ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಬ್ಲಾಕ್‌ಸ್ಪಾಟ್‌ ಗುರುತು

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಗಳೊಂದಿಗೆ ಡಿಸಿ ಡಾ.ಅವಿನಾಶ್‌ ಪರಿಶೀಲನೆ

Blackspot Marking on Bengaluru Mysuru Expressway grg

ರಾಮನಗರ(ಜು.06): ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಪೊಲೀಸರು ಬ್ಲಾಕ್‌ ಸ್ಪಾಟ್‌ಗಳನ್ನು ಗುರುತಿಸಿದ್ದಾರೆ. ಮೂರು ಕಡೆ ಹೊಸ ಮೇಲ್ಸೇತುವೆ, ಅಂಡರ್‌ ಪಾಸ್‌, ಸ್ಕೈವಾಕ್‌ಗಳನ್ನು ನಿರ್ಮಾಣ ಮಾಡಬೇಕೆಂದು ಸ್ಥಳ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವಿನಾಶ್‌ ಮೆನನ್‌ ರಾಜೇಂದ್ರನ್‌ ತಿಳಿಸಿದರು.

ಎಸ್ಪಿ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಗಳೊಂದಿಗೆ ಬೆಂ-ಮೈ ಎಕ್ಸ್‌ಪ್ರೆಸ್‌ವೇ ಪರಿಶೀಲಿಸಿ ಮಾತನಾಡಿದ ಅವರು, ಬೆಂಗಳೂರು-ಮೈಸೂರು ಹೆದ್ದಾರಿ ಸಂಬಂಧ ಸಾಕಷ್ಟುದೂರುಗಳು ಕೇಳಿ ಬಂದಿದ್ದವು. ನಿನ್ನೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ಸಭೆ ನಡೆದಿದೆ. ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದೆ ಎಂದರು.

ಬೆಂಗಳೂರು- ಮೈಸೂರು ಎಕ್ಸಪ್ರೆಸ್‌ನಲ್ಲಿ 100ಕ್ಕಿಂತ ಜಾಸ್ತಿ ವೇಗವಿದ್ರೆ 1 ಸಾವಿರ ದಂಡ, ಡಿಎಲ್ ಕ್ಯಾನ್ಸಲ್!

