* ಅಪಘಾತದಲ್ಲಿ ಇಬ್ಬರ ಸಾವು  ಕಾರು ಚಾಲಕನಿಗೆ ಜೈಲು ಶಿಕ್ಷೆ* ಕುಡಿದ ಮತ್ತಿನಲ್ಲಿ ಕಾರು ಚಾಲಾಯಿಸಿ ಪಿಲ್ಲರ್‌ಗೆ ಗುದ್ದಿಸಿದ್ದ* ನೈಸ್‌ ರಸ್ತೆಯಲ್ಲಿ ನಡೆದಿದ್ದ ಅಪಘಡದಲ್ಲಿ ಗೆಳೆಯರ ಸಾವು

 ಬೆಂಗಳೂರು (ಫೆ. 18) ಒಂಬತ್ತು ವರ್ಷಗಳ ಹಿಂದೆ ನೈಸ್‌ (Nice Road) ರಸ್ತೆಯಲ್ಲಿ ಕಾರು(Car Accident) ಅಪಘಾತದಲ್ಲಿ ಇಬ್ಬರ ಸಾವಿಗೆ ಕಾರಣವಾಗಿದ್ದ ಚಾಲಕನಿಗೆ ನ್ಯಾಯಾಲಯ 6.6 ವರ್ಷ ಜೈಲು ಶಿಕ್ಷೆ ಹಾಗೂ 1.04 ಲಕ್ಷ ರು. ದಂಡ ವಿಧಿಸಿದೆ.

ಪರಪ್ಪನ ಅಗ್ರಹಾರದ ನಿವಾಸಿ ಭಾನುಕುಮಾರ್‌ (24) ಅಪರಾಧಿ ಆಗಿದ್ದು, 2013ರ ಮಾ.4 ರಂದು ನೈಸ್‌ ರಸ್ತೆಯಲ್ಲಿ ಕಾರು ಅಪಘಾತಕ್ಕೀಡು ಮಾಡಿಸಿದ್ದ. ಈ ಘಟನೆಯಲ್ಲಿ ಆತನ ಸ್ನೇಹಿತರಾದ ವಿಶ್ವನಾಥ್‌ ಹಾಗೂ ಸಂತೋಷ್‌ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತಿಬ್ಬರು ಸ್ನೇಹಿತರಾದ ನಿಖಿಲ್‌ ಕುಮಾರ್‌ ಹಾಗೂ ಮಣಿಕಂಠ ಗಾಯಗೊಂಡಿದ್ದರು. ಈ ಘಟನೆ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಅಂದಿನ ಎಲೆಕ್ಟ್ರಾನಿಕ್‌ ಸಿಟಿ ಸಂಚಾರ ಠಾಣೆಯ ಬಿ.ಕೆ.ಶೇಖರ್‌ ನೇತೃತ್ವದ ತಂಡವು ಆರೋಪ ಪಟ್ಟಿಸಲ್ಲಿಸಿತು. ವಿಚಾರಣೆ ನಡೆಸಿದ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಲಯವು, ಆರೋಪಿಗೆ 6 ವರ್ಷ 6 ತಿಂಗಳು ಸಜೆ ಶಿಕ್ಷೆ ವಿಧಿಸಿ ಆದೇಶಿಸಿದೆ ಎಂದು ಎಂದು ಜಂಟಿ ಆಯುಕ್ತ (ಸಂಚಾರ) ಡಾ.ಬಿ.ಆರ್‌.ರವಿಕಾಂತೇಗೌಡ ತಿಳಿಸಿದ್ದಾರೆ.

 Triple Talaq : ಲೇಟಾಗಿ ಹಾಲು ತಂದು ಕೊಟ್ಟ ಪತ್ನಿ.. ಅಷ್ಟಕ್ಕೆ ತಲಾಖ್ ಎಂದ ಪತಿರಾಯ!

