Asianet Suvarna News Asianet Suvarna News

ಕಾಂಗ್ರೆಸ್ ನಾಯಕರ ಜೊತೆ ಶೆಟ್ಟರ್‌ ಗೌಪ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ

  •  ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ನಿವಾಸಕ್ಕೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಭೇಟಿ
  • ಕಾಂಗ್ರೆಸ್‌ ಮುಖಂಡ ಪ್ರಕಾಶ ಹುಕ್ಕೇರಿ ಶನಿವಾರ ರಾತ್ರಿ ಭೇಟಿ
BJP MLA Ramesh Jarkiholi Meets Jagadish Shettar snr
Author
Bengaluru, First Published Aug 8, 2021, 7:20 AM IST
  • Facebook
  • Twitter
  • Whatsapp

ಹುಬ್ಬಳ್ಳಿ (ಆ.08): ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ನಿವಾಸಕ್ಕೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಕಾಂಗ್ರೆಸ್‌ ಮುಖಂಡ ಪ್ರಕಾಶ ಹುಕ್ಕೇರಿ ಶನಿವಾರ ರಾತ್ರಿ ಭೇಟಿ ನೀಡಿದ್ದರು. ಕೆಲಕಾಲ ಮೂವರೂ ಗೌಪ್ಯ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. 

ಶನಿವಾರ ರಾತ್ರಿ ಏಕಾಏಕಿ ರಮೇಶ್‌ ಜಾರಕಿಹೊಳಿ ಹಾಗೂ ಪ್ರಕಾಶ ಹುಕ್ಕೇರಿ ಅವರು ಶೆಟ್ಟರ್‌ ನಿವಾಸಕ್ಕೆ ಆಗಮಿಸಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಉಭಯ ಮುಖಂಡರು ಯಾವುದೋ ಆಮಂತ್ರಣ ಪತ್ರಿಕೆ ನೀಡಲು ಆಗಮಿಸಿದ್ದರು ಎಂದೆನ್ನಲಾಗಿದೆ.

ಸಚಿವರಿಗೆ ಖಾತೆ ಹಂಚಿಕೆ: ಬೊಮ್ಮಾಯಿ, ಬಿಎಸ್‌ವೈಗೆ ಥ್ಯಾಂಕ್ಸ್ ಎಂದ ಶ್ರೀರಾಮುಲು!

 ಈ ವೇಳೆ ಪಕ್ಷದ ಕಾರ್ಯಕರ್ತರು ಇರಲಿಲ್ಲ ಎಂದು ತಿಳಿದು ಬಂದಿದೆ. ಶೆಟ್ಟರ್‌ ಅವರು ಸಂಪುಟದಿಂದ ಹೊರಗುಳಿದ ಬಳಿಕ ಹಲವು ಮುಖಂಡರು ಭೇಟಿ ನೀಡುತ್ತಿರುವುದು ಚರ್ಚೆಗೆ ಗ್ರಾಸವನ್ನುಂಟು ಮಾಡಿದೆ.

Follow Us:
Download App:
  • android
  • ios