ಬೆಳಗಾವಿ(ನ.17): ಸವದಿಯವರ ನಾಯಕತ್ವಕ್ಕೆ ಯಾವುದೇ ತೊಂದರೆಯಾಗದಂತೆ ಬಿಜೆಪಿ ನೋಡಿಕೊಳ್ಳುತ್ತದೆ ಎಂದು ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಅಥಣಿಯಲ್ಲಿ ಸವದಿ ಬೆಂಬಲಿಗರ ಗಲಾಟೆ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದಾರೆ.

ಕುಮಟಳ್ಳಿಗೆ ಬಿಜೆಪಿ ಟಿಕೆಟ್‌ ಕೊಟ್ಟ ಹಿನ್ನೆಲೆಯಲ್ಲಿ ಅಥಣಿಯಲ್ಲಿ ಸವದಿ ಬೆಂಬಲಿಗರಿಂದ ಗಲಾಟೆ ನಡೆಯುತ್ತಿದ್ದು, ಅಥಣಿಯಲ್ಲಿ ಸುವರ್ಣ ನ್ಯೂಜ್ ಗೆ ಜಗದೀಶ ಶಟ್ಟರ್ ಪ್ರತಿಕ್ರಿಯಿಸಿದ್ದಾರೆ.

ಸವದಿ ಬಿಜೆಪಿಯ ಆಸ್ತಿ:

ಕಾಂಗ್ರೆಸ್ - ಬಿಜೆಪಿ ಪಕ್ಷಗಳು ರಾಜಕೀಯವಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಹೀಗೆ ಆಗೋದು ಸಾಮಾನ್ಯ. ಸವದಿ ಅಥಣಿಯಲ್ಲಿ ದೊಡ್ಡ ಲೀಡರ್ ಆಗಿ ಬೆಳೆದಿದ್ದಾರೆ, ಉಪ ಮುಖ್ಯಮಂತ್ರಿ ಆಗಿದ್ದಾರೆ. ಸವದಿ ಬಿಜೆಪಿಯ ದೊಡ್ಡ ಆಸ್ತಿ ಎಂದು ಹೇಳಿದ್ದಾರೆ.

ರಾಜೀನಾಮೆ ಕೊಟ್ಟು ಬಂದಂತ ಶಾಸಕರನ್ನ ಗೆಲ್ಲಿಸೋದು ನಮ್ಮ ಜವಾಬ್ದಾರಿ ಆಗಿದೆ. ಲಕ್ಷ್ಮಣ ಸವದಿ ಕುಮಟಳ್ಳಿರನ್ನ ಗೆಲ್ಲಿಸುವುದಾಗಿ ಓಪನ್ ಆಗಿ ಘೋಷಿಸಿದ್ದಾರೆ. ಅವರಿಗೆ ನಮ್ಮ ಬೆಂಬಲ ಕೊಡುತ್ತೇವೆ.  ಈ ರೀತಿ ವ್ಯವಸ್ಥೆ ಇದ್ದಾಗ ಕಾರ್ಯಕರ್ತರಲ್ಲಿ ಕೊಂಚ ಬೇಜಾರು ಇರುತ್ತದೆ ಎಂದಿದ್ದಾರೆ.

ಬೆಳಗಾವಿ: ಟ್ರಾಫಿಕ್ ಪೊಲೀಸ್‌ ಮೇಲೆ ವಾಹನ ಚಾಲಕನಿಂದ ಹಲ್ಲೆ

ಸವದಿ ನಾಯಕತ್ವಕ್ಕೆ ಯಾವುದೇ ತೊಂದರೆ ಆಗದಂತೆ ರಕ್ಷಣೆ ಕೊಡುವ ಕಾಪಾಡುವ ಕೆಲಸ ಬಿಜೆಪಿ ಮಾಡಲಿದೆ. ಸವದಿಯವರನ್ನು ಡಿಸಿಎಂ ಆಗಿ ಮುಂದುವರೆಸುತ್ತೇವೆ. ಸವದಿಯವರನ್ನು ಹೇಗೆ ಮುಂದುವರೆಸಬೇಕು ಅನ್ನೋದನ್ನ ಪಕ್ಷ ನಿರ್ಧರಿಸಲಿದೆ ಎಂದು ಹೇಳಿದ್ದಾರೆ.

'ಬ್ರಿಟಿಷರನ್ನು ಓಡಿಸಿದಂತೆ ದೇಶದಿಂದ ಮೋದಿಯನ್ನು ಓಡಿಸ್ಬೇಕು'..!