* ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂದು ನಿರ್ಧಾರವಾಗಿಲ್ಲ* ಅಪರಾಧ ಸಾಬೀತಾದರೆ ಶಿಕ್ಷೆ* ಇಡಿಯವರು ತನಿಖೆ ಮಾಡುತ್ತಿದ್ದಾರೆ. ಕಾದು ನೋಡೋಣ
ತುಮಕೂರು(ಜೂ.16): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧಿಸುವುದು ಖಚಿತ. ಆದರೆ ಕ್ಷೇತ್ರ ಯಾವುದೆಂದು ನಿರ್ಧಾರವಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಗುಬ್ಬಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬುದರ ಬಗ್ಗೆ ಖಚಿತತೆ ಇಲ್ಲ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಪ್ರಾರಂಭವಾಗಿದ್ದು ಮುಂಬರುವ ಚುನಾವಣೆಯಲ್ಲಿ 140 ಕ್ಷೇತ್ರಗಳನ್ನು ಗೆದ್ದು, ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂಬುದು ನಮ್ಮ ದೃಷ್ಟಿ. ಆ ದೃಷ್ಟಿಯಿಂದ ರಾಜ್ಯಪ್ರವಾಸ ಪ್ರಾರಂಭವಾಗಿದೆ ಎಂದರು. ವಾರಕ್ಕೊಂದು ಜಿಲ್ಲೆಗೆ ತೆರಳಿ ಕಾರ್ಯಕರ್ತರ ಜೊತೆಗೆ ಸಮಾಲೋಚನೆ ಮಾಡುವುದಾಗಿ ತಿಳಿಸಿದ ಅವರು ಎಲ್ಲಾ ವರ್ಗದ ಜನರನ್ನು ನಮ್ಮ ಜೊತೆಗೆ ತೆಗೆದುಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ಸೈಡ್ ಲೈನ್ ಎನ್ನುವ ಸಿದ್ದು ಹೇಳಿಕೆಗೆ ವಿಜಯೇಂದ್ರ ಸ್ಪರ್ಧೆಯ ತಿರುಗೇಟು ಕೊಟ್ಟ ಬಿಎಸ್‌ವೈ
ಬಿಜೆಪಿಗೆ ಬರಲು ಅನೇಕ ಜನರು ತುದಿಗಾಲಲ್ಲಿ:
ಅನೇಕ ಜನ ಬಿಜೆಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದ ಅವರು ಯಾರ್ಯಾರು ಬರುವುದರಿಂದ ನಮ್ಮ ಪಕ್ಷಕ್ಕೆ ಅನುಕೂಲವಾಗುತ್ತೋ ಅವರನ್ನು ಸೇರಿಸಿಕೊಂಡು ಪಕ್ಷ ಬಲಪಡಿಸುತ್ತೇವೆ ಎಂದರು. ಈಗಾಗಲೇ ಅನೇಕ ಮಂದಿ ಬರುತ್ತಿದ್ದಾರೆ. ಇನ್ನು ಯಾರು ಬರುತ್ತಾರೋ ಬರಲಿ. ಪಕ್ಷಕ್ಕೆ ಬರುವವರನ್ನು ಬೇಡ ಅಂತಾ ಹೇಳುವುದಕ್ಕೆ ಆಗುವುದಿಲ್ಲ ಎಂದರು.
ರಾಜಾಹುಲಿ ಯಡಿಯೂರಪ್ಪ ಪುತ್ರನ ರೋಚಕ ರಾಜನೀತಿ! ಅಖಾಡದಲ್ಲಿ ದಾಳ ಉರುಳಿಸಲು ಸಜ್ಜಾದ ಮರಿಟೈಗರ್!
ಯಾರಿಗೆ ಏನು ಜವಬ್ದಾರಿ ಕೊಡಬೇಕು ಅನ್ನೋದು ಪಕ್ಷ ತೀರ್ಮಾನ ಮಾಡುತ್ತದೆ. ಂಎಲ…ಎ ಗಳು ಈಗ ಬಂದರೆ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದ ಅವರು ಈಗ ಯಾರು ಎಂಎಲ…ಎಗಳು ಬರುವುದಿಲ್ಲ ಎಂದರು.
ರಾಹುಲ್ ಗಾಂಧಿ ವಿಚಾರ ಇಡಿಯವರಿಗೆ ಯಾರ ಮೇಲೆ ಅನುಮಾನ ಇರುತ್ತದೆಯೋ ಅವರನ್ನು ತನಿಖೆ ಮಾಡುತ್ತಾರೆ. ಯಾರ ಬಗ್ಗೆ ಏನು ಅನುಮಾನ ಇರುತ್ತೋ ಆಗ ತನಿಖೆ ಮಾಡುತ್ತಾರೆ ಎಂದರು.
ಅಪರಾಧ ಸಾಬೀತಾದರೆ ಶಿಕ್ಷೆ:
ತನಿಖೆ ವೇಳೆ ಸತ್ಯಾಸತ್ಯತೆಗಳು ತನಿಖೆ ಬಳಿಕ ಗೊತ್ತಾಗುತ್ತದೆ ಎಂದ ಅವರು ನಿರುಪರಾಧಿಯಾದರೆ ಯಾವುದೇ ಗೊಂದಲ ಇಲ್ಲದೆ ಹೊರಗೆ ಬರುತ್ತಾರೆ. ಅಪರಾಧ ಸಾಬೀತಾದರೆ ಎಲ್ಲರಂತೆ ಶಿಕ್ಷೆಯಾಗುತ್ತದೆ ಎಂದರು.
ಕಾನೂನಿಗೆ ರಾಹುಲ್ ಗಾಂಧಿ ಬೇರೆ, ಯಡಿಯೂರಪ್ಪ ಬೇರೆ, ಮತ್ತೊಬ್ಬ ಬೇರೆ ಅನ್ನೋ ಪ್ರಶ್ನೆಯಿಲ್ಲ. ಇಡಿಯವರು ತನಿಖೆ ಮಾಡುತ್ತಿದ್ದಾರೆ. ಕಾದು ನೋಡೋಣ ಎಂದರು. ಹೊಸ ಲೋಕಯುಕ್ತರು ನೇಮಕವಾಗಿದ್ದು ಅವರು ಒಳ್ಳೆ ಕೆಲಸ ಮಾಡಲಿ ಅಂತ ಹಾರೈಸುತ್ತೇನೆ ಎಂದರು.
