Untimely Rain Effect: ಶತಕ ದಾಟಿದ ತರಕಾರಿ ಬೆಲೆ: ರೇಟ್ ಕೇಳಿ ಹೌಹಾರಿದ ಗ್ರಾಹಕ..!
* ಅಕಾಲಿಕ ಮಳೆ ಪರಿಣಾಮ 15 ದಿನಗಳಲ್ಲಿ ಬೆಲೆ ಡಬಲ್
* ಮಾರುಕಟ್ಟೆಯಲ್ಲಿ ತರಕಾರಿ ಕೊಳ್ಳದೆ ಮರಳುತ್ತಿರುವ ಜನರು
* ಉತ್ತರ ಕರ್ನಾಟಕದಲ್ಲಿ ಭಾರಿ ಮಳೆಯಿಂದ ಕಾಯಿಪಲ್ಲೆಗಳ ಬೆಳೆ ಹಾನಿ
ಕಾರವಾರ(ಡಿ.09): ಅಕಾಲಿಕ ಮಳೆಯ(Untimely Rain) ಎಫೆಕ್ಟ್‌ನಿಂದಾಗಿ ತರಕಾರಿ(Vegetable) ಬೆಲೆ 15 ದಿನಗಳಲ್ಲಿ ಡಬಲ್ ಆಗಿದ್ದು, ಬಹುತೇಕ ಕಾಯಿಪಲ್ಲೆಗಳ ದರಗಳು ಶತಕ ದಾಟಿವೆ. ಟೊಮ್ಯಾಟೋ, ಬೆಂಡೆಕಾಯಿ, ಕ್ಯಾರೆಟ್, ಹೀರೇಕಾಯಿ, ಚೌಳಿಕಾಯಿ ದರಗಳು 15 ದಿನಗಳ ಹಿಂದೆ ಇದ್ದ ದರಕ್ಕಿಂತ ಡಬಲ್ ಆಗಿದೆ. ಈ ತರಕಾರಿಗಳ ದರ ಪ್ರತಿ ಕಿ.ಗ್ರಾಂ. ಗೆ 100 ಗಳಿಗಿಂತ ಹೆಚ್ಚಾಗಿದೆ. ಅದರಲ್ಲೂ ನುಗ್ಗೇಕಾಯಿ ಪ್ರತಿ ಕಿ.ಗ್ರಾಂ.ಗೆ 350ರಿಂದ 400ಕ್ಕೇರಿದೆ. ನೂರರ ಗಡಿ ದಾಟಿದ್ದ ಟೊಮ್ಯಾಟೋದಲ್ಲಿ ಇಳಿಕೆಯಾಗಿ ಜನತೆ ನಿಟ್ಟುಸಿರುಬಿಟ್ಟಿದ್ದರು. ಆದರೆ ಅದಾದ ಮೂರೇ ದಿನಗಳಲ್ಲಿ ಟೊಮ್ಯಾಟೋ ದರದಲ್ಲಿ ಭಾರಿ ಹೆಚ್ಚಳ ಉಂಟಾಗಿದೆ. ಇದ್ದುದರಲ್ಲಿ ಈರುಳ್ಳಿ ಹಾಗೂ ಆಲೂಗಡ್ಡೆ ದರದಲ್ಲಿ ಹೆಚ್ಚಳ ಉಂಟಾಗಿಲ್ಲ. ಉಳಿದಂತೆ ಎಲ್ಲ ತರಕಾರಿಗಳ ದರದಲ್ಲೂ ಭಾರಿ ಹೆಚ್ಚಳವಾಗಿದೆ.
ತರಕಾರಿ ಕೊಳ್ಳಲು ಮಾರುಕಟ್ಟೆಗೆ(Market) ಬಂದ ಗ್ರಾಹಕರು(Customers) ದರ ಕೇಳಿ ಹೌಹಾರುತ್ತಿದ್ದಾರೆ. ಕೆಲವೊಂದು ತರಕಾರಿಗಳ ರೇಟು ಮೀನಿನ(Fish) ದರಕ್ಕಿಂತ ಹೆಚ್ಚಾಗಿದೆ. ಮಾರುಕಟ್ಟೆಗೆ ಬಂದ ಕೆಲವರು ಅಲ್ಪಸ್ವಲ್ಪ ತರಕಾರಿಗಳನ್ನು ಕೊಂಡರೆ, ಕೆಲವರು ತರಕಾರಿ ಕೊಳ್ಳದೆ ಮರಳುತ್ತಿದ್ದಾರೆ.