ಕಳೆದ ಬಾರಿ ಸರ್ವಿಸ್‌ ರಸ್ತೆಗಳು ಸರಿ ಇಲ್ಲದ ಕಾರಣ ಮಳೆ ನೀರು ನಿಂತು ಸಮಸ್ಯೆಯಾಗಿತ್ತು. ಇದೀಗ ಸವೀರ್‍ಸ್‌ ರಸ್ತೆಗಳ ಕಾಮಗಾರಿ ಎಲ್ಲ ಕಡೆ ಸಂಪೂರ್ಣವಾಗಿ ಮುಗಿದಿದೆ. ಈಗಾಗಲೇ ಡ್ರೈನೆಜ್‌ಗಳನ್ನು ಸರಿಪಡಿಸುವಂತೆ ಸೂಚಿಸಲಾಗಿದೆ. ಹೊಸದಾಗಿ ಡ್ರೈನೇಜ್‌ ನಿರ್ಮಿಸುವ ಬಗ್ಗೆ ಕೂಡ ಚಿಂತನೆ ಮಾಡಲಾಗಿದೆ. ಎಂಟ್ರಿ- ಎಕ್ಸಿಟ್‌ಗಳ ಬಳಿ ಹಂಪ್‌ಗಳನ್ನು ನಿರ್ಮಿಸಲಾಗಿದೆ. ಹಲವು ಕಡೆ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಉಳಿದ ಕಾಮಗಾರಿಗಳನ್ನು ಒಂದು ತಿಂಗಳ ಒಳಗಾಗಿ ಮುಗಿಸುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಎಸ್ಪಿ ಕಾರ್ತಿಕ್‌ ರೆಡ್ಡಿ ಮಾತನಾಡಿ, ಹೆದ್ದಾರಿ ಸಮಸ್ಯೆಗೆ ಸಂಬಂಧಿಸಿದಂತೆ ಎಡಿಜಿಪಿ ಅಲೋಕ್‌ ಕುಮಾರ್‌ ಈಗಾಗಲೇ ಸೂಚನೆ ಕೊಟ್ಟಿದ್ದು, ಹೆದ್ದಾರಿ ಪ್ರಾಧಿಕಾರದವರಿಗೆ ಜು.31ಕ್ಕೆ ಡೆಡ್‌ಲೈನ್‌ ಕೊಟ್ಟಿದ್ದಾರೆ. ನಿನ್ನೆ ನಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಮೂರು ಸ್ಪೀಡ್‌ ಲೈನ್‌ಗಳಲ್ಲಿ ಪರಿಶೀಲನೆ ಮಾಡಿದ್ದೇವೆ. ಗಂಟೆಗೆ 80, 90, 100 ಕಿ.ಮೀ. ವೇಗದಲ್ಲಿ ಪರಿಶೀಲನೆ ಮಾಡಲಾಗಿದೆ. ಯಾರು 100 ಕಿ.ಮೀ. ವೇಗ ದಾಟಿದ್ದಾರೆ ಅಂತವರಿಗೆ ದಂಡ ಹಾಕಲಾಗಿದೆ. ನಾಳೆಯಿಂದ ವೇಗಮಿತಿ ಪರಿಶೀಲನೆ, ದಂಡ ಹಾಕುವುದು ಪ್ರಾರಂಭವಾಗುತ್ತೆ. ಯಾವುದೇ ಟ್ರಾಫಿಕ್‌ ನಿಯಮ ಉಲ್ಲಂಘನೆ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಹಳ ಮುಖ್ಯವಾಗಿ ನಾಲ್ಕು ನಿಯಮಗಳ ಮೇಲೆ ನಿಗಾ ಇಡುತ್ತಿದ್ದೇವೆ. ಅತೀ ವೇಗ, ಲೈನ್‌ ಟ್ರ್ಯಾಕ್‌, ಸೀಟ್‌ ಬೆಲ್ಟ್‌ ಹಾಗೂ ಹೆಲ್ಮೆಟ್‌ ಕಡ್ಡಾಯ. ರೂಲ್ಸ್‌ ಬ್ರೇಕ್‌ ಮಾಡಿದರೆ ಒಂದು ಸಾವಿರ ದಂಡ. ಅಷ್ಟೇ ಅಲ್ಲ ಚಾಲನಾ ಪರವಾನಗಿ ಸಹ ರದ್ದು ಮಾಡಬಹುದು. ಎಎನ್‌ಪಿಆರ್‌ ಕ್ಯಾಮರ್‌ ಹಾಕಲಾಗುತ್ತಿದೆ. ಒಟ್ಟು 28 ಸ್ಥಳಗಳಲ್ಲಿ ಕ್ಯಾಮರಾಗಳು ನಿಗಾ ವಹಿಸಿರುತ್ತವೆ. ಒಂದು ಬಾರಿ ರೂಲ್ಸ್‌ ಬ್ರೇಕ್‌ ಮಾಡಿದರೆ ಮೊಬೈಲ್‌ಗೆ ಸಂದೇಶ ಹೋಗುತ್ತೆ. ದಯವಿಟ್ಟು ಯಾರೂ ಸಹ ಅತೀ ವೇಗದಲ್ಲಿ ಹೋಗಬೇಡಿ ಎಂದು ಮನವಿ ಮಾಡಿದರು. ಬೆಂ-ಮೈ ಎಕ್ಸ್‌ಪ್ರೆಸ್‌ ವೇನಲ್ಲಿ ಪರಿಶೀಲಿಸಸಿದ ಜಿಲ್ಲಾಧಿಕಾರಿ ಡಾ.ಅವಿನಾಶ್‌ ಮೆನನ್‌.

ಎಕ್ಸ್‌ಪ್ರೆಸ್‌ ವೇನಲ್ಲಿ ಇನ್ನು ಮುಂದೆ ರಾಡಾರ್‌ಗನ್‌ ನಿಗಾ

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಶರವೇಗದಲ್ಲಿ ಸಂಚರಿಸುವ ವಾಹನಗಳ ಮೇಲೆ ನಿಗಾವಹಿಸಲು ಪೊಲೀಸ್‌ ಇಲಾಖೆ ಸಜ್ಜಾಗಿದ್ದು, ರಾಡಾರ್‌ಗನ್‌ ಹಿಡಿದು ರಸ್ತೆಗಿಳಿದಿದೆ. ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಳ ಹಿನ್ನೆಲೆಯಲ್ಲಿ ಸಾರಿಗೆ ಹಾಗೂ ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್‌ ಕುಮಾರ್‌ ಪರಿಶೀಲನೆಯ ನಂತರ ಮೇಜರ್‌ ಸರ್ಜರಿ ಕೈಗೊಳ್ಳಲಾಗಿದ್ದು, ಎಕ್ಸ್‌ಪ್ರೆಸ್‌ ವೇನಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ರಾಡಾರ್‌ಗನ್‌ ಮೊರೆ ಹೋಗಲಾಗಿದೆ.

