ತಕ್ಷಣ ರಾಜೀನಾಮೆ ಕೊಡಲಿ : ಸಚಿವರೋರ್ವರ ವಿರುದ್ಧ ರೇಣುಕಾಚಾರ್ಯ ಗರಂ
- ಕೊರೋನಾ ಮೊದಲ ಹಂತವನ್ನು ಸಮರ್ಥವಾಗಿ ನಿರ್ವಹಿಸಿದ ಕೇಂದ್ರ-ರಾಜ್ಯ ಸರ್ಕಾರ
- ಎರಡನೆ ಅಲೆ ವೇಳೆ ಕ್ಷೇತ್ರದ ಶಾಸಕರು ಕಾವಲುಗಾರರಾಗಿ ಕೆಲಸ ಮಾಡಬೇಕಿದೆ
- ಇಂತಹ ಸ್ಥಿತಿಯಲ್ಲಿ ಶಾಸಕಾಂಗ ಸಭೆ ಅವಶ್ಯಕತೆ ಇಲ್ಲವೆಂದ ರೇಣುಕಾಚಾರ್ಯ
ದಾವಣಗೆರೆ (ಮೇ.27): ಕೊರೋನಾ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಸಮರ್ಥವಾಗಿ ನಿಭಾಯಿಸಿದ್ದು ಈಗ ಎರಡನೆ ಹೆಚ್ಚಾಗಿದೆ. ಈ ವೇಳೆ ಕ್ಷೇತ್ರದ ಶಾಸಕರು ಕಾವಲುಗಾರರಾಗಿ ಕೆಲಸ ಮಾಡಬೇಕಿದೆ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿಯಲ್ಲಿಂದು ಮಾತನಾಡಿದ ರೇಣುಕಾಚಾರ್ಯ ಎರಡನೇ ಕೊರೋನಾ ಅಲೆ ಸಮರ್ಥವಾಗಿ ನಿಭಾಯಿಸಲು ಶಾಸಕರು ಕಾರ್ಯಪ್ರವೃತ್ತವಾಗಬೇಕಿದೆ ಎಂದು ಹೇಳಿದರು.
ಇನ್ನು ಇದೇ ವೇಳೆ ಯಾವುದೇ ಕಾರಣಕ್ಕೂ ಶಾಸಕಾಂಗ ಸಭೆ ಕರೆಯುವ ಅವಶ್ಯಕತೆ ಇಲ್ಲ, ಇದು ನನ್ನ ಅಭಿಪ್ರಾಯ. ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಸಕಾಂಗ ಸಭೆ ಅಗತ್ಯ ಇಲ್ಲ ಎಂದು ಶಾಸಕ ರೇಣುಕಾಚಾರ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಸೋಂಕಿತರ ದುಗುಡ ನಿವಾರಣೆಗೆ ರೇಣುಕಾಚಾರ್ಯ ಡ್ಯಾನ್ಸ್! ವಿಡಿಯೋ .
ಗರಂ ಆದ ರೇಣುಕಾಚಾರ್ಯ : ಯಾರು ಪಕ್ಷದಲ್ಲಿ ತಲೆ ಹರಟೆ ಮಾಡಿದ್ದರೂ ಅವರನ್ನು ಉಚ್ಚಾಟಿಸಿ ಎಂದು 65 ಶಾಸಕರು ಸಹಿ ಮಾಡಿದ ಪತ್ರ ನನ್ನ ಬಳಿ ಇದೆ. ಅಗತ್ಯ ಬಿದ್ದಾಗ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರಿಗೆ ತಲುಪಿಸುತ್ತೇನೆ. ಬೇರೆ ಪಕ್ಷದಿಂದ ಬಂದು ಯಡಿಯೂರಪ್ಪನವರ ಆಶೀರ್ವಾದದಿಂದ ಶಾಸಕರಾದ ಕೆಲವರು ಸದಾನಂದ ಗೌಡರ ಅವಧಿಯಲ್ಲಿ ಅರಣ್ಯ ಸಚಿವರಾಗಿ ಲೂಟಿ ಹೊಡೆದರು. ನಂತರ ನಮ್ಮ ಪಕ್ಷ ಬಿಟ್ಟು ಸೈಕಲ್ ಏರಿ ಮತ್ತೆ ಬಿಜೆಪಿ ಸೇರಿದರು ಎಂದು ಪರೋಕ್ಷವಾಗಿ C.P.ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.
