Asianet Suvarna News Asianet Suvarna News

Bitcoin ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ : ಪ್ರತಾಪ್ ಸಿಂಹ

  •  ಕಳೆದೊಂದು ವಾರದಿಂದ ಬಿಟ್ ಕಾಯಿನ್ ಬಗ್ಗೆ ಮಾಧ್ಯಮಗಳಲ್ಲಿ  ವ್ಯಾಪಕ ಚರ್ಚೆ ನಡೆಯುತ್ತಿದೆ.
  • ಇದರಿಂದ ಜನರಿಗೂ ಗೊಂದಲ ಉಂಟಾಗಿದೆ ಎಂದ ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸಂಸದ ಪ್ರತಾಪ್ ಸಿಂಹ  ಹೇಳಿಕೆ
  • ಈ ವಿಚಾರದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ
Bitcoin Scam  MP Prathap simha reacts on Congress Leaders allegation  snr
Author
Bengaluru, First Published Nov 14, 2021, 2:02 PM IST

 ಮೈಸೂರು (ನ.14):   ಕಳೆದೊಂದು ವಾರದಿಂದ ಬಿಟ್ ಕಾಯಿನ್ (Bitcoin) ಬಗ್ಗೆ ಮಾಧ್ಯಮಗಳಲ್ಲಿ  ವ್ಯಾಪಕ ಚರ್ಚೆ ನಡೆಯುತ್ತಿದೆ. ಇದರಿಂದ ಜನರಿಗೂ ಗೊಂದಲ ಉಂಟಾಗಿದೆ ಎಂದು ಮೈಸೂರಿನ (Mysuru) ಬಿಜೆಪಿ (BJP) ಕಚೇರಿಯಲ್ಲಿ ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದರು. 

"

ಮೈಸೂರಿನಲ್ಲಿ  ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರತಾಪ್ ಸಿಂಹ  ಈ ಬಗ್ಗೆ ಜನರು ನಮ್ಮನ್ನು ಕೇಳುತ್ತಿದ್ದಾರೆ. ಈ ವಿಚಾರದಲ್ಲಿ ಪ್ರತಿಪಕ್ಷ ಕಾಂಗ್ರೆಸ್ (Congress) ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು ಬಿಜೆಪಿ ವಿರುದ್ಧ ಬಿಟ್ ಕಾಯಿನ್ ವಿಚಾರವಾಗಿ ಅಪಪ್ರಚಾರದಲ್ಲಿ  ತೊಡಗುತ್ತಿದ್ದಾರೆ ಎಂದರು.

"

ರಾಜ್ಯ ಕಾಂಗ್ರೆಸ್  ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ (Randeep Singh Surjewala) ದೆಹಲಿಯಲ್ಲಿ (Delhi) ಕುಳಿತು ಸುದ್ದಿಗೋಷ್ಟಿ ‌ನಡೆಸುವ ಅಗತ್ಯವೇನಿತ್ತು‌. ಅವರು ಊಹಾಪೋಹಗಳನ್ನು ಹರಿಯ ಬಿಡುತ್ತಿದ್ದಾರೆ‌.  ರಾಜ್ಯದಲ್ಲಿ ಸಿದ್ದರಾಮಯ್ಯ (Siddaramaiah) ಮತ್ತು ಡಿ ಕೆ ಶಿವಕುಮಾರ್ (DK shivakumar) ನಡುವಿನ ಒಳ ಜಗಳ ಬಗೆಹರಿಸಲಾಗದೇ ಕಂಗಾಲಾಗಿದ್ದಾರೆ. ಹಾಗಾಗಿ ಇಲ್ಲಿಗೆ ಬರಲಾಗದೇ ದೆಹಲಿಯಲ್ಲಿ ಕುಳಿತು ಸುದ್ದಿಗೋಷ್ಟಿ ಮಾಡಿದ್ದಾರೆ. ಟ್ವೀಟ್ (tweet), ಸುದ್ದಿಗೋಷ್ಟಿ ಮೂಲಕ ಗಾಳಿ ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂದರು.

"

ಬಿಟ್ ಕಾಯಿನ್ ವಿಚಾರವಾಗಿ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಅವರ ಬಳಿ ದಾಖಲೆಗಳಿದ್ದರೆ ರಾಜ್ಯಕ್ಕೆ ಬಂದು ಬಹಿರಂಗ ಪಡಿಸಲಿ ಎಂದು  ಸಂಸದ ಪ್ರತಾಪ್ ಸಿಂಹ ಹೇಳಿದರು. 

