Asianet Suvarna News Asianet Suvarna News

ಅಧಿಸೂಚನೆ, ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರ ರಕ್ಷಣೆಗೆ ಕಾನೂನು

*  ಮಾನಸಿಕ ಆರೋಗ್ಯ ಸುರಕ್ಷಾ ಕವಚಕ್ಕೆ ರಾಜ್ಯ ಸರ್ಕಾದ ಒಪ್ಪಿಗೆ
* ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ರಕ್ಷಣೆ
* ಕೇಂದ್ರ ಸರ್ಕಾರದ ನಿರ್ದೇಶನದಂತೆ ಕಾರ್ಯಕ್ರಮ

Cabinet approves Karnataka State Mental Healthcare Rules mah
Author
Bengaluru, First Published Aug 19, 2021, 8:46 PM IST
  • Facebook
  • Twitter
  • Whatsapp

ಬೆಂಗಳೂರು(ಆ. 19)  ಕರ್ನಾಟಕ ರಾಜ್ಯ ಸಚಿವ ಸಂಪುಟ ಮಹತ್ವದ ಮಸೂದೆಯೊಂದರ ಸಂಬಂಧ ಅಧಿಸೂಚನೆ ಹೊರಡಿಸಿದೆ. ಮಾನಸಿಕ ಆರೋಗ್ಯ ಆರೈಕೆ ನಿಯಮ ಕಾಯಿದೆ(2017) ಕ್ಕೆ  ಸಂಬಂಧಿಸಿ ಅಧಿಸೂಚನೆ ಹೊರಡಿಸಲಾಗಿದೆ. 

ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಗಳ ರಕ್ಷಣೆ, ಆರೋಗ್ಯ , ಆರೈಕೆ ಸೇರಿದಂತೆ ಅನೇಕ ವಿಚಾರಗಳನ್ನು ಇದು ಒಳಗೊಂಡಿದೆ. ಕೇಂದ್ರ ಸರ್ಕಾರದ ನಿರ್ದೇಶನಕ್ಕೆ ಅನುಗುಣವಾಗಿ ನಿಮಾನ್ಸ್ ನಿರ್ದೇಶಕರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಲಾಯಿತು.  ನಂತರ ಕರಡು ಪ್ರಸ್ತಾವನೆ ಸಿದ್ಧಮಾಡಿ ಮಾನಸಿಕ ಆರೋಗ್ಯ ಪ್ರಾಧಿಕಾರದ ಜತೆ ಚರ್ಚಿಸಿ ಅಂತಿಮ ರೂಪ  ನೀಡಲಾಯಿತು. 

ಖಿನ್ನತೆಯಿಂದ ಬಳಲುತ್ತಿದ್ದವರು ಈ ಕೆಲಸ ಮಾಡಲೇಬಾರದು

ಇದರ ನಂತರ ಕರಡನ್ನು ಕರ್ನಾಟಕ ಸರ್ಕಾರದ ಸಂಸದೀಯ ವ್ಯವಹಾರಗಳ ಇಲಾಖೆಯ ಪರಿಶೀಲನೆಗೆ ಒಳಪಡಿಸಲಾಯಿತು. ಹೀಗೆ ರೂಪಿಸಲಾದ ನಿಯಮಗಳನ್ನು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಸಚಿವಾಲಯಕ್ಕೆ 2019ರಲ್ಲಿ ಕಳುಹಿಸಿಕೊಡಲಾಯಿತು. ಆಕ್ಷೇಪಣೆಗಳಿಗೆ ಉತ್ತರ ನೀಡಲಾಯಿತು. ಕೇಂದ್ರ ಸರ್ಕಾರ್ದ ಅನುಮೋದನೆ ನಂತರ  ನ್ಯಾಯಾಲಯದಲ್ಲಿಯೂ ರಿಟ್ ಅರ್ಜಿಗಳ ವಿಚಾರಣೆ ನಡೆದು ಅಂತಿಮ ರೂಪ ಪಡೆದುಕೊಂಡಿತು.

ಈಗ ಎಲ್ಲ ಕಾರ್ಯಗಳು ಮುಕ್ತಾಯವಾಗಿದ್ದು ಸಚಿವ ಸಂಪುಟ ಅನುಮೋದನೆ ನಂತರ ಮಾನಸಿಕ ಆರೋಗ್ಯ ಆದ್ಯತೆ ನಿಯಮಗಳು 2021ನ್ನು ರೂಪಿಸಲಾಗಿದೆ.  ಇನ್ನು ಮುಂದೆ ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಈ ಕಾನೂನು ಸುರಕ್ಷಾ ಕವಚವಾಗಿ ಕೆಲಸ ಮಾಡಲಿದೆ. 

Follow Us:
Download App:
  • android
  • ios