Asianet Suvarna News Asianet Suvarna News

ಮೈಸೂರು 20ನೇ ವಾರ್ಡ್‌ ನ ಉಪ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ನಿಶ್ಚಿತ : ಹರ್ಷವರ್ಧನ್

ಪಟ್ಟಣದ 20ನೇ ವಾರ್ಡ್‌ನ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಮಹೇಶ್ ಅತ್ತಿಖಾನೆ ಪರವಾಗಿ ಉತ್ತಮ ವಾತಾವರಣವಿದ್ದು, ಅವರ ಗೆಲುವು ನಿಶ್ಚಿತವಾಗಿದೆ ಎಂದು ಮಾಜಿ ಶಾಸಕ ಬಿ. ಹರ್ಷವರ್ಧನ್ ಹೇಳಿದರು.

BJP is certain to win Mysore 20th ward by-election: Harsh Vardhan snr
Author
First Published Dec 23, 2023, 10:17 AM IST

 ನಂಜನಗೂಡು :  ಪಟ್ಟಣದ 20ನೇ ವಾರ್ಡ್‌ನ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಮಹೇಶ್ ಅತ್ತಿಖಾನೆ ಪರವಾಗಿ ಉತ್ತಮ ವಾತಾವರಣವಿದ್ದು, ಅವರ ಗೆಲುವು ನಿಶ್ಚಿತವಾಗಿದೆ ಎಂದು ಮಾಜಿ ಶಾಸಕ ಬಿ. ಹರ್ಷವರ್ಧನ್ ಹೇಳಿದರು.

ಬುಧವಾರ ರಾತ್ರಿ ಬಿಜೆಪಿ ಅಭ್ಯರ್ಥಿ ಮಹೇಶ್ ಅತ್ತಿಖಾನೆ ಪರವಾಗಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿ ಅವರು ಮಾತನಾಡಿದರು.

ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ವಕೀಲ ಮಹೇಶ್‌ ಅತ್ತಿಖಾನೆ ಶಿಕ್ಷಣ ಕ್ಷೇತ್ರದಲ್ಲಿ 15 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದು, ಉತ್ತಮ ಅಭ್ಯರ್ಥಿ ಎಂಬುದಾಗಿ ಜನರ ಮನಸ್ಸಿನಲ್ಲಿದೆ. ಕಳೆದ ಬಾರಿ ಸಹ ಈ ವಾರ್ಡಿನ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದರು. ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಬಾರಿಯೂ ಸಹ ಬೆಂಬಲ ನೀಡುವುದಾಗಿ ಮತದಾರರು ಹೇಳಿಕೆ ನೀಡುತ್ತಿದ್ದಾರೆ. ಆದ ಕಾರಣ ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವು ಶತಸಿದ್ದ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿ ಪಿ. ಮಹೇಶ್‌ ಅತ್ತಿಖಾನೆ ಮಾತನಾಡಿ, ಮತದಾರರ ಸೇವೆ ಮಾಡುವ ಉದ್ದೇಶದೊಂದಿಗೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ. ಈ ಬಾರಿ ನನಗೆ ಅಧಿಕ ಮತಗಳನ್ನು ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಮತಯಾಚನೆ ವೇಳೆ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಎನ್.ಆರ್. ಕೃಷ್ಣಪ್ಪಗೌಡ, ಬಿಜೆಪಿ ನಗರಾಧ್ಯಕ್ಷ ಶ್ರೀನಿವಾಸರೆಡ್ಡಿ, ಜಿಪಂ ಮಾಜಿ ಸದಸ್ಯ ಸಿ. ಚಿಕ್ಕರಂಗನಾಯಕ, ಮಾಜಿ ನಗರಸಭಾಧ್ಯಕ್ಷ ಎಚ್.ಎಸ್. ಮಹದೇವಸ್ವಾಮಿ, ನಗರಸಭಾ ಮಾಜಿ ಸದಸ್ಯರಾದ ಕೆ.ಜಿ. ಆನಂದ್, ಮುಖಂಡರಾದ ಬಾಲಚಂದ್ರು, ಎನ್.ಸಿ. ಬಸವಣ್ಣ, ಶಂಕರಪ್ಪ, ಬಾಲಚಂದ್ರು, ಪ್ರೇಮಾಶಂಭಯ್ಯ, ಸಂಜಯ್‌ ಶರ್ಮಾ, ಮಹೇಶ್, ನಗರಸಭಾ ಸದಸ್ಯರಾದ ಮಹದೇವಪ್ರಸಾದ್ ಇದ್ದರು.