ಕಾಂಗ್ರೆಸ್ ನವರು ಸುದ್ದಿಗೋಷ್ಠಿ ನೆಪದಲ್ಲಿ ಗುಸು ಗುಸು ಸುದ್ದಿ ಹರಡುತ್ತಿದ್ದಾರೆ. ಶ್ರೀಕಿಯನ್ನು ಬಂಧಿಸಿದ್ದು ಯಾರು? ಸರ್ಕಾರ ಶ್ರೀಕಿಯನ್ನು ಬಂಧಿಸಿದೆ. ಯಾರ ಖಾತೆ ಹ್ಯಾಕ್ ಆಗಿದೆ ಎಂಬುದನ್ನು ಕಾಂಗ್ರೆಸ್ ನವರು ಬಹಿರಂಗಪಡಿಸಬೇಕು. ಕಾಂಗ್ರೆಸ್ ನವರು ಜನಧನ್ ಖಾತೆ (jandhan account) ಹ್ಯಾಕ್ ಆಗಿವೆ ಎಂದು ಆರೋಪ ಮಾಡುತ್ತಿದ್ದಾರೆ. ಹಾಗಾದರೆ ಯಾರ ಖಾತೆ ಹ್ಯಾಕ್ ಮಾಡಲಾಗಿದೆ ಎಂದು ಬಹಿರಂಗ ಮಾಡಿ ಎಂದು
ಕಾಂಗ್ರೆಸ್ಸಿಗರಿಗೆ ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದರು .

 ಮುಂದಿನ ಚುನಾವಣೆ ಸಿದ್ದರಾಮಯ್ಯ ನೇತೃದಲ್ಲೋ ಅಥವಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ DK.ಶಿವಕುಮಾರ್ (DK Shivakumar) ನೇತೃದಲ್ಲೋ. ಕಾಂಗ್ರೆಸ್ ಪಕ್ಷ ಏನೆಲ್ಲಾ ಅಪಪ್ರಚಾರ ಮಾಡಿದರೂ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. 2023ರ ಚುನಾವಣೆಯನ್ನು ನಾವು ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲೇ ಎದುರಿಸುತ್ತೇವೆ. ಈ ಮಾತನ್ನು ಕೇಂದ್ರ ಸಚಿವ ಅಮಿತ್ ಶಾ ಅವರು ಸಹ ಹೇಳಿದ್ದಾರೆ.  ನೀವು ಯಾರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೀರಾ ಹೇಳಿ ಕಾಂಗ್ರೆಸ್ಸಿಗರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಎದುರಿಸುತ್ತೀ ಎಂದು ಸ್ಪಷ್ಟಪಡಿಸಬೇಕು ಎಂದು  ಕಾಂಗ್ರೆಸ್  ನಾಯಕರಿಗೆ ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದರು. 

ಪ್ರಿಯಾಂಕಾ ಖರ್ಗೆ  ವಿರುದ್ಧ ವಾಗ್ದಾಳಿ :  ಪ್ರಿಯಾಂಕಾ ಖರ್ಗೆ (Priyank Kharge) ಹೆಸರು ಗಂಡೊ ‌ಹೆಣ್ಣೋ ಗೊತ್ತೇ ಆಗಲ್ಲ ಎಂದು ಪೇಪರ್ ಸಿಂಹ ಹೇಳಿಕೆಗೆ ಉತ್ತರ ಕೊಡಲ್ಲ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದರು.  ನಾನು ಪತ್ರಿಕೋದ್ಯಮದಿಂದ ಬಂದವನು, ನನ್ನನ್ನು ಪೇಪರ್ ಸಿಂಹ ಎಂದರೆ ಬೇಜಾರಿಲ್ಲ. ಆದರೆ ಪ್ರಿಯಾಕ ಖರ್ಗೆ ರಾಜೀವ್ ಗಾಂಧಿ ಹೆಣ್ಣು ಮಗಳ ಹೆಸರಿಟ್ಟುಕೊಂಡಿದ್ದಾರೆ. ಆದರೆ ಪ್ರಿಯಾಂಕ ಖರ್ಗೆಗೆ ಅವರ ಹೆಸರಿನಲ್ಲೇ ಸ್ವಂತಿಕೆ ಇಲ್ಲ. ಸ್ವಂತಿಕೆ ಇಲ್ಲದ ಮರಿ ಖರ್ಗೆ ಗೆಲುವಿಗಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಸೋಲಿಲ್ಲದ ಸರದಾರ ಎಂಬ ಪಟ್ಟ ಕಳೆದುಕೊಂಡರು ಎಂದರು.

  • ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸಂಸದ ಪ್ರತಾಪ್ ಸಿಂಹ ಸುದ್ದಿಗೋಷ್ಟಿ.
  • ಕಳೆದೊಂದು ವಾರದಿಂದ ಬಿಟ್ ಕಾಯಿನ್ ಬಗ್ಗೆ ಮಾಧ್ಯಮಗಳಲ್ಲಿ  ವ್ಯಾಪಕ ಚರ್ಚೆ ನಡೆಯುತ್ತಿದೆ.
  • ಇದರಿಂದ ಜನರಿಗೂ ಗೊಂದಲ ಉಂಟಾಗಿದೆ - ಈ ಬಗ್ಗೆ ಜನರು ನಮ್ಮನ್ನು ಕೇಳುತ್ತಿದ್ದಾರೆ.
  • ಈ ವಿಚಾರದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ.
  • ಕಾಂಗ್ರೆಸ್ ನವರು ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪ
Follow Us:
Download App:
  • android
  • ios