ಬಸವಣ್ಣನ ಆದರ್ಶದಂತೆ ದುಡಿದವರು ಬಿಎಸ್‌ವೈ: ವಿಜಯೇಂದ್ರ

ಬಸವಣ್ಣರ ಅನುಭವ ಮಂಟಪದ ಪರಿಕಲ್ಪನೆ ಸಾಕಾರಗೊಳಿಸುವ ಅಗತ್ಯತೆ ಹೆಚ್ಚಿದೆ: ಬಿ.ವೈ.ವಿಜಯೇಂದ್ರ
 

BY Vijayendra Talks Over BS Yediyurappa grg

ಹುಣಸೂರು(ಜು.15):  ವಿಶ್ವಜ್ಞಾನಿ ಬಸವಣ್ಣರ ಅನುಭವ ಮಂಟಪದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಅಗತ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಭಿಪ್ರಾಯಪಟ್ಟರು.
ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ ಮತ್ತು ಬಸವ ಸಮಿತಿಯ ಹುಣಸೂರು ಘಟಕಗಳ ಸಹಯೋಗದಲ್ಲಿ ಪಟ್ಟಣದ ಮುನೇಶ್ವರ ಕಾವಲ್‌ ಮೈದಾನದಲ್ಲಿ ಗುರುವಾರ ಬಸವ ಜಯಂತಿ 2022ರ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಹುಣಸೂರು ತಾಲೂಕು ಬಸವಣ್ಣನವರ ಅನುಭವ ಮಂಪಟವನ್ನು ಪರಿಕಲ್ಪನೆಯನ್ನು ಯೋಜನೆಗಳ ಮೂಲಕ ಜಾರಿಗೊಳಿಸಿ ದೇಶಕ್ಕೆ ಮಾದರಿಯಾದ ದೇವರಾಜ ಅರಸರ ಕರ್ಮಭೂಮಿಯಾಗಿದೆ. ಆದರೆ ಇಂದು ಅದು ಇನ್ನಷ್ಟುವಿಶಾಲಗೊಳ್ಳಬೇಕಿದೆ ಎಂದರು.

ವಿಶ್ವದೆಲ್ಲೆಡೆ ಸಂಚರಿಸುವ ದೇಶದ ಪ್ರಧಾನಮಂತ್ರಿ ಮೋದಿಜಿ ಎಲ್ಲೇ ಹೋದರೂ ಅವರ ಕಾರ್ಯಗಳಿಗೆ ಪ್ರೇರಣೆ ಅಣ್ಣ ಬಸವಣ್ಣರಾಗಿದ್ದಾರೆ. ಕನ್ನಡ ನಾಡು ಸರ್ವ ಜನರ ಶಾಂತಿಯ ತೋಟವಾಗಬೇಕೆಂದು ಬಸವಣ್ಣನವರ ಆದರ್ಶಗಳಿಂದ ದುಡಿದವರು ನನ್ನ ತಂದೆ ಯಡಿಯೂರಪ್ಪ. ಬಸವಣ್ಣನವರ ಆದರ್ಶಗಳೊಂದಿಗೆ ನಾನು ಅಧಿಕಾರಕ್ಕಾಗಿ ದುಡಿಯುವುದಿಲ್ಲ. ಅದನ್ನು ತಂದೆ ನನಗೆ ಕಲಿಸಿಯೂ ಇಲ್ಲ. ಸಮಾಜದ ಬೆಳವಣಿಗೆಗೆ ಬೆನ್ನೆಲುಬಾಗಿ ಎಲ್ಲರಲ್ಲೊಂದಾಗಿ ಮುನ್ನಡೆಯುತ್ತೇನೆ ಎಂದು ವಿಜಯೇಂದ್ರ ನೆರೆದ ಜನರ ಕರಘೋಷದ ನಡುವೆ ಭರವಸೆ ನೀಡಿದರು.

ಬಿಎಸ್ ವೈ ಭೇಟಿಯಾದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್!

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ನಂದೀಶ್‌ ಹಂಚೆ ಮಾತನಾಡಿ, ರಾಜಕಾರಣಿಯೊಬ್ಬ ತನ್ನ ಜೀವನಪೂರ್ತಿ ಆತ್ಮತೃಪ್ತಿಹೊಂದದೇ ದುಡಿಯುತ್ತಾನೆ. ಹಾಗಾಗಿ ಅವನ ಕಾಲಾನಂತರ ಜನರು ಮರೆಯುತ್ತಾರೆ. ಆದರೆ ವಿಶ್ವಗುರು ಬಸವಣ್ಣ ಆತ್ಮತೃಪ್ತಿಯೊಂದಿಗೆ ಜನಕಲ್ಯಾಣಕ್ಕಾಗಿ ದುಡಿದರು. ಬಸವಣ್ಣ ಒಬ್ಬ ಅತ್ಯುತ್ತಮ ರಾಜಕಾರಣಿ, ಆರ್ಥಿಕ ತಜ್ಞರೂ ಹೌದು, ಉತ್ತಮ ರಾಜತಾಂತ್ರಿಕರೂ ಆಗಿದ್ದರು. ಹಾಗಗಿ ಅವರನ್ನು ಇಂದಿಗೂ ಅಜರಾಮರರಾಗಿದ್ದಾರೆ ಎಂದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳು ಆಶೀರ್ವಚನ ನೀಡಿದರು. ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ ಹಾಗೂ ಗಾವಡಗೆರೆ ಶ್ರೀ ಗುರುಲಿಂಗ ಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು.

ಶಾಸಕ ಎಚ್‌.ಪಿ. ಮಂಜುನಾಥ್‌ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಜಿ.ಟಿ. ದೇವೇಗೌಡ, ನಿರಂಜನಕುಮಾರ್‌, ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌, ಮಾಜಿ ಶಾಸಕ ಸಿ.ಎಚ್‌. ವಿಜಯಶಂಕರ್‌ ಮಾತನಾಡಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿತು.

ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ವಿಜ​ಯೇಂದ್ರ ಸ್ಪರ್ಧೆ ಖಚಿತ: ಬಿಎಸ್‌ವೈ

ಮಹಾಸಭಾದ ತಾಲೂಕು ಅಧ್ಯಕ್ಷ ಜೆ.ಎಸ್‌. ರಮೇಶ್‌ಕುಮಾರ್‌, ಗೌರವಾಧ್ಯಕ್ಷ ಡಾ.ವೃಷಬೇಂದ್ರಸ್ವಾಮಿ, ಬಸವ ಸಮಿತಿ ಅಧ್ಯಕ್ಷ ಭಾಗ್ಯಕುಮಾರ್‌, ಮಹಾಸಭಾ ಜಿಲ್ಲಾಧ್ಯಕ್ಷ ಕಾನ್ಯಾ ಶಿವಮೂರ್ತಿ, ಮಹಿಳಾ ಘಟಕದ ಅಧ್ಯಕ್ಷೆ ಬಸಮಣಿ, ಗೌರವಾಧ್ಯಕ್ಷೆ ಗೌರಮ್ಮ ಸೋಮಶೇಖರ್‌, ಹುಡಾ ಅಧ್ಯಕ್ಷ ಗಣೇಶ್‌ಕುಮಾರಸ್ವಾಮಿ, ಕೆಆರ್‌ಐಡಿಎಲ್‌ ರಾಜ್ಯ ಅಧ್ಯಕ್ಷ ಎಂ. ರುದ್ರೇಶ್‌ ಹಾಗೂ ಸಮಾಜದ ಬಂಧುಗಳು ಇದ್ದರು.

ಧಾರ್ಮಿಕ ಸಭೆಗೂ ಮುನ್ನ ನಗರದ ಆಂಜನೇಯಸ್ವಾಮಿ ದೇವಾಲಯದ ಆವರಣದಿಂದ ಬಸವಣ್ಣನವರ ಪುತ್ಥಳಿಯನ್ನು ಒಳಗೊಂಡ ಬೃಹತ್‌ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿಬಂದಿತು. ಮೆರವಣಿಗೆಗೆ ಶ್ರೀ ಸಾಂಬಸದಾಶಿವಸ್ವಾಮಿ ಮತ್ತು ನಟರಾಜ ಸ್ವಾಮೀಜಿ, ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಡೊಳ್ಳುಕುಣಿತ, ಪಟಕುಣಿತ, ಕೀಲುಕುದುರೆ, ಶಾಲಾ ಕಾಲೇಜು ವಿದ್ಯಾರ್ಥಿಗಳು ಶಿಸ್ತಿನ ಪಥಸಂಚಲನ ನೋಡುಗರ ಮನಸೆಳೆಯುವಲ್ಲಿ ಯಶಸ್ವಿಯಾಯಿತು.

Latest Videos
Follow Us:
Download App:
  • android
  • ios