Chikkamagaluru: ಚರ್ಮಗಂಟು ರೋಗ ಉಲ್ಬಣ, 480 ಜಾನುವಾರುಗಳು ಬಲಿ

ಒಂದೂವರೆ ತಿಂಗಳ ಹಿಂದೆ ಜಿಲ್ಲೆಯಲ್ಲಿ ಕಾಣ ಸಿಕೊಂಡಿದ್ದ ಚರ್ಮಗಂಟು ರೋಗ ಈಗ ಉಲ್ಬಣಗೊಂಡಿದ್ದು, ಈ ರೋಗಕ್ಕೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ 480 ಜಾನುವಾರುಗಳು ಸಾವಪ್ಪಿವೆ.

lumpy-skin-disease-kills-many-cattle-in Chikkamagaluru gow

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಜ.1): ಒಂದೂವರೆ ತಿಂಗಳ ಹಿಂದೆ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದ ಚರ್ಮಗಂಟು ರೋಗ ಈಗ ಉಲ್ಬಣಗೊಂಡಿದ್ದು, ಈ ರೋಗಕ್ಕೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ 480 ಜಾನುವಾರುಗಳು ಸಾವಪ್ಪಿವೆ. ಕಡೂರು ತಾಲೂಕಿನಲ್ಲಿ ಗರಿಷ್ಟ192 ಚಿಕ್ಕಮಗಳೂರು 48, ಅಜ್ಜಂಪುರ 70 ತರೀಕೆರೆ 73, ಮೂಡಿಗೆರೆ ಕನಿಷ್ಟ 6, ಶೃಂಗೇರಿ 13ಮತ್ತು ಕೊಪ್ಪ ತಾಲೂಕಿನಲ್ಲಿ 48 ಜಾನುವಾರು ಬಲಿಯಾಗಿವೆ.  ಹಸು ಮೃತಪಟ್ಟರೆ 20ಸಾವಿರ, ಎತ್ತಿಗೆ 30 ಸಾವಿರ, ಕರುವಿಗೆ 1ಸಾವಿರ ಪರಿಹಾರ ದೊರಕುತ್ತಿದ್ದು, ಇದುವರೆಗೆ 205 ರೈತರಿಗೆ 43.70 ಲಕ್ಷ ರೂ. ಪರಿಹಾರ ನೀಡಲಾಗಿದೆ. ಕಳೆದ 2018ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ ಹಸು ಮತ್ತು ಎಮ್ಮೆ ಸೇರಿ 3.24 ಲಕ್ಷ ಜಾನುವಾರುಗಳಿದ್ದವು, ಈಗ ಅವುಗಳ ಸಂಖ್ಯೆ 2.90 ಲಕ್ಷಕ್ಕೆ ಇಳಿಕೆಯಾಗಿದೆ. 564 ಹಳ್ಳಿಗಳಲ್ಲಿ 2.50 ಲಕ್ಷ ಜಾನುವಾರುಗಳಿಗೆ ಲಸಿಕೆ ನೀಡಿದ್ದು, ಶೇ.77ರಷ್ಟು ಪ್ರಗತಿಯಾಗಿದೆ. ಲಸಿಕೆಹಾಕಲು ಚಿಕ್ಕಮಗಳೂರು ಜಿಲ್ಲೆಯಲ್ಲಿ 195 ಅಧಿಕಾರಿ ಮತ್ತು ಸಿಬ್ಬಂದಿಗಳು ತೊಡಗಿಸಿಕೊಂಡಿದ್ದಾರೆ.

ಒಂದೂವರೆ ತಿಂಗಳ ಹಿಂದೆ ಜಿಲ್ಲೆಯಲ್ಲಿ ಕಾಲುಬಾಯಿ ಜ್ವರಕ್ಕೆ ಲಸಿಕೆನೀಡುವುದನ್ನು ಮುಂದುವರಿಸಲಾಗಿತ್ತು. ಆದರೆ, ಇದ್ದಕ್ಕಿಂತ ಉತ್ತರ ಕರ್ನಾಟಕದಲ್ಲಿ ಚರ್ಮಗಂಟು ರೋಗ ಕಾಣಸಿಕೊಳ್ಳುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದಲ್ಲಿ ಮೊದಲ ಬಾರಿಗೆ ಚರ್ಮಗಂಟು ರೋಗ ಕಾಣ ಸಿಕೊಂಡಿತು.ತಕ್ಷಣ ಪಶುಪಾಲನಾ ಇಲಾಖೆ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಚರ್ಮಗಂಟು ರೋಗ ಕಾಣಸಿಕೊಂಡ ಪ್ರದೇಶ ಇಂತಿಷ್ಟು ವ್ಯಾಪ್ತಿಯಲ್ಲಿ ಲಸಿಕೆ ನೀಡುವಂತೆ ತಿಳಿಸಿದ್ದರಿಂದ ಲಸಿಕೆ ನೀಡುವ ಕಾರ್ಯ ಆರಂಭಗೊಂಡಿತು. ಎಮ್ಮೆಗಳಲ್ಲಿ ಹೆಚ್ಚಾಗಿ ಚರ್ಮಗಂಟು ರೋಗ ಕಾಣಸಿಕೊಳ್ಳುತ್ತಿಲ್ಲ ಕಾರಣ ತಿಳಿಯದಾಗಿದೆ.

