Kolar MLC Election 'BJP - JDS ಒಂದಾದರೂ ಗೆಲುವು ಅಸಾಧ್ಯ'

  • ಕಾಂಗ್ರೆಸ್‌ ಭದ್ರಕೋಟೆಯಾಗಿರುವ ಕೋಲಾರ ವಿಧಾನ ಪರಿಷತ್‌ ಕ್ಷೇತ್ರ
  • ಕ್ಷೇತ್ರವನ್ನು ಬಿಜೆಪಿ-ಜೆಡಿಎಸ್‌ ಹೊಂದಾಣಿಕೆಯೊಂದಿಗೆ ಗೆಲ್ಲುವುದು ತಿರುಕನ ಕನಸಿನಷ್ಟೇ ಹೊರತು ಗೆಲುವುದು ಅಸಾಧ್ಯ 

 

BJP JDS Dreaming about Kolar MLC election winning says MLA nanjegowda  snr

ಮಾಲೂರು (ನ.19): ಕಾಂಗ್ರೆಸ್‌ (Congress) ಭದ್ರ ಕೋಟೆಯಾಗಿರುವ ಕೋಲಾರ (Kolar) ವಿಧಾನ ಪರಿಷತ್‌ ಕ್ಷೇತ್ರವನ್ನು ಬಿಜೆಪಿ-ಜೆಡಿಎಸ್‌ (BJP - JDS) ಹೊಂದಾಣಿಕೆಯೊಂದಿಗೆ ಗೆಲ್ಲುವುದು ತಿರುಕನ ಕನಸಿನಷ್ಟೇ ಹೊರತು ಗೆಲುವುದು ಅಸಾಧ್ಯ ಎಂದು ಶಾಸಕ ನಂಜೇಗೌಡ (Nanjegowda) ಹೇಳಿದರು.

ಅವರು ವಿಧಾನ ಪರಿಷತ್‌ ಚುನಾವಣಾ (MLC Election) ಸಂಬಂಧ ಪತ್ರಕರ್ತರೂಡನೆ ಮಾತನಾಡಿದ ಅವರು, ಈ ಹಿಂದೆ ಎಂಎಲ್ಸಿ (MLC) ಹಾಗೂ ಲೋಕಸಭಾ ಚುನಾವಣೆಗಳನ್ನು (Loksabha Election) ನಮ್ಮ ಪಕ್ಷದ ಮುಖಂಡರಿಗಳಿದ್ದ ಭಿನ್ನಾಭಿಪ್ರಾಯದಿಂದ ಕಳೆದುಕೊಂಡಿದ್ದೇವೆ. ಈಗ ಮತ್ತೇ ಮರುಕುಳುಹಿಸಿದಂತೆ ಎಚ್ಚರ ವಹಿಸಿದ್ದು,ನಮ್ಮ ಪಕ್ಷದ ಮುಖಂಡರುಗಳ ಒಗ್ಗಟ್ಟೇ ನಮ್ಮ ಅಭ್ಯರ್ಥಿ ಗೆಲವಿಗೆ ಶ್ರೀ ರಕ್ಷೆಯಾಗಲಿದೆ ಎಂದರು.

ಮುಂಬರಲಿರುವ 2023 ರ ವಿಧಾನ ಸಭೆ ಚುನಾವಣೆಯಲ್ಲಿ (Assembly Election 2023) ಜಿಲ್ಲೆಯ ಎಲ್ಲ 6 ಕ್ಷೇತ್ರದಲ್ಲೂ ಪಕ್ಷವೇ ಗೆಲವು ಸಾಧಿಸಲಿದ್ದು, ಜೆಡಿಎಸ್‌ (JDS), ಬಿಜೆಪಿ (BJP) ಗೆಲುವು ಅಸಾಧ್ಯ ಎಂದ ಶಾಸಕರು, ಪಕ್ಷ ಬಿಟ್ಟು ಹೋದವರನ್ನು ಮತ್ತೇ ಪಕ್ಷಕ್ಕೆ ಬರಮಾಡಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ಆದೇಶ ಮಾಡಿದ್ದು, ಅದರಂತೆ ಜಿಲ್ಲೆಯಲ್ಲಿ ರಾಜಕೀಯ ಧ್ರುವೀಕರಣ ನಡೆಯಲಿದೆ ಎಂದರು.

