ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ತಗ್ಗು-ದಿಣ್ಣೆ : ವಾಹನ ಸವಾರರೇ ಎಚ್ಚರ

ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ತಗ್ಗು- ದಿಣ್ಣೆಗಳಿದ್ದು, ಸರಿಯಾಗಿ ಎಂಟ್ರಿ ಮತ್ತು ಎಕ್ಸಿಟ್‌ಗಳಿಲ್ಲದ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸುತ್ತಿವೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿದ್ದಾರೆ.

Bengaluru Mysuru dashpath Highway have ups and downs Karnataka Motorists beware sat

ವರದಿ - ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್ 

ರಾಮನಗರ (ಜೂ.27): ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಸಾವಿನ ದಾರಿಯಾಗಿದೆ. ಪ್ರತಿನಿತ್ಯ 3-4 ಅಪಘಾತಗಳು ಆಗಿತ್ತಿವೆ. ಈ ನಿಟ್ಟಿನಲ್ಲಿ ರಾಜ್ಯ ಸಂಚಾರಿ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಖುದ್ದು ರಸ್ತೆಗಿಳಿದು ಪರಿಶೀಲನೆ ನಡೆಸಿದಾಗ ತಗ್ಗು-ದಿಣ್ಣೆಗಳು ಪತ್ತೆಯಾಗಿವೆ. ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು, ಸರಿಪಡಿಸುವಂತೆ ಸೂಚನೆ ನೀಡಿದ್ದಾರೆ.

ಹೆದ್ದಾರಿಯಲ್ಲಿ ಅಲ್ಲಲ್ಲಿ ಅಗ್ಗು-ದಿಣ್ಣೆ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ (Bengaluru Mysuru dashpath Highway) ಇತ್ತೀಚಿಗೆ ಸಾವಿನ ಹೆದ್ದಾರಿ ಎಂದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಅಪಘಾತ ತಡೆಯುವ ನಿಟ್ಟಿನಲ್ಲಿ ಏನೆಲ್ಲಾ ಬದಲಾವಣೆಗಳನ್ನು ತರಬೇಕು ಎಂದು ಖುದ್ದು ಸಂಚಾರಿ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಇಂದು ಹೆದ್ದಾರಿ ಪರಿಶೀಲನೆ ನಡೆಸಿದರು. ಕುಂಬಳಗೂಡು ನಿಂದ ನಿಡಘಟ್ಟದ ವರೆಗೂ ಬೆಂಗಳೂರು - ಮೈಸೂರು ಹೆದ್ದಾರಿ (Bengaluru Mysuru express Way)ವೀಕ್ಷಣೆ ನಡೆಸಿದರು. ಈ ವೇಳೆ ಹೆದ್ದಾರಿಯಲ್ಲಿ ಸಾಕಷ್ಟು ಸಮಸ್ಯೆಗಳು ಕಾಣಿಸಿವೆ. ರಸ್ತೆಗೆ ಎಂಟ್ರಿ ಹಾಗೂ ಎಕ್ಸಿಟ್ ಗಳನ್ನು ಸರಿಯಾಗಿ ನೀಡಿಲ್ಲ. ಕೆಲವೊಂದು ಭಾಗಗಳಲ್ಲಿ ಹೆದ್ದಾರಿಯಲ್ಲಿ ಅಗ್ಗು- ದಿಣ್ಣೆ ಇದೆ. ಸರಿಯಾಗಿ ರೋಡ್ ಮಾರ್ಕಿಂಗ್ ಆಗಿಲ್ಲ, ಹೈವೆಯಲ್ಲಿ ಸ್ಟ್ರೀಟ್ ಲೈಟ್ ಗಳು ಸರಿಯಾಗಿ ನಿರ್ವಹಣೆ ಆಗ್ತಿಲ್ಲ. ಸಿಸಿಟಿವಿ ಸೇರಿದಂತೆ ವಾಹನ ಸವಾರರಿಗೆ ಕಾಣುವ ರೀತಿ ಸೂಚನಾ ಫಲಕಗಳನ್ನು ಅಳವಡಿಸಿಲ್ಲ‌ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. 

