Asianet Suvarna News Asianet Suvarna News

ಇತರ ರಾಜ್ಯಗಳಿಂದ ಭಿನ್ನ, ವಿಶ್ವದಲ್ಲೇ ಪ್ರಥಮ,ಕರ್ನಾಟಕದ ಬಗ್ಗೆ ನಿಮಗೆಷ್ಟು ಗೊತ್ತು?

ಕರ್ನಾಟಕದ ಪ್ರಸಿದ್ಧ ತಾಣಗಳು, ಇಲ್ಲಿನ ವಿಶೇಷತೆಗಳು, ಐಟಿ ಸಿಟಿ, ಉದ್ಯಮ ಸೇರಿದಂತೆ ಕೆಲ ಪ್ರಮುಖ ವಿಚಾರಗಳು ಎಲ್ಲರಿಗೂ ತಿಳಿದಿದೆ. ಆದರೆ ಕರ್ನಾಟಕದ ಕುರಿತು ಹಲವು ವಿಚಾರಗಳು ಹೊರಜಗತ್ತಿಗೆ ಹೆಚ್ಚಾಗಿ ತಿಳಿದಿಲ್ಲ. ಹೀಗೆ ಹೆಚ್ಚಾಗಿ ತಿಳಿದಿಲ್ಲ, ರೋಚಕ ಹಾಗೂ ಕುತೂಹಲ ಸಂಗತಿ ಇಲ್ಲಿವೆ.
 

Kannada rajyotsava special Interesting and Lesser Know Facts About Karnataka That You Never Heard Before ckm
Author
First Published Oct 27, 2022, 5:18 PM IST

ಬೆಂಗಳೂರು(ಅ.27)ಭಾರತದ ಸುಂದರ ಹಾಗೂ ಸಂಪನ್ಮೂಲ ರಾಜ್ಯಗಳ ಪೈಕಿ ಕರ್ನಾಟಕವೂ ಒಂದು. ಸದ್ಯ ಕರ್ನಾಟಕ ಐಟಿ ಬಿಟಿ ನಗರವಾಗಿ, ತಂತ್ರಜ್ಞಾನಗಳ ಸ್ವರ್ಗವಾಗಿ ಬೆಳೆದು ನಿಂತಿದೆ. ದೇಶ ವಿದೇಶದ ಅತೀ ಹೆಚ್ಚಿನ ಮಂದಿ ಇಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಮಾನವ ಸಂಪನ್ಮೂಲ, ನೈಸರ್ಗಿಕ ಸಂಪನ್ಮೂಲ ಸೇರಿದಂತೆ ಅತ್ಯಂತ ಸಂಪತ್ಬರಿತ ರಾಜ್ಯ ಕರ್ನಾಟಕ.  ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ಬಂದ ಬಳಿಕ ಮೈಸೂರು ಎಂದೇ ಪ್ರಸಿದ್ಧವಾಗಿದ್ದ ಕರ್ನಾಟಕ 1956, ನವೆಂಬರ್ 1 ರಂದು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ನವೆಂಬರ್ 1 ರಂದು ಕನ್ನಡರಾಜ್ಯೋತ್ಸವ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಕರ್ನಾಟಕದ ಕುರಿತು ಹೆಚ್ಚಾಗಿ ತಿಳಿದಿಲ್ಲದ ಸಂಗತಿಗಳ ವಿವರ ಇಲ್ಲಿವೆ.

ಧ್ವಜ ತಯಾರಿಸಲು, ಪೂರೈಸಲು ಅನುಮತಿ ಹೊಂದಿದ ರಾಜ್ಯ
ರಾಷ್ಟ್ರ ಧ್ವಜ ತಯಾರಿಸಲು ಹಾಗೂ ಪೂರೈಸಲು ಅನುಮತಿ ಹೊಂದಿದೆ ಭಾರತದ ಏಕೈಕ ಸಂಸ್ಥೆ ಗ್ರಾಮೋದ್ಯಗ ಸಂಯುಕ್ತ ಸಂಘ ಹುಬ್ಬಳ್ಳಿಯಲ್ಲಿದೆ. ಅಧಿಕೃತವಾಗಿ ಈ ಸಂಸ್ಥೆಗೆ ಮಾತ್ರ ಧ್ವಜ ತಯಾರಿಸಲು ಹಾಗೂ ಪೂರೈಕೆ ಮಾಡಲು ಅನುಮತಿ ಇದೆ. ಇನ್ನುಳಿದ ಯಾವುದೇ ರಾಜ್ಯಗಳಿಗೆ ಈ ಅನುಮತಿ ಇಲ್ಲ.

