Asianet Suvarna News Asianet Suvarna News

ಗದಗ: ಸರ್ಕಾರಿ ಇಲಾಖೆಗಳಿಂದಲೇ ಭೀಷ್ಮ ​ಕೆ​ರೆ​ ಅತೀ ಹೆಚ್ಚು ಅತಿಕ್ರಮಣ

*   ಕೆರೆಯ ಆವ​ರ​ಣ​ದಲ್ಲಿ ವಿವಿಧ ಸರ್ಕಾರಿ ಕಚೇ​ರಿ​ಗಳ ಸ್ಥಾಪ​ನೆಗೆ ಅವ​ಕಾಶ
*   ಕೆರೆಯಲ್ಲಿಯೇ ಪ್ರಮುಖ ರಸ್ತೆ ನಿರ್ಮಾಣ
*   ಉಳಿ​ಸು​ವ​ವರೇ ನುಂಗಿ​ದ್ದಾರೆ
 

Bhishma Lake  More Encroachment by Government Officials in Gadag grg
Author
Bengaluru, First Published Jun 25, 2022, 2:53 PM IST

ಶಿವ​ಕು​ಮಾರ ಕುಷ್ಟಗಿ

ಗದಗ(ಜೂ.25):  ಗದಗ​-ಬೆಟ​ಗೇರಿ ಅವಳಿ ನಗ​ರದ ಅಮೂಲ್ಯ ಆಸ್ತಿ​ಯಾ​ಗಿ​ರುವ ಭೀಷ್ಮ​ಕೆ​ರೆ ಒತ್ತು​ವ​ರಿ​ಯಾ​ಗಿ​ರುವ ಬಗ್ಗೆ ಸಾಕಷ್ಟು ಚರ್ಚೆ​ಗಳು ನಡೆ​ಯು​ತ್ತಿ​ರುವ ಬೆನ್ನ​ಲ್ಲಿಯೇ ಇದೇ ವಿಷ​ಯ​ವಾಗಿ ರಾಜ್ಯ ಉಚ್ಚ ನ್ಯಾಯಾ​ಲಯದಲ್ಲಿ ಪ್ರಕ​ರಣ ದಾಖ​ಲಾ​ಗಿದೆ. ಈಗಾ​ಗಲೇ ಒತ್ತು​ವ​ರಿ​ಯಾ​ಗಿ​ರುವ ಒಟ್ಟು ಕಟ್ಟ​ಡ​ಗ​ಳಲ್ಲಿ ಸರ್ಕಾರಿ ಕಟ್ಟ​ಡ​ಗಳೇ ಹೆಚ್ಚಾ​ಗಿದ್ದು, ಅವು​ಗ​ಳನ್ನು ತೆರವು ಮಾಡುವ ನಿಟ್ಟಿ​ನಲ್ಲಿ ನಗ​ರ​ಸಭೆ ಅಧಿ​ಕಾ​ರಿ​ಗಳು ಮುಂದಾ​ಗಬೇ​ಕಿದೆ.

