ದಾವಣಗೆರೆ (ಮೇ.13): ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡುವಂತೆ  ಸಚಿವ ಸಿಪಿ ಯೋಗಿಶ್ವರ್ ಪಟ್ಟು ಹಿಡಿದಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಸ್ಪೋಟಕ ಹೇಳಿಕೆ ನೀಡಿದ್ದಾರೆ. 

ದಾವಣಗೆರೆಯಲ್ಲಿಂದು ಮಾತನಾಡಿದ ಶಾಸಕ ರೇಣುಕಾಚಾರ್ಯ ರಾಜ್ಯದಲ್ಲಿ ಸಿಎಂ ಬದಲಾವಣೆ ನೂರಕ್ಕೆ ನೂರು ಸುಳ್ಳು. ಸೂರ್ಯಚಂದ್ರರು ಇರುವುದು ಎಷ್ಟು ಸತ್ಯವೋ ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯುವುದ ಅಷ್ಟೆ ಸತ್ಯ ಎಂದರು. 

ಶಾಸಕರ ಸಮಯಪ್ರಜ್ಞೆ : ತಪ್ಪಿದ ದುರಂತ - 20 ಜೀವ ಉಳಿಸಿದ ರೇಣುಕಾಚಾರ್ಯ

ಯಾರೋ ಒಬ್ಬರು ಸೋತಂತವರು ಹೋಗಿ ಲಾಭಿ ಮಾಡಿದ ತಕ್ಷಣ ಸಿಎಂ ಬದಲಾಗಲ್ಲ. ಯೋಗೇಶ್ವರ್ ಅವರನ್ನ ಮಂತ್ರಿ ಮಾಡಿದ್ದಕ್ಕೆ ಇದೇನಾ ಕೊಡುಗೆ. ಮಂತ್ರಿಯಾದವರು ಜನರ ಮಧ್ಯೆ ಕೆಲಸ ಮಾಡಬೇಕು.  ಡೆಲ್ಲಿಯಲ್ಲಿ ಕೂತು ಹೀಗೆ ಮಾಡೋದಲ್ಲ ಎಂದು ಸಿಪಿ ಯೋಗೆಶ್ವರ್ ವಿರುದ್ಧ ರೇಣುಕಾಚಾರ್ಯ ಕಿಡಿ ಕಾರಿದ್ದಾರೆ. 

ಬಣ್ಣ ಬಣ್ಣದ ಕಾಗೆ ಹಾರಿಸಬಾರದು: ಸಚಿವ ಯೋಗೇಶ್ವರ್‌ಗೆ ಟಾಂಗ್ ಕೊಟ್ಟ ಸಿಂಹ!

ಚನ್ನಪಟ್ಟಣದಲ್ಲಿ ಸೋತವನನ್ನ ಮಂತ್ರಿ ಮಾಡಿದ್ದಾರೆ.  ಮಂತ್ರಿಗಿರಿ ತಗೊಂಡು ನಾನೇನು ಮಾಡಲಿ. ಸಚಿವರಾದವರು ಮಜಾ ಮಾಡುವವರು ಮಜಾ ಮಾಡಲಿ. ನಾನು ನನ್ನ ಕೆಲಸ ಕ್ಷೇತ್ರದಲ್ಲಿ ನನ್ನ ಕೆಲಸ ನಾನು ಮಾಡುತ್ತೇನೆ ಎಂದು ಈ ವೇಳೆ  ಸಂಪುಟದ ಸಚಿವರ ವಿರುದ್ಧವೂ ರೇಣುಕಾಚಾರ್ಯ ಕಿಡಿ ಕಾರಿದ್ದಾರೆ.