ಕರ್ನಾಟಕದಲ್ಲಿ ಚಳಿಯೋ ಚಳಿ, ಬೆಂಗ್ಳೂರಲ್ಲಿ ದಾಖಲೆ..!

ಒಂದೇ ಜಿಲ್ಲೆಯಲ್ಲಿ ಹರಿಯುತ್ತಿದೆ 5 ನದಿಗಳು 
ಒಂದೇ ಜಿಲ್ಲೆಯಲ್ಲಿ ಪ್ರಮುಖ 5 ನದಿಗಳು ಹರಿಯುತ್ತಿರುವ ರಾಜ್ಯ ಪಂಜಾಬ್ ಮಾತ್ರವಲ್ಲ. ಕರ್ನಾಟಕ ಕೂಡ ಹೌದು. ಬಿಜಾಪುರ ಜಿಲ್ಲೆಯಲ್ಲಿ ಕೃಷ್ಣ, ದೋಣಿ, ಭೀಮಾ, ಘಟಪ್ರಬಾ ಹಾಗೂ ಮಲಪ್ರಭಾ ನದಿಗಳು ಹರಿಯುತ್ತಿದೆ.  ಬಿಜಾಪುರ ಜಿಲ್ಲೆಗೆ ಐದು ನದಿಗಳ ತವರು ಎಂದು ಕರೆಯಲಾಗುತ್ತದೆ. ಬಿಜಾಪುರ ಗೋಲ್ ಗುಂಬಝ್ ಜಿಲ್ಲೆ ಎಂದು ಕರೆಯಲಾಗುತ್ತದೆ. ಇದು ಭಾರತದ ಅತೀ ದೊಡ್ಡ ಗೋಳ ಗುಮ್ಮಟವಾಗಿದೆ. ಇಷ್ಟೇ ಅಲ್ಲ ವಿಶ್ವದ ಎರಡನೇ ಗೋಳ ಗುಮ್ಮಟ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡುವ 2ನೇ ಸ್ಥಳ ಮೈಸೂರು ಅರಮನೆ
ಭಾರತದಲ್ಲಿ ಅತೀ ಹೆಚ್ಚು ಪ್ರವಾಸಿಗು ಭೇಟಿ ನೀಡುವ ಹಲವು ಪ್ರವಾಸಿ ತಾಣಗಳಿವೆ. ಇದರಲ್ಲಿ ಮೈಸೂರು ಅರಮನೆ ಎರಡನೆ ಸ್ಥಾನ ಪಡೆದಿದೆ. ಮೊದಲ ಸ್ಥಾನದಲ್ಲಿ ತಾಜ್ ಮಹಲ್ ಅಲಂಕರಿಸಿದೆ. ವಿಶ್ವವಿಖ್ಯಾತ ಮೈಸೂರು ಅರಮನೆಗೆ ಪ್ರತಿ ದಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಮೈಸೂರ ಕರ್ನಾಟಕದ ಸಾಂಸ್ಕೃತಿಕ ನಗರಿ ಎಂದು ಪ್ರಖ್ಯಾತಿ ಹೊಂದಿದೆ.  

ಚಾರಣ ಪ್ರಿಯರಿಗೆ ಯೋಗ್ಯ ಸ್ಥಳ ಇತಿಹಾಸ ಪ್ರಸಿದ್ಧ ಭೀಮನ ಬುಗರಿ

ಅತೀ ಹೆಚ್ಚು ಕಾಫಿ ರಫ್ತು ಮಾಡುವ ರಾಜ್ಯ
ಭಾರತದಲ್ಲಿ ಅತೀ ಹೆಚ್ಚು ಕಾಫಿ ಉತ್ಪಾದಿಸುವ ಹಾಗೂ ರಫ್ತು ಮಾಡುವ ರಾಜ್ಯ ಕರ್ನಾಟಕ. ಭಾರತದಲ್ಲಿ ಕಾಫಿ ಬೆಳೆಯನ್ನು ಮೊದಲ ಬಾರಿಗೆ ಬೆಳೆದಿದ್ದು ಚಿಕ್ಕಮಗಳೂರಿನಲ್ಲಿ. ಸದ್ಯ ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಾಫಿ ಬೆಳೆ ಬೆಳೆಯಲಾಗುತ್ತಿದೆ.