ಕರ್ನಾಟಕದಲ್ಲಿ ಕೈಗಾರಿಕೆಗಳ ಆರಂಭಕ್ಕೆ 11 ಸಾವಿರ ಎಕರೆ ಭೂಮಿ ಲಭ್ಯ

ಎಂಟ್ರಿ ಹಾಗೂ ಎಕ್ಸಿಟ್ ಸರಿಯಾಗಿ ನೀಡಿಲ್ಲ: ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅಲೋಕ್‌ ಕುಮಾರ್‌ ಅವರು, ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ (Bangalore Mysore express Way) ಕೆಲವು ಸಮಸ್ಯೆಗಳು ಕಾಣಿಸಿಕೊಂಡಿವೆ. ರಸ್ತೆಗೆ ಎಂಟ್ರಿ ಹಾಗೂ ಎಕ್ಸಿಟ್ ಗಳನ್ನು ಸರಿಯಾಗಿ ನೀಡಿಲ್ಲ. ಕೆಲವೊಂದು ಭಾಗಗಳಲ್ಲಿ ಹೆದ್ದಾರಿಯಲ್ಲಿ ಅಗ್ಗು- ದಿಣ್ಣೆ ಇದೆ. ಸೂಚನಾ ಫಲಕ ಅಳವಡಿಕೆ ಸರಿಯಾಗಿಲ್ಲದ ಬಗ್ಗೆ ಗುರುತಿಸಿ ಅಧಿಕಾರಿಗಳಿಗೆ ಹೇಳಲಾಗಿದೆ. ಕೆಲವು ಸಮಸ್ಯೆಗಳನ್ನು ಸಾರ್ವಜನಿಕರು ಸಹ ಹೇಳಿಕೊಂಡಿದ್ದಾರೆ. ಸ್ಕೈವಾಕ್, ಚರಂಡಿ ನಿರ್ಮಾಣ, ಸರ್ವಿಸ್ ರಸ್ತೆ ಸರಿಪಡಿಸುವಂತೆ ಮನವಿ ಮಾಡಿದ್ದಾರೆ ಎಂದರು.

ಆಕ್ಸಿಡೆಂಟ್‌ ಪಾಯಿಂಟ್‌ಗಳ ಪತ್ತೆ: ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗುತ್ತಿರುವ ಪಾಯಿಂಟ್ ಗಳನ್ನು ಸಹ ಗುರುತು ಮಾಡಲಾಗಿದ್ದು, ಅಲ್ಲಿ ಸ್ಪೀಡ್ ಮೀಟರ್ (Speed Meeter) ಸೇರಿದಂತೆ ಆಂಬುಲೆನ್ಸ್ ಗಳು ಓಡಾಡಲು ಅಲ್ಲಲ್ಲಿ ಅನುವು ಮಾಡಿಕೊಡಲಾಗುವುದು. ಈ ಎಲ್ಲದರ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಡಿಬಿಲ್ ಇಂಜಿನಿಯರ್ ಗಳಿಗೆ ಸೂಚನೆ ನೀಡಿದ್ದೆನೆ. ಇಂತಿಷ್ಟು ದಿನಗಳಲ್ಲಿ ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿದ್ದೇನೆ. ಎಚ್ಚರಿಕೆ ನೀಡಿದ್ದರೂ ಕೆಲಸ ಮಾಡದಿದ್ದರೆ ಕಾನೂನು ರೀತಿ ಕ್ರಮ ವಹಿಸಲಾಗುವುದು ಎಂದರು.

ಕೆಲವೆಡೆ ಸಮಸ್ಯೆ ಗುರುತಿಸಿದ್ದು, ಶೀಘ್ರ ಪರಿಹರಿಸುತ್ತೇವೆ: ಹೆದ್ದಾರಿ  ಪ್ರಾಧೀಕಾರದ ಯೋಜನಾ ನಿರ್ದೇಶಕ ಗೌತಮ್ ಮಾತನಾಡಿ, ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಅವರು ಹೆದ್ದಾರಿ ವೀಕ್ಷಣೆ ಮಾಡಿ ಸಾಕಷ್ಟು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಕೆಲವೊಂದು ಕಡೆ ಸಮಸ್ಯೆಗಳು ಇರವುದು ಕಂಡು ಬಂದಿದೆ. ಸ್ಕೈವಾಕ್, ಚರಂಡಿ ಸಮಸ್ಯೆಗಳು, ಸೇರಿದಂತೆ ಅಪಘಾತ ಆಗುವ ಸ್ಥಳಗಳಲ್ಲಿ ನಾಮ ಫಲಕಗಳನ್ನು ಹಾಕುವಂತೆ ತಿಳಿಸಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಮಸ್ಯೆ ಬಗೆಹರಿಸಲಾಗುವುದು ಎಂದರು. 

ಆರು ಮಂದಿ ಬಲಿಕೊಟ್ಟರೂ ಎಚ್ಚೆತ್ತುಕೊಳ್ಳದ ಸರ್ಕಾರ: ಮತ್ತೆ ಕಲುಷಿತ ನೀರು ಸೇವನೆಯಿಂದ 54 ಮಂದಿಗೆ ವಾಂತಿ, ಬೇಧಿ

ಈ ವೇಳೆ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ, ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ, ಎನ್ ಎಚ್ ಅಧಿಕಾರಿಗಳು, ಡಿಬಿಲ್ ನ ಇಂಜಿನಿಯರ್ ಗಳು ಸಾಥ್ ನೀಡಿದರು. ಒಟ್ಟಾರೆ ಹೈವೆಯಲಿ ಸಮಸ್ಯೆಗಳನ್ನು ಆಲಿಸಿದ ಎಡಿಜಿಪಿ ಅಲೋಕ್ ಕುಮಾರ್ ಸೂಚನೆಗಳನ್ನು ಹೆದ್ದಾರಿ ಪ್ರಾಧೀಕಾರದ ಅಧಿಕಾರಿಗಳು ಎಷ್ಟರ ಮಟ್ಟಿಗೆ ಫಾಲೋ‌ ಮಾಡ್ತಾರೆ, ಸಾವಿನ ಹೆದ್ದಾರಿಯಲ್ಲಿ ಅಪಘಾತಕ್ಕೆ ಕಡಿವಾಣ ಹಾಕ್ತಾರ ಅನ್ನೋದನ್ನ ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios