Jasmine to Cost More: ಮೊಳವೊಂದಕ್ಕೆ 200ಗೆ ಏರಿದ ಭಟ್ಕಳ ಮಲ್ಲಿಗೆ..!

*  ಘಮಿಘಮಿಸುವ ಸುಹಾಸನೆಯಿಂದ ತನ್ನದೇ ಆದ ವಿಶೇಷತೆ ಹೊಂದಿದ ಭಟ್ಕಳ ಮಲ್ಲಿಗೆ
*  ಭಾರಿ ಮಳೆಯಿಂದ ಮಲ್ಲಿಗೆ ಬೆಳೆಗೆ ಭಾರಿ ಹೊಡೆತ 
*  ಮಾರುಕಟ್ಟೆಗೆ ಮಲ್ಲಿಗೆ ಹೆಚ್ಚು ಬರದೇ ಇರುವುದು ದರ ಏರಿಕೆಗೆ ಕಾರಣ

Bhatkal Jasmine Price Rise Due to Rain in Uttara Kannada grg

ಭಟ್ಕಳ(ಡಿ.13):  ಈ ಸಲದ ವ್ಯಾಪಕ ಮಳೆಯಿಂದ(Rain) ಘಮಘಮಿಸುವ ಭಟ್ಕಳ ಮಲ್ಲಿಗೆ(Bhatkal Jasmine) ಹೂವಿನ ಬೆಳೆ ಹಾನಿಯಾಗಿದ್ದು(Crop Damage), ಮಾರುಕಟ್ಟೆಗೆ ಹೆಚ್ಚಿನ ಹೂವು ಪೂರೈಕೆ ಆಗದೇ ಇರುವುದರಿಂದ ಮಲ್ಲಿಗೆ ದರ ಮೊಳವೊಂದಕ್ಕೆ 200 ಗಡಿ ದಾಟಿದೆ. ಭಟ್ಕಳ ಮಲ್ಲಿಗೆ ಘಮಿಘಮಿಸುವ ಸುಹಾಸನೆಯಿಂದ ತನ್ನದೇ ಆದ ವಿಶೇಷತೆ ಹೊಂದಿದ್ದು, ದೇಶ, ವಿದೇಶಗಳಲ್ಲಿಯೂ ಪ್ರಸಿದ್ಧಿ ಪಡೆದಿದೆ. ಪ್ರಸ್ತುತ ಮಲ್ಲಿಗೆಗೆ ಇಷ್ಟೊಂದು ದರ ಏರಿಕೆಯಾದರೂ ಕೊಳ್ಳುವವರ ಸಂಖ್ಯೆಗೇನೂ ಕಡಿಮೆಯಾಗಿಲ್ಲ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಮಲ್ಲಿಗೆ ಬೆಳೆಗೆ ಭಾರಿ ಹೊಡೆತ ಬಿದ್ದಿದೆ. ಬೆಳೆಗಾರರು(Growers) ಮಲ್ಲಿಗೆ ಗಿಡಕ್ಕೆ ಸಾವಿರಾರು ರುಪಾಯಿ ಖರ್ಚು ಮಾಡಿ ಹಾಕಿದ ಗೊಬ್ಬರ, ಪೋಷಕಾಂಶ, ಔಷಧ ಎಲ್ಲವೂ ಮಳೆ ನೀರಲ್ಲಿ ಕೊಚ್ಚಿ ಹೋಗಿದೆ.

ಕಳೆದ ಸಲಕ್ಕಿಂತ ಈ ಸಲ ಇಳುವರಿಯೂ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಮಲ್ಲಿಗೆಗೆ ಉತ್ತಮ ಬೆಲೆ ಇದ್ದಾಗ ಬೆಳೆ ಇಲ್ಲ ಎನ್ನುವಂತಾಗಿದೆ. ತಾಲೂಕಿನಲ್ಲಿ ಸಾವಿರಾರು ಕುಟುಂಬ ಮಲ್ಲಿಗೆ ಬೆಳೆಯನ್ನು ಬೆಳೆಯುತ್ತಿದ್ದು, ಹೆಚ್ಚಿನವರು ಇದನ್ನೇ ನಂಬಿ ಜೀವನ ನಿರ್ವಹಿಸುತ್ತಿದ್ದಾರೆ. ಸರ್ಕಾರದಿಂದ ಅತಿವೃಷ್ಟಿಯಿಂದಾದ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಸಿಕ್ಕೀತೇ ಎನ್ನುವ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ.

Untimely Rain Effect: ಶತಕ ದಾಟಿದ ತರಕಾರಿ ಬೆಲೆ: ರೇಟ್‌ ಕೇಳಿ ಹೌಹಾರಿದ ಗ್ರಾಹಕ..!

ಗಿಡದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂವು ಬಿಡದೇ ಇರುವುದರಿಂದ ಸಹಜವಾಗಿ ಮಾರುಕಟ್ಟೆಗೆ ಮೊದಲಿನ ಪ್ರಮಾಣದಲ್ಲಿ ಮಲ್ಲಿಗೆ ಬರುತ್ತಿಲ್ಲ. ಹೀಗಾಗಿಯೇ ಮಲ್ಲಿಗೆಗೆ ದಿಢೀರ್‌ ದರ ಏರಿಕೆಗೆ ಕಾರಣವಾಗಿದೆ. ಮಾರುಕಟ್ಟೆಗೆ ಬಂದಂತಹ ಮಲ್ಲಿಗೆ ಹೂವು ಸ್ಥಳೀಯವಾಗಿ ನಡೆಯುತ್ತಿರುವ ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಮತ್ತು ದೇವಸ್ಥಾನಗಳಿಗೆ ಪೂರೈಕೆ ಆಗುತ್ತಿದ್ದರೆ ಉಡುಪಿ, ದಕ್ಷಿಣ ಕನ್ನಡಕ್ಕೂ ಇಲ್ಲಿನ ಹೂವು ರವಾನೆ ಆಗುತ್ತಿದೆ. ಮಾರುಕಟ್ಟೆಗೆ ಮಲ್ಲಿಗೆ ಹೆಚ್ಚು ಬರದೇ ಇರುವುದರಿಂದ ಪ್ರಸ್ತುತ ಇಷ್ಟೊಂದು ದರ ಏರಿಕೆಗೆ ಕಾರಣವಾಗಿದ್ದು, ಸರಿಯಾಗಿ ಹೂವು ಪೂರೈಕೆಯಾದರೆ ದರವೂ ಕಡಿಮೆ ಆಗಲಿದೆ ಎನ್ನುವುದು ವ್ಯಾಪಾರಸ್ಥರ ಅಭಿಪ್ರಾಯವಾಗಿದೆ.

ಜಾನು​ವಾರುಗಳ ಮೇವೂ ಕಿತ್ತು​ಕೊಂಡ ಅಕಾ​ಲಿಕ ಮಳೆ

ಈ ವರ್ಷದ ಸಾಲು ಸಾಲು ಅಕಾಲಿಕ ಮಳೆ(Untimely Rain) ಬತ್ತದ ಬೆಳೆ ಸಂಗಡ ಜಾನುವಾರುಗಳ(Livestock) ಮೇವನ್ನೂ ಕಿತ್ತುಕೊಂಡಿದೆ. ಬತ್ತದ ಹುಲ್ಲು ಕೊಳೆತು ಕಪ್ಪು ಬಣ್ಣಕ್ಕೆ ತಿರುಗಿದ್ದು, ಈಗ ಮಳೆಯ ಬಳಿಕ ಒಣಗಿಸಿದರೂ ಬಳಕೆಗೆ ಬರದಂತಾಗಿದೆ. ತಾಲೂಕಿನಲ್ಲಿ 50 ಸಾವಿರ ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶದಲ್ಲಿ ಬತ್ತ(Paddy) ಬೆಳೆಯಲಾಗುತ್ತಿದೆ. ಪ್ರಾಥಮಿಕ ಅಂದಾಜಿನಂತೆ ಮಳೆಯಿಂದ ತಾಲೂಕಿನ 6 ಸಾವಿರ ಹೆಕ್ಟೇರ್‌ಗಿಂತ ಹೆಚ್ಚಿನ ಪ್ರದೇಶದ ಫಸಲು ಹಾಳಾಗಿದೆ. ಬೇಸಾಯದ ಶೇ. 40ರಷ್ಟು ಪ್ರದೇಶದ ಸಸಿಗಳು ಮಳೆಗೆ ಹಾನಿಗೀಡಾಗಿದೆ.

Karnataka Rains: ಮತ್ತೆ ಅಬ್ಬರಿಸಿದ ವರುಣ: ಅಳಿದುಳಿದ ಬತ್ತವೂ ನಾಶ, ಕಂಗಾಲಾದ ರೈತ..!

