ಜಿಲ್ಲೆಯ ಮೂಡಿಗೆರೆಯಲ್ಲಿ ನಿನ್ನೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಸರ್ವೇಯರ್ ಶಿವಕುಮಾರ್ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೂಡಿಗೆರೆ ಸರ್ವೇ ಕಛೇರಿಯಲ್ಲಿ ಡೆತ್ ನೋಟ್‌ಪತ್ತೆಯಾಗಿದ್ದು ಮೂವರು ಹೆಸರು ಬಹಿರಂಗವಾಗಿದೆ.‌  

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಫೆ.14): ಜಿಲ್ಲೆಯ ಮೂಡಿಗೆರೆಯಲ್ಲಿ ನಿನ್ನೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಸರ್ವೇಯರ್ ಶಿವಕುಮಾರ್ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೂಡಿಗೆರೆ ಸರ್ವೇ ಕಛೇರಿಯಲ್ಲಿ ಡೆತ್ ನೋಟ್‌ಪತ್ತೆಯಾಗಿದ್ದು ಮೂವರು ಹೆಸರು ಬಹಿರಂಗವಾಗಿದೆ.‌ ಕೆಲಸದ ಒತ್ತಡ ಜೊತೆಗೆ ಮಹಿಳೆಯೊಬ್ಬರಿಂದ ಬ್ಲಾಕ್ ಮೇಲ್ ಗೆ ಒಳಗಾಗಿ ಆತ್ಮಹತ್ಯೆಗೆ ಕಾರಣ ಎನ್ನುವ ಅಂಶ ಹೊರಬಂದಿದೆ.

ಮೂವರು ಹೆಸರು ಬರೆದಿಟ್ಟು ಆತ್ಮಹತ್ಯೆ: ತುಮಕೂರು ಮೂಲದ ಸರ್ವೇಯರ್ ಶಿವಕುಮಾರ್ ಕಳೆದ ಆರು ವರ್ಷಗಳಿಂದ ಮೂಡಿಗೆರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡಿ ಸರ್ವೇಯರ್ ಆಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು.45 ವರ್ಷದ ಶಿವಕುಮಾರ್ ಕಳೆದ ಹಲವು ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಪತ್ನಿ ಹಾಗೂ ಮಗಳು ಈಗ ಬೆಂಗಳೂರಿನಲ್ಲಿದ್ದಾರೆ. ಕಳೆದ 8 ತಿಂಗಳಿನಿಂದ ಒಬ್ಬಂಟಿಯಾಗಿ ಮೂಡಿಗೆಯಲ್ಲಿದರು. ನಿನ್ನೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇದಕ್ಕೂ ಮುನ್ನ ಅಂದ್ರೆ ಜನವರಿ 12 ಮಂಗಳವಾರವೂ ಆತ್ಮಹತ್ಯೆ ಗೆ ಯತ್ನ ನಡೆಸಿದರು.

ಜಾನುವಾರಿಗೆ ಕಂಟಕವಾಗ್ತಿರೊ ಪ್ಲಾಸ್ಟಿಕ್: ವರ್ಷದಿಂದ ವರ್ಷಕ್ಕೆ ಸಾವಿನ ಪ್ರಮಾಣ ಹೆಚ್ಚಳ

ಆಗ ಕೆಲ ಅಪ್ತ ಕಚೇರಿಯ ಸಿಬ್ಬಂದಿಗಳು ಆಸ್ಪತ್ರೆಯಲ್ಲಿ ದಾಖಲಿಸಿ ನಂತರ ಡಿಚ್ಜಾರ್ಜ್ ಮಾಡ್ಕೊಂಡು ಧೈರ್ಯ ತುಂಬಿದರು.ಏನೂ ಮಾಡ್ಕೊಳಲು ಅಂದಿದ್ದ ಶಿವಕುಮಾರ್ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದರು.ಡೆತ್ ನೋಟ್ ಇದ್ದೀಯಾ ಅಂತಾ ಪೊಲೀಸರು ಹುಡುಕಾಟ ನಡೆಸಿದರು.ಆಗ ಸಿಕ್ಕಿರಲಿಲ್ಲ..ಕೊನೆಗೆ ಕಚೇರಿಯಲ್ಲಿ ಹುಡುಕಾಟ ನಡೆಸಿದ ವೇಳೆಯಲ್ಲಿ ಡೆತ್ ನೋಟ್ ಪೊಲೀಸರಿಗೆ ಲಭ್ಯವಾಗಿದೆ.ಆತ್ಮಹತ್ಯೆಗೆ ಮುನ್ನ ಬರೆದಿಟ್ಟುರುವ ಡೆತ್ ನೋಟ್ ನಲ್ಲಿ ಮೂವರ ಹೆಸರನ್ನು ಬರೆದಿಟ್ಟಿರುವುದು ಬೆಳಕಿಗೆ ಬಂದಿದೆ.