ತನ್ನ ತಂದೆ ಖರೀದಿಸಿದ್ದ ಹೊಸ ಇನ್ನೋವಾ ಕಾರಿನಲ್ಲಿ 2013ರ ಮಾಚ್‌ರ್‍ 4ರ ರಾತ್ರಿ ತನ್ನ ನಾಲ್ವರ ಸ್ನೇಹಿತರ ಜತೆ ಭಾನುಕುಮಾರ್‌ ಜಾಲಿರೈಡ್‌ಗೆ ಹೋಗಿದ್ದರು. ಆಗ ಮದ್ಯ ಸೇವಿಸಿದ ಅವರು, ತಡ ರಾತ್ರಿ ಆದ ಕಾರಣ ಊಟ ಎಲ್ಲಿಯೂ ಸಿಗದೆ ಎಲೆಕ್ಟ್ರಾನಿಕ್‌ ಸಿಟಿ ಕಡೆಯಿಂದ ಬನ್ನೇರುಘಟ್ಟರಸ್ತೆಗೆ ತೆರಳುತ್ತಿದ್ದರು. ಆ ವೇಳೆ ಅತಿ ವೇಗ ಮತ್ತು ಅಜಾಗರುಕತೆಯಿಂದ ಇನ್ನೋವಾ ಕಾರನ್ನು ಚಾಲಕ ಚಾಲೂ ಮಾಡುತ್ತಿದ್ದ. ಆಗ ನಿಯಂತ್ರಣ ತಪ್ಪಿ ವಿಟ್ಟಸಂದ್ರ ಪ್ಲೈ ಓವರ್‌ ಹತ್ತಿರ ಕಾರು ಪಿಲ್ಲರ್‌ಗೆ ಗುದ್ದಿ ಕಾರು ಪಲ್ಟಿಯಾಗಿತ್ತು. 

ಘಟನೆಯಲ್ಲಿ ತೀವ್ರ ಗಾಯಗೊಂಡ ವಿಶ್ವನಾಥ್‌ ಮತ್ತು ಸಂತೋಷ್‌ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಸಂಚಾರ ಪೊಲೀಸರು, ಕಾರು ಚಾಲಕ ಭಾನುಕುಮಾರ್‌ ವಿರುದ್ಧ ಆರೋಪಪಟ್ಟಿಸಲ್ಲಿಸಿದ್ದರು. ಅಪಘಾತ ನಡೆದ ವೇಳೆ ಕಾರನ್ನು ಭಾನುಕುಮಾರ್‌ ಚಾಲನೆ ಮಾಡುತ್ತಿದ್ದ ಎಂದು ಗಾಯಾಳುಗಳು ಹೇಳಿಕೆ ಕೊಟ್ಟಿದ್ದರು. ಇನ್ನು ತಮ್ಮ ಮಕ್ಕಳನ್ನು ಭಾನುಕುಮಾರನೇ ಮೊಬೈಲ್‌ಗೆ ಕರೆ ಮಾಡಿ ಬಲವಂತವಾಗಿ ಕರೆದುಕೊಂಡು ಹೋಗಿದ್ದ ಎಂದು ನ್ಯಾಯಾಲಯದಲ್ಲಿ ಮೃತನ ಪೋಷಕರು ಸಾಕ್ಷಿ ನುಡಿದ್ದರು. ಅಲ್ಲದೆ ವೈದ್ಯಕೀಯ ಪರೀಕ್ಷೆಯಲ್ಲಿ ಆರೋಪಿ ಮದ್ಯ ಸೇವನೆ ಮಾಡಿದ್ದು ದೃಢವಾಗಿತ್ತು. ಈ ಎಲ್ಲ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಲಯವು, ಅಪರಾಧಿ ಭಾನುಕುಮಾರ್‌ಗೆ 6 ವರ್ಷ 6 ತಿಂಗಳು ಜೈಲು ಶಿಕ್ಷೆ ಮತ್ತು .1.04 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಕ್ಕ ಸಿಕ್ಕವರಿಗೆ ಜಾಮೀನು ಕೊಡ್ತಿದ್ದ:  ಐದು ಸಾವಿರ ಹಣಕ್ಕಾಗಿ ರೌಡಿಯೊಬ್ಬನ ಜಾಮೀನಿಗೆ ತನ್ನ ಜಮೀನು ಪಹಣಿ (RTC)ತಿದ್ದುಪಡಿ ಮಾಡಿದ್ದ ರೈತ ಈಗ ರೌಡಿ ಜತೆ ಪರಪ್ಪನ ಅಗ್ರಹಾರ (Jail) ಕೇಂದ್ರ ಕಾರಾಗೃಹ ಸೇರಿದ್ದಾನೆ.

ನಂದಿನಿ ಲೇಔಟ್‌ನ ರೌಡಿ ಯುವರಾಜ್‌ ಹಾಗೂ ರಾಮನಗರ (Ramanagara) ತಾಲೂಕಿನ ಹರಿಸಂದ್ರದ ಮದರಸಾಬ ದೊಡ್ಡಿ ಗ್ರಾಮದ ಕೆಂಪಯ್ಯ ಬಂಧಿತರಾಗಿದ್ದು, ಕಾನೂನುಬಾಹಿರ ಕೃತ್ಯಗಳ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ರೌಡಿ ಯುವರಾಜ್‌ನನ್ನು ನಂದಿನಿ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದರು. ಆಗ ಆತನಿಗೆ ಜಾಮೀನು ಕೊಡಲು ಬಂದು ಕೆಂಪಯ್ಯ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.