*   ಮದ್ಯ ಸೇವಿಸಿ ಬೈಕ್‌ ಚಲಾಯಿಸುತ್ತಿದ್ದ ವಿದ್ಯಾರ್ಥಿ*   ನಾಗರಭಾವಿ ಬಳಿ ಘಟನೆ*   ಈ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು  

ಬೆಂಗಳೂರು(ಮಾ.01): ವೇಗವಾಗಿ ಚಲಿಸುತ್ತಿದ್ದ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿಯಾಗಿ ಸವಾರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವ(Death) ಘಟನೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಜಯನಗರದ ಮೂಡಲಪಾಳ್ಯದ ನಿವಾಸಿ ಯತೀಶ್‌ ಕುಮಾರ್‌(23) ಮೃತ ಸವಾರ. ಹಿಂಬದಿ ಸವಾರ ಹರ್ಷಿತ್‌ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಗರದ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಇ ಪದವಿ ವ್ಯಾಸಂಗ ಮಾಡುತ್ತಿದ್ದ ಯತೀಶ್‌ಕುಮಾರ್‌ ಹಾಗೂ ಹರ್ಷಿತ್‌ ಭಾನುವಾರ ರಾತ್ರಿ ಕಲ್ಯಾಣ ನಗರದಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ರಾತ್ರಿ 10.15ರ ಸುಮಾರಿಗೆ ಮೂಡಲಪಾಳ್ಯದ ಮನೆಗೆ ವಾಪಸಾಗುವಾಗ ಮಾರ್ಗ ಮಧ್ಯೆ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.

Nice Road Accident: ಅಪಘಾತದಲ್ಲಿ ಇಬ್ಬರ ಸಾವು ಕಾರು ಚಾಲಕನಿಗೆ ಜೈಲು ಶಿಕ್ಷೆ

ನಾಗರಬಾವಿಯ ನಮ್ಮೂರ ತಿಂಡಿ ಹೋಟೆಲ್‌ ಸಮೀಪದ ಸರ್ವೀಸ್‌ ರಸ್ತೆಯಲ್ಲಿ ಬರುವಾಗ ಯತೀಶ್‌ ಕುಮಾರ್‌ ಏಕಾಏಕಿ ದ್ವಿಚಕ್ರ ವಾಹನದ ಬ್ರೇಕ್‌ ಹಾಕಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿದ ದ್ವಿಚಕ್ರ(Bike)ವಾಹನ ತಡೆಗೋಡೆಗೆ ಅಪ್ಪಳಿಸಿ ರಸ್ತೆಗೆ ಬಿದ್ದಿದೆ. ಈ ವೇಳೆ ಯತೀಶ್‌ ಕುಮಾರ್‌ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಮದ್ಯ ಸೇವಿಸಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ. ಅಂತೆಯೆ ಇಬ್ಬರೂ ಹೆಲ್ಮೆಟ್‌ ಹಾಕಿರಲಿಲ್ಲ. ಹೆಲ್ಮೆಟ್‌(Helmet) ಧರಿಸಿದ್ದರೆ ಯತೀಶ್‌ ಕುಮಾರ್‌ ಬದುಕುಳಿಯುವ ಸಾಧ್ಯತೆಯಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿವೈಡರ್‌ಗೆ ಗುದ್ದಿ ಉರುಳಿ ಬಿದ್ದ ಟಾಟಾ ಏಸ್‌: ಚಾಲಕ ಸಾವು

ಟಾಟಾ ಏಸ್‌ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ(Collision) ಉರುಳಿಬಿದ್ದಿದ್ದರಿಂದ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಎಲೆಕ್ಟ್ರಾನಿಕ್‌ ಸಿಟಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಾಗನಾಥಪುರದ ನವಾಸಿ ಮಾರಪ್ಪ(28) ಮೃತ ಚಾಲಕ. ಸೋಮವಾರ ಮುಂಜಾನೆ 2.15ರ ಸುಮಾರಗೆ ಹೊಸೂರು ರಸ್ತೆಯ ವೀರಸಂದ್ರ ಜಂಕ್ಷನ್‌ನಲ್ಲಿ ವೇಗವಾಗಿ ಟಾಟಾ ಏಸ್‌ ಚಾಲನೆ ಮಾಡಿಕೊಂಡು ಹೋಗುವಾಗ ನಿಯಂತ್ರಣ ತಪ್ಪಿದ ವಾಹನ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ನಾಲ್ಕೈದು ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಾರಪ್ಪ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಎಲೆಕ್ಟ್ರಾನಿಕ್‌ ಸಿಟಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗ್ಳೂರಲ್ಲಿ ಅಪಘಾತ ತಗ್ಗಿಸಲು ಅಭಿಯಾನ: ಸಚಿವ ಶ್ರೀರಾಮುಲು