ಹನಿಟ್ರಾಪ್ ಅಮಾನತ್ತು ಎರಡು ಉಲ್ಲೇಖಿಸಿ ಡೆತ್ ನೋಟ್: ಶಿವಕುಮಾರ್ ಅವರ ಪತ್ನಿ ಪುಷ್ಪಲತಾ ಅವರು ತಮ್ಮ ಪತಿ ಬರೆದಿಟ್ಟಿರುವ ಡೆತ್ ನೋಟ್ ನಲ್ಲಿ ಹೆಸರಿಸಲಾಗಿರುವ ಆರೋಪಿತರಾದ ಗ್ರೆಗೋರಿಯನ್ ಡಿ ಕುನ್ನ, ಕುನ್ನಹಳ್ಳಿ ಗ್ರಾಮದ ವಾಸಿ, ಡೊನಾಲ್ಡ್ ಡಿಸೋಜ ಕುನ್ನಹಳ್ಳಿ ಗ್ರಾಮದ ವಾಸಿ ಹಾಗೂ ಸ್ವಪ್ನ ಮೂಡಿಗೆರೆ ವಾಸಿ ಇವರುಗಳ ಮೇಲೆ ಮೂಡಿಗೆರೆ ಠಾಣೆಗೆ ದೂರು ನೀಡಿದ್ದಾರೆ. 

ದೂರಿನ‌ ಸಾರಾಂಶ: ಕುನ್ನ ಹಳ್ಳಿ ಗ್ರಾಮದ ಸರ್ವೇ ನಂಬರ್ 99 ರ ಜಮೀನಿನ ಅಳತೆ ವಿಚಾರದಲ್ಲಿ ಗ್ರೆಗೋರಿಯನ್ ಡಿ ಕುನ್ನ, ಕುನ್ನಹಳ್ಳಿ ಗ್ರಾಮದ ವಾಸಿ ಮತ್ತು ಡ್ರೊನಾಲ್ಡ್ ಡಿಸೋಜ ಕುನ್ನಹಳ್ಳಿ ಗ್ರಾಮದ ವಾಸಿರವರು ಕಿರುಕುಳ ನೀಡುತ್ತಿದ್ದು ಹಾಗೂ ಪರಿಚಯಸ್ಥ ಸ್ವಪ್ನ ಎನ್ನುವವರು ಮೊಬೈಲ್ ನಲ್ಲಿ ಸೆಕ್ಸ್ ವಿಚಾರ ಮಾತನಾಡಿದ್ದು ರೆಕಾರ್ಡ್ ಮಾಡಿಕೊಂಡು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದರಿಂದ ತಾನು ಆತ್ಮ ಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿದ್ದಾರೆ ಎಂದು ತಿಳಿಸಿದ ಮೇರೆಗೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಮೇಲ್ಕಂಡ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಾಗಿದೆ.

ಸರ್ವೆಗೆ ಹೋದಾಗ ಪರಿಚಯವಾಗಿದ್ದ ಸ್ವಪ್ನ ಎಂಬ ಯುವತಿ ಜೊತೆ ಫೋನಿನಲ್ಲಿ ಆತ್ಮೀಯವಾಗಿ ಮಾತನಾಡಿದ್ದ ಶಿವಕುಮಾರ್ ಬಳಿ ಮಹಿಳೆ ಹಣಕ್ಕಾಗಿ ಪೀಡಿಸುತ್ತಿದ್ದಳು. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಈ ವಿಚಾರ ಎಫ್ಐಆರ್‌ನಲ್ಲಿ ಕೂಡ ಪ್ರಸ್ತಾಪವಾಗಿದೆ.ಈ ಮಧ್ಯೆ ಶಿವಕುಮಾರ್ ಸರ್ವೆಯರ್ ಆಗಿದ್ದರಿಂದ ಸರ್ವೇ ವಿಚಾರವಾಗಿ ಸರಿಯಾಗಿ ಸರ್ವೆ ಮಾಡಿಲ್ಲ ಎಂದು ಗ್ರೆಗೋರಿಯನ್ ಡಿ ಕುನ್ನ ಮತ್ತು ಡ್ರೊನಾಲ್ಡ್ ಡಿಸೋಜ ಕುನ್ನಹಳ್ಳಿ ಗ್ರಾಮದ ವಾಸಿ ಇಬ್ಬರು ಅವರ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಅಮಾನತ್ತಾಗುತ್ತೇನೆ ಎಂದು ಆತಂಕಕ್ಕೀಡಾಗಿದ್ದರು. 

ಶರಣಾದ ನಕ್ಸಲರ ಬೇಡಿಕೆ ಈಡೇರಿಕೆಗೆ ವರದಿ ತಯಾರಿಗೆ ಮುಂದಾಗಿರುವ ಚಿಕ್ಕಮಗಳೂರು ಜಿಲ್ಲಾಡಳಿತ

ಮೃತ ಶಿವಕುಮಾರ್‌ಗೆ ಪತ್ನಿ ಹಾಗೂ ಮಗಳಿದ್ದು, ಮಗಳ ಓದಿಗಾಗಿ ಪತ್ನಿ ಹಾಗೂ ಮಗಳು ಬೆಂಗಳೂರಿನಲ್ಲಿ ವಾಸವಿದ್ದರು. ಮೃತ ಸರ್ವೆಯರ್ ಮೂಲತಃ ತುಮಕೂರು ಜಿಲ್ಲೆಯ ಬೆಣ್ಣೆಹಳ್ಳ ಮೂಲದವರು. ಪೊಲೀಸರು ದೂರಿನ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು, ಡೆತ್ ನೋಟ್ ನಲ್ಲಿ ಹೆಸರಿಸಿರುವ ಸ್ವಪ್ನ ಖಾಸಗಿ ಶಾಲೆಯ ಶಿಕ್ಷಕಿ ಎಂದು ತಿಳಿದುಬಂದಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈವರೆಗೂ ಮೂಡಿಗೆರೆ ಠಾಣೆಯ ಪೊಲೀಸರ ಯಾರನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸಿಲ್ಲ.