ಲೋಕೋ​ಪ​ಯೋಗಿ ಇಲಾ​ಖೆಯೇ ಹೆಚ್ಚು

ಗದಗ ನಗ​ರದ ಹೃದಯ ಭಾಗ​ದ​ಲ್ಲಿ​ರುವ ಭೀಷ್ಮ ಕೆರೆ​ಯ ಪಕ್ಕ​ದ​ಲ್ಲಿಯೇ ಗದ​ಗ​ನಿಂದ ಹುಬ್ಬ​ಳ್ಳಿಗೆ ಸಂಪರ್ಕ ಕಲ್ಪಿ​ಸುವ ಹೆದ್ದಾರಿ ಹಾಯ್ದು ಹೋಗಿದ್ದು, ಇಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಸಂಚಾ​ರಕ್ಕೆ ತೀವ್ರ ತೊಂದ​ರೆ​ಯಾ​ಗು​ತ್ತಿದ್ದ ವೇಳೆ​ಯಲ್ಲಿ 2014ರಲ್ಲಿ ಈ ರಸ್ತೆ​ಯನ್ನು ಅಗ​ಲೀ​ಕ​ರಣ ಮಾಡಿ ದ್ವಿಪಥ ರಸ್ತೆ​ಯ​ನ್ನಾಗಿ ಮಾಡಲು ತೀರ್ಮಾ​ನಿಸಿ ಕ್ರಮ ಕೈಗೊ​ಳ್ಳ​ಲಾ​ಯಿತು. ಆದರೆ ದ್ವಿಪಥ ರಸ್ತೆ ನಿರ್ಮಿ​ಸ​ಲು ಭೀಷ್ಮ​ಕೆ​ರೆಯ ಒಂದು ಭಾಗ​ವನ್ನೇ ಪೂರ್ಣ ಪ್ರಮಾ​ಣ​ದಲ್ಲಿ ಮುಚ್ಚಿ ರಸ್ತೆ ನಿರ್ಮಿ​ಸ​ಲಾ​ಗಿದ್ದು, ಸದ್ಯ ಸರ್ವೇ ಇಲಾಖೆ ನಡೆ​ಸಿ​ರುವ ಕೆರೆಯ 20 ಗುಂಟೆಗೂ ಅಧಿ​ಕ ಸ್ಥಳ​ವನ್ನು ಒತ್ತು​ವರಿ ಮಾಡಿ ರಸ್ತೆ ನಿರ್ಮಿ​ಸಿದ್ದು ಲೋಕೋ​ಪಯೋಗಿ ಇಲಾ​ಖೆಯ ದೊಡ್ಡ ಪ್ರಮಾದವಾಗಿದೆ.

ಗದಗ: ಭೀಷ್ಮ ಕೆರೆ ಆವರಣದ 101 ಅಕ್ರಮ ಕಟ್ಟಡ ಮಾಲೀಕರಿಗೆ ನೊಟೀಸ್‌..!

ಸರ್ಕಾರಿ ಇಲಾ​ಖೆ​ಗಳೂ ಇವೆ

ಸದ್ಯ ಕೆರೆ ಸಂರಕ್ಷಣೆ ಮತ್ತು ಅಭಿ​ವೃದ್ಧಿ ಪ್ರಾಧಿ​ಕಾ​ರದ ನಿಯ​ಮ​ದಂತೆ ಗುರು​ತಿ​ಸ​ಲಾ​ಗಿ​ರುವ ಒಟ್ಟು ಕಟ್ಟ​ಡ​ಗ​ಳಲ್ಲಿ ಸರ್ಕಾರಿ ಇಲಾ​ಖೆ​ಗಳೂ ಇದ್ದು, ಲೋಕೋ​ಪ​ಯೋಗಿ, ಅರಣ್ಯ ಇಲಾಖೆ, ಕೃಷಿ ವಿಸ್ತ​ರಣಾ ಇಲಾಖೆ, ತೋಟ​ಗಾ​ರಿಕಾ ಇಲಾಖೆ ಹೀಗೆ ಸರ್ಕಾ​ರ​ದಿಂದ ಕೆರೆ ಒತ್ತು​ವ​ರಿ​ಯಾ​ಗಿದ್ದು, ಹಲವು ಸಂಶ​ಯಕ್ಕೆ ಕಾರ​ಣ​ವಾ​ಗು​ತ್ತಿದೆ. ಇನ್ನು 80 ಕ್ಕೂ ಹೆಚ್ಚು ಖಾಸಗಿ ಕಟ್ಟ​ಡ​ಗ​ಳಿದ್ದು ಅವ​ರೆ​ಲ್ಲ​ರಿಗೂ ಈಗ ಆತಂಕ ಶುರು​ವಾ​ಗಿದೆ, ಆಸ್ತಿ ಖರೀ​ದಿ​ಸುವ ಪೂರ್ವ​ದ​ಲ್ಲಿಯೇ ಈ ವಿಚಾ​ರ​ಗ​ಳನ್ನು ಅವರು ಗಮ​ನಿ​ಸದೇ ಖರೀ​ದಿಸಿ ಸದ್ಯ ನಗ​ರ​ಸ​ಭೆ​ಯಿಂದ ನೋಟಿಸ್‌ ಪಡೆದು ಪೇಚಾ​ಡು​ವಂತಾ​ಗಿದೆ.

