*   ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಲ್ಲಿ ನಡೆದ ಘಟನೆ *   ಕಾಲೇಜಿನ ಹಿಂಬದಿ ಪತ್ತೆ, ಬಾಂಬ್‌ ಸ್ಕ್ವಾಡ್‌ ಆಗಮನ*   ಬಾಂಬ್‌ ಸ್ಕ್ವಾಡ್‌ ಬಂದ ಬಳಿಕವೇ ಹೆಚ್ಚಿನ ಮಾಹಿತಿ ತಿಳಿ​ದು​ಬ​ರ​ಲಿದೆ 

ಕಾರವಾರ(ಅ. 28): ಕುಮಟಾದ(Kumta) ವಿದ್ಯಾಧಿರಾಜ ಪಾಲಿಟೆಕ್ನಿಕ್‌ ಕಾಲೇಜ್‌ ಹಿಂಬದಿ ಬಾಂಬ್‌(Bomb) ಮಾದರಿಯ ವಸ್ತು ಪತ್ತೆಯಾಗಿದ್ದು ಆತಂಕ ಮೂಡಿಸಿದೆ. ವಾಯುವಿಹಾರಕ್ಕೆ ತೆರಳಿದವರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಕುಮಟಾ ಪೊಲೀಸರು, ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದೆ. ಮಂಗಳೂರು, ಕಾರವಾರದಿಂದ ಬಾಂಬ್‌ ಸ್ಕ್ವಾಡ್‌ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಬಳಿಕವೇ ಹೆಚ್ಚಿನ ಮಾಹಿತಿ ತಿಳಿದುಬರಲಿದೆ.

ವಿದ್ವಂಸಕ ಕೃತ್ಯದ ಉದ್ದೇಶವೇ? ಅಥವಾ ಯಾರೋ ಕಿಡಿಗೇಡಿಗಳು ಡಮ್ಮಿ ಮಾಡಿಟ್ಟಿರಬಹುದು ಎಂದು ಪೊಲೀಸರಿಂದ(Police) ಸಂಶಯ ವ್ಯಕ್ತ​ವಾ​ಗಿದೆ. ಪ್ರಾಣಿಗಳನ್ನು ಸಾಯಿಸಲು ಮಾಡಿರೋ ಬಾಂಬ್‌ ಇದಲ್ಲ ಎಂದು ಪೊಲೀಸ್‌ ಮೂಲದಿಂದ ಮಾಹಿತಿ ತಿಳಿ​ದು​ಬಂದಿದೆ. ಸಮೀಪದಲ್ಲೇ ರೈಲ್ವೆ ನಿಲ್ದಾಣ(Railway Station) ಇರುವುದರಿಂದ ವಿದ್ವಂಸಕ ಕೃತ್ಯದ ಸಂದೇಹವೂ ಇದೆ ಎನ್ನಲಾಗಿದೆ. ಆ ಪ್ರದೇಶವನ್ನು ಪೊಲೀಸರು ಸಂಪೂರ್ಣವಾಗಿ ಬಂದ್‌ ಮಾಡಿದ್ದು ಯಾರಿಗೂ ಅತ್ತ ತೆರಳಲು ಅವಕಾಶ ನೀಡುತ್ತಿಲ್ಲ. ಆದರೂ ಕುತೂಹಲದಿಂದ ನೂರಾರು ಜನರು ಸ್ಥಳಕ್ಕೆ ಆಗಮಿಸಿ ತೆರಳುತ್ತಿದ್ದಾರೆ.

ಮರದಡಿಯಲ್ಲಿ ಸೂಟ್‌ಕೇಸ್‌ ಪತ್ತೆ: ಜನರಲ್ಲಿ ಆತಂಕ

ಬಾಂಬ್‌ ಸ್ಕ್ವಾಡ್‌(Bomb Squad) ಬಂದ ಬಳಿಕವೇ ಹೆಚ್ಚಿನ ಮಾಹಿತಿ ತಿಳಿ​ದು​ಬ​ರ​ಲಿದೆ. ಮಂಗಳೂರು(Mangaluru) ಹಾಗೂ ಕಾರವಾರ(Karwar) ಬಾಂಬ್‌ ಸ್ಕ್ವಾಡ್‌​ನ್ನು ಒಟ್ಟಿಗೆ ಸ್ಥಳಕ್ಕೆ ಕಳುಹಿಸಲು ನಿರ್ಧರಿಸಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪೊಲೀಸ್‌ ವರಿಷ್ಠಾ​ಧಿ​ಕಾರಿ ಶಿವಪ್ರಕಾಶ್‌ ದೇವರಾಜ್‌ ತಿಳಿ​ಸಿ​ದ್ದಾ​ರೆ. ಡಿವೈಎಸ್ಪಿ ಬೆಳ್ಳಿಯಪ್ಪ, ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಕುಮಟಾ ಪಿಎಸ್‌ಐ ಆನಂದಮೂರ್ತಿ, ಪಿಎಸ್‌ಐ ರವಿ ಮುಂತಾದವರು ಸ್ಥಳಕ್ಕೆ ಧಾವಿ​ಸಿ​ದ್ದಾ​ರೆ.