Asianet Suvarna News Asianet Suvarna News

BMTC: ವರ್ಷದಿಂದ ವರ್ಷಕ್ಕೆ ಬಿಎಂಟಿಸಿ ಅಪಘಾತ ಸಂಖ್ಯೆ ಇಳಿಕೆ!

ಅನುಭವಿ ಚಾಲಕರ ನೇಮಕ, ಅಪಘಾತ ಎಸಗಿದ ಚಾಲಕರು ಎದುರಿಸುತ್ತಿರುವ ಕಷ್ಟಗಳ ಕುರಿತು ಅರಿವು ಮುಂತಾದ ಕಾರಣಗಳಿಂದಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್‌ಗಳಿಂದ ಉಂಟಾಗುತ್ತಿದ್ದ ರಸ್ತೆ ಅಪಘಾತಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.

BMTC Bus Road Accidents Decrease Year on Year gvd
Author
Bangalore, First Published Feb 13, 2022, 3:15 AM IST | Last Updated Feb 13, 2022, 3:15 AM IST

ವಿಶೇಷ ವರದಿ

ಬೆಂಗಳೂರು (ಫೆ.13): ಅನುಭವಿ ಚಾಲಕರ ನೇಮಕ, ಅಪಘಾತ ಎಸಗಿದ ಚಾಲಕರು ಎದುರಿಸುತ್ತಿರುವ ಕಷ್ಟಗಳ ಕುರಿತು ಅರಿವು ಮುಂತಾದ ಕಾರಣಗಳಿಂದಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಬಸ್‌ಗಳಿಂದ ಉಂಟಾಗುತ್ತಿದ್ದ ರಸ್ತೆ ಅಪಘಾತಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ನಗರದಲ್ಲಿ ದಿನದಿಂದ ದಿನಕ್ಕೆ ರಸ್ತೆಗಳಿಯುವ ವಾಹನಗಳ ಸಂಖ್ಯೆ ಏರಿಕೆಯಾಗುತ್ತಿದ್ದರೂ, ಸಂಚಾರ ವ್ಯವಸ್ಥೆಯಲ್ಲಿ ಸಾಕಷ್ಟುಸುಧಾರಣೆಯಾಗಿರುವುದು ಸಹ ಅಪಘಾತಗಳ ಸಂಖ್ಯೆ ಕಡಿಮೆಯಾಗಲು ಸಹ ಪ್ರಮುಖ ಕಾರಣವಾಗಿದೆ.

ಚಾಲಕರಿಗೆ ಪ್ರತ್ಯೇಕ ತರಬೇತಿ: ಈ ಹಿಂದಿನ ವರ್ಷಗಳಲ್ಲಿ ಸರಾಸರಿ 450-500 ಅಪಘಾತಗಳು ಸಂಭವಿಸುತ್ತಿತ್ತು. 75-80 ಜನರು ಸಾವಿಗೀಡಾಗುತ್ತಿದ್ದರು. ಜನದಟ್ಟಣೆ, ದ್ವಿಚಕ್ರ ವಾಹನ ಚಾಲಕರ ಸವಾರದ ನಿರ್ಲಕ್ಷ್ಯತನ ಮತ್ತು ದುಡುಕಿನ ಚಾಲನೆಯಿಂದ ರಸ್ತೆ ಅಪಘಾತಗಳಿಗೆ ಕಾರಣ ಇರುತ್ತಿತ್ತು. ಸಾರ್ವಜನಿಕರಿಂದ ‘ಕಿಲ್ಲರ್‌ ಬಿಎಂಟಿಸಿ’ ಎಂಬ ಅಪವಾದಕ್ಕೆ ಗುರಿಯಾಗುತ್ತಿತ್ತು. ಆದರೆ ಈಗ ಬಿಎಂಟಿಸಿ ಕೈಗೊಂಡ ಹಲವಾರು ಕ್ರಮಗಳ ಪರಿಣಾಮ ರಸ್ತೆ ಅಪಘಾತಗಳ ಸಂಖ್ಯೆ ಸಾಕಷ್ಟುಇಳಿಕೆಯಾಗಿದೆ. ಪ್ರಮುಖವಾಗಿ ಸಾಕಷ್ಟುಅನುಭವ ಇರುವ ಚಾಲಕರನ್ನೇ ಬಿಎಂಟಿಸಿ ನೇಮಕ ಮಾಡಿಕೊಳ್ಳುತ್ತಿದೆ. 

BMTC: ಬೆಂಗ್ಳೂರಲ್ಲಿ ಮತ್ತೆ ಡಬಲ್‌ ಡೆಕ್ಕರ್‌ ಬಸ್‌ ಗತವೈಭವ..!