ಚರ್ಮಗಂಟು ರೋಗ: ಬೆಳಗಾವಿ ಜಿಲ್ಲೆಗೆ 10 ಕೋಟಿ ಪರಿಹಾರ, ಸಚಿವ ಚವ್ಹಾಣ್‌

ಸಿಬ್ಬಂದಿ ಕೊರತೆ: ಜಿಲ್ಲೆಯ ಪಶುಪಾಲನಾ ಇಲಾಖೆಯಲ್ಲಿ ಒಟ್ಟು 583 ಮಂಜೂರಾತಿ ಹುದ್ದೆಗಳಲ್ಲಿ 264 ಹುದ್ದೆಗಳು ಭರ್ತಿಯಾಗಿದ್ದು, 316 ಹುದ್ದೆಗಳು ಖಾಲಿ ಇವೆ. ಒಟ್ಟು ಶೇ.50 ರಷ್ಟು ಹುದ್ದೆಗಳು ಖಾಲಿಇದ್ದಂತಾಗಿವೆ. ಪಶುವೈದ್ಯರ 113 ಮಂಜೂರಾತಿ ಹುದ್ದೆಗಳಲ್ಲಿ 69 ಹುದ್ದೆಗಳು ಭರ್ತಿಯಾಗಿ 44 ಹುದ್ದೆಗಳು ಖಾಲಿ ಇವೆ. ಅಜ್ಜಂಪುರ ಮತ್ತು ಶೃಂಗೇರಿಯಲ್ಲಿ ವೈದ್ಯರ ಹುದ್ದೆಗಳ ಖಾಲಿ ಇವೆ. ಶೃಂಗೇರಿಯಲ್ಲಿ ಒಬ್ಬರೆ ಒಬ್ಬ ವೈದ್ಯರು ಕಾರ್ಯನಿರ್ವಹಿಸಬೇಕಾಗಿದೆ. ಬೇರೆ ತಾಲೂಕಿನಿಂದ ವೈದ್ಯರ ಅಗತ್ಯವಿದ್ದ ಸ್ಥಳಕ್ಕೆ ತೆರಳಿ ಕೆಲಸ ನಿರ್ವಹಿಸಬೇಕಾಗ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಬೆಳಗಾವಿ: ಚರ್ಮಗಂಟಿನ ರೋಗಕ್ಕೆ 176 ಜಾನುವಾರು ಬಲಿ

ಇತರೆ ಸಿಬ್ಬಂದಿಗಳಲ್ಲಿ 230 ಮಂಜೂರಾತಿ ಹುದ್ದೆಗಳಲ್ಲಿ 154 ಭರ್ತಿಯಾಗಿದ್ದು, 76ಹುದ್ದೆಗಳು ಖಾಲಿ ಇವೆ. ಡಿದರ್ಜೆ ನೌಕರರ 231 ಹುದ್ದೆಗಳಲ್ಲಿ 37ಹುದ್ದೆಗಳು ಭರ್ತಿಯಾಗಿದ್ದು, 77 ಹುದ್ದೆಗಳು ಖಾಲಿ ಇವೆ. ಕೆಲವನ್ನು ಗುತ್ತಿಗೆ ಅಧಾರದ ಮೇಲೆ ನೇಮಕಮಾಡಿಕೊಂಡು ಕೆಲಸ ನಿರ್ವಹಿಸಲಾಗುತ್ತಿದೆ. ಮಲೆನಾಡು ಭಾಗದಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆ ಅಧಿಕವಾಗಿದೆ. ಬೇರೆ ಜಿಲ್ಲೆಗೆ ಹೋಲಿಸಿದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಚರ್ಮಗಂಟುರೋಗ ನಿಯಂತ್ರಣಕ್ಕೆ ಬಂದಿದೆ. ವೈದ್ಯರು ಮತ್ತು ಕಾಂಪೌಂಡರ್ಗಳು ರೋಗವನ್ನು ತಹಬದಿಗೆ ತರಲು ಶ್ರಮಿಸುತ್ತಿದ್ದಾರೆ. ಲಸಿಕೆಗಳು ಸಾಕಷ್ಟು ದಾಸ್ತಾನಿದ್ದು, ಕೊರತೆ ಉಂಟಾಗಿಲ್ಲವೆಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಮೋಹನ್ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios