ಬಿಜೆಪಿ ಸರ್ಕಾರ ಬಡವರ ಪರ ಯಾವ ಯೋಜನೆಯನ್ನೂ ಜಾರಿಗೆ ತಂದಿಲ್ಲ, ಅಗತ್ಯ ವಸ್ತುಗಳ ಬೆಲೆ ಏರಿಸಿ ಭ್ರಷ್ಟಾಚಾರದಲ್ಲಿ ತೊಡಗಿ ಲೂಟಿಯಲ್ಲಿ ತೊಡಗಿದ್ದೇ ಅವರ ದೊಡ್ಡ ಸಾಧನೆಯಾಗಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ್‌ ಹೇಳಿದರು.

ನಂಜನಗೂಡು (ನ.04): ಬಿಜೆಪಿ ಸರ್ಕಾರ ಬಡವರ ಪರ ಯಾವ ಯೋಜನೆಯನ್ನೂ ಜಾರಿಗೆ ತಂದಿಲ್ಲ, ಅಗತ್ಯ ವಸ್ತುಗಳ ಬೆಲೆ ಏರಿಸಿ ಭ್ರಷ್ಟಾಚಾರದಲ್ಲಿ ತೊಡಗಿ ಲೂಟಿಯಲ್ಲಿ ತೊಡಗಿದ್ದೇ ಅವರ ದೊಡ್ಡ ಸಾಧನೆಯಾಗಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ್‌ ಹೇಳಿದರು.

ತಾಲೂಕಿನ ದೇವನೂರು, ದೊಡ್ಡಕವಲಂದೆ, ಕೂಡ್ಲಾಪುರ, ನೇರಳೆ, ಗ್ರಾಪಂ ವ್ಯಾಪ್ತಿಯಲ್ಲಿ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆ ನಡೆಸುವ ವೇಳೆ ಗಟ್ಟ ವಾಡಿಪುರ ಗ್ರಾಮದಲ್ಲಿ ಮಾತನಾಡಿದರು.

ದೊಡ್ಡ ಕವಲಂದೆ ಭಾಗದಲ್ಲಿ ಬರಗಾಲ ಹೆಚ್ಚಾಗಿ ಕುಡಿಯುವ ನೀರಿನ (Drinking water ) ಸಮಸ್ಯೆ ಭೀಕರವಾಗಿತ್ತು. ಸಮಸ್ಯೆ ಪರಿಹರಿಸುವ ಸಲುವಾಗಿ ಇಡೀ ರಾಜ್ಯದಲ್ಲಿ (Karnataka) ಮೊಟ್ಟಮೊದಲ ಬಾರಿಗೆ ಕವಲಂದೆ ಭಾಗದ 56 ಹಳ್ಳಿಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ನದಿ ಮೂಲದಿಂದ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಕೆಲಸವನ್ನು ಮಾಡಿದೆ. ನಂತರ ನಮ್ಮ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಈ ಭಾಗದ ಎಲ್ಲಾ ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದ್ದರಿಂದಾಗಿ ಅಂತರ್ಜಲ ಹೆಚ್ಚಾಗಿ ಕೃಷಿಗೂ ನೀರು ದೊರಕುವಂತಾಗಿದೆ ಎಂದರು.

ಸಿದ್ದರಾಮಯ್ಯ ಅವಧಿಯಲ್ಲಿ 150 ಭರವಸೆಗಳಲ್ಲಿ 150 ಭರವಸೆಗಳನ್ನು ಈಡೇರಿಸಲಾಗಿದೆ. ಅಲ್ಲದೆ ಅನ್ನಭಾಗ್ಯ ಯೋಜನೆಯಿಂದ ಕೊರೋನಾ ಕಾಲದಲ್ಲೂ ಬಡವರು ಬದುಕುವಂತಾಯಿತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದು 3 ವರ್ಷ ಕಳೆದರೂ ಸಹ ಬಡವರ ಪರವಾಗಿ ಯಾವ ಯೋಜನೆಯನ್ನೂ ಜಾರಿಗೆ ತಂದಿಲ್ಲ. ಅಭಿವೃದ್ದಿ ಕೆಲಸಗಳನ್ನು ಮಾಡದೆ ಇರುವುದರಿಂದ ಅಭಿವೃದ್ದಿ ವಿಷಯ ಮಾತನಾಡದೆ ಧರ್ಮ, ಜಾತಿಗಳನ್ನು ಆಧಾರವಾಗಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಅಲ್ಲದೆ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಕಣ್ಣೀರು ಬರಿಸಿದ ಬಿಜೆಪಿಗರು ಈಗ ಅವರದೇ ನಾಯಕತ್ವವೆಂದು ನಾಟವಾಡುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್‌ ಪಕ್ಷವನ್ನು ಅತಿ ಹೆಚ್ಚಾಗಿ ಬೆಂಬಲಿಸುವ ಮೂಲಕ ಅವಕಾಶವಾದಿ ಬಿಜೆಪಿ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ಅವರು ಕರೆ ನೀಡಿದರು.

ಈ ವೇಳೆ ಹರಗಿನಪುರದ ಗ್ರಾಪಂ ಸದಸ್ಯ ಸಿದ್ದಲಿಂಗಪ್ಪ, ನಾಗೇಶ್‌, ಬಸವಣ್ಣ, ಬಸವರಾಜು, ಜಗದೀಶ, ದೊರೆಸ್ವಾಮಿ, ಮಹೇಶ್‌, ರವಿ, ಗಟ್ಟವಾಡಿಪುರದ ವೀರಶೈವ ಮುಖಂಡರಾದ ಗೌಡಿಕೆ ಮಹದೇವಪ್ಪ, ಸದಾಶಿವಪ್ಪ, ಸೋಮಶೇಖರಪ್ಪ, ರಾಜಶೇಖರಪ್ಪ, ಕೆ.ಪಿ. ಶಿವಪ್ಪ, ಕೂಸಪ್ಪ, ಬಸವಣ್ಣ, ರಂಗಸ್ವಾಮಿ, ಮಂಜುನಾಥ್‌, ಪ್ರಸಾದ್‌, ನಾರಾಯಣ ನಾಯಕ, ನಾಗರಾಜಶೆಟ್ಟಿ, ಮುದ್ದಶೆಟ್ಟಿ, ಮಾದಣ್ಣ, ಸೇರಿದಂತೆ 30 ಜನ ಕಾರ್ಯಕರ್ತರು ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಸಮಾರಂಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕುರಹಟ್ಟಿಮಹೇಶ್‌, ಜಿಪಂ ಮಾಜಿ ಸದಸ್ಯರಾದ ಕೆ. ಮಾರುತಿ, ಲತಾಸಿದ್ದಶೆಟ್ಟಿ, ಮುಖಂಡರಾದ ಶಿವಪ್ಪದೇವರು, ಕುಳ್ಳಯ್ಯ, ರಾಜೇಶ್‌, ಉಪ್ಪಿನಹಳ್ಳಿ ಶಿವಣ್ಣ, ಗ್ರಾಪಂ ಅಧ್ಯಕ್ಷ ಶಂಕರ್‌ ನಾಯಕ, ಸದಸ್ಯರಾದ ಗುರುಪಾದ, ಶಂಕರ್‌, ಬಸವಣ್ಣ, ತಾಪಂ ಮಾಜಿ ಅಧ್ಯಕ್ಷ ಬಿ.ಎಂ. ನಾಗೇಶ್‌ರಾಜ್‌, ಮಾಜಿ ಸದಸ್ಯ ಪದ್ಮನಾಭ ಮೊದಲಾದವರು ಇದ್ದರು.

BJP ಸರ್ಕಾರದ ಸಾಧನೆ

ಹೊಸಕೋಟೆ (ನ.03): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಮಾಡಿರುವುದು ಬಿಜೆಪಿ ಸರ್ಕಾರದ ಐತಿಹಾಸಿಕ ಸಾಧನೆ ಎಂದು ಮಾಜಿ ಸಚಿವ ಹಾಗೂ ಸುರಪುರ ಶಾಸಕ ರಾಜುಗೌಡ ತಿಳಿಸಿದರು. ಪರಿಶಿಷ್ಟ ಸಮುದಾಯದ ಸಮಾವೇಶದ ಪ್ರಯುಕ್ತ ಶ್ರೀನಿವಾಸಪುರದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಗೆ ತೆರಳುವ ವೇಳೆ ವಾಲ್ಮೀಕಿ ಸಮುದಾಯ ಹಾಗೂ ಬಿಜೆಪಿ ಕಾರ್ಯಕರ್ತರಿಂದ ಗೌರವ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟಪಂಗಡಕ್ಕೆ ಶೇ.3ರಿಂದ 7, ಪರಿಶಿಷ್ಟ ಜಾತಿಗೆ ಶೇ.15ರಿಂದ 17ಕ್ಕೆ ಹೆಚ್ಚಳ ಮಾಡಿರುವ ಕಾರ್ಯ ಈ ಹಿಂದೆ ಯಾವುದೇ ಸರ್ಕಾರ ಮಾಡಿಲ್ಲ. 

