'ಗೆಲ್ಲುವವರೆಗೆ ಬೆಳಗಾವಿ ಲೋಕಸಭಾ ಚುನಾವಣೆಗೆ ನಾನೇ ಖಾಯಂ ಅಭ್ಯರ್ಥಿ'

* ಬೆಳಗಾವಿ ಲೋಕಸಭಾ ಚುನಾವಣೆ ಗೆಲ್ಲುವವರೆಗೆ ನಾನೇ ಖಾಯಂ ಅಭ್ಯರ್ಥಿ
* ಘೋಷಣೆ ಮಾಡಿದ ಕಾಂಗ್ರೆಸ್ ಕಾರ್ಯಾಧ್ಯಕ್ಷ 
* ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಮತ್ತೆ ಪುನರುಚ್ಚರಿಸಿದ ಸತೀಶ ಜಾರಕಿಹೊಳಿ

will contest for next Belagavi loksabha election Says Congress Leader satish jarkiholi rbj

ಬೆಳಗಾವಿ, (ಅ.06): ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆಲ್ಲುವವರೆಗೆ ಕಾಂಗ್ರೆಸ್‌ನಿಂದ ನಾನೇ ಕಾಯಂ ಅಭ್ಯರ್ಥಿ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು.

ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಇಂದು (ಅ.06) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿ ನಾನೇ ಸ್ಪರ್ಧಿಸುತ್ತೇನೆ. ಅಲ್ಲಿ ಗೆದ್ದು ಲೋಕಸಭಾ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

40 ಬಿಜೆಪಿ ಶಾಸಕರು ಕಾಂಗ್ರೆಸ್‌ ಸೇರ್ಪಡೆ : ಸತೀಶ ಜಾರಕಿಹೊಳಿ ಹೊಸ ಬಾಂಬ್‌

ಯಮಕನಮರಡಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪುತ್ರ ರಾಹುಲ್ ಜಾರಕಿಹೊಳಿ ಅಥವಾ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧಿಸುವ ವಿಚಾರ ಕ್ಷೇತ್ರದ ಜನರಿಗೆ ಬಿಟ್ಟಿದೆ. ಆ ವಿಷಯದಲ್ಲಿ ನಾನು ನಿರ್ಧರಿಸಲಾಗುವುದಿಲ್ಲ. ಇನ್ನೂ ಎರಡು ವರ್ಷವಿದೆ, ನಂತರ ನೋಡೋಣ ಎಂದು ಹೇಳಿದರು.

ಈ ಹಿಂದೆಯೇ ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ನಿಶ್ಚಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಘೋಷಿಸಿದ್ದರು. ಇದೀಗ ಮತ್ತೆ ಸತೀಶ್ ಜಾರಕಿಹೊಳಿ ಅವರು ಪುನರುಚ್ಚರಿಸಿದ್ದಾರೆ.  

ಇತ್ತೀಚೆಗೆ ನಡೆದ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸತೀಶ್ ಜಾರಕಿಹೊಳಿ ಅವರು ಸುರೇಶ್ ಅಂಗಡಿ ಪತ್ನಿ ಮಂಗಳ ಅಂಗಡಿ ವಿರುದ್ಧ ಕೇವಲ 5 ಸಾವಿರಗಳ ಮತಗಳ ಅಂತರದಿಂದ ಅಷ್ಟೇ ಸೋತ್ತಿದ್ದರು.

ಬಿಜೆಪಿಯ ಭದ್ರಕೋಟೆಯನ್ನೇ ಸತೀಶ್ ಜಾರಕಿಹೊಳಿ ಅಲುಗಾಡಿಸಿದ್ದು, ಬಿಜೆಪಿ ನಾಯಕರಲ್ಲಿ ನಡುಕ ಹುಟ್ಟಿಸಿದ್ದಂತೂ ಸತ್ಯ. ಮುಂದಿನ ಬಾರಿ ಗೆದ್ದೇ ತೀರುತ್ತೇನೆಂದು ಜಾರಕಿಹೊಳಿ ಪಣತೊಟ್ಟಿದ್ದಾರೆ. 
 

Latest Videos
Follow Us:
Download App:
  • android
  • ios