* ರಾಜ್ಯದಲ್ಲಿ ಮತ್ತೆ ಏರಿಕೆ ಕಂಡ ಕೊರೋನಾ ಕೇಸ್‌ಗಳ ಸಂಖ್ಯೆ* ಮೇ.25ರಂದು ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ  ಇಳಿಕೆಯಾಗಿದ್ರೆ,  ಇಂದು (ಬುಧವಾರ) ಏರಿಕೆ* ಆದರೂ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚು

ಬೆಂಗಳೂರು, (ಮೇ.26): ಕರ್ನಾಟಕದಲ್ಲಿ ಕೊರೋನಾ ಪಾಸಿಟಿವ್ ಕೇಸ್‌ಗಳು ಕಡಿಮೆಯಾಗುತ್ತಿವೆ ಎನ್ನುವ ನಿರಾಳವಾಗಿರುವಾಗಲೇ ಮತ್ತೆ ಏರಿಕೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು... ಮಂಗಳವಾರ (ಮೇ.25) ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ರೆ, ಇಂದು (ಬುಧವಾರ) ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 26,811 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, 530 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.

ಮೇ. 25ರ ಕೊರೋನಾ ರಿಪೋರ್ಟ್: ರಾಜ್ಯದಲ್ಲಿ ಕೊರೋನಾ ಇಳಿಮುಖ, ಸಾವಿನ ಸಂಖ್ಯೆ ಅಧಿಕ

ಇನ್ನು ಇದೇ ಅವಧಿಯಲ್ಲಿ 40,741 ಸೋಂಕಿತರು ಗುಣಮುಖರಾಗಿದ್ದಾರೆ. ಇದರೊಂದಿಗೆ ಈವರೆಗೂ 20,62,910 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಗೆ 26,929 ಜನರು ಬಲಿಯಾಗಿದ್ದಾರೆ. ಉಳಿದಂತೆ 4,09,924 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲಾವಾರು ಅಂಕಿ-ಸಂಖ್ಯೆ
ಬಾಗಲಕೋಟೆ 245, ಬಳ್ಳಾರಿ 796, ಬೆಳಗಾವಿ 1205, ಬೆಂಗಳೂರು ಗ್ರಾಮಾಂತರ 740, ಬೆಂಗಳೂರು 6433, ಬೀದರ್ 61, ಚಾಮರಾಜನಗರ 425, ಚಿಕ್ಕಬಳ್ಳಾಪುರ 313, ಚಿಕ್ಕಮಗಳೂರು 585, ಚಿತ್ರದುರ್ಗ 431, ದಕ್ಷಿಣ ಕನ್ನಡ 729, ದಾವಣಗೆರೆ 1309, ಧಾರವಾಡ 853, ಗದಗ 393, ಹಾಸನ 1471, ಹಾವೇರಿ 330, ಕಲಬುರಗಿ 175, ಕೊಡಗು 296, ಕೋಲಾರ 907, ಕೊಪ್ಪಳ 491, ಮಂಡ್ಯ 805, ಮೈಸೂರು 2792, ರಾಯಚೂರು 265, ರಾಮನಗರ 240, ಶಿವಮೊಗ್ಗ 839, ತುಮಕೂರು 1399, ಉಡುಪಿ 973, ಉತ್ತರ ಕನ್ನಡ 786, ವಿಜಯಪುರ 337, ಯಾದಗಿರಿ 187.