ಬತ್ತದ ಕಾಳುಗಳು ಮೊಳಕೆಯೊಡೆದು ಹಾಳಾಗಿದ್ದರೆ, ಹುಲ್ಲು(Fodder) ನೀರಿನಲ್ಲಿ ನೆನೆದು ಮುಗ್ಗಿದೆ. ಅಲ್ಲದೆ ಮಳೆನೀರಿಗೆ ಸಿಕ್ಕು ಹಾಳಾದ ಹುಲ್ಲುಗಳನ್ನು ಹೆಚ್ಚು ಕಾಲ ದಾಸ್ತಾನಿಡುವದು ಕಷ್ಟ. ಬನವಾಸಿ, ದಾಸನಕೊಪ್ಪ ಭಾಗದಿಂದ ತಾಲೂಕಿನ ಪಶ್ಚಿಮ ಭಾಗವಾದ ಸಂಪಖಂಡ, ಹುಲೇಕಲ್ಕ ಹೋಬಳಿಗೆ ಬತ್ತದ ಹುಲ್ಲನ್ನು ಮೇವಿಗಾಗಿ ತರಲಾಗುತ್ತದೆ. ಬತ್ತದ ಕಟಾವು ಅವಧಿಯ ಬಳಿಕ ಹುಲ್ಲುಗಳ ಮಾರಾಟ ಪ್ರಕ್ರಿಯೆ ಜೋರಾಗುತ್ತದೆ. ವರ್ಷಗಳ ಕಾಲ ಸಂಗ್ರಹಿಸುವಷ್ಟು ಹುಲ್ಲನ್ನು ಏಕಕಾಲಕ್ಕೆ ದಾಸ್ತಾನಿಟ್ಟುಕೊಳ್ಳುವ ಹೈನುಗಾರರ ಸಂಖ್ಯೆಯೂ ಸಾಕಷ್ಟಿದೆ. ಹೀಗಾಗಿ, ಬತ್ತದ ಹಂಗಾಮು ಮುಗಿದ ಬಳಿಕ ಪ್ರತಿ ದಿನ 40ಕ್ಕೂ ಅಧಿಕ ಟ್ರಾಕ್ಟರ್‌ಗಳು ಹುಲ್ಲು ತುಂಬಿ ಮಾರಾಟಕ್ಕೆ ಹೊರಡುತ್ತಿದ್ದವು.

ಅಕಾಲಿಕ ಮಳೆ ಬತ್ತದ ಜತೆಗೆ ಜಾನುವಾರುಗಳ ಮೇವಿನ ಮೇಲೂ ಅಡ್ಡ ಪರಿಣಾಮ ಬೀರಿದೆ. ಕಟಾವು ಮಾಡಿ ಬಣವೆ ಮಾಡಿಟ್ಟ ಹುಲ್ಲುಗಳು ಹಾಳಾಗಿವೆ. ಪ್ರತಿ ವರ್ಷ ಸಾವಿರಾರು ಕಟ್ಟುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಈ ಬಾರಿ ನಾವು ಸಾಕಿದ ಜಾನುವಾರುಗಳಿಗೆ ಮೇವು ಸಿಗುವುದು ಕಷ್ಟವಾಗಲಿದೆ ಎನ್ನುತ್ತಾರೆ ದಾಸನಕೊಪ್ಪ ಬಳಿಯ ಧನಗನಹಳ್ಳಿ ರೈತ(Farmer) ಬಸವರಾಜ. ಕಳೆದ ವರ್ಷ ಪ್ರತಿ ಕಟ್ಟು ಬತ್ತದ ಹುಲ್ಲಿಗೆ 19 ದರವಿದ್ದು, ಸದ್ಯ .28ಕ್ಕೆ ಏರಿಕೆಯಾಗಿದೆ. ಮೇವಿನ ಕೊರತೆ ಎನ್ನುತ್ತಿದ್ದ ವ್ಯಾಪಾರಿಗಳು(Merchants) ಈ ಬಾರಿ ದರ ಹೆಚ್ಚಿಸುವ ಆತಂಕವಿದೆ. ದುಬಾರಿ ದರದಲ್ಲಿ ಮೇವು ಖರೀದಿಸಿ ಹೈನುಗಾರಿಕೆ(Dairy) ನಡೆಸುವದು ಹೇಗೆ?’ ಎನ್ನುತ್ತಿದ್ದಾರೆ ಹಲವು ರೈತರು.
 

Latest Videos
Follow Us:
Download App:
  • android
  • ios