ನಮ್ಮ ತಾಲೂಕಿನ ಹಿರಿಯ ಕಾಂಗ್ರೆಸಿಗ ಕೆಸರೆಗೆರೆ ಸೋಮಶೇಖರ್‌ ಅವರಿಗೆ ವಿಧಾನ ಪರಿಷತ್‌ ಟಿಕೇಟ್‌ ನೀಡುವಂತೆ ಈಗಾಗಲೇ ಕೆಪಿಸಿಸಿ (KPCC) ಯಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಗೋವಿಂದೆ ಗೌಡ, ಆನಿಲ್‌ ಕುಮಾರ್‌, ಮುನೇಗೌಡ ಸೇರಿದಂತೆ ಒಟ್ಟಿರುವ 12 ಕ್ಕೂ ಹೆಚ್ಚು ಆಕಾಂಕ್ಷಿಗಳಲ್ಲಿ ಯಾರಿಗೂ ಟಿಕೆಟ್‌ ನೀಡಿದರೂ ಅವರ ಪರವಾಗಿ ಕೆಲಸಮಾಡುವುದಾಗಿ ತಿಳಿಸಿದರು.

ನಿಷ್ಠಾವಂತರಿಗೆ ಟಿಕೆಟ್‌ ನೀಡಲಿ :  ಎಂಎಸ್‌ಐಎಲ್‌ ನಿಗಮದ ಮಾಜಿ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್‌ನ ಮಾಜಿ ಜಿಲ್ಲಾಧ್ಯಕ್ಷ ಎಂ.ಎಲ್‌.ಅನಿಲ್‌ಕುಮಾರ್‌ ಇತ್ತೀಚೆಗೆ ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತಿದ್ದು, ಅವರಿಗೆ ಎಂಎಲ್‌ಸಿ ಚುನಾವಣೆಯಲ್ಲಿ ಟಿಕೆಟ್‌ ನೀಡದೆ ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿಯುವವರಿಗೆ ಕೆಪಿಸಿಸಿ ಅಧ್ಯಕ್ಷರು ಆದ್ಯತೆ ನೀಡಬೇಕು ಎಂದು ಮಾಜಿ ಸಂಸದ ಕೆ.ಎಚ್‌. ಮುನಿಯಪ್ಪ ಗುಂಪಿನಲ್ಲಿ ಗುರ್ತಿಸಿಕೊಂಡಿರುವ ಮುಖಂಡರು ಮನವಿ ಮಾಡಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎ.ಪ್ರಸಾದ್‌ಬಾಬು, ಎಂ.ಎಲ್‌.ಅನಿಲ್‌ಕುಮಾರ್‌ ಬಿಜೆಪಿ ಏಜೆಂಟರಂತೆ ಆಗಿದ್ದಾರೆ.

ಡಿಸಿಸಿ ಬ್ಯಾಂಕ್‌ (DCC Bank) ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರು ಕಾಂಗ್ರೆಸ್‌ (Congress) ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಇವರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಡುವುದರಲ್ಲಿ ಅರ್ಥವಿಲ್ಲ. ಕಾಂಗ್ರೆಸ್‌ ಸಮಿತಿ ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ, ಮಾಲೂರು ಸೋಮಶೇಖರ್‌, ಮುಳಬಾಗಿಲು ಆನಂದ ರೆಡ್ಡಿಯಂತಹ ಅನೇಕರು, ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿಯುವ ಮುಖಂಡರಿದ್ದು, ಅವರಲ್ಲಿ ಯಾರಿಗಾದರೂ ನೀಡಿದರೆ ಅನುಕೂಲವಾಗಲಿದೆ ಎಂದರು.

ಮಾವು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ದಳಸನೂರು ಗೋಪಾಲಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಉತ್ತಮವಾದ ವಾತಾವರಣವಿದೆ. ಹೀಗಿರುವಾಗ ಸೂಕ್ತ ಅಭ್ಯರ್ಥಿಗೆ ಟಿಕೆಟ್‌ ನೀಡುವುದು ಸೂಕ್ತವಾಗಿದ್ದು, ಪಕ್ಷದ ಮುಖಂಡರ ಗಮನಕ್ಕೆ ಈ ವಿಚಾರಗಳನ್ನು ತರಲಾಗಿದೆ. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದವರ ಕುರಿತು ಈಗಾಗಲೇ ದೂರು ನೀಡಿದ್ದು, ಮುಂಬರುವ ಚುನಾವಣೆಗಳಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡುವುದಾಗಿ ಹೇಳಿದರು.

ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಮನವಿ

 ಬಂಗಾರಪೇಟೆ: ಕೋಲಾರ-ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಗಳ ವಿಧಾನ ಪರಿಷತ್‌ ಚುನಾವಣೆಗೆ ಬಿಜೆಪಿ ಹೈಕಮಾಂಡ್‌ ಯಾರನ್ನೇ ಅಭ್ಯರ್ಥಿಯಾಗಿಸಿದ್ದರೂ ಅವರನ್ನು ಅತಿಹೆಚ್ಚು ಮತಗಳ ಅಂತರದಿಂಗೆ ಜಯಶೀಲರಾಗಲು ಬಿಜೆಪಿಯ(BJP) ಎಲ್ಲ ಚುನಾಯಿತ ಪ್ರತಿನಿಧಿಗಳು ಶ್ರಮಿಸಬೇಕೆಂದು ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪಕರೆ ನೀಡಿದರು.

ಪಟ್ಟಣದ ಬಸ್‌ ನಿಲ್ದಾಣದ ಬಳಿ ಜನಸ್ವರಾಜ್‌ ಯಾತ್ರೆ ಕಾರ‍್ಯಕ್ರಮದ ಪೂರ್ವಭಾವಿ ಸಭೆ ಅಂಗವಾಗಿ ತಾಲೂಕಿನ ಎಲ್ಲಾ ಗ್ರಾಪಂ ಸದಸ್ಯರ ಸಮಾವೇಶದ ಸಭೆಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್‌ ಚುನಾವಣೆಯಲ್ಲಿ ವಿರೋಧ ಪಕ್ಷಗಳು ನೀಡುವ ಆಮಿಷಗಳಿಗೆ ಬಲಿಯಾಗದೇ ಬಿಜೆಪಿ ಪಕ್ಷದತತ್ವ ಸಿದ್ದಾಂತಗಳಿಗೆ ಕಟಿಬದ್ದರಾಗಿ ಪಕ್ಷವು ಆಯ್ಕೆ ಮಾಡುವ ಅಭ್ಯರ್ಥಿಗೆ ಮತ ಹಾಕಬೇಕಾಗಿದೆ. ಬಿಜೆಪಿ ಗೆಲುವಿಗಾಗಿ ಪಕ್ಷದ ಮುಖಂಡರು ಹಾಗೂ ಕಾರ‍್ಯಕರ್ತರು ಸಹ ಶ್ರಮಿಸಬೇಕಾಗಿದೆ ಎಂದರು.

ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra modi) ಹಾಗೂ ರಾಜ್ಯದಲ್ಲಿ ಬಸವರಾಜು ಬೊಮ್ಮಾಯಿ ಅವರು ಉತ್ತಮ ಆಡಳಿತ ನಡೆಸುತಿದ್ದಾರೆ. ಇವÃ Üಜನಪರ ಕಾರ‍್ಯಕ್ರಮಗಳ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಪ್ರಚಾರ ಮಾಡಬೇಕಾಗಿದೆ. ಗ್ರಾಮ ಪಂಚಾಯ್ತಿಗಳಲ್ಲಿ ಯಾವುದೇ ಪಕ್ಷದ ಚಿನ್ಹೆ ಇಲ್ಲದಿದ್ದರೂ ಬಿಜೆಪಿ ಬೆಂಬಲದಿಂದ ಗೆಲುವು ಸಾಧಿಸಿರುವ ಸದಸ್ಯರು ಒಮ್ಮತದಿಂದ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವುದರ ಮೂಲಕ ಬಿಜೆಪಿ ಪಕ್ಷದ ಸಂಘಟನೆಗೆ ಮತ್ತಷ್ಠು ಸ್ಪೂರ್ತಿತಂದುಕೊಡಬೇಕಾಗಿದೆ ಎಂದರು.

Latest Videos
Follow Us:
Download App:
  • android
  • ios