ನಮ್ಮ ಸರ್ಕಾರ ಮಾಡಿರುವ ಐತಿಹಾಸಿಕ ನಿರ್ಧಾರವಾಗಿದೆ. ಅಷ್ಟೆಅಲ್ಲದೆ ಮೀಸಲಾತಿ ಹೆಚ್ಚಳದ ಹೋರಾಟ ನಾಲ್ಕು ದಶಕದ ಹೋರಾಟವಾಗಿರುವ ಕಾರಣ ಬಿಜೆಪಿ ಸರ್ಕಾರ ದಿಟ್ಟನಿರ್ಧಾರ ಮಾಡಿದೆ. ಇದರಿಂದ ಸಮುದಾಯದ ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ಉದ್ಯೋಗ ಪಡೆದುಕೊಳ್ಳಲು ಸಾಕಷ್ಟುಅನುಕೂಲವಾಗಲಿದೆ. ಸಾಮಾಜಿಕವಾಗಿ ರಾಜಕೀಯವಾಗಿ ಹೆಚ್ಚಿನ ಸ್ಥಾನಮಾನ ದಕ್ಕುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಸಮುದಾಯಕ್ಕೆ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ಮಾಡುತ್ತೇವೆ ಎಂದರು.

ಇತರ ರಾಜ್ಯಗಳಿಂದ ಭಿನ್ನ, ವಿಶ್ವದಲ್ಲೇ ಪ್ರಥಮ,ಕರ್ನಾಟಕದ ಬಗ್ಗೆ ನಿಮಗೆಷ್ಟು ಗೊತ್ತು?

ಬಿಜೆಪಿ ಎಸ್ಟಿ ಮೋರ್ಚಾ ಟೌನ್‌ ಅಧ್ಯಕ್ಷ ವಾಲೆ ಶ್ರೀನಿವಾಸ್‌ ಮಾತನಾಡಿ, ಬಿಜೆಪಿ ಸರ್ಕಾರ ನಮ್ಮ ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ಮಾಡಿರುವ ಮೀಸಲಾತಿ ಹೆಚ್ಚಳ ಕೇವಲ ಒಬ್ಬ ವ್ಯಕ್ತಿ, ಒಂದು ಪಕ್ಷಕ್ಕೆ ದಕ್ಕುವ ಸಮುದಾಯವಲ್ಲ. ಎಲ್ಲಾ ಪಕ್ಷದ ನಮ್ಮ ಸಮುದಾಯದ ವ್ಯಕ್ತಿಗಳಿಗೂ ಸಲ್ಲುತ್ತದೆ. ಆದ್ದರಿಂದ ನಮ್ಮ ಸಮುದಾಯದ ಅಭಿವೃದ್ಧಿಗೆ ನಿಲ್ಲುವಂತಹ ಪಕ್ಷವನ್ನು ಬೆಂಬಲಿಸುವ ಕೆಲಸ ಆಗಬೇಕು. ಬಿಜೆಪಿ ಸರ್ಕಾರ ಆ ಕೆಲಸ ಮಾಡಿದೆ. ಸರ್ಕಾರದ ಸಾಧನೆಯನ್ನು ಮನೆಮನೆಗೂ ತಲುಪಿಸುವ ಕೆಲಸ ಮಾಡುತ್ತೇವೆ ಎಂದರು. ಟೌನ್‌ ಬಿಜೆಪಿ ಅಧ್ಯಕ್ಷ ಡಾ.ಸಿ.ಜಯರಾಜ್‌, ಬಿಜೆಪಿ ಮುಖಂಡ ಹೂಡಿ ವಿಜಿ, ವಾಲ್ಮೀಕಿ ಸಮುದಾಯದ ತಾಲೂಕು ಅಧ್ಯಕ್ಷ ತವಟಹಳ್ಳಿ ಮುನಿಯಪ್ಪ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.