಾರಾ ಎಂದು ಕಾದು ನೋಡಬೇಕಿದೆ.
ಉಡುಪಿ(ಆ.27): ನಿರೀಕ್ಷೆಯಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮುಜರಾಯಿ, ಬಂದರು ಮತ್ತು ಮೀನುಗಾರಿಕೆ ಹಾಗೂ ಒಳನಾಡು ಸಾರಿಗೆ ಖಾತೆಗಳು ಹೆಗಲೇರಿವೆ. ಜೊತೆಗೆ ಸಾಕಷ್ಟುಸವಾಲುಗಳು ಕೂಡ ಪರಿಹಾರಕ್ಕೆ ಕಾದು ಕುಳಿತಿವೆ.
ಕೋಟ ಅವರಿಗೆ ಮುಜರಾಯಿ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಗಳು ಹೊಸದೇನಲ್ಲ. ಅವರು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕೊನೆಯ ಒಂದು ವರ್ಷ ಕಾಲ ಈ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ಬರ್ತ್‌ಡೇಗೆ ಅಜ್ಜಿ ಕೊಟ್ಟ 10 ಸಾವಿರ ನೆರೆ ಸಂತ್ರಸ್ತರಿಗೆ!
ಆದರೆ ಅಂದು ಮೀನುಗಾರಿಕಾ ಖಾತೆ ಅವರ ಬಳಿ ಇರಲಿಲ್ಲ. ಮುಜರಾಯಿ ಖಾತೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಪ್ರಥಮ ಬಾರಿಗೆ ಬಹಳಷ್ಟುಅಭಿವೃದ್ಧಿಗಳನ್ನು ನಡೆಸಿತ್ತು. ಆದ್ದರಿಂದ ಈ ಬಾರಿ ಅಂತಹ ಸವಾಲುಗಳು ಈ ಖಾತೆಯಲ್ಲಿ ಎದುರಾಗಲಿಕ್ಕಿಲ್ಲ.
ಈ ಬಾರಿ ಸವಾಲುಗಳು ಹೆಚ್ಚು:
ಆದರೆ, ಈ ಬಾರಿ ರಾಜ್ಯದ ಕರಾವಳಿಯಲ್ಲಿ ಮೀನುಗಾರಿಕೆ ಭಾರಿ ನಷ್ಟವನ್ನು ಅನುಭವಿಸುತ್ತಿದೆ. ಮೀನುಗಾರರಿಗೆ ನಿರೀಕ್ಷೆಯಷ್ಟುಮೀನು ಲಭ್ಯವಾಗಿಲ್ಲ. ಜೊತೆಗೆ ಪ್ರಾಕೃತಿಕ ವಿಕೋಪದಿಂದಾಗಿ ಮೀನುಗಾರಿಕೆ ಋುತು ಕೂಡ ಸಾಕಷ್ಟುತಡವಾಗಿ ಆರಂಭವಾಗಿದೆ. ಈ ಬಗ್ಗೆ ಮೀನುಗಾರರರು ಸರ್ಕಾರದಿಂದ ಸಹಾಯವನ್ನು ನಿರೀಕ್ಷಿಸುತ್ತಿದ್ದಾರೆ.
ಮೀನುಗಾರರಿಗಿದೆ ಹಲವು ನಿರೀಕ್ಷೆ:
ಉಡುಪಿ ಜಿಲ್ಲೆಯ ಹೆಜಮಾಡಿ, ಗಂಗೊಳ್ಳಿ, ಅದೇ ರೀತಿ ದ.ಕ. ಮತ್ತು ಉ.ಕ. ಜಿಲ್ಲೆಯಲ್ಲಿಯೂ ಅನೇಕ ಸಣ್ಣ ಬಂದರುಗಳು ಅಭಿವೃದ್ಧಿಗೆ ಕಾಯುತ್ತಿವೆ. ಮೀನುಗಾರರು ದೋಣಿಗಳಿಗೆ ಡಿಸೇಲ್ ಸಬ್ಸಿಡಿ, ಮಂಜುಗಡ್ಡೆ ಸ್ಥಾವರಗಳಿಗೆ ವಿದ್ಯುತ್ ಸಬ್ಸಿಡಿ ಇತ್ಯಾದಿಗಳನ್ನೂ ಕೇಳುತ್ತಿದ್ದಾರೆ. ಈ ಎಲ್ಲಾ ಬಗ್ಗೆ ನೂತನ ಬಂದರು ಸಚಿವ ಕೋಟ ಅವರು ಏನು ಮಾಡುತ್ತಾರೆ ಎಂದು ಕಾದು ನೋಡಬೇಕಾಗಿದೆ.
ದಕ್ಷಿಣ ಕನ್ನಡದ ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಜೊತೆಗೆ ಮಲ್ಪೆಯ 5 ಮಂದಿ ಮೀನುಗಾರರು ಗೋವಾ ಸಮುದ್ರ ತೀರದಲ್ಲಿ ಮುಳುಗಿರುವ ಹಿನ್ನೆಲೆಯಲ್ಲಿ, ಮೀನುಗಾರರರು ಸಮುದ್ರದಲ್ಲಿ ಇನ್ನಷ್ಟುರಕ್ಷಣೆ, ಪರಿಹಾರಗಳನ್ನು ಕೇಳಿದ್ದಾರೆ. ಇದು ಕೂಡ ಅತ್ಯಗತ್ಯವಾಗಿ ಈಡೇರಬೇಕಾದ ಬೇಡಿಕೆಯಾಗಿದೆ.