* ಸಗಟು ಬೆಲೆಯಲ್ಲಿ 30 ಹೆಚ್ಚು ಹಣ ನೀಡುವುದನ್ನು ತಪ್ಪಿಸಲು ಯೋಜನೆ* ಕಂಪನಿಗಳಿಗೆ ಅನುಮತಿಗಾಗಿ ಮನವಿ ಸಲ್ಲಿಸಿದ ನಿಗಮ* ಈಗಾಗಲೇ ಬಿಎಂಟಿಸಿ ಡಿಪೋದಲ್ಲಿರುವ ಬಂಕ್
ಬೆಂಗಳೂರು(ಜು.08): ಸಗಟು ಬೆಲೆಯಲ್ಲಿ ಹೆಚ್ಚಿನ ಹಣ ನೀಡಿ ಡೀಸೆಲ್ ಖರೀದಿಸುವುದನ್ನು ತಪ್ಪಿಸುವ ಸಲುವಾಗಿ ಬಸ್ ಡಿಪೋಗಳ ಬಳಿಯಲ್ಲಿ ಪೆಟ್ರೊಲ್ ಬಂಕ್‌ಗಳನ್ನು ಪ್ರಾರಂಭಿಸಲು ಬಿಎಂಟಿಸಿ ಚಿಂತನೆ ನಡೆಸಿದೆ.
ಕೊರೋನಾ ಮತ್ತು ನೌಕರರ ಮುಷ್ಕರ ಕಾರಣದಿಂದ ನಷ್ಟಕ್ಕೆ ಸಿಲುಕಿರುವ ಬಿಎಂಟಿಸಿಗೆ ಸಗಟು ಬೆಲೆಯಲ್ಲಿ ಡೀಸೆಲ್ ಖರೀದಿ ಮಾಡುವದರಿಂದ ಪ್ರತಿ ಲೀಟರ್‌ಗೆ .30 ಹೆಚ್ಚುವರಿಯಾಗಿ ನೀಡಬೇಕಾಗಿದೆ. ಈ ಹೊರೆ ತಪ್ಪಿಸಲು ಚಿಲ್ಲರೆ ಬೆಲೆಯಲ್ಲಿ ಡೀಸೆಲ್ ಖರೀದಿಸಲು ಪೂರಕವಾಗಿ ಡಿಪೋಗಳ ಬಳಿಯಲ್ಲಿ ಬಂಕ್ ಪ್ರಾರಂಭಿಸಲು ನಿರ್ಧರಿಸಲಾಗಿದೆ.
ಬಿಎಂಟಿಸಿಯಲ್ಲಿ ಡೀಸೆಲ್‌ಗೂ ಶುರುವಾಯಿತು ಹಾಹಾಕಾರ, ಪ್ರಯಾಣಿಕರಿಗೆ ತಟ್ಟುತ್ತಾ ಡೀಸೆಲ್ ಬಿಸಿ..?
ಸಗಟು ಬೆಲೆಯಲ್ಲಿ ಡೀಸೆಲ್ ಖರೀದಿಸುತ್ತಿದ್ದ ಸಂದರ್ಭಕ್ಕೆ ಅನುಕೂಲವಾಗುವಂತೆ ಪ್ರತಿಯೊಂದು ಬಸ್ ಡಿಪೋನಲ್ಲಿಯೂ ಬಂಕ್ ನಿರ್ಮಿಸಲಾಗಿದೆ. ಆದರೆ, ಸಗಟು ಡೀಸೆಲ್ ಬೆಲೆ ಹೆಚ್ಚಳ ಇರುವುದರಿಂದ ಇವುಗಳನ್ನು ಪ್ರಸ್ತುತ ಬಳಕೆ ಮಾಡಿಕೊಳ್ಳುತ್ತಿಲ್ಲ. ಆದ್ದರಿಂದ ಇದೇ ಬಂಕ್‌ಗಳನ್ನು ಸ್ಥಳಾವಕಾಶ ಇರುವ ಡಿಪೋಗಳ ಹೊರಭಾಗದಲ್ಲಿ ನಿರ್ಮಿಸಬೇಕು ಎಂಬ ಉದ್ದೇಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೈಲ ಕಂಪನಿಗಳಿಗೆ ಮನವಿ:
