Asianet Suvarna News Asianet Suvarna News

ಸಚಿವರಿಗೆ ಖಾತೆ ಹಂಚಿಕೆ: ಬೊಮ್ಮಾಯಿ, ಬಿಎಸ್‌ವೈಗೆ ಥ್ಯಾಂಕ್ಸ್ ಎಂದ ಶ್ರೀರಾಮುಲು!

* ನೂತನ ಸಚಿವರಿಗೆ ಖಾತೆ ಹಂಚಿಕೆ

* ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವಾಲಯ ಹಾಗೂ ಸಾರಿಗೆ ಖಾತೆ ಶ್ರೀರಾಮುಲು ಹೆಗಲಿಗೆ

* ಬೊಮ್ಮಾಯಿ, ಬಿಎಸ್‌ವೈಗೆ ಥ್ಯಾಂಕ್ಸ್ ಎಂದ ಶ್ರೀರಾಮುಲು

Portfolio Allotment Minister Sriramulu Gives Clarification On Resignation Rumours pod
Author
Bangalore, First Published Aug 7, 2021, 2:41 PM IST
  • Facebook
  • Twitter
  • Whatsapp

ಬೆಂಗಳೂರು(ಆ.07): ಬೊಮ್ಮಾಯಿ ಸಂಪುಟದ 29 ಸಚಿವರಿಗೆ ಖಾತೆ ಹಂಚಿಕೆಯಾಗಿದೆ. ಮೊದಲ ಬಾರಿ ಸಚಿವರಾದವರಿಗೆ ಪವರ್‌ಫುಲ್ ಖಾತೆ ನೀಡುವುದರೊಂದಿಗೆ, ಬಿಎಸ್‌ವೈ ಸಂಪುಟದ ಅನೇಕರಿಗೆ ಅದೇ ಖಾತೆಯನ್ನು ಮರು ಹಂಚಿಕೆ ಮಾಡಲಾಗಿದೆ. ಇವೆಲ್ಲದರ ಮಧ್ಯೆ ಕೆಲವರು ತಮಗಿಷ್ಟದ ಖಾತೆ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ.

"

ಇನ್ನು ಖಾತೆ ಹಂಚಿಕೆ ಬಳಿಕ ಸಚಿವ ಶ್ರೀರಾಮುಲು ತಮಗೆ ಕೊಟ್ಟ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವಾಲಯ ಹಾಗೂ ಸಾರಿಗೆ ಖಾತೆಯಿಂದ ಅಸಮಾಧಾನಗೊಂಡಿದ್ದಾರೆಂಬ ಮಾತುಗಳು ಜೋರಾಗಿದ್ದವು. ಇಷ್ಟವಿಲ್ಲದ ಖಾತೆಯಲ್ಲಿ ಕೆಲಸ ಮಾಡೋಕೆ ಆಗೋದಿಲ್ಲವೆಂದು ಆಪ್ತರ ಮುಂದೆ ಹೇಳಿಕೊಂಡಿದ್ದಾರೆ. ಇಷ್ಟೆಲ್ಲ ಅವಮಾನದೊಂದಿಗೆ ಸಚಿವರಾಗೋ ಬದಲು ಶಾಸಕರಾಗಿ ಉಳಿಯೋದೇ ಲೇಸು ಎಂದಿದ್ದಾರೆನ್ನಲಾಗಿತ್ತು. ಆದರೀಗ ಈ ಬಗ್ಗೆ ಖುದ್ದು ಸಚಿವ ಶ್ರೀರಾಮುಲು ಅವರೇ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಶ್ರೀರಾಮುಲು ಸಾರಿಗೆ ಹಾಗೂ ನೂತನವಾಗಿ ಸೃಷ್ಟಿಯಾಗಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವಾಲಯದ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಜವಾಬ್ದಾರಿ ನೀಡಿದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರಿಗೆ ವಂದಿಸುತ್ತಾ, ಅವರ ನಿರ್ಧಾರ ಸ್ವಾಗತಿಸುತ್ತೇನೆ ಎಂದಿದ್ದಾರೆ.

ಅಲ್ಲದೇ ಹರಿದಾಡುತ್ತಿರುವ ವದಂತಿಗಳ ಬಗ್ಗಯೂ ಬರೆದಿದ್ದು, ಪ್ರಧಾನಿ ನರೇಂದ್ರ ಮೋದಿ ಮಾದರಿ ಆಡಳಿತ, ಜನಪರ ಹಾಗೂ ಅಭಿವೃದ್ಧಿ ಪರ ಆಡಳಿತವೊಂದೇ ನನ್ನ, ನಮ್ಮ ಸರ್ಕಾರದ ಗುರಿ. ಮುಖ್ಯಮಂತ್ರಿಗಳ ನೇತೃತ್ವ ಹಾಗೂ ಹಿರಿಯರು ಬಿ.ಎಸ್‌. ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಅಭಿವೃದ್ಧಿಯತ್ತ ನಮ್ಮ ಹೆಜ್ಜೆ. ಅಸಮಾಧಾನ ಮತ್ತಿತರೆ ಸುದ್ದಿಗಳು ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ.
 

Follow Us:
Download App:
  • android
  • ios