'ಹಾನಗಲ್ ಉಪ ಚುನಾವಣೆ ಜಯ ಕಾಂಗ್ರೆಸ್‌ದಲ್ಲ, ಮಾನೆಯದು'
- ಸಣ್ಣ ಅಂತರದಲ್ಲಿ ಹಾನಗಲ್ ಕ್ಷೇತ್ರದಲ್ಲಿ ಸೋತಿದ್ದವೇ, ಈ ಗೆಲುವು ಕಾಂಗ್ರೆಸ್ ಗೆಲುವಲ್ಲ
- ಶ್ರೀನಿವಾಸ ಮಾನೆ ವೈಯಕ್ತಿಕ ಗೆಲುವು ಎಂದ ವಸತಿ ಸಚಿವ ವಿ.ಸೋಮಣ್ಣ
ಬೆಂಗಳೂರು (ನ.03): ಸಣ್ಣ ಅಂತರದಲ್ಲಿ ಹಾನಗಲ್ (Hanagal) ಕ್ಷೇತ್ರದಲ್ಲಿ ಸೋತಿದ್ದವೇ, ಈ ಗೆಲುವು ಕಾಂಗ್ರೆಸ್ (Congress) ಗೆಲುವಲ್ಲ. ಅದು ಶ್ರೀನಿವಾಸ ಮಾನೆ (Shrinivas mane) ವೈಯಕ್ತಿಕ ಗೆಲುವು ಎಂದು ವಸತಿ ಸಚಿವ ವಿ.ಸೋಮಣ್ಣ (V Somanna) ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀನಿವಾಸ ಮಾನೆ ಅವರು ಕೊರೋನಾ (Corona) ಸಂಕಷ್ಟದಲ್ಲಿ ಕ್ಷೇತ್ರದಲ್ಲಿ ಓಡಾಟ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರವನ್ನೂ ನಾವು ಗೆಲ್ಲಲಿದ್ದೇವೆ. ನಮ್ಮ ಮತಗಳು ಎಲ್ಲಿಯೋ ಹೋಗಿಲ್ಲ. ಶೇ.2ರಿಂದ 3ರಷ್ಟುಮತಗಳಲ್ಲಿ ವ್ಯತ್ಯಾಸವಾಗಿದೆ. ಹೀಗಾಗಿ ಇದು ಶ್ರೀನಿವಾಸ ಮಾನೆ ಅವರ ವೈಯಕ್ತಿಕ ವರ್ಚಸ್ಸಿನ ಗೆಲುವಾಗಿದೆ. ಮಾನೆ ಕೊರೋನಾ ಸಂದರ್ಭದಲ್ಲಿ ಜನರಿಗೆ (People) ಉಪಕಾರ ಮಾಡಿದ್ದರು. ಅದೇ ಜನ ಉಪಕಾರ ಸ್ಮರಿಸಿ ಶ್ರೀನಿವಾಸ ಮಾನೆ ಅವರನ್ನು ಗೆಲ್ಲಿಸಿದ್ದಾರೆ. ಉದಾಸಿ ಅವರು ಅನಾರೋಗ್ಯದ (Health Issue) ಹಿನ್ನೆಲೆಯಲ್ಲಿ ಕೊರೋನಾ ನಿಭಾಯಿಸುವ ವಿಚಾರದಲ್ಲಿ ಕೊಂಚ ಹಿನ್ನಡೆಯಾಗಿತ್ತು. ಸೋಲಿನ ಪರಾಮರ್ಶೆ ಮಾಡಿಕೊಳ್ಳುವುದಾಗಿ ತಿಳಿಸಿದರು.
Karnataka By election: ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ರೂ ಸಾವಿರ ಮತ ಗಳಿಸಲಿಲ್ಲ JDS
ಕಳೆದ ಚುನಾವಣೆಯಲ್ಲಿ (Election) ಸಿ.ಎಂ.ಉದಾಸಿ (CM Udasi) ಅವರು ಪಡೆದಷ್ಟುಮತಗಳನ್ನು ಬಿಜೆಪಿ (BJP) ಪಡೆದಿದೆ. ಬಿಜೆಪಿ ಮತಗಳು ಬಿಜೆಪಿಯಲ್ಲೇ ಇವೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ಪಡೆಯಲು ಪ್ರಯತ್ನಿಸುವುದಾಗಿ ಹೇಳಿದರು.
ಸಿಂದಗಿ (Sindagi) ಜನ ಅಭಿವೃದ್ಧಿಯನ್ನು ಗಮನಿಸಿ ಬಿಜೆಪಿಗೆ ನಿರೀಕ್ಷೆಗೂ ಮೀರಿದ ಬೆಂಬಲ ನೀಡಿದ್ದಾರೆ. ಮುಸ್ಲಿಮರೂ (Muslim) ಬಿಜೆಪಿಗೆ ಹೆಚ್ಚು ಮತ ನೀಡಿದ್ದಾರೆ. ಎಲ್ಲ ಸಚಿವರು (Munisters) ತಂಡವಾಗಿ ಕೆಲಸ ಮಾಡಿದ್ದರಿಂದ ಈ ಗೆಲುವು ದೊರೆತಿದೆ.