ಬಿಜೆಪಿ ಸೋಲಿಸಲು ಪಣ

ನವದೆಹಲಿ (ಡಿಸೆಂಬರ್ 23, 2023): ಚಳಿಗಾಲದ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ 146 ಸಂಸದರ ಅಮಾನತು ವಿರೋಧಿಸಿ ದೇಶಾದ್ಯಂತ ಶಕ್ತಿ ಪ್ರದರ್ಶನ ನಡೆಸಿರುವ ‘ಇಂಡಿಯಾ’ ಕೂಟದ ಅಂಗಪಕ್ಷಗಳು, 2024ರ ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳ ದನಿ ಹತ್ತಿಕ್ಕುತ್ತಿರುವ ಆಡಳಿತಾರೂಢ ಬಿಜೆಪಿಯನ್ನು ಸೋಲಿಸಬೇಕು’ ಎಂದು ಒಕ್ಕೊರಲ ಪಣ ತೊಟ್ಟಿವೆ.

ಶುಕ್ರವಾರ ದೇಶದ ವಿವಿಧ ಭಾಗಗಳು ಹಾಗೂ ದೆಹಲಿಯ ಜಂತರ್‌ ಮಂತರ್‌ನಲ್ಲಿ ಇಂಡಿಯಾ ಕೂಟದ ನಾಯಕರು ಭಾರೀ ಪ್ರತಿಭಟನೆ ನಡೆಸಿದರು. ‘ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕು. ಇದಕ್ಕಾಗಿ ಜನರು ಒಂದಾಗಬೇಕು’ ಎಂದು ವಿಪಕ್ಷ ನಾಯಕರು ಘೋಷಣೆ ಕೂಗಿದರು.

ಇದನ್ನು ಓದಿ: ಸಂಸತ್ ಭವನದ ಭದ್ರತಾ ಲೋಪ- ಮೋದಿ, ಶಾ ರಾಜೀನಾಮೆಗೆ ಆಗ್ರಹಿಸಿ ವಾಟಾಳ್ ಪ್ರತಿಭಟನೆ

ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ‘ಬಿಜೆಪಿ ಅಡಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಎಲ್ಲರೂ ಒಗ್ಗೂಡಿದಾಗ ಮೋದಿಯವರಿಗೆ ಏನೂ ಮಾಡಲು ಸಾಧ್ಯವಾಗುವುದಿಲ್ಲ. ನೀವು ನಮ್ಮನ್ನು ತುಳಿಯಲು ಎಷ್ಟು ಪ್ರಯತ್ನಿಸುತ್ತೀರೋ ಅಷ್ಟು ನಾವು ಮೇಲಕ್ಕೆ ಏರುತ್ತೇವೆ. ದೇಶ ಮತ್ತು ಪ್ರಜಾಪ್ರಭುತ್ವ ಉಳಿಸಲು ಒಗ್ಗಟ್ಟಿನಿಂದ ಹೋರಾಡುತ್ತಿದ್ದೇವೆ’ ಎಂದರು. 