ಅತೀ ಹೆಚ್ಚು ಭಾಷೆ ಮಾತನಾಡುವ ರಾಜ್ಯ
ಎಲ್ಲಾ ರಾಜ್ಯಗಳಲ್ಲಿ ಆಯಾ ರಾಜ್ಯದ ಅಧಿಕೃತ ಭಾಷೆ ಜೊತೆಗೆ ಇತರ ರಾಜ್ಯದವರು ಮಾತನಾಡುವ ಭಾಷೆಗಳಿರುತ್ತದೆ. ಆದರೆ ಕರ್ನಾಟಕದಲ್ಲಿ ಕನ್ನಡ ಹಾಗೂ ಕನ್ನಡ ಉಪಭಾಷೆ ಸೇರಿ ಒಟ್ಟು 13 ಭಾಷೆಗಳಿವೆ. ತುಳು, ಕೊಡವ, ಕೊಂಕಣಿ, ಬ್ಯಾರಿ ಸೇರಿದಂತೆ 13 ಉಪಭಾಷೆಗಳು ಕರ್ನಾಟಕದಲ್ಲಿದೆ.  ಇಷ್ಟೇ ಅಲ್ಲ ಕರ್ನಾಟಕದಲ್ಲಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ತೆರಳಿದರೆ ಮತ್ತೊಂದು ರಾಜ್ಯಕ್ಕೆ ತೆರಳಿದ ಅನುಭವವಾಗಲಿದೆ. ಇದೇ ಕಾರಣಕ್ಕೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಒಂದು ರಾಜ್ಯ ಹಲವು ಜಗತ್ತು ಅನ್ನೋ ಟ್ಯಾಗ್ ಲೈನ್ ನೀಡಿದೆ.

ಭಾರತದ ಮೊದಲ ಖಾಸಗಿ ರೇಡಿಯೋ
ಭಾರತದ ಮೊದಲ ಖಾಸಗಿ ರೇಡಿಯೋ ಹೊಂದಿದ ರಾಜ್ಯ ಕರ್ನಾಟಕವಾಗಿದೆ. 1935ರಲ್ಲಿ ಪ್ರೋಫೆಸರ್ ಎಂವಿ ಗೋಪಾಲಸ್ವಾಮಿ ಖಾಸಗಿ ರೇಡಿಯೋ ಆರಂಭಿಸಿದ್ದರು. 

ಮಣಿರತ್ನಂ ಮೊದಲ ಸಿನೆಮಾ
ಮಣಿರತ್ನಂ ಭಾರತದ ಅತ್ಯಂತ ಖ್ಯಾತ ಸಿನಿಮಾ ನಿರ್ದೇಶಕರಾಗಿದ್ದಾರೆ. ರೋಜಾ, ದಿಲ್ ಸೆ, ಬಾಂಬೆ, ಸೇರಿದಂತೆ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನಿರ್ದೇಸಿದ್ದಾರೆ. ಮಣಿರತ್ನಂ ನಿರ್ದೇಶಿಸಿದ ಮೊದಲ ಚಿತ್ರ ಕನ್ನಡದಲ್ಲಿ. ಪಲ್ಲವಿ ಅನು ಪಲ್ಲವಿ ಅನ್ನೋ ಚಿತ್ರವನ್ನು ಮಣಿರತ್ನಂ ನಿರ್ದೇಶನ ಮಾಡುವ ಮೂಲಕ ಸಿನಿ ಜಗತ್ತಿಗೆ ಕರ್ನಾಟಕದಿಂದ ಕಾಲಿಟ್ಟರು. ಬಾಲಿವುಡ್ ನಟ ಅನಿಲ್ ಕಪೂರ್ ನಾಯಕ ನಟನಾಗಿ ಕಾಣಿಸಿಕೊಂಡ ಅವರ ಮೊದಲ ಚಿತ್ರ ಇದಾಗಿದೆ. 

ದೇಶದಲ್ಲಿ ಅತೀ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಕರ್ನಾಟಕವಾಗಿದೆ.  ಜೋಗಫಾಲ್ಸ್ ಭಾರತದ ಎರಡನೇ ಅತೀ ದೊಡ್ಡ ಜಲಪಾತವಾಗಿದ. 830 ಅಡಿ ಎತ್ತರದಿಂದ ನೀರು ಧುಮ್ಮಿಕ್ಕುವ ಜಲಪಾತ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. 
 

Follow Us:
Download App:
  • android
  • ios