ಬಿಟ್ ಕಾಯಿನ್ ಎಂದರೆ ನನಗೆ ಗೊತ್ತಿಲ್ಲ
ಬಿಟ್ ಕಾಯಿನ್ (Bit coin) ಎಂದರೆ ನನಗೆ ಗೊತ್ತಿಲ್ಲ. ಬಿಟ್ ಎಂದರೆ ಪೊಲೀಸ್ (Police) ಬೀಟ್ ಎಂದುಕೊಂಡಿದ್ದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಪ್ರಕರಣದಲ್ಲಿ ಬಿಜೆಪಿ ನಾಯಕರಿದ್ದಾರೆ ಎಂದು ಆರೋಪಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (siddaramaiah) ಹಿಟ್ ಆ್ಯಂಡ್ ರನ್ ಮಾಡುವುದು ಸರಿಯಲ್ಲ. ನಾನು ಬೆಂಗಳೂರಿಗೆ ಬಂದು 51 ವರ್ಷ ಆಗಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಬಿಟ್ ಕಾಯಿನ್ ಪ್ರಕರಣದಲ್ಲಿ ಬಿಜೆಪಿಗರು ಇದ್ದರೆ ಅವರ ಹೆಸರನ್ನು ಹೇಳಬೇಕು. ಈ ವಿಚಾರದಲ್ಲಿ ಹಿಟ್ ಅ್ಯಂಡ್ ರನ್ ಮಾಡುವುದು ಸರಿಯಲ್ಲ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಅವರು ಮಂತ್ರಿಯಾಗಿದ್ದಾಗ ನಾನು ಮಂತ್ರಿಯಾಗಿದ್ದೆ (Minister). ಅದೃಷ್ಟದಿಂದ ಅವರು ಮುಖ್ಯಮಂತ್ರಿಯಾಗಿದ್ದರು. ಏನಾದರೂ ಮಾತನಾಡುವಾಗ ಯೋಚಿಸಿ ಮಾತನಾಡಬೇಕು. ರಾಜ್ಯ ಸರ್ಕಾರದಲ್ಲಿ (Karnataka Govt) ಯಾವುದೇ ಸಮಸ್ಯೆಯಿಲ್ಲ. ಸರ್ಕಾರ ಭದ್ರವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraja bommai) ಅವರ ನಾಯಕತ್ವದಲ್ಲೇ ಮುಂದಿನ ಚುಣಾವಣೆ (Next Karnataka Assembly Election) ಎಂದು ಪಕ್ಷದ ರಾಷ್ಟ್ರೀಯ ನಾಯಕರಾದ ಅಮಿತ್ ಶಾ (Amit shah) ಹೇಳಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
- 'ಹಾನಗಲ್ ಉಪ ಚುನಾವಣೆ ಜಯ ಕಾಂಗ್ರೆಸ್‌ದಲ್ಲ, ಮಾನೆಯದು'
- ಸಣ್ಣ ಅಂತರದಲ್ಲಿ ಹಾನಗಲ್ ಕ್ಷೇತ್ರದಲ್ಲಿ ಸೋತಿದ್ದವೇ
- ಕಾಂಗ್ರೆಸ್ ಗೆಲುವಿನ ಬಗ್ಗೆ ವಸತಿ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ
- ಶ್ರೀನಿವಾಸ ಮಾನೆ ಅವರು ಕೊರೋನಾ ಸಂಕಷ್ಟದಲ್ಲಿ ಕ್ಷೇತ್ರದಲ್ಲಿ ಓಡಾಟ ಮಾಡಿದ್ದಾರೆ
- ಮುಂದಿನ ದಿನಗಳಲ್ಲಿ ಈ ಕ್ಷೇತ್ರವನ್ನೂ ನಾವು ಗೆಲ್ಲಲಿದ್ದೇವೆ
- ನಮ್ಮ ಮತಗಳು ಎಲ್ಲಿಯೋ ಹೋಗಿಲ್ಲ. ಶೇ.2ರಿಂದ 3ರಷ್ಟು ಮತಗಳಲ್ಲಿ ವ್ಯತ್ಯಾಸವಾಗಿದೆ
- ಜನ ಉಪಕಾರ ಸ್ಮರಿಸಿ ಶ್ರೀನಿವಾಸ ಮಾನೆ ಅವರನ್ನು ಗೆಲ್ಲಿಸಿದ್ದಾರೆ