Lumpy skin disease: ನಿಷೇಧದ ನಡುವೆಯೂ ಬೆಟ್ಟದಪುರದಲ್ಲಿ ಜಾನುವಾರ ಜಾತ್ರೆ!
ಚರ್ಮಗಂಟು ರೋಗದ ಹಿನ್ನೆಲೆಯಲ್ಲಿ ಜಾನುವಾರು ಜಾತ್ರೆಗೆ ನಿಷೇಧವಿದ್ದರೂ ರೈತರು ಜಾನವಾರು ತಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಬೆಟ್ಟದಪುರದಲ್ಲಿ ಗುರುವಾರ ನಡೆಯಿತು.
ಬೆಟ್ಟದಪುರ (ಫೆ.3) : ಚರ್ಮಗಂಟು ರೋಗದ ಹಿನ್ನೆಲೆಯಲ್ಲಿ ಜಾನುವಾರು ಜಾತ್ರೆಗೆ ನಿಷೇಧವಿದ್ದರೂ ರೈತರು ಜಾನವಾರು ತಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಬೆಟ್ಟದಪುರದಲ್ಲಿ ಗುರುವಾರ ನಡೆಯಿತು.
ಜಿಲ್ಲಾಧಿಕಾರಿಗಳ ನಿಷೇಧದ ಆದೇಶ ಹೊರಡಿಸಿದ್ದರೂ ರೈತರು ಜಾತ್ರೆಗೆ ಜಾನುವಾರುಗಳನ್ನು ತಂದಿದ್ದರು. ಇದರಿಂದಾಗಿ ರೈತರು ಜಾತ್ರೆ ಕಟ್ಟದಂತೆ ಪಶು ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಮನವಲಿಕೆಗೆ ಮುಂದಾದರು. ಆದರೆ ರೈತರು ಇದಕ್ಕೆ ಜಗ್ಗಲಿಲ್ಲ.
Hassan: ಜಾನುವಾರು ಚರ್ಮಗಂಟು ರೋಗ: ಐತಿಹಾಸಿಕ ಬೂಕನಬೆಟ್ಟ ರಾಸುಗಳ ಜಾತ್ರೆ ನಿಷೇಧ
ಇತಿಹಾಸ ಪ್ರಸಿದ್ಧ ಬೆಟ್ಟದಪುರದ ಶ್ರೀ ಸಿಡಿಲ ಮಲ್ಲಿಕಾರ್ಜುನ ಸ್ವಾಮಿ ದನಗಳ ಜಾತ್ರೆ ಎಂದರೆ ಮೈಸೂರು ಜಿಲ್ಲೆಗೆ ಪ್ರಸಿದ್ಧಿ. ನೂರಾರು ವರ್ಷಗಳಿಂದಲೂ ಜಾತ್ರೆಯನ್ನು ಕಟ್ಟಿಕೊಂಡು ಬರುತ್ತಿದ್ದ ರೈತರಿಗೆ ಕೊರೋನಾ ವೇಳೆ ತಮ್ಮ ಜಾನುವಾರುಗಳನ್ನು ಮೂರು ವರ್ಷಗಳ ಕಾಲ ಮಾರಾಟ ಮಾಡಲಿ ಸಾಧ್ಯವಾಗಲಿಲ್ಲ. ಅಲ್ಲದೆ ರೈತರಿಗೆ ಜಾತ್ರೆಗಳು ಎಂದರೆ ಎಲ್ಲಿಲ್ಲದ ಸಂತೋಷ. ತಮ್ಮ ಜಾನುವಾರುಗಳನ್ನು ಜಾತ್ರೆಯಲ್ಲಿ ಮಾರುವುದು ಮತ್ತು ಕೊಳ್ಳುವ ಪ್ರತೀತಿ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ.
ಆದರೆ ಈ ಬಾರಿ ಚರ್ಮಗಂಟು ರೋಗದಿಂದಾಗಿ ಸರ್ಕಾರ ಎಲ್ಲಾ ಧನಗಳ ಜಾತ್ರೆಯನ್ನು ರದ್ದುಪಡಿಸಿದೆ. ಮುಂಗಾರು ಆರಂಭಕ್ಕೂ ಮುನ್ನ ಬೆಟ್ಟದಪುರದಲ್ಲಿ ಜಾನುವಾರ ಕೊಳ್ಳುವುದು ಸಾಮಾನ್ಯ. ಜಾನುವಾರು ಜಾತ್ರೆ ನಿಷೇಧ ಎಂಬ ಜಾಹೀರಾತು ಪತ್ರಿಕೆಗಳಲ್ಲಿ ಮತ್ತು ಪಶು ಸಂಗೋಪನ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳು ಧ್ವನಿವರ್ಧಕಗಳ ಮೂಲಕ ಪ್ರಚಾರ ಮಾಡಿದರು ರೈತರು ಜಾನುವಾರು ಜಾತ್ರೆ ಕಟ್ಟಿದರು.
ಈ ವೇಳೆ ಪೊಲೀಸರು, ಪಶುಸಂಗೋಪನೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಾನುವಾರುಗಳನ್ನು ಓಡಿಸಲು ಶತ ಪ್ರಯತ್ನ ಪಟ್ಟರು ರೈತರು ತಮ್ಮ ಜಾನುವಾರುಗಳನ್ನು ಬಿಚ್ಚಲು ಮತ್ತು ಮನೆಗೆ ತೆರಳಲು ನಿರಾಕರಿಸಿದರು. ಈ ಹಿನ್ನೆಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ರೈತ ಮುಖಂಡರ ಸಭೆ ನಡೆಸಿ ನಾಳೆ ಸಂಜೆ ಒಳಗೆ ಎಲ್ಲರೂ ತಮ್ಮ ಜಾನುವಾರುಗಳೊಂದಿಗೆ ಖಾಲಿ ಮಾಡುವುದಾಗಿ ರೈತರು ಭರವಸೆ ನೀಡಿದರು.
Chikkamagaluru: ಚರ್ಮಗಂಟು ರೋಗ ಉಲ್ಬಣ, 480 ಜಾನುವಾರುಗಳು ಬಲಿ
ಈ ವೇಳೆ ಪಶು ಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಸೋಮಯ್ಯ, ಉಪ ತಹಸೀಲ್ದಾರ್ ಶಶಿಧರ್, ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೇಖಾಧಿಕಾರಿಗಳು, ಸರ್ಕಲ್ ಇನ್‌ಸ್ಪೆಕ್ಟರ್ ಪ್ರಕಾಶ್, ಎಸ್‌ಐ ಪ್ರಕಾಶ್ ಎಂ. ಎತ್ತಿನಮನಿ ಇದ್ದರು.