ಅಗ್ನಿಪಥ ಹೋರಾಟದ ಹಿಂದೆ ಕಾಂಗ್ರೆಸ್‌: ಸಚಿವ ಶ್ರೀರಾಮುಲು

ಉಳಿ​ಸು​ವ​ವರೇ ನುಂಗಿ​ದ್ದಾರೆ

ಕೆರೆ​ಗಳು ದೇಶದ ಆಸ್ತಿ, ಅವು​ಗ​ಳನ್ನು ಉಳಿಸಿ ಮುಂದಿನ ತಲೆ​ಮಾ​ರಿಗೆ ಕೊಡುಗೆ ನೀಡ​ಬೇ​ಕಾ​ದದ್ದು ಎಲ್ಲರ ಆದ್ಯ ಕರ್ತವ್ಯ, ಈ ವಿಷ​ಯ​ದಲ್ಲಿ ಸಾರ್ವ​ಜ​ನಿ​ಕರು ಎಡ​ವಿದ ವೇಳೆ​ಯಲ್ಲಿ ಅದನ್ನು ರಕ್ಷಿಸಿ ಉಳಿ​ಸುವ ಜವಾ​ಬ್ದಾರಿ ಆಳುವ ಸರ್ಕಾ​ರ​ಗ​ಳ​ದ್ದಾ​ಗಿ​ರು​ತ್ತದೆ, ಆದರೆ ವಿಚಿ​ತ್ರ​ವೆ​ನ್ನು​ವಂತೆ ಯಾರು ಅದನ್ನು ಕಾವಲು ಕಾಯ​ಬೇ​ಕಿತ್ತೋ, ಅವರೇ ಯಥೇ​ಚ್ಛ​ವಾಗಿ ಒತ್ತು​ವರಿ ಮಾಡಿ ಸರ್ಕಾ​ರದ ಕಟ್ಟ​ಡ​ಗ​ಳನ್ನು ಕಟ್ಟಿ​ರು​ವುದು ಹಲವು ಸಂಶ​ಯಕ್ಕೆ ಕಾರ​ಣ​ವಾ​ಗಿದೆ.

ಕೆರೆ ಒತ್ತುವರಿ ಮಾಡಿ ರಸ್ತೆ ನಿರ್ಮಾಣ, ನೋಟಿಸ್‌

ಗದಗ ಹುಬ್ಬಳ್ಳಿ ರಸ್ತೆ ವಿಸ್ತಾ​ರದ ಸಂದ​ರ್ಭ​ದಲ್ಲಿ ಕೆರೆ​ಯನ್ನು ಒತ್ತು​ವರಿ ಮಾಡಿ ರಸ್ತೆ ನಿರ್ಮಿ​ಸು​ವಂತೆ ಸರ್ಕಾರ ಸೂಚಿ​ಸಿ​ರ​ಲಿಲ್ಲ, ಆ ರೀತಿ​ಯಲ್ಲಿ ಹೆದ್ದಾ​ರಿ​ಗ​ಳನ್ನು ನಿರ್ಮಿ​ಸು​ವಂತಿಲ್ಲ, ರಸ್ತೆ ಪಕ್ಕ​ದಲ್ಲಿ ಕೆರೆ​ಗ​ಳಿ​ದ್ದರೆ, ಅದರ ಪಕ್ಕ​ದ​ಲ್ಲಿಯೇ ಇರುವ ಸಾರ್ವ​ಜ​ನಿ​ಕರ ಆಸ್ತಿ​ಯನ್ನು ಸೂಕ್ತ ಪರಿ​ಹಾರ ನೀಡಿ ಖರೀ​ದಿಸಿ ಅಲ್ಲಿ ರಸ್ತೆ ನಿರ್ಮಿ​ಸ​ಬೇಕು, ಆದರೆ ಗದಗ ನಗ​ರದ ಭೀಷ್ಮ​ಕೆ​ರೆಯ ವಿಷ​ಯ​ದಲ್ಲಿ ಹಾಗಾ​ಗ​ದೇ ಕೆರೆ​ಯನ್ನು ವ್ಯಾಪ​ಕ​ವಾಗಿ ಒತ್ತು​ವರಿ ಮಾಡಿ ಈ ಹಿಂದೆ ಲೋಕೋ​ಪ​ಯೋಗಿ ಅಧಿ​ಕಾ​ರಿ​ಗಳು ರಸ್ತೆ ನಿರ್ಮಿ​ಸಿದ್ದು, ಈಗಿ​ರುವ ಅಧಿ​ಕಾ​ರಿ​ಗಳು ನೋಟಿಸ್‌ ತೆಗೆ​ದು​ಕೊಂಡಿ​ದ್ದಾರೆ.
 

Follow Us:
Download App:
  • android
  • ios