ಶಿವಾನಂದ ಸರ್ಕಲ್ ನಲ್ಲಿ ವಿಜಯೇಂದ್ರ ಅವರ ಕಾವೇರಿ ಭವನದಲ್ಲಿ ಯಡಿಯೂರಪ್ಪ ಕಾಲು ಹಿಡಿದಿದ್ದನ್ನು ನಾನೇ ನೋಡಿದ್ದೇನೆ. ನಮ್ಮಲ್ಲಿ ಸೋತವರು ಬಹಳಷ್ಟು ಜನ ಇದ್ದರೂ ಯಡಿಯೂರಪ್ಪ ಅವರ ಕೃಪಕಟಾಕ್ಷದಿಂದ ಸಚಿವರಾದರು. ನೀವು ಶಾಸಕಾಂಗ ಸಭೆ ಕರೆಯಿರಿ ಎಂದು ಹೇಳಲು ಏನು ನೈತಿಕತೆ ಇದೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದು ಮೂರು ಭಾಗವಾದ ಸರ್ಕಾರ ಎಂದು ಹೇಳುತ್ತಾರೆ, ನಿಮಗೇನು ನೈತಿಕತೆ ಇದೆ. ಯಡಿಯೂರಪ್ಪ ನವರ ಆಡಳಿತ ಮೆಚ್ಚಿ ನೀವೆ ಐದು ವರ್ಷ ಸಿಎಂ ಎಂದು ಹೇಳಿದ್ದಿರಿ. ವಿನಾಃ ಕಾರಣ ಪ್ರಹಲ್ಲಾದ್ ಜೋಷಿ ಅವರ ಹೆಸರು ತರುವ ಕೆಲಸ ಮಾಡುತ್ತಿದ್ದೀರಿ. ದೆಹಲಿಗೆ ಹೋಗಿ ಲಾಭಿ ಮಾಡಿದರೆ ಏನು ಪ್ರಯೋಜನ? ನೀವು ದೆಹಲಿಯಲ್ಲಿ ಯಾವ ನಾಯಕರನ್ನು ಭೇಟಿ ಮಾಡಿಲ್ಲ. ಅವರ ಗೇಟು ಮುಟ್ಟಿ ಬಂದು ಪೋಟೋ ತೆಗೆಸಿಕೊಂಡಿದ್ದೀರಿ ಎಂದರು.
ಸಚಿವರೊಬ್ಬರು ಸಿಎಂ ಬದಲಾವಣೆಗೆ ಒತ್ತಾಯಿಸಿದ್ದಾರೆ : ರೆಣುಕಾಚಾರ್ಯ ಬಾಂಬ್ ...
ಮೂರು ಭಾಗವಾದ ಬಿಜೆಪಿ ಎಂದು ಹೇಳುತ್ತೀರಲ್ಲ ನಿಮಗೇನಿದೆ ನೈತಿಕತೆ..? ನನಗೆ ಸಿಕ್ಸರ್ ಹೊಡೆಯುವುದು ಗೊತ್ತು ಬೌಂಡರಿ ಹೊಡೆಯುವುದು ಗೊತ್ತು. ತಕ್ಷಣ ರಾಜೀನಾಮೆ ಕೊಡ ಬೇಕು, ಬಸವರಾಜ್ ಮೊಮ್ಮಾಯಿ ಅವರು ಮೆಗಾಸಿಟಿ ಪ್ರಕರಣದಲ್ಲಿ ಬಂಧಿಸಬೇಕು ಇಂತವರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ. ಅಖಾಡಕ್ಕೆ ಬಾ ನಮಗೆ ಹೇಗೆ ಪಟ್ಟು ಹಾಕ ಬೇಕು ಎಂದು ಗೊತ್ತಿದೆ ಎಂದರು.
ಯಡಿಯೂರಪ್ಪನವರು ಅವರನ್ನ ಸಚಿವರನ್ನಾಗಿ ಮಾಡಿದ್ದೇ ದೊಡ್ಡ ತಪ್ಪು. 2023ಕ್ಕೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಸಿ.ಪಿ.ಯೋಗಿಶ್ವರ್ ಅವರಿಗೆ ಲೂಟಿ ಮಾಡುವ ಖಾತೆ ಬೇಕಂತೆ. ಖಾತೆ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡಲು ಬಂದರೆ ನಾವು ಸುಮ್ಮನಿರುವುದಿಲ್ಲ. ಜನರ ರಕ್ಷಣೆ ಮಾಡುವ ಬದಲು ಈ ರೀತಿ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.