ಎನ್‌ಸಿಪಿ ನಾಯಕ ಶರದ್‌ ಪವಾರ್‌ ಮಾತನಾಡಿ, ‘ಸರ್ಕಾರವು ಪ್ರತಿಪಕ್ಷಗಳ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದೆ. ಈ ಮೂಲಕ ತನ್ನ ವಿರುದ್ಧದ ಆರೋಪವನ್ನು ಮರೆಮಾಚಬಹುದು ಎಂದು ಬಿಜೆಪಿ ಭಾವಿಸಿದೆ. ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಲು ನಾವು ಯಾವುದೇ ಬೆಲೆ ತೆರಲು ಸಿದ್ಧರಿದ್ದೇವೆ. ಸಮವಿಧಾನದ ಮೇಲೆ ದಾಳಿ ಮಾಡುತ್ತಿರುವ ಈ ಶಕ್ತಿಯನ್ನು (ಬಿಜೆಪಿ) 2024ರಲ್ಲಿ ಸೋಲಿಸುತ್ತೇವೆ’ ಎಂದು ಗುಡುಗಿದರು. 

ಭಾರತೀಯ ಸಮಾಜದಲ್ಲಿ ಧಾರ್ಮಿಕ ತಾರತಮ್ಯವಿಲ್ಲ: ಪ್ರಧಾನಿ ಮೋದಿ

ಇದೇ ವೇಳೆ ಮಾತನಾಡಿದ ವಿವಿಧ ನಾಯಕರು ‘ಬಿಜೆಪಿ ಪ್ರಜಾಪ್ರಭುತ್ವದ ಕೊಲೆ ಮಾಡಲು ಪ್ರಯತ್ನಿಸುತ್ತಿದೆ. ಬಿಜೆಪಿಗೆ ಪ್ರಜಾಪ್ರಭುತ್ವ ಮುಕ್ತ ಭಾರತ ಬೇಕಾಗಿದೆ. ಆದರೆ ಭಾರತವನ್ನು ಬಿಜೆಪಿ ಮುಕ್ತಗೊಳಿಸಬೇಕು ಎಂದು ನಾವು ಜನರಲ್ಲಿ ವಿನಂತಿ ಮಾಡುತ್ತೇವೆ’ ಎಂದರು.

‘ಮೋದಿ ಅವರು ಸರ್ವಾಧಿಕಾರಿ. ಇದು ಕೇವಲ ಅಮಾನತುಗೊಂಡ ಸಂಸದರ ಹೋರಾಟವಲ್ಲ. ಪ್ರಧಾನಿ ವಿದೇಶಗಳಿಗೆ ಹೋದಾಗ ಅವರು ಪ್ರಜಾಪ್ರಭುತ್ವದ ತಾಯಿಯಿಂದ (ಭಾರತ) ಬಂದವರು ಎಂದು ಹೇಳುತ್ತಾರೆ. 146 ಸಂಸದರನ್ನು ಅಮಾನತು ಮಾಡಿರುವ ಅವರು ಈಗ ಅದನ್ನು ಹೇಗೆ ಹೇಳುತ್ತಾರೆ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಮುಸ್ಲಿಮರನ್ನು ಹತ್ತಿರ ಬರಬೇಡಿ ಎನ್ನುತ್ತಾರೆ: ಸಿದ್ದರಾಮಯ್ಯ ವ್ಯಂಗ್ಯ

‘ಬಿಜೆಪಿ ಸಂಸತ್ತಿಗೆ ಅವಮಾನ ಮಾಡಿದೆ. ಇದು 2ನೇ ಸ್ವಾತಂತ್ರ್ಯ ಸಂಗ್ರಾಮ. ಹಿಂದೆ ಗಾಂಧಿ, ನೆಹರು ಇದ್ದರು. ಇಂದು ನಮ್ಮಲ್ಲಿ ಅವರಿಲ್ಲ. ಆದ್ದರಿಂದ ಪ್ರತಿಯೊಬ್ಬ ನಾಗರಿಕರು ಒಗ್ಗೂಡಬೇಕಾಗಿದೆ’ ಎಂದರು. 

Follow Us:
Download App:
  • android
  • ios