ಬೆಂಗಳೂರು: ರಾಜಧಾನಿಯಲ್ಲಿ ರಸ್ತೆ ಅಪಘಾತ(Accident) ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ವಿಶ್ವದ ಅತ್ಯುತ್ತಮ ರಸ್ತೆ ಸುರಕ್ಷತೆ ಕ್ರಮಗಳ ಜಾರಿಗೆ ರಾಜ್ಯ ಸರ್ಕಾರ(Government of Karnataka) ‘ಬ್ಲೂಮ್‌ಬರ್ಗ್‌ ಫಿಲಾಂತ್ರೊಫಿನ್‌ ಜಾಗತಿಕ ರಸ್ತೆ ಸುರಕ್ಷತಾ ಅಭಿಯಾನ (BIGRS)’ ಜತೆ ಒಪ್ಪಂದ ಮಾಡಿಕೊಂಡಿದೆ.

BMTC: ವರ್ಷದಿಂದ ವರ್ಷಕ್ಕೆ ಬಿಎಂಟಿಸಿ ಅಪಘಾತ ಸಂಖ್ಯೆ ಇಳಿಕೆ!

ಫೆ.22 ರಂದು ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿ ಮಾತನಾಡಿದ್ದ ಸಾರಿಗೆ ಸಚಿವ ಬಿ.ಶ್ರೀರಾಮುಲು(B Sriramulu), ಬೆಂಗಳೂರನ್ನು(Bengaluru) ರಸ್ತೆ ಅಪಘಾತ ಮುಕ್ತ ನಗರವಾಗಿ ಮಾಡುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ಅಭಿಯಾನದ(Campaign) ಜತೆಗೂಡಿ ಜಾಗತಿಕ ಮಟ್ಟದ ಅತ್ಯುತ್ತಮ ರಸ್ತೆ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಲಾಗುವುದು. ಇದರಿಂದ ರಸ್ತೆ ಅಪಘಾತದ ಸಾವು ನೋವುಗಳು ತಗ್ಗಲಿವೆ ಎಂದು ತಿಳಿಸಿದ್ದರು. 

ಪ್ರತಿ ವರ್ಷ ವಿಶ್ವದಾದ್ಯಂತ 13 ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗುತ್ತಿದ್ದಾರೆ. 2 ರಿಂದ 5 ಕೋಟಿ ಮಂದಿ ಗಂಭೀರ ಗಾಯವಾಗುತ್ತಿದ್ದಾರೆ. 2020ರಲ್ಲಿ ಬೆಂಗಳೂರಿನಲ್ಲಿ 2990 ಮಂದಿ ರಸ್ತೆ ಅಪಘಾತದಲ್ಲಿ ಜೀವ ಕಳೆದುಕೊಂದಿದ್ದಾರೆ. ವಿಶ್ವಾದ್ಯಂತ(World) ಪ್ರಮುಖ ನಗರಗಳ ಅಪಘಾತಗಳ ಕುರಿತು ಅಧ್ಯಯನ ನಡೆಸಿ ದತ್ತಾಂಶ ಸಂಗ್ರಹಿಸಿ ಸುರಕ್ಷತಾ ಕ್ರಮಗಳನ್ನು ಸಿದ್ಧಪಡಿಸಿದ್ದು, ಇವುಗಳ ಜಾರಿಯಿಂದ ಸಾವು ನೋವು ಹತೋಟಿಗೆ ತರಬಹುದು. ಅಭಿಯಾನಲ್ಲಿ ಭಾಗವಹಿಸುತ್ತಿರುವ ವಿಶ್ವದ ಪ್ರಮುಖ 30 ನಗರಗಳ ಪೈಕಿ ಬೆಂಗಳೂರು ಒಂದಾಗಿದೆ ಅಂತ ಬಿಐಜಿಆರ್‌ಎಸ್‌ ಸದಸ್ಯ ಕೆಲ್ಲಿ ಲಾರ್ಸನ್‌ ಮಾಹಿತಿ ನೀಡಿದ್ದರು.