Tomato Price in karnataka : ಟೊಮೊಟೋ ಬೆಲೆ ದಿಢೀರ್ ಭಾರೀ ಕುಸಿತ
ಉತ್ತರ ಕನ್ನಡಕ್ಕೆ(Uttara Kannada) ತರಕಾರಿಗಳು ಉತ್ತರ ಕರ್ನಾಟಕದಿಂದ(North Karnataka) ಪೂರೈಕೆಯಾಗುತ್ತವೆ. ಅದರಲ್ಲೂ ಹಾವೇರಿ, ಬಂಕಾಪುರ ಹಾಗೂ ಸವಣೂರಿನಿಂದ ಹೆಚ್ಚು ಬರುತ್ತವೆ. ಉಳಿದಂತೆ ಬೆಳಗಾವಿ, ಧಾರವಾಡ, ಗದಗಗಳಿಂದಲೂ ಬರುತ್ತವೆ. ಈ ಬಾರಿ ಅಕಾಲಿಕ ಭಾರಿ ಮಳೆಯಿಂದಾಗಿ ಹಾವೇರಿ, ಬಂಕಾಪುರ, ಸವಣೂರಿನಲ್ಲಿ ತರಕಾರಿ ಬೆಳೆಗೆ ಭಾರಿ ಹಾನಿ ಉಂಟಾಗಿದೆ. ಅಲ್ಲಿಂದ ಕಾಯಿಪಲ್ಲೆಗಳು ಬರುತ್ತಿಲ್ಲ. ಬೆಳಗಾವಿಯಲ್ಲೂ ಬೆಳೆ ಹಾನಿ(Crop Damage) ಉಂಟಾಗಿದ್ದರೂ ಅಲ್ಲಿಂದ ಅಲ್ಪಸ್ವಲ್ಪ ತರಕಾರಿ ಬರುತ್ತಿದೆ. ಬೇಡಿಕೆ ಇದ್ದಷ್ಟು ಸರಬರಾಜು ಆಗುತ್ತಿಲ್ಲ. ಇದರಿಂದ ಬೆಲೆಯಲ್ಲಿ ಹಠಾತ್ ಏರಿಕೆಯಾಗಿದೆ.
15 ದಿನಗಳ ಹಿಂದೆ ಈಗ (ಪ್ರತಿ ಕಿ.ಗ್ರಾಂಗೆ ರು.ಗಳಲ್ಲಿ)
ಟೊಮ್ಯಾಟೋ 60 120
ಬೆಂಡೆಕಾಯಿ 40 110
ಬೀನ್ಸ್ 60 120
ಕ್ಯಾರೆಟ್ 60 100
ಹೀರೆಕಾಯಿ 50 100
ಚೌಳಿಕಾಯಿ 50 100
ಬೀಟ್‌ರೂಟ್ 40 80
ನವಿಲುಕೋಸು 50 80
karnataka Rain : ಸಾಮಾನ್ಯರಿಗೆ ತರಕಾರಿ ಗಗನ ಕುಸುಮ : ಮತ್ತೆ ಏರುತ್ತಲೇ ಇರುವ ಬೆಲೆ
ಉತ್ತರ ಕರ್ನಾಟಕದಲ್ಲಿ ಭಾರಿ ಮಳೆಯಿಂದ ಕಾಯಿಪಲ್ಲೆಗಳ ಬೆಳೆ ಹಾನಿಗೊಳಗಾಗಿದೆ. ಇದೇ ಕಾರಣಕ್ಕೆ ದರದಲ್ಲಿ ಭಾರಿ ಹೆಚ್ಚಳ ಉಂಟಾಗಿದೆ. ಬೇಡಿಕೆ ಇರುವಷ್ಟು ತರಕಾರಿ ಪೂರೈಕೆ ಆಗುತ್ತಿಲ್ಲ ಅಂತ ತರಕಾರಿ ಮಾರಾಟಗಾರರಾದ ಸಂಗಮೇಶ್ ಕಲ್ಯಾಣಿ ತಿಳಿಸಿದ್ದಾರೆ.