ಸೇವೆಗೆ ನೇಮಕವಾದ ಚಾಲಕರಿಗೆ ಇಲಾಖೆಯಿಂದ ಪ್ರತ್ಯೇಕ ತರಬೇತಿ ನೀಡಲಾಗುತ್ತಿದೆ. ಇದೇ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಬಸ್‌ಗಳ ಅಪಘಾತ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗುತ್ತಿದೆ. 2009ರಲ್ಲಿ ಬಿಎಂಟಿಸಿ ಬಸ್‌ಗಳಿಂದ 565 ರಸ್ತೆ ಅಪಘಾತಗಳು ನಡೆದಿದ್ದು, 94 ಸಾವುಗಳು ಸಂಭವಿಸಿದ್ದವು. ನಂತರದ ವರ್ಷಗಳಲ್ಲಿ ಇಳಿಕೆಯಾಗುತ್ತಾ 2021ರಲ್ಲಿ 89 ಪ್ರಕರಣಗಳು ನಡೆದಿದ್ದು, 26 ಮಂದಿ ಮಾತ್ರ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಚಾಲಕರಿಗೆ ಜಾಗೃತಿ: ರಸ್ತೆ ಅಪಘಾತಗಳಿಗೆ ಕಾರಣವಾಗುವ ಬಿಎಂಟಿಸಿ ಚಾಲಕರಿಗೆ ಎದುರಿಸುವ ನ್ಯಾಯಾಂಗ ಹೋರಾಟ. ಮತ್ತೆ ಅದೇ ಹುದ್ದೆ ಪಡೆಯಲು ಪಡುವ ಕಷ್ಟಗಳನ್ನು ಚಾಲಕರಿಗೆ ತಿಳಿಸಲಾಗುತ್ತಿದೆ. ಜೊತೆಗೆ, ನಿರ್ಲಕ್ಷ್ಯದ ಚಾಲನೆಯಿಂದ ಕುಟುಂಬ ಎದುರಿಸಬೇಕಾದ ತೊಂದರೆಗಳನ್ನು ಚಾಲಕರಿಗೆ ವಿವರಿಸಲಾಗುವುದು. ಕರ್ತವ್ಯದ ಸಂದರ್ಭದಲ್ಲಿ ನಡೆಯುವ ಒಂದು ಸಣ್ಣ ಅಪಘಾತದಿಂದ ಉದ್ಯೋಗ ಕಳೆದುಕೊಳ್ಳುವ ಹಲವು ಪ್ರಕರಣಗಳನ್ನು ವಿವರಿಸಲಾಗುತ್ತಿದೆ. ಇದರಿಂದ ಬಹುತೇಕ ಮಂದಿ ಚಾಲಕರು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಬಿಎಂಟಿಸಿಯ ಸಂಚಾರ ನಿಯಂತ್ರಕ ಎಸ್‌.ರಾಜೇಶ್‌ ತಿಳಿಸಿದರು.

BMTC ಟಿಕೆಟ್‌ ದರ ಏರಿಕೆ ಸದ್ಯಕ್ಕಿಲ್ಲ: ಸಾರಿಗೆ ಸಚಿವ ಶ್ರೀರಾಮುಲು

ಕೌನ್ಸೆಲಿಂಗ್‌: ಬಿಎಂಟಿಸಿಯಲ್ಲಿ ಸೇವೆ ಸಲ್ಲಿಸುತ್ತಿರುವ ಚಾಲಕರನ್ನು ಸಾರ್ವಜನಿಕರು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ನಿರ್ಲಕ್ಷ್ಯತನದ ಚಾಲನೆ ಸೇರಿದಂತೆ ಸಣ್ಣ ಪುಟ್ಟತಪ್ಪುಗಳು ನಡೆದರೂ ತಕ್ಷಣ ಬಿಎಂಟಿಸಿ ಕಚೇರಿಗೆ ಸಾಮಾಜಿಕ ಜಾಲತಾಣಗಳು, ದೂರವಾಣಿಗಳ ಮೂಲಕ ದೂರುಗಳು ಸಲ್ಲಿಸುತ್ತಾರೆ. ಕೆಲ ಸಂದರ್ಭಗಳಲ್ಲಿ ಮಾನಸಿಕ ಒತ್ತಡದಿಂದ ಈ ತಪ್ಪುಗಳು ನಡೆಯುತ್ತಿವೆ. ಅಂತಹ ಚಾಲಕರನ್ನು ತಕ್ಷಣ ಪತ್ತೆ ಹಚ್ಚಿ ಅವರಿಗೆ ಕೌನ್ಸೆಲಿಂಗ್‌ ನಡೆಸಲಾಗುತ್ತಿದೆ. ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಪ್ರಯತ್ನ ಮಾಡಲಾಗುತ್ತಿದೆ. ಇದೆಲ್ಲ ಪರಿಣಾಮ ಅಪಘಾತಗಳು ಕಡಿಮೆಯಾಗುತ್ತಿವೆ ಎಂದು ವಿವರಿಸಿದರು.

Latest Videos
Follow Us:
Download App:
  • android
  • ios