ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಸರ್ಕಾರಿ ಸಂಸ್ಥೆಗಳು ಹಾಗೂ ಕಚೇರಿಗಳಿಂದ ಬೆಸ್ಕಾಂಗೆ 123 ಕೋಟಿ ರು. ವಿದ್ಯುತ್ ಬಿಲ್ ಬಾಕಿ ಸಂಬಂಧ ಪಟ್ಟ ಕಚೇರಿಗಳ ನೀರು ಸರಬರಾಜು ಹಾಗೂ ಬೀದಿ ದೀಪಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಕೆಂಗೇರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಆದೇಶ
ಕೆಂಗೇರಿ (ನ.20): ಯಶವಂತಪುರ (Yashwanthpur) ವಿಧಾನ ಸಭಾ ಕ್ಷೇತ್ರ (Vidhan Sabha Constituency) ವ್ಯಾಪ್ತಿಯ ವಿವಿಧ ಸರ್ಕಾರಿ ಸಂಸ್ಥೆಗಳು ಹಾಗೂ ಕಚೇರಿಗಳಿಂದ ಬೆಸ್ಕಾಂಗೆ 123 ಕೋಟಿ ರು. ವಿದ್ಯುತ್ ಬಿಲ್ (Electricity Bill) ಬಾಕಿಯಿದ್ದು, ಸಂಬಂಧ ಪಟ್ಟ ಕಚೇರಿಗಳ ನೀರು ಸರಬರಾಜು ಹಾಗೂ ಬೀದಿ ದೀಪಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಕೆಂಗೇರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಆದೇಶ ಹೊರಡಿಸಿದ್ದಾರೆ.
ಬಿಬಿಎಂಪಿ, (BBMP) ಬೆಂಗಳೂರು (Bengaluru) ಜಲಮಂಡಳಿ, ಬಿಬಿಎಂಪಿ - ತೋಟಗಾರಿಕೆ ಇಲಾಖೆ, ಬಿಡಿಎ (BDA), ಕರ್ನಾಟಕ ವಸತಿ ಮಂಡಳಿ, ಕೆ ಐಎಡಿಬಿ (KIADP), ಕೊಳಚೆ ನಿರ್ಮೂಲನಾ ಮಂಡಳಿ, ಕರ್ನಾಟಕ ಕ್ಲಾಸ್ ಡಿ ಎಂಪ್ಲಾಯಿಸ್ ಹೌಸ್‌ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಸಂಸ್ಥೆಗಳು ಬೆಸ್ಕಾಂಗೆ (Bescom) ವಿದ್ಯುತ್ ಬಿಲ್ (Electricity Bill) ಪಾವತಿ ಬಾಕಿ ಉಳಿಸಿಕೊಂಡಿವೆ.
ಇಷ್ಟೂ ಮೊತ್ತ ಸಂಸ್ಥೆಗಳ ಬೀದಿ ದೀಪ ಹಾಗೂ ನೀರು ಸರಬರಾಜು ಉದ್ದೇಶಕ್ಕಾಗಿ ಬಳಸಿರುವ ವಿದ್ಯುತ್ ಶುಲ್ಕವಾಗಿದ್ದು, ಕೆಂಗೇರಿಯ ಕೆ1, ಕೆ2, ಕೆ3, ಕೆ4 ಉಪವಿಭಾಗಗಳಿಂದ ಬಿಬಿಎಂಪಿ 87 ಕೋಟಿ ರು., ಬೆಂಗಳೂರು ಜಲಮಂಡಳಿ 18 ಕೋಟಿ ರು., ಬಿಬಿಎಂಪಿ ತೋಟಗಾರಿಕೆ ಇಲಾಖೆ 95 ಲಕ್ಷ ರು., ಬಿಡಿಎ 13.5 ಕೋಟಿ ರು., ಕೆಎಚ್‌ಬಿ 98 ಲಕ್ಷ ರು., ಕೆ ಐಎಡಿಬಿ 13 ಲಕ್ಷ ರು. ಹಾಗೂ ಕೊಳಚೆ ನಿರ್ಮೂಲನ ಮಂಡಳಿ 11.73 ಲಕ್ಷ ರು. ಬಾಕಿ ಉಳಿಸಿಕೊಂಡಿವೆ ಎಂದು ಬೆಸ್ಕಾಂನ ಕೆಂಗೇರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಟಿ. ಶ್ರೀಕಾಂತ್ ತಿಳಿಸಿದ್ದಾರೆ.
ಹೀಗಾಗಿ ಬೀದಿ ದೀಪ ಹಾಗೂ ನೀರು ಸರಬರಾಜು ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮುಂದಾಗಿದ್ದೇವೆ ಹಾಗೂ ಇದರಿಂದ ಸಾರ್ವಜನಿಕರಿಗೆ ಅನಾನುಕೂಲವಾದರೆ ಬೆಸ್ಕಾಂ ಜವಾಬ್ದಾರಿಯಾಗುವುದಿಲ್ಲ ಎಂದು ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿ ಗಿರೀಶ್ ಹೇಳಿದರು.