ನುಗ್ಗೆಕಾಯಿ ಕೇಜಿಗೆ 360 ರೂ.
ಮಳೆಯಿಂದಾಗಿ ತರಕಾರಿ ಬೆಳೆ ನಾಶವಾಗಿದ್ದರಿಂದ ನಗರದ ಮಾರುಕಟ್ಟೆಗಳಿಗೆ ಸದ್ಯಕ್ಕೆ ಸಮರ್ಪಕವಾಗಿ ತರಕಾರಿ ಉತ್ಪನ್ನ ಪೂರೈಕೆ ಆಗುವುದು ಅನುಮಾನ. ಈ ಹಿನ್ನೆಲೆಯಲ್ಲಿ ನಗರದಲ್ಲಿ ನುಗ್ಗೆಕಾಯಿ(Drumstick), ಟೊಮೆಟೋ(Tomoto), ಬೀನ್ಸ್(Beans) ಮತ್ತಿತರ ತರಕಾರಿಗಳು ದುಬಾರಿ ಬೆಲೆಗೆ ಮಾರಾಟವಾಗುತ್ತಿವೆ. ದರ ಏರಿಕೆ ಪೈಪೋಟಿಯಲ್ಲಿ ಸರದಿಯಲ್ಲಿರುವ ನುಗ್ಗೆಕಾಯಿ ಕೇಜಿಗೆ ಬರೊಬ್ಬರಿ 200 ಗಡಿ ದಾಟಿದೆ. ಮಾರುಕಟ್ಟೆ, ರಸ್ತೆ ಪಕ್ಕದ ಮಳಿಗೆಗಳಲ್ಲೇ ಕೇಜಿ ನುಗ್ಗೇಕಾಯಿ ದರ 260 ಆಸುಪಾಸಿನಲ್ಲಿದೆ. ಹಾಪ್‌ಕಾಮ್ಸ್‌ನಲ್ಲಿ 360 ರಷ್ಟಿದೆ. ಕ್ಯಾಪ್ಸಿಕಂ 120ಕ್ಕೆ ಮಾರಾಟವಾಗಿದೆ. ಎಲ್ಲ ಅಗತ್ಯ ತರಕಾರಿಗಳ ನಿರಂತರ ಬೆಲೆ ಏರಿಕೆಯಿಂದ ಜನರ ಜೇಬಿಗೆ ಕತ್ತರಿ ಬಿದ್ದಿದೆ.
ಮಳೆಯಿಂದಾಗಿ ತರಕಾರಿ ಬೆಳೆ ನಾಶವಾಗಿದ್ದರಿಂದ ಬೇಡಿಕೆಯಷ್ಟು ತರಕಾರಿ ದಿಢೀರನೇ ಲಭ್ಯವಾಗುವುದಿಲ್ಲ. ಸದ್ಯ ಮಳೆ ಕಡಿಮೆಯಾದರೂ ಸಹ ಅಗತ್ಯದಷ್ಟು ತರಕಾರಿ ಪೂರೈಕೆಗೆ ಇನ್ನು ಕೆಲವು ದಿನ ಕಾಯಬೇಕಾಗುತ್ತದೆ. ಅಲ್ಲಿಯವರೆಗೆ ತರಕಾರಿಗಳ ಬೆಲೆ ಯಥಾ ಸ್ಥಿತಿಯಲ್ಲಿರಲಿದೆ. ಇನ್ನು ಮಹಾರಾಷ್ಟ್ರ(Maharashtra) ಭಾಗದಿಂದ ನಗರಕ್ಕೆ ಟೊಮೆಟೋ ಆಮದಾಗಿದ್ದರಿಂದ ದರ ತುಸು ಕಡಿಮೆ ಆಯಿತು. ಉಳಿದ ತರಕಾರಿಗಳ ಸಗಟು ಬೆಲೆ ಸಹ ಇಳಿಕೆಯಾಗಿಲ್ಲ.