ಬಸ್ ಡಿಪೋಗಳ ಬಳಿಯಲ್ಲಿ ಬಂಕ್ ಪ್ರಾರಂಭಿಸಲು ಪರವಾನಿಗೆ ನೀಡುವಂತೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಹಿಂದುಸ್ತಾನ್ ಪೆಟ್ರೋಲಿಯಂ ಲಿಮಿಟೆಡ್(ಎಚ್‌ಪಿಸಿಎಲ್), ಭಾರತ್ ಪೆಟ್ರೋಲಿಯಂ ಲಿಮಿಟೆಡ್(ಬಿಪಿಸಿಎಲ್) ಮತ್ತು ಇಂಡಿಯನ್ ಆಯಿಲ್ ಕಂಪನಿ ಲಿಮಿಟೆಡ್(ಐಒಸಿಎಲ್) ಕಂಪನಿಗಳಿಗೆ ಮನವಿ ಮಾಡಲಾಗಿದೆ. ಕಂಪನಿಗಳು ಲಾಭಾಂಶದ ದೃಷ್ಟಿಮತ್ತು ಕಾರ್ಯಸಾಧ್ಯತಾ ವರದಿ ಆಧಾರದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದು, ಅನುಮತಿ ಸಿಕ್ಕಲ್ಲಿ ಬಂಕ್ ಪ್ರಾರಂಭಿಸಲಾಗುವುದು ಎಂದು ಬಿಎಂಟಿಸಿ ನಿರ್ದೇಶಕ (ಐಟಿ) ಸೂರ್ಯಸೇನ್ ಮಾಹಿತಿ ನೀಡಿದರು.
ಸಾರಿಗೆ ನಿಗಮಗಳ ಡೀಸೆಲ್ ಬರೆ ವಿರುದ್ಧ ಸಿದ್ದು ತೀವ್ರ ಆಕ್ರೋಶ
ಸಾರ್ವಜನಿಕ ವಾಹನಗಳಿಗೂ ಅವಕಾಶ
ಡಿಪೋಗಳ ಮುಂಭಾಗ ಮತ್ತು ಪ್ರಮುಖ ರಸ್ತೆಗಳಿಗೆ ಹೊಂದಿಕೊಂಡಿರುವ ಡಿಪೋಗಳಲ್ಲಿ ಬಂಕ್ ಪ್ರಾರಂಭಿಸಿ ಅವುಗಳ ನಿರ್ವಹಣೆ ಬಿಎಂಟಿಸಿ ಮಾಡಲಿದೆ. ಜತೆಗೆ, ಬಿಎಂಟಿಸಿ ಬಸ್‌ಗಳೊಂದಿಗೆ ಸಾರ್ವಜನಿಕ ವಾಹನಗಳಿಗೂ ಡೀಸೆಲ್ ಪಡೆದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸುವ ಚಿಂತನೆಯಿದೆ ಎಂದು ಸೂರ್ಯಸೇನ್ ತಿಳಿಸಿದರು.
ಅಗತ್ಯ ಸ್ಥಳಾವಕಾಶವಿರುವ ಬಸ್ ಡಿಪೋಗಳ ಬಳಿಯ ರಸ್ತೆಗಳಲ್ಲಿ ಪೆಟ್ರೋಲ್ ಬಂಕ್‌ಗಳನ್ನು ಪ್ರಾರಂಭಿಸಿದಲ್ಲಿ ಬಿಎಂಟಿಸಿಗೆ ಚಿಲ್ಲರೆ ಬೆಲೆಯಲ್ಲಿ ಡೀಸೆಲ್ ಖರೀದಿ ಮಾಡುವುದಕ್ಕೆ ಅವಕಾಶ ಸಿಗುತ್ತದೆ. ಈ ಬಗ್ಗೆ ತೈಲ ಕಂಪನಿಗಳಿಗೆ ಮನವಿ ಮಾಡಲಾಗಿದ್ದು, ಅನುಮತಿ ಲಭ್ಯವಾದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಅಂತ ಬಿಎಂಟಿಸಿ ನಿರ್ದೇಶಕ (ಐಟಿ) ಸೂರ್ಯಸೇನ್ ತಿಳಿಸಿದ್ದಾರೆ.