ಎಸ್ಕಾಂಗಳಿಂದ ಬಾಕಿ : ಬೆಂಗಳೂರು (Bengaluru) ಸೇರಿ 8 ಜಿಲ್ಲೆಗಳಿಗೆ ವಿದ್ಯುತ್ ವಿತರಿಸುವ ಬೆಸ್ಕಾಂ ಹಾಗೂ ಮೈಸೂರು (Mysuru), ದಕ್ಷಿಣ ಕನ್ನಡ (Dakshina Kannada), ಕಲಬುರಗಿ ಸೇರಿ 16 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆ ಮಾಡುತ್ತಿರುವ ಮೆಸ್ಕಾಂ, ಜೆಸ್ಕಾಂ, ಚೆಸ್ಕಾಂಗಳಿಗೆ ಸರ್ಕಾರ ಸುಮಾರು 5975 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಬಾಕಿ ವಸೂಲಿಗೆ ಈಗಾಗಲೇ ಕೆಲವೆಡೆ ಎಚ್ಚರಿಕೆ ನೀಡಿರುವ ವಿದ್ಯುತ್ ಸರಬರಾಜು ಕಂಪನಿಗಳು(Power Supply Companies), ಬಲವಂತದ ಬಾಕಿ ವಸೂಲಿ ಕ್ರಮಗಳಿಗೂ ಕೈಹಾಕಿವೆ.
ಕಲಬುರಗಿ, ಬೀದರ್, ರಾಯಚೂರು, ಬಳ್ಳಾರಿ, ವಿಜಯನಗರ, ಯಾದಗಿರಿ, ಕೊಪ್ಪಳ ಹೀಗೆ ಏಳು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಗುಲ್ಬರ್ಗಾ ವಿದ್ಯುತ್ ವಿತರಣಾ ಕಂಪನಿ (GESCOM)ಗೆ ಸರ್ಕಾರ 1800 ಕೋಟಿ ವಿದ್ಯುತ್ ಬಿಲ್(Electricity Bill) ಬಾಕಿ ಉಳಿಸಿಕೊಂಡಿದೆ. ಇವುಗಳಲ್ಲಿ ವಿದ್ಯುತ್ ದೀಪ ಮತ್ತು ಕುಡಿಯುವ ನೀರಿನ ಬಿಲ್ ಸೇರಿ ಗ್ರಾಪಂ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಂದ ಒಟ್ಟಾರೆ ಅಂದಾಜು .700 ಕೋಟಿ ವಿದ್ಯುತ್ ಬಿಲ್ ಬಾಕಿ ಬರಬೇಕಿದೆ. ಇದರ ಜತೆಗೆ ಪಂಪ್‌ಸೆಟ್ ಸಬ್ಸಿಡಿ ಅಂದಾಜು 1100 ಕೋಟಿಗೂ ಹೆಚ್ಚು ಬಾಕಿ ಇದೆ.
15 ಕೋಟಿ ಬೆಸ್ಕಾಂ ಬಿಲ್ ಬಾಕಿ : ನೀರು, ಬೀದಿ ದೀಪ ಬಂದ್?
343.40 ಕೋಟಿ ಬಾಕಿ:
ಅದೇ ರೀತಿ ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ವಿದ್ಯುತ್ ಪೂರೈಕೆ ಮಾಡುತ್ತಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ(CESCOM) ಗ್ರಾಪಂಗಳಿಂದ .276.14 ಕೋಟಿ ವಿದ್ಯುತ್ ಬಿಲ್ ಬಾಕಿ ಪಾವತಿಯಾಗಬೇಕಿದೆ. ನಗರಾಭಿವೃದ್ಧಿ ಇಲಾಖೆಯಿಂದ ವಿದ್ಯುತ್ ದೀಪ, ನೀರು ಪೂರೈಕೆಗೆ ಸಂಬಂಧಿಸಿದ ವಿದ್ಯುತ್ ಬಿಲ್ ಬಾಕಿ .67.26 ಕೋಟಿ ತಲುಪಿದೆ. ಒಟ್ಟಾರೆ ಗ್ರಾಪಂಗಳು ಮತ್ತು ನಗರಾಭಿವೃದ್ಧಿ ಇಲಾಖೆಯಿಂದ 343.40 ಕೋಟಿ ಬಾಕಿ ಪಾವತಿಯಾಗಬೇಕಿದೆ.
ಜೆಸ್ಕಾಂ ಮತ್ತು ಚೆಸ್ಕಾಂಗೆ ಹೋಲಿಸಿದರೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಮಂಗಳೂರು ವಿದ್ಯುತ್ ವಿತರಣಾ ಕಂಪನಿ(MESCOM)ಗೆ ಸರ್ಕಾರದಿಂದ ಬರಬೇಕಿರುವ ಬಾಕಿ ಕಡಿಮೆ ಇದೆ. ಗ್ರಾಪಂ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಬೀದಿದೀಪಗಳು, ಕುಡಿಯುವ ನೀರಿಗಾಗಿನ ವಿದ್ಯುತ್ ಬಿಲ್‌ನ ಬಾಕಿ ರೂಪದಲ್ಲಿ ಸುಮಾರು .80 ಕೋಟಿ ಸರ್ಕಾರದಿಂದ ಪಾವತಿಯಾಗಬೇಕಿದೆ.