ಬೆಂ-ಮೈ ಎಕ್ಸ್‌ಪ್ರೆಸ್‌ ವೇನಲ್ಲಿ ಸಂಚರಿಸುವ ವಾಹನಗಳಿಗೆ 100 ಕಿಮೀ ಗರಿಷ್ಟ ವೇಗಮಿತಿಯನ್ನು ನಿಗದಿಪಡಿಸಲಾಗಿತ್ತು. ಆದರೆ, ವಾಹನ ಚಾಲಕರು 120ರಿಂದ 160 ಕಿಮೀ ವೇಗದ ವರೆಗೆ ಚಾಲನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಡರ್‌ಗನ್‌ ಹಿಡಿದು ಪೊಲೀಸರು ರಸ್ತೆಗೆ ಇಳಿದಿದ್ದಾರೆ.

ರಾಡಾರ್‌ಗನ್‌ ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳ ವಿವರವನ್ನು ಚಿತ್ರ ಸಮೇತ ಕ್ಯಾಮರಾದಲ್ಲಿ ಸೆರೆಯಾಗಲಿದೆ. ಇದರ ಆಧಾರದ ಮೇಲೆ ಪೊಲೀಸರು ಈಗಾಗಲೇ ಹೆದ್ದಾರಿಯಲ್ಲಿ ಅಳವಡಿಸಿರುವ ಬ್ಯಾರಿಕೇಡ್‌ಗಳ ಸಹಾಯದಿಂದ ಅಂತಹ ವಾಹನವನ್ನು ತಡೆದು ದಂಡವಿಧಿಸಲು ಮುಂದಾಗಿದ್ದಾರೆ.

ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ತಗ್ಗು-ದಿಣ್ಣೆ : ವಾಹನ ಸವಾರರೇ ಎಚ್ಚರ

ಮಂಗಳವಾರ ಮಧ್ಯಾಹ್ನದಿಂದಲೇ ರಾಡಾರ್‌ಗನ್‌ ಮೂಲಕ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಂಡಿರುವ ಪೊಲೀಸ್‌ ಇಲಾಖೆ ಅತಿವೇಗದ ಹತ್ತಾರು ವಾಹಗನಗಳ ಚಾಲಕರಿಗೆ ದಂಡ ಹಾಕಿದ್ದಾರೆ. ವೇಗದ ಜೊತೆಗೆ ಅಡ್ಡಾದಿಡ್ಡಿ ಚಾಲನೆ, ಸೀಟ್‌ಬೆಲ್ಟ್‌ ಸೇರಿದಂತೆ ಸುರಕ್ಷತಾ ಕ್ರಮಗಳ ಬಗ್ಗೆಯೂ ರಾಡಾರ್‌ಗನ್‌ ಮೂಲಕ ನಿಗಾ ವಹಿಸಲಾಗುವುದು.

ಏನಿದು ರಾಡಾರ್‌ಗನ್‌?:

ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ವೇಗ ಕಂಡುಹಿಡಿಯಲು ಅತ್ಯಾಧುನಿಕ ತಂತ್ರಜ್ಞಾನದಿಂದ ಸಿದ್ದಪಡಿಸಿರುವ ರಾಡಾರ್‌ಗನ್‌ ಅನ್ನು ಪೊಲೀಸ್‌ ವಾಹನವೊಂದಕ್ಕೆ ಅಳವಡಿಸಲಾಗಿರುತ್ತದೆ. ಇದರ ಕ್ಯಾಮರಾ ವೇಗವಾಗಿ ದೃಶ್ಯಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ. ಹೆದ್ದಾರಿಯಲ್ಲಿ ಸಂಚರಿಸುವ ವಾಹನದತ್ತ ಗುರಿ ಮಾಡಿ ಗನ್‌ ಮೂಲಕ ರಾಡಾರ್‌ಕಿರಣಗಳನ್ನು ಹಾಯಿಸಲಾಗುತ್ತದೆ. ರಾಡಾರ್‌ ಕಿರಣಗಳು ವಾಹನವನ್ನು ತಲುಪಿ ಹಿಂದಿರುಗಲು ತೆಗೆದುಕೊಳ್ಳುವ ಸಮಯವನ್ನು ಆಧರಿಸಿ ವಾಹನದ ವೇಗವನ್ನು ಅಳತೆ ಮಾಡಲಾಗುತ್ತದೆ. ಇನ್ನು ವಾಹನದಲ್ಲಿ ಈ ರಾಡಾರ್‌ಗನ್‌ಗೆ ಲ್ಯಾಪ್‌ಟಾಪ್‌ ಸಂಪರ್ಕ ನೀಡಿದ್ದು, ವಾಹನದ ಚಿತ್ರದ ಸಮೇತವಾಗಿ ವೇಗವಾಗಿ ಚಲಿಸಿದ್ದಕ್ಕೆ ಪೋಟೋ ಸಮೇತ ದಾಖಲೆ ನೀಡಿ ದಂಡ ವಿಧಿಸಲಾಗುತ್ತದೆ.

Latest Videos
Follow Us:
Download App:
  • android
  • ios